For Quick Alerts
ALLOW NOTIFICATIONS  
For Daily Alerts

ನಿಮ್ಮ ಮೈ ಮೇಲೆ ಹಲ್ಲಿ ಬಿದ್ದರೆ ಅಪಶಕುನವೇ? ಅದೃಷ್ಟವೇ?

|

ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಪ್ರತಿಯೊಂದು ನಂಬಿಕೆಗೂ ಒಂದೊಂದು ಕಾರಣವಿದೆ. ಮೂಢನಂಬಿಕೆಗಳನ್ನು ನಂಬಿಕೊಂಡು ಅದನ್ನೇ ಬದುಕಿನಲ್ಲಿ ಅಳವಡಿಸಿಕೊಂಡಿರುತ್ತಾರೆ. ಸುತ್ತಮುತ್ತಲಿನ ಪ್ರಾಣಿಗಳನ್ನು ಕುರಿತು ಒಂದಿಲ್ಲೊಂದು ಮೂಢತೆಗಳನ್ನು ಜನ ಅಳವಡಿಸಿಕೊಂಡು ಬರುತ್ತಿದ್ದಾರೆ. ನಮ್ಮ ಸುತ್ತಲಿ ಪರಿಸರವನ್ನು ಕೂಡ ಜನ ಅದೃಷ್ಟ ಮತ್ತು ದುರಾದೃಷ್ಟದ ಕೊಡುಗೆಯೆಂದೇ ಭಾವಿಸುತ್ತಿದ್ದಾರೆ. ನಮಗೆ ಮುಂಚಿತವಾಗಿಯೇ ತಿಳಿಯುತ್ತಿದ್ದರೆ ದುರಾದೃಷ್ಟದಿಂದ ನಮ್ಮನ್ನು ನಾವು ಸಂರಕ್ಷಿಸಿಕೊಳ್ಳಬಹುದು. ಹೀಗೆಯೇ ಹಲ್ಲಿಗಳ ಬಗ್ಗೆ ಕೂಡ ಶಕುನ ಶಾಸ್ತ್ರ ಒಂದಿಲ್ಲೊಂದು ನಂಬಿಕೆಗಳನ್ನು ಹೊಂದಿದೆ.

Hindu Beliefs Associated With Lizards

ನಿಮ್ಮ ಮನೆಯ ಗೋಡೆಯ ಮೇಲೆ ಅತ್ತಿತ್ತ ಹರಿದಾಡುತ್ತಿರುವ ಹಲ್ಲಿ ಕೂಡ ನಿಮ್ಮ ಭವಿಷ್ಯದ ಮಾಹಿತಿ ತಿಳಿಸುತ್ತದೆ ಎಂಬುದು ಶಕುನ ಶಾಸ್ತ್ರ ತಿಳಿಸುತ್ತಿರುವ ಮಾಹಿತಿಯಾಗಿದೆ. ಇಂದಿಗೂ ಈ ನಂಬಿಕೆಯನ್ನು ಜನ ಅನುಸರಿಸಿಕೊಂಡು ಬರುತ್ತಿದ್ದಾರೆ. ಜನರು ಎಷ್ಟೇ ಆಧುನಿಕವಾಗಿದ್ದರೂ ಕೂಡ ಕೆಲವೊಂದು ಶಕುನ ಶಾಸ್ತ್ರಗಳನ್ನು ನಂಬಿಕೊಂಡು ಬರುತ್ತಿದ್ದಾರೆ. ಉದಾಹರಣೆಗೆ ನೀವು ಎಲ್ಲಾದರೂ ಹೋಗುತ್ತಿದ್ದಾಗ ಬೆಕ್ಕು ಅಡ್ಡಬಂದರೆ ಇಲ್ಲವೇ ಕಾಗೆ ಅರಚಾಡುತ್ತಿದ್ದರೆ ನಾಯಿ ಕೆಟ್ಟದಾಗಿ ಬೊಗಳುತ್ತಿದ್ದರೆ, ಆಕಳು ಅಂಬಾ ಎನ್ನುತ್ತಿದ್ದರೆ ಹೀಗೆ ಪ್ರಾಣಿಗಳಿಂದ ಕೂಡ ಅಶುಭ ವಾರ್ತೆಗಳನ್ನು ತಿಳಿದುಕೊಳ್ಳಬಹುದು ಎಂಬುದು ಅವರ ನಂಬಿಕೆಯಾಗಿದೆ.

ಹಿಂದೂ ಪುರಾಣಗಳಲ್ಲಿ

ಹಿಂದೂ ಪುರಾಣಗಳಲ್ಲಿ

ಹಿಂದೂ ಪುರಾಣಗಳಲ್ಲಿ ವಿವಿಧ ಪ್ರಾಣಿಗಳಿಗೆ ವಿವಿಧ ಪಾತ್ರಗಳನ್ನು ನೀಡಲಾಗಿದೆ. ಆದರೆ ಅತಿ ನಿಕೃಷ್ಟವಾಗಿ ಕಂಡುಬಂದ ಜೀವಿಯೆಂದರೆ ಹಲ್ಲಿ. ಪುರಾಣದ ಪ್ರಕಾರ ಅಮೃತಮಂಥನದ ಸಮಯದಲ್ಲಿ ಅಮೃತವನ್ನು ಕುಡಿದ ಸ್ವರ್ಣಬಾಹು ಎಂಬ ರಾಕ್ಷಸನನ್ನು ಮೋಹಿನಿಯ ಅವತಾರದ ಮಹಾವಿಷ್ಣು ಸಂಹರಿಸಿದ್ದನಂತೆ. ರುಂಡವಿಲ್ಲದ ಮುಂಡಕ್ಕೆ ಕೇತು ಎಂದು ಕರೆಯಲಾಗುತ್ತದೆ ಹಾಗೂ ರುಂಡವನ್ನು ಒಂದು ಹಾವಿನ ದೇಹಕ್ಕೆ ಜೋಡಿಸಿ ರಾಹು ಎಂದು ಕರೆಯಲಾಗುತ್ತದೆ.

ದೀಪಾವಳಿಯ ಸಮಯದಲ್ಲಿ ಗೋಡೆಯಲ್ಲಿ ಕಾಣಿಸಿಕೊಂಡರೆ

ದೀಪಾವಳಿಯ ಸಮಯದಲ್ಲಿ ಗೋಡೆಯಲ್ಲಿ ಕಾಣಿಸಿಕೊಂಡರೆ

ಸೂರ್ಯ ಮತ್ತು ಚಂದ್ರ ಗ್ರಹಣಗಳೆಂದರೆ ರಾಹು ಸೂರ್ಯ ಅಥವಾ ಚಂದ್ರನನ್ನು ನುಂಗುವುದೆಂದೂ ಸೂರ್ಯ ಅಥವಾ ಚಂದ್ರನ ಕೊರಳಿನಿಂದ ಹೊರಬಂದು ಗ್ರಹಣವನ್ನು ಅಂತ್ಯಗೊಳಿಸುವುದೆಂದೂ ಹೇಳಲಾಗಿದೆ. ಹಲ್ಲಿಯ ಬಾಲ ಕಡಿದ ಬಳಿಕ ಜೀವಂತವಾಗಿ ಉಳಿಯುವ ಅದರ ರುಂಡವನ್ನೂ ಕೇತುವಿಗೆ ಹೋಲಿಸಲಾಗಿದೆ.ಎಲ್ಲೆಡೆ ಹಲ್ಲಿಗೆ ತಿರಸ್ಕಾರವಿದ್ದರೂ ದೀಪಾವಳಿಯ ಹೊತ್ತಿನಲ್ಲಿ ಮಾತ್ರ ಎಲ್ಲರೂ ತಮ್ಮ ಮನೆಯ ಗೋಡೆಯಲ್ಲಿ ಕಾಣಿಸಿಕೊಳ್ಳಲಿ ಎಂದೇ ಹಾರೈಸುತ್ತಾರೆ. ಏಕೆಂದರೆ ಹಲ್ಲಿ ಕಂಡರೆ ಮನೆಗೆ ಐಶ್ವರ್ಯ ಮತ್ತು ಸಮೃದ್ಧಿ ಬರುತ್ತದೆ ಎಂದು ಜನರು ನಂಬುತ್ತಾರೆ.

ಅಕಸ್ಮಾತ್ ಆಗಿ ಹಲ್ಲಿ ಮೈಮೇಲೆ ಬಿದ್ದರೆ

ಅಕಸ್ಮಾತ್ ಆಗಿ ಹಲ್ಲಿ ಮೈಮೇಲೆ ಬಿದ್ದರೆ

ಒಂದು ವೇಳೆ ಯಾರದಾದರೂ ಮೈಮೇಲೆ ಅಕಾಸ್ಮಾತ್ ಆಗಿ ಹಲ್ಲಿ ಬಿದ್ದರೆ, ಆಗ ಗೌಳಿಶಾಸ್ತ್ರದ ಆಗಮನವಾಗುತ್ತದೆ. ಈ ಶಾಸ್ತ್ರದ ಪ್ರಕಾರ ಹಲ್ಲಿ ದೇಹದ ಯಾವ ಭಾಗದ ಮೇಲೆ ಮೊದಲು ಬಿತ್ತು ಎಂಬ ಅಂಶವನ್ನು ಪರಿಗಣಿಸಿ ಒಳ್ಳೆಯ ಅಥವಾ ಕೆಟ್ಟ ಶಕುನವೆಂದು ಭಾವಿಸಲಾಗುತ್ತದೆ. ಕ್ಷೋಭೆಗೊಳ್ಳುವ ಮನಸ್ಸು, ಕೆಡುವ ಆರೋಗ್ಯ, ಮನೆಯವರಲ್ಲಿ ಯಾರಿಗಾದರೂ ಆರೋಗ್ಯದಲ್ಲಿ ಏರುಪೇರು ಅಥವಾ ಸಾವು ಮೊದಲಾದ ಅಪಶಕುನಗಳಿದ್ದರೆ ಐಶ್ವರ್ಯದ ಆಗಮನ, ಉತ್ತಮ ಆರೋಗ್ಯ, ಕಳೆದುಹೋದವರು ಹಿಂದಿರುಗಿ ಬರುವುದು ಮೊದಲಾದ ಶುಭಶಕುನಗಳೂ ಇವೆ.

ಬಲ ತಲೆಯ ಮೇಲೆ ಹಲ್ಲಿ ಬಿದ್ದರೆ

ಬಲ ತಲೆಯ ಮೇಲೆ ಹಲ್ಲಿ ಬಿದ್ದರೆ

ಗೋಡೆಯಿಂದ ಹಲ್ಲಿ ನಮ್ಮ ತಲೆಯ ಮೇಲೆ ಬಿದ್ದರೆ ನಾವು ಅದನ್ನು ಅನಿರೀಕ್ಷಿತ ಎಂದುಕೊಳ್ಳುತ್ತೇವೆ. ಪ್ರಾಣಿಯು ತನ್ನ ಹಿಡತವನ್ನು ಕಳೆದುಕೊಂಡು ಅನಿರೀಕ್ಷಿತವಾಗಿ ನಮ್ಮ ಮೇಲೆ ಬೀಳುತ್ತದೆ. ಆದರೆ ಶಕುನ ಶಾಸ್ತ್ರ ಈ ಕುರಿತು ಕೆಲವೊಂದು ಮಾಹಿತಿಯನ್ನು ನೀಡುತ್ತದೆ. ವ್ಯಕ್ತಿಯ ತಲೆಯ ಬಲಭಾಗದಲ್ಲಿ ಹಲ್ಲಿ ಬಿದ್ದರೆ, ಹಣವನ್ನು ಆ ವ್ಯಕ್ತಿ ಗಳಿಸಬಹುದು ಎಂದಾಗಿದೆ. ಅದೇ ರೀತಿ ಎಡಭಾಗದಲ್ಲಿ ಬಿದ್ದಲ್ಲಿ ನಾವು ಹಣ ಕಳೆದುಕೊಳ್ಳಬೇಕಾಗುತ್ತದೆ.

Most Read: ಬಾಡಿ ಹೀಟ್ ಕಮ್ಮಿ ಮಾಡುವ 9 ಪಾನೀಯಗಳು

ಬಲ ಕಿವಿಯ ಮೇಲೆ ಬೀಳುವುದು

ಬಲ ಕಿವಿಯ ಮೇಲೆ ಬೀಳುವುದು

ಹಲ್ಲಿಯು ಬಲಕಿವಿಯ ಮೇಲೆ ಬಿದ್ದರೆ, ಆಭರಣವನ್ನು ನಾವು ಪಡೆಯುತ್ತೇವೆ ಎಂದಾಗಿದೆ ಅದೇ ರೀತಿ ಎಡ ಕಿವಿಯ ಮೇಲೆ ಬಿದ್ದರೆ ವ್ಯಕ್ತಿಯ ದೀರ್ಘ ಆಯುಷ್ಯವನ್ನು ಇದು ತಿಳಿಸುತ್ತದೆ. ಆದ್ದರಿಂದ ಹಲ್ಲಿಯು ನಿಮ್ಮ ಕಿವಿಯ ಮೇಲೆ ಬಿದ್ದಲ್ಲಿ ನೀವು ಭಯಪಡಬೇಕಾಗಿಲ್ಲ, ಆದರೆ ಫಲವನ್ನು ಅರಿತುಕೊಳ್ಳಿ.

ಎಡಭಾಗದಿಂದ ಅದು ಬಂದರೆ

ಎಡಭಾಗದಿಂದ ಅದು ಬಂದರೆ

ಯಾರಾದ್ದಾರೂ ದೇಹದ ಮೇಲೆ ಹಲ್ಲಿ ಕುಳಿತುಕೊಂಡಿರುವುದನ್ನು ನಿಮಗೆ ಊಹಿಸಲು ಸಾಧ್ಯವೇ? ನೀವು ಅಂತಹವರಲ್ಲಿ ಒಬ್ಬರು ಎಂದಾದಲ್ಲಿ ನಿಮ್ಮ ಬಲಭಾಗದಿಂದ ಹಲ್ಲಿ ಬಂದರೆ ಮತ್ತು ಎಡಕ್ಕೆ ಹೋದರೆ, ಅದರ್ಥ ನೀವು ಹಣಲಾಭ ಗಳಿಸುತ್ತೀರಿ ಎಂದಾಗಿದೆ.

ಹೊಸ ಮನೆಯನ್ನು ಪ್ರವೇಶಿಸುವಾಗ

ಹೊಸ ಮನೆಯನ್ನು ಪ್ರವೇಶಿಸುವಾಗ

ಮನೆಯನ್ನು ಪ್ರವೇಶಿಸುವಾಗ ಮನೆಯ ಯಜಮಾನ ಸತ್ತ ಹಲ್ಲಿಯನ್ನು ನೋಡಿದರೆ, ಆ ಮನೆಯಲ್ಲಿ ವಾಸ ಮಾಡುವವರು ಆರೋಗ್ಯ ಸಮಸ್ಯೆಗಳನ್ನು, ರೋಗವನ್ನು ಹೊಂದಬಹುದು ಎಂದಾಗಿದೆ. ಇಂತಹ ಸಂದರ್ಭದಲ್ಲಿ ಪೂಜೆ ಮಾಡಿ ನಂತರ ಮನೆಯ ಪ್ರವೇಶ ಮಾಡಬೇಕು. ಅದೇ ರೀತಿ ಹಲ್ಲಿಯ ಮೈ ಮೇಲೆ ಮಣ್ಣು ಇದ್ದರೆ ಅದನ್ನು ಅಪಶಕುನ ಎಂದು ಪರಿಗಣಿಸಲಾಗುತ್ತದೆ.

ಹಲ್ಲಿಯ ಧ್ವನಿ ಆಲಿಸುವುದು

ಹಲ್ಲಿಯ ಧ್ವನಿ ಆಲಿಸುವುದು

ಹಲ್ಲಿ ಲೊಚಗುಟ್ಟುವುದನ್ನು ನೀವು ಆಲಿಸಿದರೆ ನಿಮ್ಮ ಭವಿಷ್ಯದಲ್ಲಿ ನೀವು ಶುಭ ಸುದ್ದಿಯನ್ನು ಕೇಳಲಿದ್ದೀರಿ ಎಂದಾಗಿದೆ. ಧನಾತ್ಮಕ ಜೀವನವನ್ನು ಇದು ಪ್ರತಿನಿಧಿಸುತ್ತದೆ. ನೀವು ದಿನದಲ್ಲಿ ಆಹಾರ ಸೇವಿಸುತ್ತಿರುವಾಗ ಶಬ್ಧ ಕೇಳಿಬರುತ್ತದೆ ಇನ್ನು ರಾತ್ರಿ ಮಲಗಿರುವಾಗ ನಿಶ್ಯಬ್ಧ ಸಮಯದಲ್ಲಿ ಧ್ವನಿ ಕೇಳಿಸುವುದು ಸಾಮಾನ್ಯವಾಗಿದೆ.

ಹಲ್ಲಿಗಳ ಜಗಳ

ಹಲ್ಲಿಗಳ ಜಗಳ

ಹಲ್ಲಿಗಳ ಜಗಳವನ್ನು ನೀವು ನೋಡಿದರೆ ಭವಿಷ್ಯದಲ್ಲಿ ನೀವು ಕೂಡ ವಾದ ವಿವಾದಗಳನ್ನು ಎದುರಿಸಬೇಕಾಗುತ್ತದೆ ಎಂದಾಗಿದೆ. ಆದಷ್ಟು ತಾಳ್ಮೆಯಿಂದಿರಿ ಮತ್ತು ಹೊಡೆದಾಟಗಳನ್ನು ನಿವಾರಿಸಲು ಯಾರೊಂದಿಗೂ ಚರ್ಚೆ ಮಾಡಬೇಡಿ. ಕೋಪ ಮತ್ತು ವಾದಗಳಿಂದ ದೂರವಿರಿ.

Most Read: ಮನೆಯಲ್ಲಿ ಶಿವಲಿಂಗಕ್ಕೆ ಪೂಜೆ ಮಾಡುವಾಗ ಅಪ್ಪಿತಪ್ಪಿಯೂ ಇಂತಹ ತಪ್ಪುಗಳನ್ನು ಮಾಡಬೇಡಿ

ಮಹಿಳೆಯ ದೇಹದ ಬಲಭಾಗದಲ್ಲಿ ಹಲ್ಲಿ ಬಿದ್ದರೆ

ಮಹಿಳೆಯ ದೇಹದ ಬಲಭಾಗದಲ್ಲಿ ಹಲ್ಲಿ ಬಿದ್ದರೆ

ಮಹಿಳೆಯ ದೇಹದ ಬಲಭಾಗದಲ್ಲಿ ಹಲ್ಲಿ ಬಿದ್ದರೆ, ಭವಿಷ್ಯದಲ್ಲಿ ಮಹಿಳೆಯ ಕುಟುಂಬ ಹಣನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂಬುದಾಗಿ ಶಕುನ ಶಾಸ್ತ್ರದಲ್ಲಿ ತಿಳಿಸಲಾಗಿದೆ.

English summary

Hindu Beliefs Associated With Lizards

Hinduism is a religion with a huge number of books and scriptures offering different kinds of beliefs and philosophies. What luck is and what are the determinant factors of a good or a bad luck have all been written down in the shastras. Shakun Shastra talks about the various beliefs associated with lizards.
X
Desktop Bottom Promotion