For Quick Alerts
ALLOW NOTIFICATIONS  
For Daily Alerts

ಈ 6 ರಾಶಿಯವರು, ಚಿಂತನೆ ನಡೆಸದೆಯೇ ಮಾತನಾಡಿ-ಇತರರಿಗೆ ನೋವು ಮಾಡಿಬಿಡುತ್ತಾರೆ!

|

ನೀವು ಹಠಾತ್ ವರ್ತನೆಯನ್ನು ತೋರುವ ಪ್ರವೃತ್ತಿಯವರೇ? ನೀವು ಮಾಡುವ ಕೆಲಸಗಳ ಬಗ್ಗೆ ಮುಂಚಿತವಾಗಿ ಯೋಚಿಸುವುದಿಲ್ಲ, ಬದಲಿಗೆ ಮನಸ್ಸಿಗೆ ತೋಚಿದ್ದನ್ನು ಮೊದಲು ಮಾಡಿಬಿಡುತ್ತೀರಾ? ಹಾಗಾಗಿಯೇ ಕೆಲವೊಂದು ಸಂದರ್ಭದಲ್ಲಿ ಇರಿಸು-ಮುರಿಸು ಉಂಟಾಗುತ್ತದೆ ಎನ್ನುವುದಾದರೆ ಅದು ನಿಮ್ಮ ಸಮಸ್ಯೆಯಲ್ಲ. ಬದಲಿಗೆ ನಿಮ್ಮ ರಾಶಿಚಕ್ರದ ಪ್ರಭಾವ ಎನ್ನಬಹುದು.

ಪ್ರಚೋದಕ ಜನರು ವೇಗವಾಗಿ ಕೆಲಸ ನಿರ್ವಹಿಸುತ್ತಾರೆ. ಅವರು ತ್ವರಿತ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಜೊತೆಗೆ ತ್ವರಿತವಾಗಿ ಕಾರ್ಯನಿರ್ವಹಿಸುತ್ತಾರೆ. ಅಲ್ಲದೆ ತಮ್ಮ ಸಮಯದಲ್ಲಿ ವಿರಳತೆಯಿಂದ ಕೂಡಿರುವ ಕೆಲಸವನ್ನು ಕೈಗೊಳ್ಳುವರು. ಅವರು ಹೇಳುವ ಮಾತುಗಳಿಗೂ ಕೆಲಸಕ್ಕೂ ಸಂಬಂಧ ಇರದೆ ಹೋಗಬಹುದು. ಏಕೆಂದರೆ ಅವರು ಏನು ಯೋಚಿಸಿ ಮಾತನಾಡುತ್ತಾರೋ ಅದು ಮುಂದಿನ ಕಾರ್ಯಕ್ಕೆ ಸಂಬಂಧಿಸದೆ ಇರಬಹುದು.

ಮಾತು ಎನ್ನುವುದು ಒಂದು ಹರಳು ಇದ್ದಂತೆ. ಅದು ಒಡೆದರೆ ಪುನಃ ಮೊದಲಿನ ರೂಪಕ್ಕೆ ತರುವುದು ಕಷ್ಟ. ಹಾಗೆಯೇ ಮಾತುಗಳು ಸಹ. ಒಮ್ಮೆ ನಾವು ಆಡುವ ಮಾತುಗಳಿಂದ ಉಂಟಾದ ನೋವುಗಳನ್ನು ಯಾರು ಮರೆಯುವುದಿಲ್ಲ. ಹಾಗಾಗಿ ನಾವು ಆಡುವ ಮಾತಿನ ಬಗ್ಗೆ ಸಾಕಷ್ಟು ಎಚ್ಚರಿಕೆ ಇರಬೇಕು. ಮಾತಿನಲ್ಲಿ ಹಿಡಿತ ಅಥವಾ ಹುರುಳಿಲ್ಲದೆ ಹೋದರೆ ಅನರ್ಥ ಆಗುವುದು. ಕೆಲವು ರಾಶಿಚಕ್ರದವರಲ್ಲಿ ಈ ಸಮಸ್ಯೆ ಹೆಚ್ಚಾಗಿರುತ್ತದೆ. ಬಹುತೇಕ ಸಂದರ್ಭದಲ್ಲಿ ಅವರಿಗೆ ತಾವು ಏನು ಹೇಳುತ್ತಿದ್ದೇವೆ ಎನ್ನುವ ಪರಿವೇ ಇರುವುದಿಲ್ಲ. ತಾವು ಹೇಳುವ ಮಾತಿನಿಂದ ಮುಂದೆ ಯಾವ ಪರಿಣಾಮ ಬೀರುವುದು ಎನ್ನುವುದರ ಕುರಿತು ಚಿಂತಿಸದೆ ಮಾತನಾಡಿಬಿಡುತ್ತಾರೆ.

ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವುಗಳ ವರ್ತನೆ ಹಾಗೂ ವಿಚಾರಗಳು ಏನು? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಹೊಂದಿದ್ದರೆ ಈ ಮುಂದೆ ಬೋಲ್ಡ್ ಸ್ಕೈ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ....

ಮೇಷ

ಮೇಷ

ಈ ರಾಶಿಯ ವ್ಯಕ್ತಿಗಳು ಬಹು ಬೇಗ ತಮ್ಮ ಮಾತು ಹಾಗೂ ವರ್ತನೆಯನ್ನು ತೋರುತ್ತಾರೆ. ಇದರಿಂದ ಇತರರಿಗೆ ಮನನೋಯುವುದು. ನಂತರ ಆ ವಿಚಾರದ ಕುರಿತು ಸಾಕಷ್ಟು ವಿಷಾದವನ್ನು ವ್ಯಕ್ತಪಡಿಸುವರು. ವಿಷಯಗಳನ್ನು ಎಚ್ಚರಿಕೆಯಿಂದ ಸ್ವೀಕರಿಸುವುದಾಗಲೀ ಅಥವಾ ಅರ್ಥೈಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಮನಸ್ಸಿಗೆ ಬಂದಂತೆ ತಕ್ಷಣಕ್ಕೆ ವರ್ತಿಸಿಬಿಡುತ್ತಾರೆ.

ಮೇಷ

ಮೇಷ

ಸಾಹಸಮಯವಾದ, ಕೆಚ್ಚೆದೆಯ ಗುಣವನ್ನು ಹೊಂದಿದ ವರಾಗಿದ್ದು, ಪೂರ್ಣ ಜೀವನವನ್ನು ಅನುಭವಿಸುವರು ಎಂದು ಹೇಳಲಾಗುವುದು. ಇವರ ಮನಸ್ಸಿನಲ್ಲಿ ಕೆಟ್ಟ ಭಾವನೆ ಗಳಿರುವುದಿಲ್ಲ. ಒಮ್ಮೆ ಸಿಟ್ಟು ಅಥವಾ ಉದ್ವೇಗ ಉಂಟಾದರೆ ಅದು ಕ್ಷಣಕ್ಕೆ ಮಾತ್ರ ಸೀಮಿತವಾಗಿರುತ್ತದೆ ಎಂದು ಹೆಳಲಾಗುವುದು. ನಕಾರಾತ್ಮಕವಾಗಿ ಚಿಂತಿಸುವುದನ್ನು ಬಿಟ್ಟರೆ ಪ್ರಶ್ನಾರ್ಥಕವಾದ ವರ್ತನೆ ಅಥವಾ ಚಟುವಟಿಕೆಯಿಂದ ದೂರವಾಗಬಹುದು.

ಮಿಥುನ

ಮಿಥುನ

ಎರಡು ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳು ಎಂದು ಹೇಳಲಾಗುತ್ತದೆ ಇವರನ್ನು. ಬಹುತೇಕ ಸಂದರ್ಭದಲ್ಲಿ ಇವರು ಹೆಚ್ಚು ಜಾಗರೂಕರಾಗಿಯೇ ಇರುತ್ತಾರೆ. ಅಲ್ಲದೆ ಕೆಲವು ವಿಷಯಗಳಿಗೆ ಹೆಚ್ಚು ನಿರ್ಬಂಧಿತರಾಗಿರುತ್ತಾರೆ. ಕೆಲವು ಸಮಯದಲ್ಲಿ ಮೂರ್ಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಪರಿಸ್ಥಿತಿಯ ಬಾಧಕಗಳನ್ನು ಪರಿಗಣಿಸದೆ ಏನೂ ಆಗದವರಂತೆ ಇರುತ್ತಾರೆ. ಇವರು ಸುಲಭವಾಗಿ ಬೇಸರಕ್ಕೆ ಒಳಗಾಗುತ್ತಾರೆ.

Most Read: ನಿಮ್ಮ ಮೈ ಮೇಲೆ ಹಲ್ಲಿ ಬಿದ್ದರೆ ಅಪಶಕುನವೇ? ಅದೃಷ್ಟವೇ?

ಮಿಥುನ

ಮಿಥುನ

ಒಂದೇ ವಿಚಾರದ ಬಗ್ಗೆ ಕೇಂದ್ರೀಕರಿಸಲು ಕಷ್ಟವಾಗುವುದು. ಆದ್ದರಿಂದ ಪ್ರಚೋದಕವಾಗಿ ಕಾರ್ಯನಿರ್ವಹಿಸಲು ಒಲವು ತೋರುತ್ತಾರೆ. ಇವರು ಮಾಡುವ ಸಣ್ಣ-ಪುಟ್ಟ ತಪ್ಪುಗಳು ದೊಡ್ಡ ಪರಿಣಾಮವಾಗಿ ಹೊರಹೊಮ್ಮುವ ಸಾಧ್ಯತೆಗಳಿರುತ್ತವೆ.

 ಧನು

ಧನು

ಇವರು ತಮ್ಮ ಸುತ್ತಲೂ ಒಂದು ಬಗೆಯ ಗೋಡೆ ಮುಚ್ಚಿಕೊಂಡಿದೆ ಎನ್ನುವ ರೀತಿಯಲ್ಲಿ ಭಾವಿಸುತ್ತಾರೆ. ಇವರು ಅವಸರದಲ್ಲಿ ಕೆಟ್ಟ ಸಲಹೆ ನೀಡುತ್ತಾರೆ. ಇವರು ಇತರರಿಂದ ನಿರ್ಬಂಧ ಹೊಂದಲು ಬಯಸುವುದಿಲ್ಲ. ತಮ್ಮ ಪ್ರಚೋದನೆಯನ್ನು ಅನುಸರಿಸುತ್ತಾ ಹೊಸ ಸ್ಥಾನಕ್ಕೆ ಹೋಗುತ್ತಾರೆ. ಧನು ರಾಶಿಯ ವ್ಯಕ್ತಿಗಳು ಮೇಲ್ನೋಟಕ್ಕೆ ಗಡಿಬಿಡಿಯ ವ್ಯಕ್ತಿಗಳಾಗಿದ್ದರೂ ತಾಳ್ಮೆಯನ್ನು ಹೊಂದಿರುತ್ತಾರೆ.

 ಧನು

ಧನು

ತಮ್ಮ ತಿಳಿವಳಿಕೆ ಇಲ್ಲದ ಕೆಲಸವನ್ನು ಮಾಡುವುದರ ಮೂಲಕ ಋಣಾತ್ಮಕ ಪರಿಣಾಮವನ್ನು ಉಂಟುಮಾಡಬಹುದು. ಅನೇಕ ಸಂದರ್ಭದಲ್ಲಿ ಯಾವುದೇ ಕಾಳಜಿ ಇಲ್ಲದವರಂತೆ ವರ್ತಿಸುತ್ತಾರೆ. ಇವರು ನಿಸ್ವಾರ್ಥದವರು ಹಾಗೂ ಚಿಂತನಾಶೀಲರು ಎಂದು ಹೇಳಲಾಗುವುದು.

ಕುಂಭ

ಕುಂಭ

ಈ ರಾಶಿಯ ವ್ಯಕ್ತಿಗಳು ಅತ್ಯಂತ ಸ್ವತಂತ್ರ ಪ್ರಿಯರು. ಇವರು ಬೇರೆಯವರ ಹಾದಿಯಲ್ಲಿ ಹೋಗಲು ಇಷ್ಟಪಡುವುದಿಲ್ಲ. ಇವರು ಬಹುಬೇಗದ ವರ್ತನೆ ಹಾಗೂ ಕಠಿಣವಾದ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವರು. ಇವರು ವಿಚಾರಗಳನ್ನು ಮಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ. ಅಂತೆಯೇ ವರ್ತನೆಯೂ ಅಷ್ಟೇ ವೇಗದಲ್ಲಿ ನೀಡುತ್ತಾರೆ. ಸಮಸ್ಯೆಯನ್ನು ಪರಿಹರಿಸಲು ತ್ವರಿತವಾದ ಒಲವನ್ನು ತೋರುತ್ತಾರೆ. ಸಂಭಾವ್ಯ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸದೆಯೇ ಯೋಜನೆಯನ್ನು ಕೈಗೊಳ್ಳುತ್ತಾರೆ. ಇದರಿಂದಾಗಿ ಒತ್ತಡಕ್ಕೆ ಒಳಗಾದಾಗ ತಲೆಬಿಸಿಮಾಡಿಕೊಳ್ಳುತ್ತಾರೆ. ಜೊತೆಗೆ ತಮ್ಮ ದುರ್ಬಲ ಸ್ಥಿತಿಯ ಬಗ್ಗೆ ಚಿಂತನೆ ನಡೆಸುತ್ತಾರೆ. ಈ ಹಿನ್ನೆಲೆಯಲ್ಲಿಯೇ ಮನಸ್ಸಿಗೆ ಬಂದಂತೆ ವರ್ತಿಸುವ ಸಾಧ್ಯತೆಗಳು ಇರುತ್ತವೆ.

ಮೀನ

ಮೀನ

ಇವರು ವಿಷಯವನ್ನು ಸೂಕ್ತ ರೀತಿಯಲ್ಲಿ ಪರಿಗಣಿಸುವುದಿಲ್ಲ. ಅರ್ಥವಿಲ್ಲದ ರೀತಿಯಲ್ಲಿ ಅಥವಾ ತಮಾಷೆಯ ರೂಪದಲ್ಲಿ ನಿರ್ಣಯವನ್ನು ಕೈಗೊಳ್ಳುವರು. ನಿರ್ಧಾರ ತೆಗೆದುಕೊಳ್ಳುವುದರ ಬಗ್ಗೆ ದ್ವೇಷವನ್ನು ವ್ಯಕ್ತಪಡಿಸುತ್ತಾರೆ. ಅಗತ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಹಾಗೂ ಚಿಂತನೆಗಳನ್ನು ಹೊಂದಿರಬಾರದು ಎಂದು ಇವರು ಭಾವಿಸುತ್ತಾರೆ. ಇವರು ಬಹುತೇಕ ಸಂದರ್ಭದಲ್ಲಿ ಮೂರ್ಖ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಇವರು ನಿರಾಶೆ ಹೊಂದುವುದನ್ನು ಇಷ್ಟಪಡುವುದಿಲ್ಲ. ಮೀನವು ಯಾರನ್ನಾದರು ನಿರಾಶೆಗೊಳಿಸುವ ಗೋಜಿಗೆ ಹೋಗುವುದಿಲ್ಲ. ಆದರೆ ಅವರು ಕೈಗೊಳ್ಳುವ ತೀರ್ಮಾನ ಹಾಗೂ ವರ್ತನೆ ಇತರರಿಗೆ ನೋವುಂಟುಮಾಡುವುದು.

Most Read: ಕಡ್ಲೆಹಿಟ್ಟು ಬೋಂಡಾ ಮಾಡುವುದಕ್ಕೆ ಮಾತ್ರವಲ್ಲ-ಆರೋಗ್ಯಕ್ಕೂ ಬಲು ಉಪಕಾರಿ!

ತುಲಾ

ತುಲಾ

ಇವರು ಬಹಳಷ್ಟು ಉದ್ವೇಗದ ಕೆಲಸವನ್ನು ಮಾಡುತ್ತಾರೆ. ಇವರು ಯಾವುದಾದರೂ ಒಂದು ವಿಚಾರಕ್ಕೆ ಅಂಗಡಿಗೆ ಹೋದರೂ ಬರುವಾಗ ಹಲವಾರು ವಸ್ತುಗಳನ್ನು ಕೊಂಡು ತರಬೇಕು ಎಂದು ಬಯಸುತ್ತಾರೆ. ಇವರು ಯಾವುದೇ ವಿಚಾರದಲ್ಲೂ ತಕ್ಷಣದ ತೃಪ್ತಿಯನ್ನು ಇಷ್ಟಪಡುತ್ತಾರೆ. ಕಟ್ಟು ನಿಟ್ಟಿನ ನಿರ್ಣಯ ತೆಗೆದುಕೊಳ್ಳುವ ಇವರು. ಚಿಂತನೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳದೆ ನಿರ್ಧಾರ ವ್ಯಕ್ತ ಪಡಿಸುತ್ತಾರೆ.

ತುಲಾ

ತುಲಾ

ಇದು ಕೆಲವರಿಗೆ ನೋವುಂಟಾಗುವ ಸಾಧ್ಯತೆಗಳಿವೆ. ಇವರು ಜನರಿಗೆ ಉಡುಗೊರೆ ಹಾಗೂ ಸಂತೋಷ ನೀಡಲು ಇಷ್ಟಪಡುತ್ತಾರೆ ಈ ನಿಟ್ಟಿನಲ್ಲಿ ತಮ್ಮ ಸಾಮಥ್ರ್ಯವನ್ನು ಪರಿಗಣಿಸದೆಯೇ ಅತಿರೇಕಕ್ಕೆ ಹೋಗುವರು. ಇದರಿಂದಲೂ ಎದುರಿಗಿರುವ ವ್ಯಕ್ತಿಗೆ ಇವರ ಬಗ್ಗೆ ಗೊಂದಲ ಉಂಟಾಗಬಹುದು.

English summary

Impulsive Zodiac Signs Who Never Think Before They Act

Impulsive people tend to do things fast — they make speedy decisions, act quickly, and rarely take their time doing anything. With them, things are put into action by emotional and/or involuntary impulses. But sometimes these impulses cause them to get into trouble. They say whatever comes into their head, not considering if it’s too harsh or blunt, and they can hurt people’s feelings.
Story first published: Sunday, September 23, 2018, 9:01 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more