For Quick Alerts
ALLOW NOTIFICATIONS  
For Daily Alerts

ರೆಸ್ಯೂಮ್ ಹಿಡ್ಕೊಂಡು ಸಿಗ್ನಲ್‌ನಲ್ಲಿ ಕೆಲಸ ಕೇಳುತ್ತಿದ್ದ ನಿರುದ್ಯೋಗಿಗೆ ಅದೃಷ್ಟ ಒಲಿಯಿತು!

By Deepu
|

ಹಲವಾರು ಕನಸುಗಳನ್ನು ಹೊತ್ತುಕೊಂಡು, ಕೈಯಲ್ಲಿ ಉನ್ನತ ಶಿಕ್ಷಣದ ಸರ್ಟಿಫಿಕೇಟ್ ಗಳನ್ನು ಹಿಡಿದುಕೊಂಡು ದೊಡ್ಡ ನಗರಕ್ಕೆ ಉದ್ಯೋಗ ಹುಡುಕಿಕೊಂಡು ಹೋಗುತ್ತೇವೆ. ಆದರೆ ಅಲ್ಲಿ ಕೆಲಸ ಸಿಗದೆ ಇರುವಾಗ ತುಂಬಾ ನೋವಿನ ಅನುಭವವಾಗುವುದು. ನಮ್ಮ ಶೈಕ್ಷಣಿಕ ಅರ್ಹತೆಗೆ ಸಂಬಂಧಿಸದೆ ಇರುವಂತಹ ಕೆಲಸವನ್ನು ಮಾಡಿಕೊಂಡು ಹೊಸ ನಗರದಲ್ಲಿ ಸ್ವಲ್ಪ ದಿನ ಜೀವನ ಸಾಗಿಸಬಹುದು.

ಆದರೆ ಗುರಿಮುಟ್ಟಲು ಕಂಡಿರುವ ಕನಸುಗಳು ಒಳಗಿನಿಂದಲೇ ಕೊರೆಯುತ್ತಾ ಇರುವುದು. ಇದೇ ಕಥೆಯು ಇಲ್ಲೊಬ್ಬ ನಿರುದ್ಯೋಗಿದ್ದಾಗಿದೆ. ಆದರೆ ಆತನ ಅದೃಷ್ಟ ಮಾತ್ರ ಸಂಪೂರ್ಣವಾಗಿ ಬದಲಾಗಿ ಹೋಯಿತು. ಡೇವಿಡ್ ಕ್ಯಾಸರೆಜ್ ಎನ್ನುವಾತನ ಕಥೆಯು ಇಲ್ಲಿದೆ. ಈತನ ಕಥೆ ಕೇಳಿದ ಬಳಿಕ ಸುಮಾರು 200 ಕಂಪೆನಿಗಳು ಉದ್ಯೋಗ ನೀಡಲು ಮುಂದೆ ಬಂದಿದೆ....

ಈತನ ಬಗ್ಗೆ ಸ್ವಲ್ಪ ವಿವರ ಇಲ್ಲಿದೆ

ಈತನ ಬಗ್ಗೆ ಸ್ವಲ್ಪ ವಿವರ ಇಲ್ಲಿದೆ

ಆತ ವೃತ್ತಿಯಲ್ಲಿ ವೆಬ್ ಡಿಸೈನರ್. ಟೆಕ್ಸಾಸ್ ನ ಯೂನಿವರ್ಸಿಟಿಯಿಂದ ಎಡ್ಮಿನಿಸ್ಟ್ರೇಷನ್ ಡಿಗ್ರಿ ಪಡೆದುಕೊಂಡಿದ್ದ. ಆತ ತನ್ನ ಹಿಂದಿನ ಕೆಲಸ ಬಿಟ್ಟಿದ್ದ ಮತ್ತು ಹೊಸ ಉದ್ಯೋಗವನ್ನು ತುಂಬಾ ಕ್ರಿಯಾತ್ಮಕವಾಗಿ ಹುಡುಕತ್ತಲಿದ್ದ.

ಜನರಿಗೆ ರೆಸ್ಯೂಮ್ ಅನ್ನು ನೀಡುತ್ತಿದ್ದ….

ಜನರಿಗೆ ರೆಸ್ಯೂಮ್ ಅನ್ನು ನೀಡುತ್ತಿದ್ದ….

ಸಿಲಿಕಾನ್ ವ್ಯಾಲಿಯಲ್ಲಿರುವ ಜನರಿಗೆ ತನ್ನ ರೆಸ್ಯೂಮೆ ನೀಡುತ್ತಿದ್ದ. ಇದನ್ನು ನೋಡಿದ ಮಹಿಳೆಯು ಆತನಿಗೆ ಹಣ ನೀಡಲು ಹೋದಾಗ ಆತ ಮನೆಯಿಲ್ಲದೆ, ನಿರುದ್ಯೋಗಿಯಾಗಿದ್ದರೂ ಅದನ್ನು ತಿರಸ್ಕರಿಸಿ, ತನ್ನ ರೆಸ್ಯೂಮ್ ಅನ್ನು ಆಕೆಗೆ ನೀಡಿದ.

ಜಾಸ್ಮಿನ್ ಸ್ಕಾಫೀಲ್ಡ್ ಆತನ ಕಥೆಯನ್ನು ಹಂಚಿಕೊಂಡಳು

ಜಾಸ್ಮಿನ್ ಸ್ಕಾಫೀಲ್ಡ್ ಆತನ ಕಥೆಯನ್ನು ಹಂಚಿಕೊಂಡಳು

ನಾನು ಇಂದು ಒಬ್ಬ ಮನೆಯಿಲ್ಲದೆ ಯುವಕನೊಬ್ಬ ಜನರಿಂದ ಹಣ ಕೇಳದೆ ತನ್ನ ರೆಸ್ಯೂಮೆಯನ್ನು ನೀಡುತ್ತಿರುವುದು ಕಂಡುಬಂತು. ಸಿಲಿಕಾನ್ ವ್ಯಾಲಿಯಲ್ಲಿನ ಯಾರಾದರೂ ಆತನಿಗೆ ನೆರವಾಗುವುದಿದ್ದರೆ ಅದು ಶ್ರೇಷ್ಠವಾಗಿರಲಿದೆ' ಎಂದು ಆಕೆ ಟ್ವೀಟ್ ಮಾಡಿದರು. ರೀ ಟ್ವೀಟ್ ಮಾಡಿ ಡೇವಿಡ್ ಗೆ ನೆರವಾಗಿ ಎಂದು ಹೇಳಿದ್ದರು.

ಆಕೆಯ ಟ್ವೀಟ್ ಟ್ರೆಂಡ್ ಆಯಿತು!

#getdavidajob ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿ ಹೋಯಿತು. ಆಕೆ ಡೇವಿಡ್ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತನ್ನ ಇನ್ನೊಂದು ಟ್ವೀಟ್ ನಲ್ಲಿ ಹಂಚಿಕೊಂಡಳು. ನಾನು ಡೇವಿಡ್ ಜತೆಗೆ ಫೋನ್ ನಲ್ಲಿ ಮಾತನಾಡಿದೆ. ಒಂದು ಗಂಟೆ ಮಾತನಾಡಿದೆವು. ಟೆಕ್ ನಲ್ಲಿ ಯಶಸ್ವಿಯಾಗಿ, ಸಮುದಾಯಕ್ಕೆ ಏನಾದರೂ ನೆರವಾಗಬೇಕೆಂದು ಆತ ಸಿಲಿಕಾನ್ ವ್ಯಾಲಿಗೆ ಬಂದಿದ್ದಾನೆ. ಆತ ಪಾರ್ಕ್ ನಲ್ಲಿ ಮಲಗುತ್ತಾನೆ ಮತ್ತು ಕೆಲವೊಂದು ಫ್ರೀಲ್ಯಾನ್ಸ್ ಕೆಲಸ, ಸಂದರ್ಶನ ಮತ್ತು ಅಪ್ಲಿಕೇಷನ್ ಪಡೆಯುತ್ತಿದ್ದಾನೆ ಎಂದು ಆಕೆ ಬರೆದಿದ್ದರು.

ಇದರ ಬಳಿಕ ಆತ ಹಿಂತಿರುಗಿ ನೋಡಲಿಲ್ಲ

ಇದರ ಬಳಿಕ ಆತ ಹಿಂತಿರುಗಿ ನೋಡಲಿಲ್ಲ

ಜಾಸ್ಮಿನ್ ಪೋಸ್ಟ್ ವೈರಲ್ ಆದ ಬಳಿಕ ಡೇವಿಡ್ ಗೆ ಸುಮಾರು 200ರಷ್ಟು ಕಂಪೆನಿಗಳು ಉದ್ಯೋಗದ ಪ್ರಸ್ತಾವವನ್ನಿಟ್ಟವು. ಇದರಲ್ಲಿ ಕೆಲವು ಪ್ರಮುಖ ಕಂಪೆನಿಗಳಾದ ಗೂಗಲ್, ಲಿಂಂಕೆಡ್ಲೆನ್, ನೆಟ್ ಫ್ಲಿಕ್ಸ್ ಇತ್ಯಾದಿಗಳಿದ್ದವು. ಇನ್ನು ಕೂಡ ಕಂಪೆನಿಗಳು ಉದ್ಯೋಗದ ಪ್ರಸ್ತಾವ ನೀಡುತ್ತಲೇ ಇವೆ. ಆತನ ಅದೃಷ್ಟ ಖುಲಾಯಿಸಿದೆ ಎಂದು ನಿಮಗೆ ಅನಿಸುವುದಿಲ್ಲವೇ? ನಿಮ್ಮಲ್ಲಿ ಕೂಡ ಇಂತಹ ಕಥೆಗಳು ಇದ್ದರೆ ನಮ್ಮೊಂದಿಗೆ ಶೇರ್ ಮಾಡಲು ಮರೆಯಬೇಡಿ. ಇದನ್ನು ನಾವು ಸೈಟ್ ನಲ್ಲಿ ಪ್ರಕಟಿಸುತ್ತೇವೆ.

English summary

Jobless Man Was Offered Job By Google!

Being jobless can be the most painful thing to experience, especially when you move to a new city and dream of making it big, and the struggle seems never to end unless you find a job. Doing odd jobs to survive in a new city full of strangers can be quite demotivating but not giving up on your dreams and finding new ways in which you can get creative will help in achieving your goals.
Story first published: Wednesday, August 1, 2018, 15:46 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more