Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಈ ವ್ಯಕ್ತಿ ಮೊಸಳೆಯನ್ನು ಸಾಕಿದ್ದಾನೆ... ಅದೀಗ ಅವನ ಮನೆಯ ಒಬ್ಬ ಸದಸ್ಯ...
ಪ್ರಾಣಿಗಳು ಮನುಷ್ಯನಂತೆ ಮಾತನಾಡಲು ಬರದ ಜೀವಿಗಳು. ಆದರೆ ಅವರ ವರ್ತನೆಗಳು ಬಹಳ ಭಯಂಕರವಾಗಿರುತ್ತದೆ. ಈ ಹಿನ್ನೆಲೆಯಲ್ಲಿಯೇ ವನ್ಯ ಜೀವಿಗಳಿಂದ ಆದಷ್ಟು ದೂರ ಇರುತ್ತೇವೆ. ಅವುಗಳಲ್ಲಿ ಸಭ್ಯ ಹಾಗೂ ಮಾನವನ ಜೊತೆ ಹೊಂದಿಕೊಂಡು ಇರುತ್ತವೆ ಎನ್ನುವಂತಹ ಪ್ರಾಣಿಗಳನ್ನು ಮಾತ್ರ ಸಾಕು ಪ್ರಾಣಿಯನ್ನಾಗಿ ಸ್ವೀಕರಿಸಿದ್ದೇವೆ. ಇನ್ನು ಉಳಿದ ಪ್ರಾಣಿಗಳನ್ನು ವನ್ಯ ಜೀವಿಗಳು ಎಂದು ವಿಂಗಡಿಸಲಾಗಿದೆ.
ಇತ್ತೀಚೆಗೆ ಪ್ರಾಣಿಯನ್ನು ಸಾಕುವುದು ಹಾಗೂ ಅದರ ಆರೈಕೆ ಮಾಡುವುದು ಎಂದರೆ ಒಂದು ಬಗೆಯ ಪ್ರತಿಷ್ಠೆಯ ವಿಚಾರ ಎನ್ನುವಂತೆ ಪರಿಗಣಿಸಲಾಗುತ್ತದೆ. ಹಾಗಾಗಿ ಕೆಲವರು ವಿವಿಧ ಜಾತಿಯ ನಾಯಿ, ಬೆಕ್ಕು, ಹಸುಗಳನ್ನು ಸಾಕುತ್ತಾರೆ. ಇನ್ನೂ ಕೆಲವರು ಆಶ್ಚರ್ಯಕರ ಮತ್ತು ಅಸಮಾನ್ಯ ಎನ್ನುವಂತೆ ಕಾಡು ಪ್ರಾಣಿಗಳನ್ನು ತಂದು ಸಾಕುತ್ತಾರೆ. ಅದಕ್ಕೆ ಸಾಕ್ಷಿ ಎಂಬಂತೆ ಹುಲಿ, ಸಿಂಹ, ಹಾವುಗಳಂತಹ ಕ್ರೂರ ಪ್ರಾಣಿಗಳನ್ನು ಸಾಕಿರುವುದನ್ನು ನೋಡಿದ್ದೇವೆ.
ಆದರೆ ಇಲ್ಲೊಬ್ಬ ವ್ಯಕ್ತಿ ಆಶ್ಚರ್ಯ ಎನ್ನುವಂತೆ ಕ್ರೂರ ಪ್ರಾಣಿಯಲ್ಲಿ ಒಂದಾದ ಮೊಸಳೆಯನ್ನು ಮನೆಗೆ ತಂದು ಸಾಕಿದ್ದಾನೆ. ಇದೊಂದು ವಿಲಕ್ಷಣ ರೀತಿಯ ಪ್ರೀತಿ ಅಥವಾ ಬಂಡ ಧೈರ್ಯ ಎನಿಸುತ್ತದೆಯಾದರೂ ಇದನ್ನು ಪ್ರಾಣಿ ಪ್ರೀತಿಯ ಒಂದು ಬಗೆ ಎನ್ನಬಹುದು. ಈ ಪ್ರಾಣಿಯೊಂದಿಗೆ ಸಲುಗೆ ಹಾಗೂ ಪ್ರೀತಿಯನ್ನು ಬೆಳೆಸಲು ಹಾಗೂ ಮನುಷ್ಯರ ನಡುವೆ ಸಭ್ಯ ವತನೆಯನ್ನು ತೋರುವಂತೆ ಮಾಡಲು 20 ವರ್ಷಗಳು ಬೇಕಾಗಿದೆ ಎಂದು ಹೇಳಲಾಗಿದೆ.
ಈ ಮೊಸಳೆಯು ಮನೆಯ ಆವರಣದಲ್ಲಿಯೇ ಒಂದು ಚಿಕ್ಕ ನೀರಿನ ತೊಟ್ಟಿಯಲ್ಲಿ ಇರುತ್ತದೆ. ಇದೊಂದು ರೋಚಕ ವಿಚಾರ ಎನ್ನಬಹುದು. ನಿಮಗೂ ಈ ಒಂದು ವಿಚಿತ್ರ ಕಥೆಯನ್ನು ಇನ್ನಷ್ಟು ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಇದ್ದರೆ ಮುಂದೆ ಓದಿ...
ಇರ್ವಾನ್ ಎನ್ನುವ ವ್ಯಕ್ತಿ ಮೊಸಳೆಯೊಂದನ್ನು ಸಾಕುವುದಾಗಿ ಮನೆಗೆ ತಂದಿದ್ದಾರೆ. ಅದಕ್ಕಾಗಿಯೇ ಮನೆಯಲ್ಲಿ ಒಂದು ನೀರಿನ ತೊಟ್ಟಿಯನ್ನು ನಿರ್ಮಿಸಿದ್ದಾರೆ. ಆ ಮೊಸಳೆ ದಿನದ ಬಹುತೇಕ ಸಮಯವನ್ನು ಅಲ್ಲಿಯೇ ಕಳೆಯುತ್ತದೆ. ಈ ಮೊಸಳೆಯ ಮುಂದೆಯೇ ಮನೆಯಲ್ಲಿರುವ ಮೂರು ಮಕ್ಕಳು ಆಟವಾಡುತ್ತಾರೆ. ಮನೆಯವರು ಓಡಾಡುತ್ತಾರೆ. ಆದರೆ ಅವರಿಗೆ ಯಾವುದೇ ಹಾನಿಯನ್ನುಂಟುಮಾಡುವುದಿಲ್ಲ.
ಕುಟುಂಬದ ಸದಸ್ಯರ ನಡುವೆ ಒಬ್ಬ ಸದಸ್ಯರಂತೆ ಮೊಸಳೆಯನ್ನು ಇವರು ಪರಿಗಣಿಸುತ್ತಾರೆ. ಮೊಸಳೆಯು ಸಹ ಎಂತಹ ಸ್ಥಿತಿಯಲ್ಲೂ ಮನೆ ಮಂದಿಗೆ ಯಾವುದೇ ಅಹಿತಕರ ಗಾಯ ಅಥವಾ ವರ್ತನೆಯನ್ನು ತೋರುವುದಿಲ್ಲ. ಪ್ರಾಣಿಯನ್ನು ಸಾಕಲು ತರಬೇತಿಯನ್ನು ಹೊಂದಿರಬಹುದು. ಆದರೆ ಕ್ರೂರ ಸ್ವಭಾವ ಇರುವ ಪ್ರಾಣಿಯೊಂದು ಜೊತೆಯಲ್ಲಿಯೇ ಕುಳಿತಿರುತ್ತದೆ ಎಂದರೆ ಒಮ್ಮೆ ಮೈ ಜುಮ್ಮೆನಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಅದರಲ್ಲೂ ಮೊಸಳೆಗೆ ಒಬ್ಬ ಮಾನವ ಎಂದರೆ ಅದಕ್ಕೊಂದು ಹೊತ್ತಿನ ಊಟ ಆಗಬಹುದು. ಹೀಗಿರುವಾಗ ಅದನ್ನು ಮನೆಗೆ ತರುವುದು, ಸಾಕುವುದು ಎಂದರೆ ಆಶ್ಚರ್ಯಕರವಾದ ಸಂಗತಿ.
ಈ ಮೊಸಳೆಯೊಂದಿಗೆ ಇರ್ವನ್ ಹಾಗೂ ಅವರ ಮನೆಯವರು ಬಹು ಸಲಿಗೆಯಿಂದಲೇ ವರ್ತಿಸುತ್ತಾರೆ. ಇರ್ವಾನ್ ಮೊಸಳೆಯ ಮೈ ಸವರುವುದು, ಆಹಾರ ನೀಡುವುದು, ಮೈ ತೊಳೆಸುವುದು ಹಾಗೂ ಅದರ ಮೇಲೆ ಕುಳಿತುಕೊಳ್ಳುವುದು ಎಲ್ಲವನ್ನೂ ಮಾಡುತ್ತಾರೆ. ತನ್ನ ಮೈ ಮೇಲೆ ಮಾಲೀಕ ಕುಳಿತುಕೊಂಡಾಗಲೂ ನಿಧಾನವಾಗಿ ಮೊಸಳೆ ಮುಂದೆ ಚಲಿಸುವುದು. ಒಟ್ಟಿನಲ್ಲಿ ಈ ಕಥೆಯಿಂದ ತಿಳಿದುಕೊಳ್ಳುವ ವಿಚಾರ ವೆಂದರೆ ಎಂತಹ ಕ್ರೂರ ಮನಸ್ಸಿನ ಪ್ರಾಣಿಯನ್ನಾದರೂ ಪ್ರೀತಿ ವಿಶ್ವಾಸದಿಂದ ಸಾಕಿದರೆ ಅದೂ ನಮಗೆ ಋಣಿಯಾಗಿ ಬದುಕುವುದು.