For Quick Alerts
ALLOW NOTIFICATIONS  
For Daily Alerts

ಈ ಏಳು ಟಿಪ್ಸ್ ಚಾಚೂ ತಪ್ಪದೇ ಪಾಲಿಸಿ- ಜೀವನದಲ್ಲಿ ಯಶಸ್ಸು ಖಂಡಿತ ಸಿಗುತ್ತೆ

|

ಸೋಲೇ ಗೆಲುವಿಗೆ ಸೋಪಾನ ಎನ್ನುವ ಮಾತಿದೆ. ಪದೇ ಪದೇ ಸೋಲುಂಡರೆ ಆಗ ಮುಂದಿನ ಗೆಲುವಿಗೆ ಹೊಸ ತಂತ್ರ ಹಾಗೂ ವಿಧಾನಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ. ಕಠಿಣ ಪರಿಶ್ರಮದ ಹೊರತಾಗಿಯೂ ನೀವು ವಿಫಲವಾದರೆ ಆಗ ನಿಮ್ಮ ತಂತ್ರಗಳ ಬಗ್ಗೆ ಮರುಪರಿಶೀಲನೆ ನಡೆಸಬೇಕು. ಈ ಲೇಖನದಲ್ಲಿ ಕೆಲವೊಂದು ಸರಳ ವಿಧಾನಗಳು ಹಾಗೂ ತಂತ್ರಗಳಿಂದ ನೀವು ಬಯಸಿರುವಂತಹ ಫಲಿತಾಂಶ ಪಡೆಯುವುದು ಹೇಗೆ ಎಂದು ತಿಳಿದುಕೊಳ್ಳುವ.

ಈ ತಂತ್ರಗಳನ್ನು ಪಾಲಿಸಿಕೊಂಡು ಹೋದರೆ ಆಗ ಫಲಿತಾಂಶ ಸಿಗುವುದು ಮತ್ತು ಕೇವಲ ಏಳೇ ದಿನಗಳಲ್ಲಿ ನಿಮಗೆ ಇದರಿಂದ ಫಲಿತಾಂಶ ಸಿಗುವುದು ಎಂದು ನಾವು ಖಚಿತವಾಗಿ ಹೇಳಬಲ್ಲೆವು. ಹೀಗೆ ನೀವು ಕಾಯುತ್ತಿರುವುದು ಯಾಕೆ? ಈ ತಂತ್ರಗಳನ್ನು ನೀವು ಪಾಲಿಸಿಕೊಂಡು ಹೋಗಿ ಯಶಸ್ವಿಯಾಗಿರಿ...

ಯೋಜನೆ ರೂಪಿಸಿ

ಯೋಜನೆ ರೂಪಿಸಿ

ಯೋಜನೆ ರೂಪಿಸಲು ನೀವು ಅವಸರ ಮಾಡಬೇಡಿ. ನೀವು ಇದಕ್ಕಾಗಿ ಸಂಪೂರ್ಣ ಒಂದು ದಿನ ತೆಗೆದುಕೊಂಡು ಸರಿಯಾಗಿ ಕಾರ್ಯಗತವಾಗುವ ಯೋಜನೆ ರೂಪಿಸಿ. ವಾಸ್ತವಿಕವಾಗಿರುವ ಯೋಜನೆಗಳನ್ನು ಹಾಕಿಕೊಳ್ಳಿ. ತುಂಬಾ ಶಾಂತವಾಗಿರುವ, ಯಾವುದೇ ಶಬ್ಧವಿಲ್ಲದ, ಕಿರಿಕಿರಿ ಇಲ್ಲದ ಜಾಗದಲ್ಲಿ ಕುಳಿತುಕೊಳ್ಳಿ. ಇಂತಹ ಜಾಗದಲ್ಲಿ ಕುಳಿತುಕೊಂಡ ಬಳಿಕ ಸಮಯ ತೆಗೆದುಕೊಂಡು ಯೋಜನೆ ಹಾಕಿಕೊಳ್ಳಿ.

ಅಡಚಣೆಗಳನ್ನು ವಿಶ್ಲೇಷಿಸಿ

ಅಡಚಣೆಗಳನ್ನು ವಿಶ್ಲೇಷಿಸಿ

ಗುರಿ ಸಾಧಿಸಲು ನಿಮ್ಮ ಹಾದಿಗೆ ಬರುವಂತಹ ಅಡಚಣೆಗಳನ್ನು ವಿಶ್ಲೇಷಿಸಿ. ನಿಮ್ಮ ಹಾದಿಯಲ್ಲಿ ಬರುವಂತಹ ಎಲ್ಲಾ ರೀತಿಯ ಅಡಚಣೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ನಿಮ್ಮ ಮನಸ್ಸಿಗೆ ದೃಢಮಾಡಿಸಿಕೊಳ್ಳಿ.

ನಿಮ್ಮ ಯೋಜನೆ ಕಾರ್ಯಗತಗೊಳಿಸಿ ನೀವು ಯೋಜನೆ ರೂಪಿಸಿಕೊಂಡ ಬಳಿಕ ನೀವು ಅದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಬೇಕು ಮತ್ತು ಇದಕ್ಕೆ ನೀವು ತಯಾರಾಗಬೇಕು. ಯೋಜನೆಯನ್ನು ದಿನ ಅಥವಾ ವಾರದ ರೂಪದಲ್ಲಿ ವಿಂಗಡಿಸಿಕೊಳ್ಳಿ. ಪ್ರತಿದಿನಕ್ಕೂ ಕಾರ್ಯಗಳನ್ನು ಇಟ್ಟುಕೊಂಡು ಅದನ್ನು ಪೂರ್ತಿಗೊಳಿಸಲು ಪ್ರಯತ್ನಿಸಿ.

ದೈನಂದಿನ ಚಟುವಟಿಕೆ ಮಾರ್ಪಾಡು ಮಾಡಿ

ದೈನಂದಿನ ಚಟುವಟಿಕೆ ಮಾರ್ಪಾಡು ಮಾಡಿ

ನೀವು ಬಯಸಿದ ಫಲಿತಾಂಶ ಪಡೆಯಲು ದೈನಂದಿನ ಚಟುವಟಿಕೆಗಳಲ್ಲಿ ಕೆಲವೊಂದು ಬದಲಾವಣೆ ಮಾಡಬೇಕಾಗುತ್ತದೆ. ಸಮಯಕ್ಕೆ ಸರಿಯಾಗಿ ಎದ್ದೇಳುವುದು ಮತ್ತು ಯೋಜನೆಯ ಪ್ರತಿಯೊಂದು ಹಂತದಲ್ಲೂ ಸಮಯಕ್ಕೆ ಸರಿಯಾಗಿರುವುದು. ಇದರಿಂದ ಯೋಜನೆಗೆ ಸರಿಯಾಗಿ ಸಾಗಲು ಮತ್ತು ಅದನ್ನು ಕಾರ್ಯಗತಗೊಳಿಸಲು ಸಾಧ್ಯವಾಗುವುದು. ಇದರಿಂದ ನಿಮ್ಮ ಮನಸ್ಥಿತಿ ಸುಧಾರಣೆಯಾಗುವುದು ಮತ್ತು ದಿನವಿಡಿ ನೀವು ಧನಾತ್ಮಕ ಭಾವನೆಯಿಂದ ಇರುವಿರಿ.

ಪ್ರದರ್ಶನದ ಮೇಲೆ ನಂಬಿಕೆಯಿರಲಿ

ಪ್ರದರ್ಶನದ ಮೇಲೆ ನಂಬಿಕೆಯಿರಲಿ

ನೀವು ತುಂಬಾ ಕಠಿಣವಾಗಿ ಪ್ರಯತ್ನಿಸುತ್ತಿರುವ ವೇಳೆ ಇದು ಅಸಾಧ್ಯವೆಂದು ಯೋಚಿಸುವ ಸಮಯ ಬರಬಹುದು. ಗುರಿಯತ್ತ ನೆಟ್ಟದೃಷ್ಟಿ ತೆಗೆಯಬೇಡಿ ಮತ್ತು ಯೋಜನೆಯಂತೆ ಮುಂದೆ ಸಾಗಿ. ನಿಮ್ಮ ಯೋಜನೆಗಳ ಬಗ್ಗೆ ನಂಬಿಕೆಯಿರಲಿ ಮತ್ತು ಅದರತ್ತ ಗಮನವಿರಲಿ. ಫಲಿತಾಂಶಗಳು ಧನಾತ್ಮಕವಾಗಿ ಇರುವುದು ನಿಮಗೆ ಕಂಡುಬರುವುದು. ಸಣ್ಣ ಸಾಧನೆ ಕೂಡ ಮುಂದೆ ದೊಡ್ಡ ಮಟ್ಟದ ಯಶಸ್ಸು ನೀಡುವುದು. ಸುತ್ತಮುತ್ತ ಇರುವವರನ್ನು ಎಚ್ಚರಿಕೆಯಿಂದ ಗಮನಿಸುತ್ತಿರಿ ಇದರರ್ಥ ಅಕ್ಕ ಪಕ್ಕ ಇರುವವರು ಏನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿ ಎಂದಲ್ಲ, ನಿಮ್ಮ ಕಾರ್ಯಕ್ಷೇತ್ರದಲ್ಲಿ ಹೆಸರು ಮಾಡಿರುವ ವ್ಯಕ್ತಿಗಳು ಏನು ಮಾಡುತ್ತಿದ್ದಾರೆ, ಯಾವ ಕಾರ್ಯದಲ್ಲಿ ತಮ್ಮ ಸಮಯವನ್ನು ವಿನಿಯೋಗಿಸುತ್ತಿದ್ದಾರೆ, ಮುಂದಿನ ಅವರ ನಡೆ ಏನು ಎಂಬುದನ್ನು ಗಮನಿಸುತ್ತಿರಿ. ಅದರಲ್ಲೂ ಅವರಿಂದಾಗುವ ತಪ್ಪುಗಳನ್ನು ಅತಿ ಸೂಕ್ಷ್ಮವಾಗಿ ಗಮನಿಸಿ. ಆ ತಪ್ಪುಗಳನ್ನು ಮಾಡದೇ ಇರುವುದನ್ನು ಕಲಿಯಿರಿ.

ಆರಾಮ ಮಾಡಿ

ಆರಾಮ ಮಾಡಿ

ಒಂದು ವಾರ ಕಾಲ ನೀವು ಯೋಜನೆಯನ್ನು ಜಾರಿಗೊಳಿಸಲು ಪ್ರಯತ್ನಿಸಿದ ಬಳಿಕ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ಬೇಕು ಎಂದು ನೀವು ಅರ್ಥಮಾಡಿಕೊಳ್ಳಬೇಕು. ಸಂಪೂರ್ಣ ವಾರದಲ್ಲಿ ನಿಮ್ಮ ಕಠಿಣ ಪರಿಶ್ರಮದಿಂದ ಬಂದಿರುವ ಯಶಸ್ಸನ್ನು ಆನಂದಿಸಿ ಮತ್ತು ಆರಾಮವಾಗಿರಿ. ಇಂತಹ ಸ್ಪೂರ್ತಿದಾಯಕ ಲೇಖನಗಳನ್ನು ಓದಲು ಬಯಸುವಿರಾ? ಕಮೆಂಟ್ ಬಾಕ್ಸ್ ನಲ್ಲಿ ನಮಗೆ ಬರೆದು ಕಳುಹಿಸಿ.

ನಿತ್ಯವೂ ಹೊಸದನ್ನು ಮಾಡಿ

ನಿತ್ಯವೂ ಹೊಸದನ್ನು ಮಾಡಿ

ನಿತ್ಯವೂ ಹೊಸದನ್ನು ಮಾಡಲು ಪ್ರಯತ್ನಿಸಬೇಕು. ಆಗಲೇ ಹೊಸ ತಿರುವುಗಳು ನಮ್ಮೆದು ನಿಲ್ಲುತ್ತವೆ. ಹೊಸದನ್ನು ಸಾಧಿಸಿರುತ್ತೇವೆ. ಅದೇ ನಾನು ಈ ದಿನ ತುಂಬಾ ದೂರ ಹಾರಲು ಸಾಧ್ಯವಿಲ್ಲ ಎಂದುಕೊಂಡರೆ ಬೇಸರ ಹಾಗೂ ದುರಾದೃಷ್ಟ ನಮ್ಮ ಮುಂದೆ ನಿಲ್ಲುತ್ತದೆ. ನಿತ್ಯವೂ ನಾವು ಮುಂದುವರಿಯುತ್ತಾ ಸಾಗಿದರೆ ಮಾತ್ರ ಗುರಿಗೆ ಬಹಳ ಹತ್ತಿರವಾತ್ತೇವೆ. ಜೊತೆಗೆ ಎಷ್ಟು ದೂರ ಸಾಗಿ ಬಂದಿದ್ದೇವೆ ಎನ್ನುವುದು ಅರ್ಥವಾಗುತ್ತದೆ.

ನಂಬಿಕೆಯನ್ನು ಬೆಳೆಸಿಕೊಳ್ಳಿ

ನಂಬಿಕೆಯನ್ನು ಬೆಳೆಸಿಕೊಳ್ಳಿ

ನಂಬಿಕೆ ಎನ್ನುವುದೇ ನಮ್ಮ ಜೀವನದ ಮುಖ್ಯ ಅಂಶ ಎಂದು ಟಾಟಾಅವರು ಹೇಳುತ್ತಾರೆ. ನಂಬಿಕೆ ಎನ್ನುವುದು ಅಮೂಲ್ಯವಾದದ್ದು ಮತ್ತು ಶಾಶ್ವತವಾದ ಸ್ವತ್ತು ಎಂದು ಹೇಳಬಹುದು. ನಾವು ಕೆಲಸ ಮಾಡುವ ವ್ಯಕ್ತಿಗಳೊಂದಿಗೆ ನಂಬಿಕೆ ಇರಿಸಿಕೊಳ್ಳುವುದು ಬಹಳ ಪ್ರಮುಖವಾದದ್ದು." ನೀವು ಉದ್ಯಮಿಯಾಗಿದ್ದರೆ ಮೊದಲು ನಿಮ್ಮ ಗ್ರಾಹಕರ ವಿಶ್ವಾಸಸವನ್ನು ಪಡೆದುಕೊಳ್ಳಿ"ಅದೇ ನಿಮ್ಮ ಯಶಸ್ಸಿಗೆ ಹತ್ತಿರವಾಗುತ್ತದೆ.

English summary

How To Get Successful In Just 7 Days!

Failure makes us come up with new strategies and methods for the hard workers. If you have failed to get the desired result in the things that you have been working hard on, and yet fail, then you need to rework on your strategies. Here are some of the easy ways and tricks that will surely get you the desired results. All that you need to do is follow these tricks and see the end result, as we bet that following this plan can fetch you positive results in just 7 days span. So, what are you waiting for? Continue reading the below-mentioned tricks on how to become successful and start getting the best result in your life...
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more