Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಹಿರಿಯ ಜೋಡಿಗಳು ಮಳೆಯಲ್ಲಿ ನೆನೆದು ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ...ಎನ್ನುವ ಹಾಡು ಎಂತವರನ್ನು ಕೂಡ ಮಳೆಯಲ್ಲಿ ನೆನೆದು ಒಂದು ಸಲ ಮನಬಿಚ್ಚಿ ನರ್ತಿಸಬೇಕೆನ್ನುವಂತೆ ಮಾಡುವುದು. ಅದೇ ರೀತಿ ಇಲ್ಲೊಂದು ವಯೋವೃದ್ಧ ಜೋಡಿಯು ಮಳೆಯಲ್ಲಿ ನೆನೆದು ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ.
ಯುವಜನತೆ ಮಾತ್ರ ಮಳೆಯಲ್ಲಿ ಸಂಭ್ರಮಿಸಿದರೆ ಸಾಕೇ? ನಾವು ಸಂಭ್ರಮಿಸಬಾರದೇ ಎನ್ನುವ ರೀತಿಯಲ್ಲಿ ಇದೆ ಈ ಜೋಡಿಯ ಡ್ಯಾನ್ಸ್. ನಿಜವಾಗಿಯೂ ಈ ವಯಸ್ಸಿನಲ್ಲಿಯೂ ಜೀವನವನ್ನು ಆನಂದಿಸುತ್ತಿರುವ ಜೋಡಿಗೆ ಒಂದು ಸಲಾಂ...
ಒಂದೆಡೆ ಸುರಿಯುತ್ತಿರುವ ಮಳೆ, ಇನ್ನೊಂದೆಡೆ ರೋಮ್ಯಾಂಟಿಕ್ ಆಗಿರುವಂತಹ ಹಾಡಿನ ಮಧ್ಯೆ ಈ ಜೋಡಿಯ ಡ್ಯಾನ್ಸ್ ಮಾತ್ರ ಪ್ರತಿಯೊಬ್ಬರಿಗೂ ಸಂತಸ ನೀಡಿದೆ. ದೇಹಕ್ಕೆ ವಯಸ್ಸಾಗಿದೆ, ಮನಸ್ಸಿಗಲ್ಲ ಎನ್ನುವುದು ಈ ಜೋಡಿಯ ಡ್ಯಾನ್ಸ್ ನಿಂದ ತಿಳಿದುಬರುವುದು. ತಮ್ಮ ಸುತ್ತಲು ಜನರು ನಿಂತು ನೋಡುತ್ತಿದ್ದಾರೆ ಎಂದು ತಿಳಿದಿದ್ದರೂ ಈ ಜೋಡಿಯು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿರುವ ರೀತಿ ಅನನ್ಯ. ವಿಡಿಯೋ ಖಂಡಿತವಾಗಿಯೂ ಎಲ್ಲರಿಗೂ ಮೆಚ್ಚುಗೆಯಾಗಲಿದೆ. ಇದನ್ನು ನೋಡಿ ಮತ್ತು ಇನ್ನಷ್ಟು ವಿಡಿಯೋಗಳಿಗಾಗಿ ಇದೇ ಸೆಕ್ಷನ್ ನ್ನು ವೀಕ್ಷಿಸುತ್ತಿರಿ.