For Quick Alerts
ALLOW NOTIFICATIONS  
For Daily Alerts

ಬಂಗಾರದಿಂದ ತುಂಬಿದ್ದ ಬ್ಯಾಗ್ ಹಿಂತಿರುಗಿಸಿ, ಪ್ರಾಮಾಣಿಕ ಮೆರೆದ ವ್ಯಕ್ತಿಯ ರಿಯಲ್ ಸ್ಟೋರಿ

By Hemanth
|

ಜೀವನದಲ್ಲಿ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಅವರನ್ನು ಗುರುತಿಸುವುದು ಪ್ರಾಮಾಣಿಕತೆಯಿಂದ. ಸಮಾಜದಲ್ಲಿ ಪ್ರಾಮಾಣಿಕವಾಗಿ ಇದ್ದರೆ ಆಗ ಪ್ರತಿಯೊಬ್ಬರು ನಿಮಗೆ ಗೌರವ ನೀಡುವರು. ಇಂತಹ ಪ್ರಾಮಾಣಿಕತೆಗೆ ಕೊಲ್ಕತ್ತಾ ಹೌರದಲ್ಲಿ ರಿಕ್ಷಾ ಎಳೆಯುವ ವ್ಯಕ್ತಿಯೊಬ್ಬ ಸಾಕ್ಷಿ.

ಹೌರದಲ್ಲಿ ರಿಕ್ಷಾ ಎಳೆಯು 54ರ ಹರೆಯದ ಮಂತು ಸಾಹಾ ಎನ್ನುವವರು 2.98 ಕೋಟಿ ರೂ. ಮೌಲ್ಯದ ಬಂಗಾರ ಮತ್ತು ವಜ್ರಾಭರಣ, 60 ಸಾವಿರ ರೂ. ನಗದು ತುಂಬಿದ್ದ ಸುಮಾರು ಬ್ಯಾಗ್ ನ್ನು ತನ್ನ ರಿಕ್ಷಾದಲ್ಲಿ ಬಿಟ್ಟು ಹೋಗಿದ್ದ ಪ್ರಯಾಣಿಕರಿಗೆ ಮರಳಿ ತಲುಪಿಸಿದ್ದಾರೆ...

ಆಭರಣ ಖರೀದಿಸಿ-ರಿಕ್ಷಾ ಏರಿದರು

ಆಭರಣ ಖರೀದಿಸಿ-ರಿಕ್ಷಾ ಏರಿದರು

ಹೌರಾದ ಬಾಲಿ ಮಾರ್ಕೆಟ್ ನಲ್ಲಿರುವ ಬಂಗಾರದ ಅಂಗಡಿಗೆ ಭೇಟಿ ನೀಡಿದ ರುಕ್ಮಿಣಿ ದೇವಿ ಎಂಬವರು ಅಲ್ಲಿ ಆಭರಣಗಳನ್ನು ಖರೀದಿಸಿದರು. ಇದರ ಬಳಿಕ ಅವರು ಲಿಲುಹದಲ್ಲಿರುವ ತನ್ನ ಮನೆಗೆ ಹೋಗಲು ಮಂತು ರಿಕ್ಷಾವನ್ನೇರಿದರು.

ತನ್ನ ಫ್ಲ್ಯಾಟ್ ಗೆ ತಲುಪಿದ ಬಳಿಕ ಆಕೆಗೆ ನೆನಪಿಗೆ ಬಂತು!

ತನ್ನ ಫ್ಲ್ಯಾಟ್ ಗೆ ತಲುಪಿದ ಬಳಿಕ ಆಕೆಗೆ ನೆನಪಿಗೆ ಬಂತು!

ತನ್ನ ಫ್ಲ್ಯಾಟ್ ಗೆ ತಲುಪಿದ ಬಳಿಕ ಆಕೆಗೆ ಬ್ಯಾಗ್ ನ್ನು ರಿಕ್ಷಾದಲ್ಲಿಯೇ ಬಿಟ್ಟಿರುವ ಬಗ್ಗೆ ತಿಳಿದುಬಂತು. ಆಕೆ ತಕ್ಷಣವೇ ಬೆಲೂರು ಪೊಲೀಸ್ ಠಾಣೆಗೆ ಹೋಗಿ ಅಲ್ಲಿ ಬ್ಯಾಗ್ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸುತ್ತಾಳೆ. ಬೆಲು ಸಿಮುಲ್ತಾಲ ಘಾಟ್ ನಲ್ಲಿರುವ ಮನೆಗೆ ತಲುಪಿದಾಗ ಮಂತುಗೆ ತನ್ನ ರಿಕ್ಷಾದಲ್ಲಿ ಬ್ಯಾಗ್ ಇರುವುದು ಕಂಡುಬರುತ್ತದೆ. ಬಂಗಾರ ಮತ್ತು ವಜ್ರದ ಆಭರಣಗಳಿಂದ ತುಂಬಿದ್ದ ಬ್ಯಾಗ್ ನ್ನು ಹಿಡಿದುಕೊಂಡ ಮಂತು ಮನೆಯ ಒಳಗಡೆ ಹೋಗಿ ಅದನ್ನು ತನ್ನ ಪತ್ನಿಗೆ ತೋರಿಸುತ್ತಾನೆ. ಆದರೆ ಈ ದಂಪತಿ ಮರುಯೋಚನೆ ಮಾಡದೆ ಈ ಬ್ಯಾಗ್ ನ್ನು ಅದರ ವಾರಿಸುದಾರರಿಗೆ ತಲುಪಿಸಲು ನಿರ್ಧರಿಸುತ್ತಾರೆ.

ಹತ್ತು ಸಾವಿರ ರೂ. ನಗದು ಬಹುಮಾನ ಪಡೆದ ಮಂತು

ಹತ್ತು ಸಾವಿರ ರೂ. ನಗದು ಬಹುಮಾನ ಪಡೆದ ಮಂತು

ಅವರು ಬೆಲೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ಬ್ಯಾಗ್ ನ್ನು ತಲುಪಿಸುವರು. ಬ್ಯಾಗ್ ಅನ್ನು ಮಂತು ತಲುಪಿಸಿದ ಬಳಿಕ ಬೆಲೂರು ಒಸಿ ಸ್ವಪನ್ ಸಾಹಾ ಅವರು ರುಕ್ಮಿಣಿಗೆ ಕರೆ ಮಾಡಿ ಠಾಣೆಗೆ ಕರೆಸುತ್ತಾರೆ. ತನ್ನ ಆಭರಗಣಗಳೆಲ್ಲವೂ ಸರಿಯಾಗಿರುವುದನ್ನು ಕಂಡ ದುಬೈ ನಿವಾಸಿಯಾಗಿರುವ ರುಕ್ಮಿಣಿ ದೇವಿ ಅವರು ಮಂತು ಪ್ರಾಮಾಣಿಕತೆಯನ್ನು ಮೆಚ್ಚಿ ಅವರಿಗೆ ಹತ್ತು ಸಾವಿರ ರೂ. ನಗದು ಬಹುಮಾನ ನೀಡುತ್ತಾರೆ.

ರಿಕ್ಷಾ ಖರೀದಿಸಲು ಚೆಕ್ ಕಳುಹಿಸಿಕೊಡುವುದಾಗಿ ಮಂತುಗೆ ಭರವಸೆ

ರಿಕ್ಷಾ ಖರೀದಿಸಲು ಚೆಕ್ ಕಳುಹಿಸಿಕೊಡುವುದಾಗಿ ಮಂತುಗೆ ಭರವಸೆ

ಬಹಳಷ್ಟು ಬಾರಿ ಕೃತಜ್ಞತೆ ಸಲ್ಲಿಸಿದ ಬಳಿಕ ರುಕ್ಮಿಣಿ ದೇವಿ ಅವರು ಇನ್ನೇನಾದರೂ ಮಾಡಬೇಕಾ ಎಂದು ಪ್ರಶ್ನಿಸುತ್ತಾರೆ. ತಾನು ಬಡವನಾಗಿದ್ದ ರಿಕ್ಷಾ ಎಳೆಯುವ ಕೆಲಸ ಮಾಡುತ್ತಿದ್ದೇನೆ. ಅಟೋ ರಿಕ್ಷಾ ಅಥವಾ ಈ ರಿಕ್ಷಾ ಚಲಾಯಿಸಿದರೆ ತನ್ನ ಮನೆಯ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಣೆಯಾಗುವುದು ಎಂದು ಹೇಳುತ್ತಾನೆ. ಮರುದಿನವೇ ದುಬೈಗೆ ಹೋಗಬೇಕಿದ್ದ ರುಕ್ಮಿಣಿ ದೇವಿ ಅವರು ರಿಕ್ಷಾ ಖರೀದಿಸಲು ಚೆಕ್ ಕಳುಹಿಸಿಕೊಡುವುದಾಗಿ ಮಂತುಗೆ ಭರವಸೆ ನೀಡುತ್ತಾರೆ. ಈ ಕಾಲದಲ್ಲಿ ಹಣವೆಂದರೆ ಬಾಯಿಬಿಡುವವರೆ ಇರುವಾಗ ಪ್ರಾಮಾಣಿಕವಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಆಭರಣಗಳನ್ನು ಹಿಂತಿರುಗಿಸಿರುವ ಮಂತು ಪ್ರಾಮಾಣಿಕತೆಯು ಎಲ್ಲರಿಗೂ ಮಾದರಿ. ಅವರ ಪ್ರಾಮಾಣಿಕತೆಗೆ ನಮ್ಮದೊಂದು ಸಲಾಂ....

English summary

meet-mantu-the-man-who-is-known-his-honesty

Mantu Saha, an auto driver from Kolkata, found a bag filled with gold, diamonds and liquid cash of a lady named Rukhmini whom he dropped. He and his wife later went to the police station to give it away and on being impressed by the driver's honesty she gave him Rs 10,000 and promised him to give a cheque.
X
Desktop Bottom Promotion