For Quick Alerts
ALLOW NOTIFICATIONS  
For Daily Alerts

ಈ ಊರಿನಲ್ಲಿ ಮಂತ್ರ ಶಕ್ತಿ ಮೂಲಕ ಕಾಯಿಲೆಗಳನ್ನು ಗುಣಪಡಿಸುತ್ತಾರೆ- ಕಳ್ಳರನ್ನು ಹಿಡಿಯುತ್ತಾರೆ!!

By Hemanth
|

ಬ್ರಹ್ಮಪುತ್ರ ನದಿ ತಟದಲ್ಲಿರುವ ಹಳ್ಳಿಗಳ ಸಮೂಹದಲ್ಲಿ ಮಯಾಂಗ್' (ಅಸ್ಸಾಂ ರಾಜ್ಯದಲ್ಲಿರುವ ಹಳ್ಳಿ) ಎನ್ನುವ ಹಳ್ಳಿ ಕೂಡ ಒಂದು. ಗುವಾಹಟಿಯಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಮಯಾಂಗ್ ಎನ್ನುವ ಹೆಸರು ಮಾಯ(ಭ್ರಮೆ)ದಿಂದ ಬಂದಿದೆ.

ಈ ಹಳ್ಳಿಯಲ್ಲಿ ಹೆಚ್ಚಾಗಿ ಮಂತ್ರವಿದ್ಯೆಗಳು, ಮಾಂತ್ರಿಕರು ನೆಲೆಸುತ್ತಾರೆ ಎನ್ನುವ ಪ್ರತೀತಿಯಿದೆ. ಮಯಾಂಗ್ ಬಗ್ಗೆ ಇರುವಂತಹ ರಹಸ್ಯ ಕಥೆಯು ಆಧ್ಯಾತ್ಮವನ್ನು ಪ್ರೇರೇಪಿಸುವಂತಿದೆ ಎಂದು ಹೇಳಲಾಗುತ್ತಿದೆ. ಅದೇನೇ ಇದ್ದರೂ ಮಯಾಂಗ್ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇಲ್ಲಿಗೆ ಭೇಟಿ ನೀಡುವಂತಹ ಪ್ರವಾಸಿಗಳಿಗೆ ಕರಾಳ ಇತಿಹಾಸ ಪುಟಗಳ ನಡುವಿನ ಮೌನವು ಕಾಣಸಿಗುವುದು. ಈ ಲೇಖನದಲ್ಲಿ ಮಯೊಂಗ್ ನ ಇತಿಹಾಸದ ಬಗ್ಗೆ ತಿಳಿದುಕೊಳ್ಳುವ....

 ಹೆಸರು

ಹೆಸರು

ಹೆಸರಿನಲ್ಲಿ ಏನಿದೆ ಎಂದು ಕೇಳಬಹುದು. ಆದರೆ ಮಯಾಂಗ್ ನ ಪ್ರತಿಯೊಂದು ವಿಚಾರವು ಈ ಹೆಸರಿಗೆ ಸಂಬಂಧಿಸಿದೆ. ಹೆಸರಿನ ಮೂಲವು ಇದುವರೆಗೆ ಬಿಡಿಸಲಾರದ ರಹಸ್ಯವಾಗಿದೆ. ಈ ಬಗ್ಗೆ ಸ್ಥಳೀಯರು ಹೇಳಿರುವ ಕೆಲವು ಕಥೆಗಳು.... ಈಶಾನ್ಯದ ಹೆಚ್ಚಿನ ಎಲ್ಲಾ ರಾಜ್ಯಗಳನ್ನು ಅಸ್ಸಾಂ ಎನ್ನುವ ಏಕೈಕ ಹೆಸರಿಂದ ಕರೆಯಲ್ಪಡುತ್ತಿದ್ದರು. ಮಯಿಬೊಂಗ್ ನ ಮಣಿಪುರಿಗಳು ಈ ಪ್ರದೇಶದಲ್ಲಿ ಹಿಂದೆ ವಾಸವಾಗಿದ್ದವರು. ಮಯಿಬೊಂಗ್ ಸಮಯ ಕಳೆದಂತೆ ಮಯಾಂಗ್ ಆಯಿತು. ಬೆಟ್ಟ ಪ್ರದೇಶವಾಗಿರುವಂತಹ ಮಯಾಂಗ್ ಆನೆಗಳಿಂದ ತುಂಬಿ ಹೋಗಿದೆ. ಮಣಿಪುರಿ ಭಾಷೆಯಲ್ಲಿ ಮಿಯೊಂಗ್ ಎಂದರೆ ಆನೆ ಎಂದರ್ಥ. ಕೆಲವರ ಪ್ರಕಾರ ಮಿಯೊಂಗ್ ಎನ್ನುವುದು ಸಮಯ ಸಾಗಿದಂತೆ ಮಯಾಂಗ್ ಆಯಿತಂತೆ. ಹೆಸರಿಗೆ ಬಗ್ಗೆ ಪುರಾಣಗಳು ಕೂಡ ಇದೆ. ಶಕ್ತಿ ದೇವತೆಯ ಪವಿತ್ರ ಭಾಗ ಈ ಭೂಮಿ ಎನ್ನಲಾಗುತ್ತಿದೆ. ಇಲ್ಲಿನ ಹಿರಿಯರು ಇದನ್ನು ಮಾ-ರ-ಒಂಗೊ(ದೇವತೆಯ ಭಾಗಗಳು) ಎನ್ನುತ್ತಾರೆ. ಇದೇ ಮಯಾಂಗ್ ಎಂದು ಕರೆಯಲ್ಪಟ್ಟಿತು.

 ಸಾಂಸ್ಕೃತಿಕ ಪ್ರಾಮುಖ್ಯತೆಗಳು

ಸಾಂಸ್ಕೃತಿಕ ಪ್ರಾಮುಖ್ಯತೆಗಳು

ಭಾರತದಲ್ಲಿ ಮಯಾಂಗ್ ವಾಮಾಚಾರ ಮತ್ತು ಮಾಂತ್ರಿಕತೆಯ ರಾಜಧಾನಿಯಾಗಿದೆ ಎನ್ನಲಾಗುತ್ತದೆ. ಮಯಾಂಗ್ ಗೆ ಭೇಟಿ ನೀಡಿದಾಗ ಕೆಲವೊಂದು ಅಪರೂಪದ ತಂತ್ರಗಳನ್ನು ನೀವು ಕಾಣಬಹುದು. ಇದು ಆಧುನಿಕ ಜಗತ್ತಿಗೆ ತುಂಬಾ ಅಸಾಮಾನ್ಯವಾಗಿ ಕಾಣುವುದು. ಆದರೆ ಇದು ನಿಮ್ಮನ್ನೊಮ್ಮೆ ನಡುಗಿಸುವುದಂತೂ ಸತ್ಯ! ಸಮುದ್ರ ಚಿಪ್ಪುಗಳನ್ನು ಹಾಕಿ ಅದೃಷ್ಟ ಹೇಳುವುದು, ಹಸ್ತರೇಖೆ ನೋಡುವುದು, ಒಡೆದಿರುವ ಕನ್ನಡಿ ಹಿಡಿದುಕೊಂಡು ಭವಿಷ್ಯವನ್ನು ಹೇಳುವುದು ಕೂಡ ನಿಮಗೆ ನಂಬಲು ಅಸಾಧ್ಯವಾಗಿರುವಂತಹ ತಂತ್ರಗಳು.

ಆದರೆ ಇಲ್ಲಿನ ಕೆಲವೊಂದು ತಂತ್ರಗಳು ಸಮಾಜ ಸುಧಾರಣೆಗಾಗಿ ಬಳಸಿಕೊಳ್ಳಲಾಗುತ್ತದೆ. ಕೆಲವು ರಹಸ್ಯ ಮಂತ್ರಗಳನ್ನು ಹೇಳುತ್ತಾ ಅಂಗೈಯಷ್ಟು ಗಿಡಗಳನ್ನು ಕಡಿಯುವುದರಿಂದ ಅನಾರೋಗ್ಯ ನಿವಾರಣೆ ಮಾಡುವುದು ಇದರಲ್ಲಿ ಪ್ರಮುಖವಾಗಿದೆ.

ಮಾಯತಂತ್ರದಿಂದ ಬೆನ್ನು ನೋವನ್ನು ಗುಣಪಡಿಸುವುದು

ಮಾಯತಂತ್ರದಿಂದ ಬೆನ್ನು ನೋವನ್ನು ಗುಣಪಡಿಸುವುದು

ಇಲ್ಲಿರುವ ಅದ್ಭುತವಾಗಿರುವ ಮಾಯತಂತ್ರವೆಂದರೆ ಅದು ಬೆನ್ನು ನೋವನ್ನು ನಿವಾರಣೆ ಮಾಡುವುದು. ಮಂತ್ರಿಕರು ಒಂದು ತಾಮ್ರದ ಪಾತ್ರೆಯಲ್ಲಿ ಮಂತ್ರಗಳನ್ನು ಹೇಳಿ ಚಿಕಿತ್ಸೆ ನೀಡಲು ಇಡುವರು. ನೋವು ಕಾಣಿಸಿಕೊಂಡಾಗ ಪಾತ್ರೆಯು ದೇಹಕ್ಕೆ ಅಂಟಿಕೊಳ್ಳುವುದು. ಸ್ಥಳೀಯರ ಪ್ರಕಾರ ಪಾತ್ರೆಯು ನೋವನ್ನು ನುಂಗಿ ಹಾಕುವುದು. ಆ ವ್ಯಕ್ತಿಯು ನಿಜವಾಗಿಯೂ ನೋವಿನಿಂದ ಬಳಲುತ್ತಲಿದ್ದರೆ ಆಗ ತಾಮ್ರದ ಪಾತ್ರೆಯು ತುಂಬಾ ಬಿಸಿಯಾಗುವುದು ಮತ್ತು ಕೆಲವೇ ಸೆಕೆಂಡುಗಳಲ್ಲಿ ಇದು ಒಡೆದು ಸ್ವಯಂಚಾಲಿತವಾಗಿ ಹರಡುವುದು. ಎಷ್ಟೇ ಸುಳ್ಳು ಎಂದು ಭಾವಿಸಿದರೂ ಈ ತಂತ್ರಗಳು ಫಲಿಸಿವೆ.

ಇಬ್ಬರು ವ್ಯಕ್ತಿಗಳ ಮಧ್ಯೆ ಆಕರ್ಷಣೆ ಬರಲು ಮೋಹಿನಿ ಮಂತ್ರ!

ಇಬ್ಬರು ವ್ಯಕ್ತಿಗಳ ಮಧ್ಯೆ ಆಕರ್ಷಣೆ ಬರಲು ಮೋಹಿನಿ ಮಂತ್ರ!

ಇಲ್ಲಿ ಹಲವಾರು ಮಂತ್ರಗಳನ್ನು ವಿವಿಧ ಕಾರಣಗಳಿಗಾಗಿ ಬಳಸಲಾಗುವುದು. ಉದಾಹರಣೆಗೆ, ಇಬ್ಬರು ವ್ಯಕ್ತಿಗಳ ಮಧ್ಯೆ ಆಕರ್ಷಣೆ ಬರಲು ಮೋಹಿನಿ ಮಂತ್ರ, ಊರಿನಲ್ಲಿ ಕಳ್ಳತನವಾದರೆ, ಕಳ್ಳರನ್ನು ಹಿಡಿಯುವ ಮಂತ್ರವಿದೆ. ಹಿಂದಿನ ಕಾಲದಲ್ಲಿ ಜನರು ತಾವು ಬಯಸಿದ ಜಾಗಕ್ಕೆ ಉರಾನ್ ಮಂತ್ರ ಅಥವಾ ಹಾರುವ ಮಂತ್ರ ಹೇಳಿಕೊಂಡು ಕೆಲವೇ ನಿಮಿಷಗಳಲ್ಲಿ ಅಲ್ಲಿಗೆ ತಲುಪುತ್ತಿದ್ದರು ಎಂದು ಇಲ್ಲಿ ಹೇಳಲಾಗುತ್ತದೆ.

ಜಾನಪದ ಅಧ್ಯಯನ

ಜಾನಪದ ಅಧ್ಯಯನ

ಜಾನಪದಗಳ ಪ್ರಕಾರ ಹಿಂದಿನ ಕಾಲದಲ್ಲಿ ಅಸ್ಸಾಂನಲ್ಲಿ ಛುರಾ ಬೆಝ್ ಎಂಬ ಮಾಂತ್ರಿಕನೊಬ್ಬ ವಾಸವಾಗಿದ್ದ. ಆತನ ಮಂತ್ರಶಕ್ತಿಯ ಒಳ್ಳೆಯ ವಿಚಾರಗಳ ಬಗ್ಗೆ ಈ ಹಳ್ಳಿ ಮಾತ್ರವಲ್ಲದೆ ದೂರದ ಹಳ್ಳಿಗಳಿಗೂ ಪಸರಿಸಿತ್ತು. ಛುರಾ ಬೆಝ್ ತನ್ನ ಮಂತ್ರಶಕ್ತಿಯಿಂದ ಲುಕಿ ಮಂತ್ರ ಹೇಳಿ ಗಾಳಿಯಲ್ಲಿ ಮಾಯವಾಗುತ್ತಿದ್ದ.

ನಾನು ಆಗ ಸಣ್ಣ ಬಾಲಕಿಯಾಗಿದ್ದರೂ ಅಜ್ಜ ಮಾಡುತ್ತಿದ್ದ ಕೆಲವೊಂದು ವಿಚಿತ್ರ ತಂತ್ರಗಳು ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ. ಈಗ ನೀವು ಅವರನ್ನು ನೋಡಬಹುದು, ಈಗ ನೋಡಲು ಸಾಧ್ಯವಿಲ್ಲ. ಅವರು ನಿಂತಲ್ಲೇ ಮಾಯವಾದಾಗ ನಾವು ಕೈಗಳಿಂದ ಕಣ್ಣುಗಳನ್ನು ಉಜ್ಜಿಕೊಳ್ಳುತ್ತಿದ್ದೆವು ಎಂದು ಬೆಝ್ ಮೊಮ್ಮಗಳಾಗಿರುವ 75ರ ಹರೆಯದ ನರೇಶ್ವರಿ ದೇವಿ ರಾಷ್ಟ್ರೀಯ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

English summary

In this place magic ‘cures’ diseases and helps catch thieves!

The name ‘Mayong’ is believed to have originated from the word maya (illusion). It is a cluster of villages located on the banks of the Brahmaputra in Morigaon district. Feared as the land of ‘Black magic and magicians’, the secret stories of Mayong are believed to be the main factors encouraging the mysticism associated with it. Mayong also happens to be a famous tourist spot. Curious tourists who have visited Mayong say that the eerie silence that surrounds it stands in utter contrast to the dark and chaotic history that it has had..
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more