For Quick Alerts
ALLOW NOTIFICATIONS  
For Daily Alerts

ವಿಶೇಷ ವ್ಯಕ್ತಿಯ ಸಾಧನೆ: ನೀರು, ರಸ್ತೆ, ಕರೆಂಟ್ ಇಲ್ಲದ ಈ ಊರಿನ ಮಕ್ಕಳು ಈಗ ಟಾಪರ್!

By Deepu
|

ಒಂದು ಗ್ರಾಮದ ಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳುವಾಗ ಮೊದಲು ಆ ಊರಿನ ಶಾಲೆ, ರಸ್ತೆ ಹಾಗೂ ಆಸ್ಪತ್ರೆ ಹೇಗಿದೆ ಎಂದು ನೋಡಬೇಕು ಎಂದು ಹೇಳುತ್ತಾರೆ. ಶಾಲೆ ಮತ್ತು ಆಸ್ಪತ್ರೆ ಉತ್ತಮ ಸ್ಥಿತಿಯಲ್ಲಿದೆ ಎಂದಾದರೆ ಅಲ್ಲಿಯ ಜನರು ಅಭಿವೃದ್ಧಿಯ ಹಾದಿಯಲ್ಲಿ ಇದ್ದಾರೆ ಎಂದು ಊಹಿಸಬಹುದು. ಇಲ್ಲವೇ ಆ ಊರಿನಲ್ಲಿ ವಾಸಿಸಲು ಅಗತ್ಯವಾದ ಪ್ರಾಥಮಿಕ ವ್ಯವಸ್ಥೆಯಿದೆ ಎಂದು ಅಂದಾಜಿಸಲಾಗುವುದು.

ಆದರೆ ಇಲ್ಲೊಂದು ಊರಿದೆ. ಇಲ್ಲಿ ಹೇಳಿಕೊಳ್ಳೋಕೆ ಊರಿಗೊಂದು ರಸ್ತೆ ವ್ಯವಸ್ಥೆಯೂ ಇಲ್ಲ, ವಿದ್ಯುತ್ ಶಕ್ತಿಯೂ ಇಲ್ಲ. ಆದರೂ ಒಂದು ಶಾಲೆ ಮಾತ್ರ ಅಭಿವೃದ್ಧಿಯ ಜ್ಯೋತಕವಾಗಿ ಬೆಳಗುತ್ತಿದೆ. ಇಲ್ಲಿ ಅನೇಕ ವಿದ್ಯಾರ್ಥಿಗಳು ತಮ್ಮ ಬದುಕಿನ ದಾರಿ ದೀಪವಾದ ವಿದ್ಯೆಯನ್ನು ಕಲಿಯುತ್ತಿದ್ದಾರೆ. ನಮ್ಮ ಸುತ್ತಲಿನ ಸ್ಥಿತಿ ಹೇಗೆ ಇದ್ದರೂ ಸರಿ, ಮೊದಲು ವಿದ್ಯೆಯ ಅರ್ಜನೆ ಮಾಡಿಕೊಳ್ಳಬೇಕು. ಆಗಲೇ ಮುಂದಿನ ಭವಿಷ್ಯ ಬೆಳಗುವುದು ಎನ್ನುವುದನ್ನು ಎಲ್ಲಾ ವಿದ್ಯಾರ್ಥಿಗಳು ಅರಿತಿದ್ದಾರೆ. ಇವರ ಈ ಅರಿವು ಹಾಗೂ ಅಭಿವೃದ್ಧಿಯ ಹಿಂದೆ ಒಬ್ಬ ವ್ಯಕ್ತಿ ಇದ್ದಾನೆ ಎನ್ನುವುದು ಬಹು ವಿಶೇಷವಾದದ್ದು.

ಬಿಹಾರದಲ್ಲಿ ಅತ್ಯಂತ ದೂರದಲ್ಲಿರುವ ಒಂದು ಕುಗ್ರಾಮ. ಈ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಅನೇಕ ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ಹಿನ್ನೆಲೆಯಲ್ಲಿ ಒಂದು ಹೋರಾಟವನ್ನೇ ಮಾಡಿದ್ದಾನೆ. ಹಳ್ಳಿಯಲ್ಲಿ ಇರಬೇಕಾದ ಪ್ರಾಥಮಿಕ ಸೌಲಭ್ಯಗಳೇ ಇಲ್ಲವಾದರೂ ಸರ್ಕಾರಿ ಶಾಲೆಯ ಅಭಿವೃದ್ಧಿ ಮಾಡಿದ್ದಾನೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯವಾಗಿ ಬೇಕಾದ ಎಲ್ಲಾ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದಾನೆ. ಈ ಒಂದು ವಿಶೇಷ ವ್ಯಕ್ತಿಯ ಕಥೆಯ ಬಗ್ಗೆ ಇನ್ನಷ್ಟು ತಿಳಿಯಲು ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ....

ಇದೊಂದು ಪುಟ್ಟ ಗ್ರಾಮ...

ಇದೊಂದು ಪುಟ್ಟ ಗ್ರಾಮ...

ಬಿಹಾರದ ಬಡ್ವಾಂಕಾಲ ಎನ್ನುವ ಒಂದು ಸಣ್ಣ ಹಳ್ಳಿ. ಸಮುದ್ರ ಮಟ್ಟಕ್ಕಿಂತ 1500 ಅಡಿ ಎತ್ತರದಲ್ಲಿದೆ. ಈ ಹಳ್ಳಿಗೆ ವಿದ್ಯುತ್, ನೀರು ಮತ್ತು ಮುಖ್ಯ ರಸ್ತೆಯ ಸಂಪರ್ಕವೇ ಇಲ್ಲ. ಕೆಲವು ತಿಂಗಳಿಂದ ಈಚೆ ಕೆಲವು ವಾಹನಗಳು ಓಡಾಡಲು ಪ್ರಾರಂಭಿಸಿರುವುದರಿಂದ ದಾರಿಯನ್ನು ಕಲ್ಪಿಸಲಾಗಿದೆ. ಇಲ್ಲವಾದರೆ ಈ ಹಳ್ಳಿಗೆ ನಡೆದು ಸಾಗಬೇಕಿತ್ತು. ಈ ಊರಿನ ಶಾಲೆ ವಿಕಾಸವನ್ನು ಕಂಡಿದ್ದು ಎಂದರೆ ಇಲ್ಲಿರುವ ಸರ್ಕಾರಿ ಶಾಲೆಗೆ ಆಗಮಿಸಿದ್ದ ಮದನ್ ಯಾದವ್ ಎನ್ನುವ ಓರ್ವ ಶಾಲಾ ಶಿಕ್ಷಕನಿಂದ.

 ಶಿಕ್ಷಕನ ಮಾರ್ಗ...

ಶಿಕ್ಷಕನ ಮಾರ್ಗ...

ಮದನ್ ಅವರು ತಮ್ಮ ಪ್ರಾಥಮಿಕ ಶೀಕ್ಷಣವನ್ನು ಬಾದ್ವಾಂಕ ಎಂಬಲ್ಲಿ ಪೂರ್ಣಗೊಳಿಸಿದರು. ನಂತರ ಹಳ್ಳಿಯಿಂದ 20 ಕಿ.ಮೀ. ದೂರದಲ್ಲಿರುವ ಶಾಲೆಗೆ ಹೋಗುತ್ತಿದ್ದರು. ಮಧ್ಯಂತರದ ಕಾಲೇಜು ಮುಗಿಸಿದ ನಂತರ ಐದು ವರ್ಷಗಳ ಕಾಲ ಖಾಸಗಿ ಶಾಲೆಯಲ್ಲಿ ಶಾಲಾ ಶಿಕ್ಷಕರಾಗಿ ಕೆಲಸ ಮಾಡಿದರು. ಆದರೆ ತನ್ನ ಸ್ವಂತ ಹಳ್ಳಿಯ ಶಿಕ್ಷಣದ ಸ್ಥಿತಿಯು ಅವರನ್ನು ಆಗಾಗ ಕಾಡುತ್ತಿತ್ತು.

ಹಳ್ಳಿಗೆ ಮರಳಿದಾಗ...

ಹಳ್ಳಿಗೆ ಮರಳಿದಾಗ...

ಮದನ್ ತನ್ನ ಗ್ರಾಮಕ್ಕೆ 2003ರಲ್ಲಿ ಹಿಂದಿರುಗಿದರು. ಜೊತೆಗೆ ತಾನು ಓದಿದ ಶಾಲೆಯ ಬದಲಾವಣೆ ಮಾಡುವ ಎಲ್ಲಾ ಭರವಸೆಯನ್ನು ಹೊಂದಿದ್ದರು. ತಾನು ಓದಿದ್ದ ಶಾಲೆಗೆ ಶಿಕ್ಷಕನಾಗಿ ಬಂದರು. ನಂತರದಲ್ಲಿ ಶಾಲೆಯ ಅಭಿವೃದ್ಧಿಯ ಕಡೆಗೆ ಹೆಚ್ಚು ಗಮನ ಹರಿಸಿದರು.

ಅರಿವು ಮೂಡಿಸಲು ಪ್ರಾರಂಭಿಸಿದರು...

ಅರಿವು ಮೂಡಿಸಲು ಪ್ರಾರಂಭಿಸಿದರು...

ಇವರು ಗ್ರಾಮದಲ್ಲಿ ಜನರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಮಕ್ಕಳು ವಿದ್ಯೆ ಕಲಿಯುವುದರಿಂದ ಉಂಟಾಗುವ ಉಪಯೋಗಗಳ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸಿದರು. ಜೊತೆಗೆ ಮಕ್ಕಳನ್ನು ಆಕರ್ಷಿಸಲು ಅರ್ವ ಶಿಕ್ಷಣ ಅಭಿಯಾನವನ್ನು ಬಳಸಿಕೊಂಡರು. ಮಕ್ಕಳಿಗೆ ಉಚಿತ ಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಊಟ, ಹಣಕಾಸಿನ ಪ್ರೋತ್ಸಾಹ, ಮಕ್ಕಳಿಗೆ ಪ್ರೋತ್ಸಾಹಕ ಕಾರ್ಯಕ್ರಮಗಳನ್ನು ಕೈಗೊಂಡರು. ಇದರ ಪರಿಣಾಮದಿಂದ ಹೆಚ್ಚಿನ ವಿದ್ಯಾರ್ಥಿಗಳು ಆಕರ್ಷಿತರಾದರು.

ತರಗತಿಗಳು ತುಂಬಿದವು...

ತರಗತಿಗಳು ತುಂಬಿದವು...

ಮದನ್ ಅವರ ಪ್ರಯತ್ನದಿಂದಾಗಿ ಶಾಲೆಯ ತರಗತಿಗಳು ತುಂಬಿದವು. ಮಕ್ಕಳಿಗೆ ಸ್ಥಳಾವಕಾಶ ಕಲ್ಪಿಸಿಕೊಡುವ ವ್ಯವಸ್ಥೆಯನ್ನು ಮಾಡಿದರು. ಸಮವಸ್ತ್ರ ಹಾಗೂ ಟೈ ಗಳನ್ನು ಹೇಗೆ ಧರಿಸಬೇಕು ಎನ್ನುವುದನ್ನು ಮಕ್ಕಳಿಗೆ ಸೂಕ್ತ ರೀತಿಯಲ್ಲಿ ಹೇಳಿಕೊಡಲಾಗಿದೆ. ಈ ಹಿನ್ನೆಲೆಯಲ್ಲಿಯೇ ಇಂದು ಮಕ್ಕಳು ಶಿಸ್ತನ್ನು ಅನ್ವಯಿಸಿಕೊಂಡಿದ್ದಾರೆ. ಇದರಿಂದ ವಿದ್ಯಾರ್ಥಿಗಳಲ್ಲಿ ಅಚ್ಚುಕಟ್ಟನ್ನು ಕಾಣಬಹುದು ಎಂದು ಹೇಳುತ್ತಾರೆ.

ಇತರ ಶಿಕ್ಷಕರ ಸಹಾಯ...

ಇತರ ಶಿಕ್ಷಕರ ಸಹಾಯ...

ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದಂತೆ ಸಹ ಶಿಕ್ಷಕರನ್ನು ಶಾಲೆ ಹೊಂದಿದೆ. ಇವರ ಸಹಾಯದಿಂದ ಮಕ್ಕಳಿಗೆ ಸ್ವಾತಂತ್ರ್ಯದಿನಾಚರಣೆ, ಗಣತಂತ್ರದಿವಸ ಸೇರಿಂದತೆ ರಾಷ್ಟ್ರೀಯ ಹಬ್ಬ ಹಾಗೂ ಕಾರ್ಯಕ್ರಮಗಳನ್ನು ಕೈಗೊಳ್ಳುವರು. ಇದರಿಂದ ಮಕ್ಕಳು ಹಾಗೂ ಪಾಲಕರಲ್ಲಿಯೂ ಶಾಲೆಯ ಬಗ್ಗೆ ಒಂದು ಬಗೆಯ ಗೌರವ ಬಂದಿದೆ ಎನ್ನುತ್ತಾರೆ.

ಮಕ್ಕಳ ಪ್ರತಿಭೆ...

ಮಕ್ಕಳ ಪ್ರತಿಭೆ...

ಶಾಲೆಯ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅನುಕೂಲವನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ತಬಲ, ಹಾರ್ಮೋನಿಯಂನಂತಹ ಸಂಗೀತ ವಾದ್ಯಗಳನ್ನು ನುಡಿಸಲು ಸಹ ತರಬೇತಿ ನೀಡಲಾಗುವುದು. ಮಕ್ಕಳಿಗೆ ಆಡಲು ಅನುಕೂಲವಾಗುವ ಮೈದಾನಗಳು ಇಲ್ಲಿವೆ. ಪ್ರಾಥಮಿಕ ಶಾಲೆಯಿಂದ ಆರಂಭವಾದ ಈ ಶಾಲೆಯಲ್ಲಿ ನಿಧಾನವಾಗಿ 9ನೇ ತರಗತಿಯವರೆಗೆ ವಿಸ್ತರಿಸಲಾಯಿತು. ಇದೀಗ 11ನೇ ತರಗತಿಯವರೆಗೆ ನಡೆಸಲಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಸರ್ಕಾರಿ ಶಾಲೆ ಎಂಬ ತಾತ್ಸಾರ ಇಲ್ಲ...

ಸರ್ಕಾರಿ ಶಾಲೆ ಎಂಬ ತಾತ್ಸಾರ ಇಲ್ಲ...

ಸಾಮಾನ್ಯವಾಗಿ ಸರ್ಕಾರಿ ಶಾಲೆ ಎಂದರೆ ಏನೋ ಒಂದು ಬಗೆಯ ತಾತ್ಸಾರ ಹಾಗೂ ಕೆಟ್ಟದ್ದು ಎನ್ನುವಂತೆ ಜನರು ಭಾವಿಸುತ್ತಾರೆ. ಆದರೆ ಈ ಹಳ್ಳಿಯಲ್ಲಿ ಇರುವ ಶಾಲೆಯು ಇವರ ಚಿಂತನೆಗಳಿಗೆ ವಿರುದ್ಧವಾಗಿದೆ. ಈ ಶಾಲೆಯಲ್ಲಿ ಶಿಕ್ಷಕರು ಹಾಗೂ ಮಕ್ಕಳು ಬಹಳ ಶಿಸ್ತನ್ನು ಪಾಲಿಸುತ್ತಾರೆ. ನಿತ್ಯವೂ ಶೇ.85ರಷ್ಟು ಹಾಜರಾತಿ ಇರುತ್ತದೆ ಎಂದು ಮದನ್ ಅವರು ಹೇಳುತ್ತಾರೆ. ಇತ್ತೀಚೆಗೆ ಮದನ್ ಅವರು ಒಂದು ಲ್ಯಾಪ್‍ಟಾಪ್ ಖರೀದಿಸಿ ಇಂಟರ್ ನೆಟ್ ಬಳಕೆಯ ಬಗ್ಗೆ ಕಲಿತುಕೊಳ್ಳುತ್ತಿದ್ದಾರೆ. ಇದರಿಂದ ಗ್ರಾಮದ ಜನರಿಗೆ ಇಂಟರ್ನೆಟ್ ಬಗ್ಗೆ ಮಾಹಿತಿ ಹಾಗೂ ಸೌಲಭ್ಯವನ್ನು ಪಡೆದುಕೊಳ್ಳುವುದು ಹೇಗೆ ಎನ್ನುವುದನ್ನು ತಿಳಿಸಲು ಅನುಕೂಲವಾಗುವುದು ಎನ್ನುವ ಉದ್ದೇಶ ಹೊಂದಿದ್ದಾರೆ.

ಇದೊಂದು ಉತ್ತಮ ಕೆಲಸ...

ಇದೊಂದು ಉತ್ತಮ ಕೆಲಸ...

ನಿಷ್ಕ್ರೀಯವಾಗಿದ್ದ ಶಾಲೆಯನ್ನು ಪುನಃಶ್ಚೇತನಗೊಳಿಸುವುದು ಎಂದರೆ ಅದು ಸುಲಭದ ಕೆಲಸವಲ್ಲ. ಯಾವುದೇ ಸೌಲಭ್ಯ ವಿಲ್ಲದ ಈ ಹಳ್ಳಿಯಲ್ಲಿ ನಿತ್ಯದ ಅಗತ್ಯದ ನೀರಿಗಾಗಿ ಕಿಲೋಮೀಟರ್ ಗಳಷ್ಟು ದೂರ ನಡೆದೇ ಸಾಗಬೇಕಿದೆ. ಇಂತಹ ಸ್ಥಿತಿಯಲ್ಲಿ ಶಾಲೆಯ ಅಭಿವೃದ್ಧಿಯನ್ನು ಮಾಡಿರುವುದು ಹಾಗೂ ಜನರಲ್ಲಿ ಶಿಕ್ಷಣದ ಬಗ್ಗೆ ಉತ್ತಮ ಅರಿವು ಮೂಡಿಸಿರುವುದು ಮದನ್ ಅವರ ಸಾಧನೆ ಎನ್ನಬಹುದು. ಇಂತಹ ಒಂದು ಸಾಧನೆ ಮಾಡಿದ ವ್ಯಕ್ತಿಗೆ ಧನ್ಯವಾದವನ್ನು ಸಲ್ಲಿಸಲೇ ಬೇಕು.

English summary

No Electricity, No Water-and One Man Fighting for Change!

The village is situated on the border of Madhya Pradesh and Rajasthan, and falls under the famous Chambal ki Ghaati (Chambal river basin) region. The water that they source from the Chambal River is extremely polluted and there’s an added risk of being attacked by crocodiles. There have been incidents of men and children being dragged away by crocodiles, but since there’s no other source of water, the villagers continue to risk their lives.
Story first published: Saturday, July 21, 2018, 14:32 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more