For Quick Alerts
ALLOW NOTIFICATIONS  
For Daily Alerts

ದೇವಿಯ ಶಕ್ತಿ: ಅಂದು ಪಾಕಿಸ್ತಾನದ ಸೈನಿಕರು ಎಸೆದ ಯಾವುದೇ ಬಾಂಬ್ ಸ್ಫೋಟಿಸಲಿಲ್ಲ!

|

ದೇವರು ಸರ್ವಾಂತರ್ಯಾಮಿ. ಎಲ್ಲಿ ನಿಷ್ಕಲ್ಮಶ ಮನಸ್ಸು ಹಾಗೂ ಕಾರ್ಯಗಳು ನೆರವೇರುತ್ತವೆಯೋ ಅಲ್ಲಿ ದೈವಶಕ್ತಿ ಇರುತ್ತದೆ ಎಂದು ಹೇಳಲಾಗುವುದು. ನಾವು ದೇವರಲ್ಲಿ ನಂಬಿಕೆ ಹಾಗೂ ವಿಶ್ವಾಸವನ್ನು ಇಡುತ್ತೇವೆಯೋ ಅಂದಿನಿಂದ ನಮಗೆ ಪ್ರತಿಕೂಲವನ್ನುಂಟುಮಾಡುವ ಶಕ್ತಿ ಕಾಪಾಡುತ್ತದೆ. ಹೌದು, ಇಂತಹ ಒಂದು ನಂಬಿಕೆಯನ್ನು ಹೊಂದಿರುವ ಸೈನಿಕರಿಗೆ ತಮ್ಮ ಕೆಲಸದಲ್ಲಿ ವಿಜಯಶಾಲಿಯಾಗಲು ಸಹಾಯ ಮಾಡಿತು ಎಂದು ಹೇಳಲಾಗುತ್ತಿದೆ...

ನಿಜ, ರಾಜಸ್ಥಾನದ ಲಾಂಗ್ವಾಡಿ ಗಡಿಯಲ್ಲಿರುವ ತನೊಟ್ ದೇವಾಲಯವು ಅತ್ಯಂತ ಶಕ್ತಿಶಾಲಿಯಾದದ್ದು ಹಾಗೂ ಅದ್ಭುತ ಪವಾಡಗಳನ್ನು ಮಾಡುವ ಕಥೆಯನ್ನು ಒಳಗೊಂಡಿದೆ. ಸ್ಥಳೀಯ ದೇವತೆಯಾದ ತನೊಟ್ ಅಕಾ ಅವದ್ ಮಾತಾ ದೇವಿಯು ಇಲ್ಲಿಯ ಸೈನಿಕರ ರಕ್ಷಣೆ ಮಾಡುತ್ತದೆ. ಇಲ್ಲಿ ಪಾಕಿಸ್ತಾನಿಯರ ಟ್ಯಾಂಕ್ ಬಾಂಬ್ ಸ್ಫೋಟಕ್ಕೆ ಅವಕಾಶ ನೀಡಿಲ್ಲ. ಭಾರತೀಯರು ಮತ್ತು ಪಾಕಿಸ್ತಾನಿಗಳ ನಡುವೆ ನಡೆದ 1965 ಮತ್ತು 1971ರ ಯುದ್ಧದಲ್ಲೂ ಭಾರತೀಯ ಸೈನಿಕರನ್ನು ರಕ್ಷಿಸಿದೆ ಎಂದು ಹೇಳಲಾಗುತ್ತದೆ.

ದಂತಕಥೆಯ ಪ್ರಕಾರ ಈ ಎರಡು ಯುದ್ಧಗಳಲ್ಲಿ ಸುಮಾರು ೩೦೦೦ಕ್ಕೂ ಅಧಿಕ ಬಾಂಬ್‌ಗಳನ್ನು ಸುತ್ತಮುತ್ತಲ ಪ್ರದೇಶದಲ್ಲಿ ಇರಿಸಲಾಗಿತ್ತು. ಆದರೆ ಅವುಗಳಲ್ಲಿ ಒಂದನ್ನೂ ಸಹ ಸಿಡಿಸಲಾಗಿಲ್ಲ. ಅವುಗಳಲ್ಲಿ ಕೆಲವು ಬಾಂಬ್‌ಗಳನ್ನು ಬಿಎಸ್‌ಎಫ್ ದೇವಾಲಯದಲ್ಲಿ ನಿರ್ಮಿಸಿರುವ ವಸ್ತು ಸಂಗ್ರಹಾಲಯದಲ್ಲಿ ಇರುವುದನ್ನು ಕಾಣಬಹುದು.

ರಾಜಸ್ಥಾನದ ಪಶ್ಚಿಮ ಭಾಗದಲ್ಲಿರುವ ಜೈಸಲ್ಮೇರ್ ನಗರದಿಂದ 150 ಕಿ.ಮೀ ದೂರದಲ್ಲಿ ತನೊಟ್ ದೇವಸ್ಥಾನವಿದೆ. ಇದು ಇಲ್ಲಿಯ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣವೂ ಹೌದು. ಇಲ್ಲಿ ನಡೆದ ಅನೇಕ ಕಥೆಗಳು ಸೈನಿಕರನ್ನೊಳಗೊಂಡಿದೆ ಎಂದು ಹೇಳಲಾಗುವುದು. ಲಾಂಗ್ವಾಲಾ ಕದನವನ್ನು ಆಧರಿಸಿ ಬಾಲಿವುಡ್‌ನಲ್ಲಿ ಬಾರ್ಡರ್ ಚಲನಚಿತ್ರವನ್ನು ನಿರ್ಮಿಸಲಾಗಿತ್ತು. ಅದರಲ್ಲಿ 120 ಜನ ಭಾರತೀಯ ಸೈನಿಕರು ಪಾಕಿಸ್ತಾನದ ೨೦೦೦ ಯೋಧರ ವಿರುದ್ಧ ಹೋರಾಡಿರುವುದರ ಚಿತ್ರಣವನ್ನು ತೋರಿಸಿದ್ದಾರೆ. ಈ ಹೋರಾಟದಲ್ಲಿ ಭಾರತೀಯ ಸೈನಿಕರಿಗೆ ತನೊಟ್ ದೇವಾಲಯದಲ್ಲಿರುವ ದೇವರು ರಕ್ಷಣೆ ಹಾಗೂ ಶಕ್ತಿಯನ್ನು ನೀಡಿತ್ತು ಎಂದು ಹೇಳಲಾಗುತ್ತದೆ. ನೈನಿಕರು ಶತ್ರುಗಳೊಂದಿಗೆ ಹೋರಾಡಲು ಯಾವುದೇ ಹಿಂಜರಿಕೆ ತೋರದೆ ಹೋರಾಡಿದರು. ಅದು ಅಲ್ಲಿರುವ ದೇವಿಯ ಮಹಾತ್ಮ ಎಂದು ಹೇಳಲಾಗುತ್ತದೆ....

ತನೊಟ್ ದೇವಾಲಯದ ಇತಿಹಾಸ

ತನೊಟ್ ದೇವಾಲಯದ ಇತಿಹಾಸ

ತನೊಟ್ ರಾಸಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಇಂಡೋ-ಪಾಕ್ ಗಡಿಯಲ್ಲಿರುವ ಒಂದು ಹಳ್ಳಿ. ಹಳೆಯ ಚರಣ್ ಸಾಹಿತ್ಯದ ಪ್ರಕಾರ ತನೊಟ್ ಮಾತೆ ಹಿಂಗ್ಲಾಂಜ್ ದೇವಿಯ ಅವತಾರ ಎಂದು ಹೇಳಲಾಗುವುದು. ನಂತರ ಅವಳು ಕಾರ್ನಿ ಮಾತೆಯ ರೂಪವನ್ನು ಪಡೆದುಕೊಂಡಳು ಎಂದು ಹೇಳಲಾಗುವುದು. ಎಂಟನೇ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿತ್ತು ಎಂದು ಹೇಳಲಾಗುವುದು.

Image Courtesy

 1965ರ ಯುದ್ಧದಲ್ಲಿ ಪವಾಡ

1965ರ ಯುದ್ಧದಲ್ಲಿ ಪವಾಡ

ಪಾಕಿಸ್ತಾನದ ವಿರುದ್ಧ 1965ರಲ್ಲಿ ನಡೆದ ಯುದ್ಧ ಭಯಂಕರವಾಗಿತ್ತು. ಆ ಸಂದರ್ಭದಲ್ಲಿ ಭಾರತೀಯರು ಸಾಕಷ್ಟು ಶಸ್ತ್ರಾಸ್ತ್ರಗಳನ್ನು ಹೊಂದಿರಲಿಲ್ಲ. ಅಲ್ಲದೆ ಸಾಕಷ್ಟು ಒತ್ತಡವನ್ನು ಅನುಭವಿಸುತ್ತಿದ್ದರು. ಪಾಕಿಸ್ತಾನದ ಪಡೆಗಳು ಒಂದಷ್ಟು ಪ್ರದೇಶಗಳನ್ನು ವಶಪಡಿಸಿಕೊಂಡು ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದರು. ನಶಿವಾಳದ ಬಳಿ ಕಿಶನ್‌ಗಢ ದಲ್ಲಿ ಭಾರತೀಯ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

ನವೆಂಬರ್ 17 ರಂದು ಯುದ್ಧ ಪ್ರಾರಂಭವಾಯಿತು

ನವೆಂಬರ್ 17 ರಂದು ಯುದ್ಧ ಪ್ರಾರಂಭವಾಯಿತು

13 ಪ್ರಮುಖ ಪ್ರದೇಶಗಳಿಂದ ಪಾಕಿಸ್ತಾನದವರನ್ನು ಸೆರೆಹಿಡಿದು ನುಸುಳುವಿಕೆಯನ್ನು ಕಡಿತಗೊಳಿಸಲಾಗಿತ್ತು. ತಮ್ಮ ಹುದ್ದೆಯನ್ನು ಉಳಿಸಿಕೊಳ್ಳಲು ಹಾಗೂ ಭದ್ರತೆಗಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಸ್ಯಾಡೇ ವಾಲಾದಲ್ಲಿ ಹೋರಾಟ ನಡೆಸುತ್ತಿರುವ ಗ್ರೆನೆಡಿಯಾ ಅವರು ತಿಳಿಸಿದ್ದರು. ನಂತರ ಸಾಡೇವಾಲದಲ್ಲಿ ನವೆಂಬರ್ 17 ರಂದು ಯುದ್ಧ ಪ್ರಾರಂಭವಾಯಿತು. ಅದು ತನೊಟ್ ದೇವಸ್ಥಾನಕ್ಕೆ ಸಮೀಪದಲ್ಲಿರುವ ಒಂದು ಪೋಸ್ಟ್ ನಿಂದ ಪ್ರಾರಂಭವಾಗಿತ್ತು. ಅದೊಂದು ಆಶ್ಚರ್ಯಕರವಾದ ಸಂಗತಿ ಎಂದರೆ ಇಲ್ಲಿ ಯಾವುದೇ ಬಾಂಬ್‌ಗಳ ದಾಳಿ ಉಂಟಾಗಲಿಲ್ಲ. ಪೋಸ್ಟ್ ಅಲ್ಲಿ ಹಾಕಿದ ಬಾಂಬ್ ಸಹ ಸಿಡಿಯಲಿಲ್ಲ ಎಂದು ಹೇಳಲಾಗುತ್ತದೆ.

ತನೊಟ್ ದೇವಾಲಯದ ದೇವಿಯ/ ಮಾತೆಯ ಆಶೀರ್ವಾದ

ತನೊಟ್ ದೇವಾಲಯದ ದೇವಿಯ/ ಮಾತೆಯ ಆಶೀರ್ವಾದ

ಇತಿಹಾಸ ಕಥೆಯ ಪ್ರಕಾರ ಪಾಕಿಸ್ಥಾನದವರು ಮೂರು ಸಾವಿರಕ್ಕೂ ಹೆಚ್ಚು ಬಾಂಬ್‌ಗಳನ್ನು ಎಸೆದಿದ್ದರು. ಆದರೆ ಅದ್ಯಾವುದೂ ಫಲಕಾರಿಯಾಗಲಿಲ್ಲ. ಈ ರೀತಿಯಲ್ಲಿ ತನೊಟ್ ದೇವಾಲಯದ ದೇವಿಯ/ ಮಾತೆಯ ಆಶೀರ್ವಾದದಿಂದ ಇಂದಿಗೂ ಅನೇಕ ಸೈನಿಕರು ಭರವಸೆ ಹಾಗೂ ಹೋರಾಟದ ಶಕ್ತಿಯನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ.

ಬಿಎಸ್ ಎಫ್

ಬಿಎಸ್ ಎಫ್

1965ರಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿದ ನಂತರ ದೇವಾಲಯದ ಉಸ್ತುವಾರಿಯನ್ನು ಬಿಎಸ್‌ಎಫ್ ವಹಿಸಿಕೊಂಡಿತು. ನಂತರ ಅಲ್ಲಿ ಕೆಲವು ಹುದ್ದೆಗಳನ್ನು ಸ್ಥಾಪಿಸಿ. ಅವುಗಳ ಕಾರ್ಯನಿರ್ವಹಣೆ ಹಾಗೂ ಪೂಜೆಗಾಗಿ ವ್ಯಕ್ತಿಗಳನ್ನು ನೇಮಿಸಲಾಗಿದೆ.

 ಲಾಂಗ್ವಾಲ್ ಅದ್ಭುತ ಘಟನೆ

ಲಾಂಗ್ವಾಲ್ ಅದ್ಭುತ ಘಟನೆ

1971ರಲ್ಲಿ ಲಾಗ್ವಾಲದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಭೀಕರ ಯುದ್ಧ ನಡೆಯಿತು. ಆ ಸಂದರ್ಭದಲ್ಲಿ ಪಾಕಿಸ್ತಾನದವರು ಸೋತರು. 1965ರಲ್ಲಿ ಪಾಕಿಸ್ತಾನವು ಲೋನೋವಾಲದಲ್ಲಿ ಅಂದರೆ ತನೊಟ್ ದೇವಾಲಯದ ಬಳಿಯೇ ಒಂದು ಪೋಸ್ಟ್ ಅನ್ನು ಆಯ್ಕೆ ಮಾಡಿಕೊಂಡಿತ್ತು. ಮೇಜರ್ ಕುಲ್ದೀಪ್ ಸಿಂಗ್ ಚಂದಪುರಿ ಅವರ ನೇತೃತ್ವದಲ್ಲಿ ೧೨೦ ಜನ ಭಾರತೀಯ ಸೈನಿಕರನ್ನು ಕಾಪಾಡಲಾಯಿತು.

 ಲಾಂಗ್ವಾಲ್ ಅದ್ಭುತ ಘಟನೆ

ಲಾಂಗ್ವಾಲ್ ಅದ್ಭುತ ಘಟನೆ

ಹೀಗೆ ಅನೇಕ ಘಟನೆಗಳು ಇಲ್ಲಿ ನಡೆದಿತ್ತಾದರೂ ಭಾರತೀಯ ಸೈನಿಕರು ತಮ್ಮ ನಿಲುವು ಹಾಗೂ ಭರವಸೆಯನ್ನು ಕಳೆದುಕೊಂಡಿರಲಿಲ್ಲ. ಡಿಸೆಂಬರ್ ೪ ರಂದು ಲಾಂಗ್ವಾಲಾವನ್ ಅಲ್ಲಿ ಪಾಕಿಸ್ತಾನದವರು ಪೂರ್ಣ ಬೆಟಾಲಿಯನ್ ಅವರ ಜೊತೆ ಆಕ್ರಮಣ ನಡೆಸಿತು. ೧೨೦ ಜನರನ್ನು ಹೊಂದಿದ್ದ ಪಾಕಿಸ್ತಾನದ ದುರಹಂಕಾರವನ್ನು ಭಾರತೀಯರು ಸದೆಬಡಿದಿದ್ದರು. ಈ ಸಂದರ್ಭದಲ್ಲಿ ದೇಗುಲದ ಬಳಿ ಬಾಂಬ್ ಎಸೆದಿದ್ದರು. ಆ ಬಾಂಬ್ ಸಹ ದೇವಿಯ ಅನುಗ್ರಹದಿಂದ ಸ್ಫೋಟಿಸಲಿಲ್ಲ ಎಂದು ಹೇಳಲಾಗುತ್ತದೆ.

1971ರ ಯುದ್ಧದ ನಂತರ

1971ರ ಯುದ್ಧದ ನಂತರ

1971ರ ಯುದ್ಧದ ನಂತರ ತನೊಟ್ ದೇವಾಲಯದ ಖ್ಯಾತಿಯನ್ನು ಉತ್ತುಂಗಕ್ಕೆ ತರುವ ಉದ್ದೇಶದಿಂದ ಬಿಎಸ್‌ಎಫ್ ತನ್ನ ಅಧಿನಕ್ಕೆ ಪಡೆಯಿತು. ಜೊತೆಗೆ ಆ ಸ್ಥಳದಲ್ಲಿ ದೊಡ್ಡ ದೇವಾಲಯವನ್ನು ನಿರ್ಮಿಸಿತು. ಅಲ್ಲದೆ ಅಲ್ಲೊಂದು ಮ್ಯೂಸಿಯಂ ಸ್ಥಾಪಿಸುವುದರ ಮೂಲಕ ಭಾರತೀಯ ಶಸ್ತ್ರಾಸ್ತ್ರ ಹಾಗೂ ಸ್ಫೋಟಿಸದ ಬಾಂಬ್‌ಗಳನ್ನು ವೀಕ್ಷಣೆಗೆ ಇಡಲಾಗಿದೆ. ಇಲ್ಲಿ ಭಾರತೀಯ ಸೈನ್ಯದ ವಿಜಯ ಸ್ತಂಭವನ್ನು ನಿರ್ಮಿಸಲಾಗಿದೆ. 1971ರ ವಿಜಯದ ಸ್ಮರಣಾರ್ಥವಾಗಿ ಪ್ರತಿ ಡಿಸೆಂಬರ್ ೧೬ರಂದು ವಿಜಯ ದಿನವನ್ನಾಗಿ ಆಚರಿಸುತ್ತಾರೆ.

English summary

indendence day special:Unexploded bombs at Tanot Mata Temple

Belief or faith in God often helps one gather the courage in the face of adversity. The Indian Army has its share of stories when God helped Indian soldiers standing on the brink of annihilation and ended up being victorious. The story of Tanot Temple at the Longewala border in Rajasthan is one such miraculous tale when the local deity Tanot aka Awad Mata didn't let any Pakistani tank bomb explode and Indian soldiers who were certain of martydom and defeat went on to crush the Pakistanis in both 1965 as well as 1971 wars.
Story first published: Wednesday, August 15, 2018, 9:01 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more