Latest Updates
-
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ
ಜುಲೈ 27 ಚಂದ್ರಗ್ರಹಣ: ಮದುವೆ ಆಗದವರು ಈ ಬಾರಿ 'ಚಂದ್ರಗ್ರಹಣ' ವೀಕ್ಷಿಸಲೇ ಬೇಡಿ!!
ಈ ವರ್ಷವು ತುಂಬಾ ವಿಶೇಷವಾಗಿರುವಂತದ್ದಾಗಿದೆ. ಯಾಕೆಂದರೆ ಎರಡೆರಡು ಚಂದ್ರಗ್ರಹಣ ಕಾಣಿಸಿಕೊಳ್ಳುವುದು. ಎರಡನೇ ಚಂದ್ರಗ್ರಹಣವು ಇದೇ ಬರುವ ಜುಲೈ 27, 2018ರಂದು ಕಾಣಿಸಿಕೊಳ್ಳಲಿದೆ. ಮೊದಲ ಚಂದ್ರಗ್ರಹಣವು ಜನವರಿ 31, 2018ರಂದು ಕಂಡುಬಂದಿತ್ತು. ಆದರೆ ಈ ಚಂದ್ರಗ್ರಹಣವು ತುಂಬಾ ದೀರ್ಘವಾಗಿರುವ ಚಂದ್ರಗ್ರಹಣವಾಗಿರಲಿದ್ದು, ಒಂದು ಗಂಟೆ ಮತ್ತು 43 ನಿಮಿಷಗಳ ಕಾಲ ಗ್ರಹಣವಿರಲಿದೆ.
ಈ ಸಮಯದಲ್ಲಿ ಚಂದ್ರನು ಕೆಂಪು ಅಥವಾ ಕಂದು ಬಣ್ಣದಲ್ಲಿ ಕಾಣಿಸಿಕೊಳ್ಳುವನು. ಈ ಅದ್ಭುತ ಖಗೋಳ ವಿದ್ಯಮಾನವನ್ನು ನೋಡಲು ಜನರು ಕಾತರಗೊಂಡಿದ್ದಾರೆ. ಚಂದ್ರಗ್ರಹಣದ ಬಗ್ಗೆ ಈ ಲೇಖನದಲ್ಲಿ ನಿಮಗೆ ಕೆಲವು ಮಾಹಿತಿಗಳನ್ನು ನೀಡಲಾಗಿದೆ...

ಚಂದ್ರಗ್ರಹಣದ ಪರಿಣಾಮಗಳು
ಚಂದ್ರಗ್ರಹಣವು ಭೂಮಿ ಮೇಲೆ ತೀವ್ರ ರೀತಿಯ ಪರಿಣಾಮವನ್ನು ಬೀರಬಹುದು. ಇದರಿಂದಾಗಿ ಭೂಕಂಪನ, ಸುನಾಮಿ, ಚಂಡಮಾರುತ ಅಥವಾ ಬೆಂಕಿ ಅವಘಡಗಳು ಕಾಣಿಸಿ ಕೊಳ್ಳಬಹುದು. ಈ ಚಂದ್ರಗ್ರಹಣವು ನಾಲ್ಕು ರಾಶಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಮೇಷ, ಸಿಂಹ, ವೃಶ್ಚಿಕ ಮತ್ತು ಮೀನ ರಾಶಿಗಳ ಮೇಲೆ ಧನಾತ್ಮಕವಾದ ಪರಿಣಾಮವಾದರೆ, ಮಕರ, ಮಿಥುನ, ಕನ್ಯಾ ಮತ್ತು ಧನು ರಾಶಿ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಲಿದೆ. ಕುಂಭ, ತುಲಾ, ಕರ್ಕಾಟಕ ಮತ್ತು ವೃಷಭ ರಾಶಿಯವರಿಗೆ ಮಿಶ್ರ ಫಲವಿದೆ.

ಈಶ್ವರ ದೇವರನ್ನು ಆರಾಧಿಸಿ
ನಕಾರಾತ್ಮಕ ಪರಿಣಾಮಕ್ಕೆ ಒಳಗಾಗುವ ರಾಶಿಯವರು ಈಶ್ವರ ದೇವರನ್ನು ಆರಾಧಿಸಬೇಕು. ಚಂದ್ರಗ್ರಹಣದ ದಿನ ದಾನ ಮಾಡಿದರೆ ತುಂಬಾ ಫಲಪ್ರದವಾಗಿರುವುದು. ಯಾವ ರೀತಿಯ ದಾನ ಮಾಡಬೇಕೆಂದರೆ ಚಿನ್ನದಿಂದ ಮಾಡಿದ ಸರ್ಪ, ಬೆಳ್ಳಿ ಅಥವಾ ತಾಮ್ರವನ್ನು ತಾಮ್ರದ ಪಾತ್ರೆಯಲ್ಲಿ ಹಾಕಿ ಅದರೊಟ್ಟಿಗೆ ಕಪ್ಪು ಎಳ್ಳನ್ನು ಹಾಕಿ ಕೊಟ್ಟರೆ ತುಂಬಾ ಪವಿತ್ರವೆಂದು ಪರಿಗಣಿಸಲಾಗಿದೆ.

ಅವಿವಾಹಿತರು ಚಂದ್ರಗ್ರಹಣ ನೋಡಬಾರದು!
ಈ ಶತಮಾನದ ತುಂಬಾ ದೀರ್ಘವಾದ ಚಂದ್ರಗ್ರಹಣದಿಂದಾಗಿ ವಿಪತ್ತು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಚಂದ್ರ ಒಮ್ಮೆ ಸುಂದರವಾಗಿದ್ದಾಗ ಶಾಪಗ್ರಸ್ತನಾಗಿದ್ದ ಎಂದು ಹೇಳಲಾಗುತ್ತದೆ. ಇದರಿಂದ ಅವಿವಾಹಿತರು ಇದನ್ನು ನೋಡಬಾರದು. ಇದು ಅವರಿಗೆ ಮದುವೆಗೆ ಸಮಸ್ಯೆಯಾಗಬಹುದು.

ನಕಾರಾತ್ಮಕ ಭಾವನೆಗಳು
ಯಾವ ರಾಶಿಯಲ್ಲಿ ಚಂದ್ರನು ಒಳಗೊಂಡಿದ್ದಾನೋ ಆ ವ್ಯಕ್ತಿಯ ಹೃದಯ ಮತ್ತು ಭಾವನೆಗೆ ಇದು ಅವಲಂಬಿತವಾಗಿದೆ. ಚಂದ್ರನಲ್ಲಿ ಕೆಲವೊಂದು ವಿಕಾರಗಳು ಕೂಡ ಇದೆ. ಇದರಿಂದ ಹೃದಯದಲ್ಲಿ ಕೆಲವೊಂದು ನಕಾರಾತ್ಮಕ ಭಾವನೆಗಳು ಬರಬಹುದು.

ನಕಾರಾತ್ಮಕ ಭಾವನೆಗಳು
ಚಂದ್ರನ ಮೇಲೆ ರಾಹುವಿನ ದೃಷ್ಟಿ ಬಿದ್ದಾಗ ಅದು ದೊಡ್ಡ ಮಟ್ಟದ ಚಂದ್ರದೋಷವೆಂದು ಕರೆಯಲಾಗುತ್ತದೆ. ಜನ್ಮ ಕುಂಡಲಿಯಲ್ಲಿ ಚಂದ್ರನು ಕೆಲವೊಂದು ಅಪವಿತ್ರ ಸ್ಥಾನಗಳಲ್ಲಿ ಇದ್ದರೆ ಆಗ ಚಂದ್ರದೋಷವು ಕಂಡುಬರುವುದು. ಇದರಿಂದಾಗಿ ಅತಿಯಾದ ಚಿಂತೆ ಮತ್ತು ಒತ್ತಡ ಬರುವುದು. ಇದರಿಂದ ಆದಷ್ಟು ಮಟ್ಟಿಗೆ ನೀವು ಚಂದ್ರಗ್ರಹಣ ನೋಡುವುದರಿಂದ ದೂರವಿರಿ. ವಿವಾಹಿತರಿಗೂ ಇದರಿಂದ ದೂರವಿರಲು ಹೇಳಲಾಗುತ್ತದೆ. ಅದರಲ್ಲೂ ಗರ್ಭಿಣಿ ಮಹಿಳೆಯರು ಚಂದ್ರಗ್ರಹಣ ವೀಕ್ಷಿಸಲೇಬಾರದು.

ಚಂದ್ರನ ಮೇಲೆ ರಾಹುವಿನ ದೃಷ್ಟಿ ಬಿದ್ದಾಗ...
ಚಂದ್ರನ ಮೇಲೆ ರಾಹುವಿನ ದೃಷ್ಟಿ ಬಿದ್ದಾಗ ಅದು ದೊಡ್ಡ ಮಟ್ಟದ ಚಂದ್ರದೋಷವೆಂದು ಕರೆಯಲಾಗುತ್ತದೆ. ಜನ್ಮ ಕುಂಡಲಿಯಲ್ಲಿ ಚಂದ್ರನು ಕೆಲವೊಂದು ಅಪವಿತ್ರ ಸ್ಥಾನಗಳಲ್ಲಿ ಇದ್ದರೆ ಆಗ ಚಂದ್ರದೋಷವು ಕಂಡುಬರುವುದು. ಇದರಿಂದಾಗಿ ಅತಿಯಾದ ಚಿಂತೆ ಮತ್ತು ಒತ್ತಡ ಬರುವುದು. ಇದರಿಂದ ಆದಷ್ಟು ಮಟ್ಟಿಗೆ ನೀವು ಚಂದ್ರಗ್ರಹಣ ನೋಡುವುದರಿಂದ ದೂರವಿರಿ. ವಿವಾಹಿತರಿಗೂ ಇದರಿಂದ ದೂರವಿರಲು ಹೇಳಲಾಗುತ್ತದೆ. ಅದರಲ್ಲೂ ಗರ್ಭಿಣಿ ಮಹಿಳೆಯರು ಚಂದ್ರಗ್ರಹಣ ವೀಕ್ಷಿಸಲೇಬಾರದು.

ಚಂದ್ರಗ್ರಹಣದ ದಿನ ಗುರುಪೂರ್ಣಿಮೆ ಪೂಜೆ ಯಾವಾಗ?
ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿ ಬಂದಾಗ ಚಂದ್ರಗ್ರಹಣವು ನಡೆಯುವುದು. ಯಾಕೆಂದರೆ ಈ ವೇಳೆ ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳುವುದಿಲ್ಲ. ಗ್ರಹಣದ ವೇಳೆ ಚಂದ್ರನು ತುಂಬಾ ಕೆಂಪಾಗಿ ಕಾಣಿಸಿಕೊಳ್ಳಬಹುದು. ಇದರಿಂದಾಗಿ ಇದನ್ನು ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ. ಇಂತಹ ಗ್ರಹಣವು 104 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಲಿದೆ. ಇದು ಸಂಪೂರ್ಣ ಭಾರತದಲ್ಲಿ ಗೋಚರಿಸುವ ಕಾರಣದಿಂದಾಗಿ ಪ್ರತಿಯೊಂದು ಪ್ರದೇಶದಲ್ಲೂ ಇದರ ಪರಿಣಾಮ ಉಂಟಾಗಲಿದೆ. ಇದೇ ದಿನ ಗುರುಪೂರ್ಣಿಮೆ ಕೂಡ ಬಂದಿದೆ. ಮೂರ್ತಿ ಪೂಜೆಗೆ ತುಂಬಾ ಅಪವಿತ್ರವೆಂದು ಪರಿಗಣಿಸಲಾಗಿರುವ ಸೂತಕ ಕಾಲದಲ್ಲಿ ಯಾವುದೇ ಪೂಜೆ ಮಾಡುವಂತಿಲ್ಲ. ಚಂದ್ರಗ್ರಹಣ ಆರಂಭಕ್ಕೆ ಮೊದಲು ಗುರುಪೂರ್ಣಿಮೆ ಪೂಜೆ ಮಾಡಬಹುದು.



Click it and Unblock the Notifications











