For Quick Alerts
ALLOW NOTIFICATIONS  
For Daily Alerts

ಪುರುಷರಿಗಿಂತ ಮಹಿಳೆಯರಿಗೆಯೇ ಸೆಕ್ಸ್‌ನಲ್ಲಿ ಆಸಕ್ತಿ ಜಾಸ್ತಿಯಂತೆ! ಇದಕ್ಕೆ ಕಾರಣಗಳು ಇಲ್ಲಿದೆ ನೋಡಿ

|

ಸಂಪ್ರದಾಯವಾದಿ ದೇಶವಾದ ಭಾರತದಲ್ಲಿ ಇಂದಿಗೂ ಅನೇಕ ಭಾಗಗಳಲ್ಲಿ ಮಹಿಳೆಯರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ನೋಡಲಾಗುತ್ತದೆ. ಮನೆ, ಕಚೇರಿಗಳು ಮಾತ್ರವಲ್ಲದೆ ಇನ್ನೂ ಹಲವಾರು ವಿಷಯಗಳಲ್ಲಿ ಮಹಿಳೆಯ ಮೇಲಿನ ತಾರತಮ್ಯ ನಡೆದೇ ಇದೆ. ಅದರಲ್ಲೂ ಲೈಂಗಿಕತೆಯ ವಿಷಯದಲ್ಲಿ ಮಹಿಳೆಯರ ಭಾವನೆಗಳನ್ನು ಹತ್ತಿಕ್ಕುವ ಪ್ರಯತ್ನಗಳು ಶತಮಾನಗಳಿಂದ ನಡೆದಿವೆ.

ಇವತ್ತಿಗೂ ಮಹಿಳೆಯರು ಬಹಿರಂಗವಾಗಿ 'ಸೆಕ್ಸ್'ಬಗ್ಗೆ ಮಾತನಾಡುವಂತಿಲ್ಲ. ಒಂದೊಮ್ಮೆ ಸೆಕ್ಸ್ ಬಗ್ಗೆ ಚರ್ಚೆ ಮಾಡಿದ್ದಲ್ಲಿ ಅಂಥ ಮಹಿಳೆಯರನ್ನು 'ಕೆಟ್ಟ' ಮಹಿಳೆ ಎಂದು ಸಮಾಜದಲ್ಲಿ ಗುರುತಿಸಲಾಗುತ್ತದೆ. ಆದರೆ ವಾಸ್ತವದಲ್ಲಿ ಮಹಿಳೆಯರ ಕಾಮಾಸಕ್ತಿ ಪುರುಷರಿಗಿಂತ ಹೆಚ್ಚಾಗಿರುತ್ತದೆ. ಹೀಗಾಗಿ ಅವರ ಭಾವನೆಗಳನ್ನೂ ಸಮಾಜ ಅರ್ಥ ಮಾಡಿಕೊಳ್ಳಬೇಕಿದೆ. ಪುರುಷರಿಗಿಂತ ಮಹಿಳೆಯರಲ್ಲಿನ ಕಾಮಾಸಕ್ತಿ ಜಾಸ್ತಿ ಎಂಬುದನ್ನು ಹಲವಾರು ಅಧ್ಯಯನಗಳು ದೃಢಪಡಿಸಿವೆ. ಯಾವೆಲ್ಲ ಕಾರಣಗಳಿಂದ ಮಹಿಳೆಯರಲ್ಲಿ 'ಸೆಕ್ಸ್' ಬಯಕೆ ಜಾಸ್ತಿಯಾಗುತ್ತದೆ ಎಂಬುದನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಲೈಂಗಿಕ ಆಕರ್ಷಣೆ

ಲೈಂಗಿಕ ಆಕರ್ಷಣೆ

ಮಹಿಳೆಯರ ದೇಹದ ಬಗ್ಗೆ ಪುರುಷರಲ್ಲಿ ಲೈಂಗಿಕ ಕಾಮನೆಗಳು ಜಾಸ್ತಿಯಾಗಿರುತ್ತವೆ. ಆದರೆ ಪುರುಷರ ದೇಹದ ಬಗ್ಗೆ ಮಹಿಳೆಯರಲ್ಲಿ ಸೆಕ್ಸ್ ಆಕರ್ಷಣೆ ಕಡಿಮೆಯಾಗಿದ್ದರೂ ಕೆಲ ಇತರ ಪ್ರಮುಖ ಅಂಶಗಳಿಂದ ಅವರಲ್ಲಿ 'ಸೆಕ್ಸ್' ಕಾಮನೆ ಹೆಚ್ಚಾಗಿರುತ್ತದೆ.

ಹಲವಾರು ರೀತಿಯ ಸೆಕ್ಸ್ ಪರಾಕಾಷ್ಠೆ

ಹಲವಾರು ರೀತಿಯ ಸೆಕ್ಸ್ ಪರಾಕಾಷ್ಠೆ

ಮಹಿಳೆಯರ ಸೆಕ್ಸ್ ಭಾವನೆಗಳು ಪುರುಷರಿಗಿಂತ ವಿಭಿನ್ನವಾಗಿದ್ದು, ಅವರು ಏಕಕಾಲಕ್ಕೆ ಹಲವಾರು ರೀತಿಯ ಲೈಂಗಿಕ ಪರಾಕಾಷ್ಠೆಯ ಸುಖಗಳನ್ನು ಅನುಭವಿಸಬಲ್ಲರು. ಒಬ್ಬ ಪುರುಷ ಒಂದೇ ಮಿಲನ ಮಹೋತ್ಸವದಲ್ಲಿ ಆಕೆಗೆ ಬೇಕಾದ ಎಲ್ಲ ಸುಖ ನೀಡುವುದು ತುಸು ಕಷ್ಟವೆಂದೇ ಹೇಳಲಾಗಿದೆ.

Most Read: ಮಹಿಳೆಯರು ಸೆಕ್ಸ್ ವಿಚಾರದ ಬಗ್ಗೆ ಕೇಳಲು ಮುಜುಗರ ಪಡುವ ಪ್ರಶ್ನೆಗಳು

ವಿಭಿನ್ನ ಆಯ್ಕೆಗಳಿಗೆ ಮುಕ್ತ ಮನಸ್ಸು

ವಿಭಿನ್ನ ಆಯ್ಕೆಗಳಿಗೆ ಮುಕ್ತ ಮನಸ್ಸು

ಸೆಕ್ಸ್ ವಿಷಯದಲ್ಲಿ ಮಹಿಳೆಯರು ವಿಭಿನ್ನ ಆಯ್ಕೆಗಳಿಗೆ ಮುಕ್ತ ಮನಸ್ಸು ಹೊಂದಿರುತ್ತಾರೆ. ಪುರುಷ-ಪುರುಷ ಸೆಕ್ಸ್, ಪುರುಷ-ಮಹಿಳೆ ಸೆಕ್ಸ್ ಮತ್ತು ಮಹಿಳೆ-ಮಹಿಳೆ ಸೆಕ್ಸ್‌ಗಳನ್ನು ಕೆಲ ಆಯ್ದ ಪುರುಷರಿಗೆ ತೋರಿಸಿದಾಗ ಅವರು ಪುರುಷ-ಪುರುಷ ಸೆಕ್ಸ್ ಬಗ್ಗೆ ಅಂಥ ಆಸಕ್ತಿಯನ್ನು ತೋರಲಿಲ್ಲ. ಆದರೆ ಮಹಿಳೆ ಇರುವ ರೀತಿಗಳನ್ನು ಮಾತ್ರ ಅವರು ಆಸಕ್ತಿಯಿಂದ ನೋಡಿದರು. ಇದೇ ಪ್ರಯೋಗವನ್ನು ಮಹಿಳೆಯರ ಮೇಲೆ ಮಾಡಿದಾಗ ಅವರು ಮೂರು ವಿಧಗಳ ಸೆಕ್ಸ್ ಬಗ್ಗೆಯೂ ಆಸಕ್ತಿಯಿಂದ ವೀಕ್ಷಿಸಿದರು. ಮಹಿಳೆಯರಿಗೆ ಲೈಂಗಿಕ ಸುಖ ಯಾರಿಂದ ಸಿಗುತ್ತದೆ ಎನ್ನುವುದಕ್ಕಿಂತ ಒಟ್ಟಾರೆ ಸುಖ ಸಿಗುವುದು ಮುಖ್ಯವಂತೆ.

ಸ್ಪರ್ಶ, ಮಾತು, ಸೆಕ್ಸ್

ಸ್ಪರ್ಶ, ಮಾತು, ಸೆಕ್ಸ್

ಮಹಿಳೆಯರು ಮೊದಲು ಭಾವನೆಗಳ ಮೂಲಕ ಸಂಬಂಧವನ್ನು ಬೆಸೆದು ನಂತರ ಸೆಕ್ಸ್‌ಗೆ ಅಣಿಯಾಗುತ್ತಾರೆ. ಆದರೆ ಈ ಕ್ರಿಯೆ ಪುರುಷರಲ್ಲಿ ವಿಭಿನ್ನವಾಗಿರುತ್ತದೆ. ಪುರುಷ ಮೊದಲು ಸೆಕ್ಸ್ ಮುಗಿಸಿ ನಂತರ ಸಂಗಾತಿಯೊಂದಿಗೆ ಭಾವನಾತ್ಮಕವಾಗಿ ಮಾತನಾಡಲು ಬಯಸುತ್ತಾನೆ. ಈ ವಿಷಯದಲ್ಲಿ ಮಹಿಳೆಯರು ಬಹಳ ಜಾಗೃತಿ ವಹಿಸುತ್ತಾರೆ. ಅವರು ಮೊದಲಿಗೆ ಸ್ಪರ್ಶ, ಅದರ ನಂತರ ಮಾತು ಹಾಗೂ ಕೊನೆಯದಾಗಿ ಸೆಕ್ಸ್ ನಡೆಯಬೇಕೆಂದು ಬಯಸುತ್ತಾರೆ. ಪರಾಕಾಷ್ಠೆ ತಲುಪಿದ ನಂತರವೂ ಮತ್ತೆ ಮಹಿಳೆಯರಲ್ಲಿ ಬೇಗನೆ ಕಾಮಾಸಕ್ತಿ ಹುಟ್ಟಿಕೊಳ್ಳುವುದು ಸಾಧ್ಯ.

Most Read: ಮಹಿಳೆಯರ ಸೆಕ್ಸ್ ಪರಾಕಾಷ್ಠೆ, ಕುತೂಹಲ ಕೆರಳಿಸುವ ಅಚ್ಚರಿಯ ಸಂಗತಿಗಳು

ಮಧ್ಯ ವಯಸ್ಸಿನ ತಾಕಲಾಟಗಳು

ಮಧ್ಯ ವಯಸ್ಸಿನ ತಾಕಲಾಟಗಳು

20 ರ ಹದಿಹರೆಯದ ಹುಡುಗಿಗಿಂತ ಮಧ್ಯ ವಯಸ್ಸು ಸಮೀಪಿಸುತ್ತಿರುವ ಹೆಣ್ಣು ಮಕ್ಕಳಿಗೆ ಸೆಕ್ಸ್ ಆಸಕ್ತಿ ಜಾಸ್ತಿಯಾಗಿರುತ್ತದಂತೆ. ಮೆನೊಪಾಸ್ ಸಮಯ ಹತ್ತಿರ ಬರುತ್ತಿದ್ದಂತೆಯೇ ಇನ್ನು ತಮ್ಮ ಸೆಕ್ಸ್ ಆಸಕ್ತಿ ಕಡಿಮೆ ಆಗಬಹುದು ಎಂಬ ಆತಂಕದಿಂದ ಅವರು ಆದಷ್ಟು ಬೇಗ ಹೆಚ್ಚು ಸೆಕ್ಸ್ ಅನುಭವಿಸಲು ಬಯಸುತ್ತಾರಂತೆ.

Most Read: ಸೆಕ್ಸ್ ಬಗ್ಗೆ ಇರುವ ಇಂತಹ ವಿಚಿತ್ರ ಸತ್ಯಗಳು ನಿಮಗೆ ಗೊತ್ತಿರಲಾರವು !

ತೀವ್ರ ಕಾಮಾಸಕ್ತಿ

ತೀವ್ರ ಕಾಮಾಸಕ್ತಿ

ಒಂದು ಬಾರಿ ಮಹಿಳೆ ತನ್ನ ಪುರುಷ ಸಂಗಾತಿಯನ್ನು ಆರಿಸಿಕೊಂಡ ನಂತರ ಅವರು ಆತನಿಂದ ಕೇವಲ ಸೆಕ್ಸ್ ಮಾತ್ರವಲ್ಲದೆ ಇನ್ನಿತರ ಎಲ್ಲ ಬಯಕೆಗಳನ್ನೂ ಈಡೇರಿಸಿಕೊಳ್ಳಲು ಬಯಸುತ್ತಾರಂತೆ. ಒಬ್ಬ ಪುರುಷನೊಂದಿಗೆ ಒಂದು ಬಾರಿ ಲೈಂಗಿಕ ಜೀವನ ಆರಂಭಿಸಿದ ನಂತರ ತನಗೆ ಬೇಕಾದ ಎಲ್ಲ ಲೈಂಗಿಕ ಕಾಮನೆಗಳನ್ನು ಆತನಿಂದಲೇ ಈಡೇರಿಸಿಕೊಳ್ಳಲು ಮಹಿಳೆಯರು ಬಯಸುತ್ತಾರೆ ಎನ್ನಲಾಗಿದೆ.

English summary

reasons why women need more sex than men!

In a country like ours, women are unfortunately considered to be the repressed gender by some. Not only in terms of office and home, but also when it comes to sex. Women even till today shy over the word 'sex' and are often touted as ‘bad’ if they do openly talk about their sexual desires. However, studies provide evidence that women need more sex than men and not the other way round.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more