For Quick Alerts
ALLOW NOTIFICATIONS  
For Daily Alerts

ಮರಣಕ್ಕೆ ಹತ್ತಿರವಾಗಿದ್ದರೂ ಹಾಡು ಹಾಡಿ ತನ್ನ ಕೊನೆಯಾಸೆ ತೀರಿಸಿಕೊಂಡ!

|

ನಮಗೆಲ್ಲರಿಗೂ ತಿಳಿದಂತೆ ಸಾವು ಎಂಬುದು ಬದುಕಿನ ಅಂತಿಮ ನಿಲ್ದಾಣವಾಗಿದೆ. ಮರಣ ಭಯ ಎಂಬುದು ಎಲ್ಲರಲ್ಲೂ ಇದ್ದೇ ಇರುತ್ತದೆ. ಅಂತೆಯೇ ಹುಟ್ಟಿದವರು ಸಾಯಲೇಬೇಕು ಎಂಬ ಮಾತು ಕೂಡ ನಿಜ.

ಜನನ ಮತ್ತು ಮರಣದ ಈ ನಡುವಿನ ಬದುಕಿನಲ್ಲಿ ನಾವು ಏನು ಒಳ್ಳೆಯದು ಮಾಡುತ್ತೇವೆಯೋ ಅದರ ಫಲ ನಮಗೆ ದೊರೆಯುತ್ತದೆ ಅಂತೆಯೇ ಏನು ಕೆಟ್ಟದ್ದು ಮಾಡಿದ್ದೇವೆಯೋ ಅದರ ಫಲ ನಾವು ಅನುಭವಿಸುತ್ತೇವೆ. ನಮ್ಮ ಜೀವನದಲ್ಲಿ ಎಷ್ಟೇ ಸುಖವನ್ನು ನಾವು ಅನುಭವಿಸಿದ್ದರೂ ಮರಣ ಮಾತ್ರ ಬೇಡ ಎಂದೇ ಬೇಡಿಕೊಳ್ಳುತ್ತೇವೆ.

ಕ್ಯಾನ್ಸರ್ ಪೀಡಿತ ವ್ಯಕ್ತಿಯೊಬ್ಬ ಹಾಡು ಹಾಡಿ ರೆಕಾರ್ಡ್ ಮಾಡಿರುವ ವಿಡಿಯೋ

ಕ್ಯಾನ್ಸರ್ ಪೀಡಿತ ವ್ಯಕ್ತಿಯೊಬ್ಬ ಹಾಡು ಹಾಡಿ ರೆಕಾರ್ಡ್ ಮಾಡಿರುವ ವಿಡಿಯೋ

ದೀರ್ಘ ಆಯುಷ್ಯವಿದ್ದರೆ ಎಷ್ಟು ಒಳಿತು ಎಂದೇ ಹಲವಾರು ಅಭಿಪ್ರಾಯವಾಗಿದೆ. ಆದರೆ ಮನುಷ್ಯ ಮರಣದ ನಡುವಿನ ಬದುಕಿನಲ್ಲಿ ಪರರ ಹಿತವನ್ನು ಬಯಸುತ್ತಾ ಬದುಕಬೇಕು ಎಂದು ಪುರಾಣಗಳು ತಿಳಿಸಿವೆ. ಆದರೆ ಮರಣಕ್ಕೆ ಹತ್ತಿರವಾಗಿದ್ದಾಗ ಎಲ್ಲರ ಮನದಲ್ಲಿ ಕೂಡ ಏನಾದರೊಂದು ಬಯಕೆಗಳು ಇದ್ದೇ ಇರುತ್ತದೆ. ಇಂದಿನ ಲೇಖನದಲ್ಲಿ ಕ್ಯಾನ್ಸರ್ ಪೀಡಿತ ವ್ಯಕ್ತಿಯೊಬ್ಬ ಹಾಡು ಹಾಡಿ ರೆಕಾರ್ಡ್ ಮಾಡಿರುವ ವಿಡಿಯೋ ತಾಣದಲ್ಲಿ ಹರಿದಾಡುತ್ತಿದ್ದು ಇದು ನಿಮ್ಮ ಕಣ್ಣನ್ನು ಒದ್ದೆಯಾಗಿಸುವುದು ಖಂಡಿತ. ಹಾಡನ್ನು ಹಾಡಿ ಕೆಲವು ಸಮಯಗಳ ನಂತರ ಈ ವ್ಯಕ್ತಿ ಮೃತನಾಗುತ್ತಾನೆ

ಈ ವ್ಯಕ್ತಿ ಯಾರು

ಈ ವ್ಯಕ್ತಿ ಯಾರು

ಮಾರ್ಕ್ ವ್ರೈಟ್ ಕೆಲವು ಸಮಯಗಳಿಂದ ಈ ರೋಗದಿಂದ ಬಳಲುತ್ತಿದ್ದರು. 30 ಕ್ಕಿಂತ ಹೆಚ್ಚು ವರ್ಷಗಳ ಕಾಲ ಆತ ಈ ಕಾಯಿಲೆಯಿಂದ ಬಳಲುತ್ತಿದ್ದರು. ಮಿಸೋರಿ ವಲಯದಲ್ಲಿರುವ ಕೊಲಂಬಿಯಾದಲ್ಲಿ ಕೊಲನ್ ಆಪರೇಷನ್‌ಗೂ ಇವರು ಒಳಗಾಗಿದ್ದರು ಮತ್ತು ಕೀಮೋಥೆರಪಿಯನ್ನು ಮಾಡಲಾಗಿತ್ತು. ಅವರಿಗೆ ಬಂದಿದ್ದು ಕ್ಯಾನ್ಸರ್ ತನ್ನ ಕಬಂಧ ಬಾಹುವನ್ನು ಯಕೃತ್ತು, ದುಗ್ಧರಸ ಗ್ರಂಥಿಗಳು ಮತ್ತು ಅವರ ಶ್ವಾಸಕೋಶಗಳಿಗೆ ಹರಡಿಸಿತ್ತು ಎಂಬುದನ್ನು ಅವರು ಕಂಡುಕೊಂಡಿದ್ದರು.

ಈ ಹಾಡು ಹಾಡುವುದು ಅವರ ಕೊನೆಯ ಆಸೆಯಾಗಿತ್ತು

ಈ ಹಾಡು ಹಾಡುವುದು ಅವರ ಕೊನೆಯ ಆಸೆಯಾಗಿತ್ತು

ತಾನು ಮರಣಕ್ಕೆ ಹತ್ತಿರವಾಗಿದ್ದೇನೆ ಎಂಬುದು ಮಾರ್ಕ್‌ಗೆ ತಿಳಿದಿತ್ತು ಮತ್ತು ಅವರ ಕೊನೆಯಾಸೆಯಂತೆ ಹಾಡು ಹೇಳುವುದು ಅವರ ಬಯಕೆಯಾಗಿತ್ತು. ಗರ್ತ್ ಬುಕ್ಸ್ ಅವರ " ದ ಡ್ಯಾನ್ಸ್" ಹಾಡನ್ನು ಹಾಡುವುದು ಅವರ ಬಯಕೆಯಾಗಿತ್ತು. ಅವರ ಸ್ನೇಹಿತರು ಗಿಟಾರ್ ನುಡಿಸಿ ಮಾರ್ಕ್‌ ಹಾಡಿಗೆ ಜೊತೆಯಾದರು. ಮಾರ್ಕ್ ಕುಟುಂಬ ಕೂಡ ಅವರ ಕೊನೆಯಾಸೆಯನ್ನು ನಡೆಸಿ ಕೊಟ್ಟಿತು.

ಅವರ ಮೆಚ್ಚಿನ ಸಂಗೀತಗಾರರೇ ಈ ವಿಡಿಯೋವನ್ನು ಪ್ರದರ್ಶಿಸಿದ್ದಾರೆ

ಅವರ ಮೆಚ್ಚಿನ ಸಂಗೀತಗಾರರೇ ಈ ವಿಡಿಯೋವನ್ನು ಪ್ರದರ್ಶಿಸಿದ್ದಾರೆ

ವರದಿಗಳ ಪ್ರಕಾರ ಗರ್ತ್ ಬುಕ್ಸ್ ವಿಖ್ಯಾತ ಸಂಗೀತಗಾರರು ಮಾರ್ಕ್ ವೀಡಿಯೊವನ್ನು ಪ್ರದರ್ಶಿಸಿದ್ದು ಮಾರ್ಕ್ ಮತ್ತು ಅವರ ಹಾಡಿನ ಬಗ್ಗೆ ಹೊಗಳಿ ಮಾರ್ಕ್‌ನ ಕೌಶಲ್ಯವನ್ನು ಶ್ಲಾಘಿಸಿದ್ದಾರೆ. ಮಾರ್ಕ್ ತನ್ನ ಮೆಚ್ಚಿನ ಸಂಗೀತಗಾರರಿಂದ ಉತ್ತಮ ಪ್ರಶಂಸೆಯನ್ನು ಪಡೆದುಕೊಂಡಿದ್ದಾರೆ. ಇಂತಹುದೇ ಇನ್ನಷ್ಟು ಸುದ್ದಿಗಳ ಮಾಹಿತಿ ಪಡೆದುಕೊಳ್ಳಲು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ.

Read more about: life fact
English summary

Man In Hospital Sang “The Dance”

A man named Marc Wright had been fighting cancer for a long time. He had been a firefighter for more than 30 years throughout the Columbia, Missouri zone. He had undergone a colon surgery and extensive chemotherapy; he found that his tumour had moved to his liver, lymph nodes and his lungs. He passed away after a few days this video of him singing went viral.
X
Desktop Bottom Promotion