For Quick Alerts
ALLOW NOTIFICATIONS  
For Daily Alerts

  ಸೂರ್ಯ ಗ್ರಹಣ ರಾಶಿಚಕ್ರದ ಮೇಲೆ ಯಾವ ಪರಿಣಾಮ ಬೀರುವುದು ನೋಡಿ...

  By Deepu
  |

  ಭಾಗಶಃ ಸೂರ್ಯಗ್ರಹಣವು ಇಂದು ಭಾರತದೆಲ್ಲೆಡೆ ಕಾಣಿಸಿಕೊಳ್ಳುವುದು. ಖಗೋಳದಲ್ಲಿ ಗೋಚರವಾಗುವ ಈ ವಿದ್ಯಮಾನ ಪ್ರತಿಯೊಂದು ರಾಶಿಚಕ್ರದ ಮೇಲೆ ಗಮನಾರ್ಹ ಪರಿಣಾಮ ಬೀರುವುದು. ಇದರಿಂದ ಅನೇಕ ಋಣಾತ್ಮಕ ಪರಿಣಾಮವನ್ನು ಅನುಭವಿಸಬೇಕಾಗುವುದು ಎಂದು ಜ್ಯೋತಿಷ್ಯ ತಜ್ಞರು ಅಭಿಪ್ರಾಯಿಸಿದ್ದಾರೆ. ಕರ್ಕ ಮತ್ತು ಮಕರ ರಾಶಿಯ ಅಕ್ಷರೇಖೆಯ ಮೇಲೆ ಗ್ರಹಣವು ಉದ್ಭವವಾಗಿದೆ. ಇಂದು ಉಂಟಾದ ಬದಲಾವಣೆಯು 2020ರ ವರೆಗೂ ಎಲ್ಲಾ ರಾಶಿಯವರ ಮೇಲೆ ಪ್ರಭಾವ ಇರುವುದು ಎಂದು ಹೇಳಲಾಗುವುದು.

  ಸೂತಕ ಎನ್ನುವ ಭಾವನೆಯನ್ನು ನೀಡುವ ಗ್ರಹಣವು ಈ ಭಾರಿ ಭಾಗಶಃ ಎಲ್ಲಾ ಕಡೆ ಕಾಣಿಸಿಕೊಳ್ಳಲಿದೆ. ಇದರ ಪರಿಣಾಮ ಯಾವ ಬಗೆಯಲ್ಲಿ ಇರುತ್ತದೆ. ವ್ಯಕ್ತಿಯ ಜೀವನದಲ್ಲಿ ಯಾವ ಬದಲಾವಣೆ ಉಂಟಾಗುತ್ತದೆ? ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

  ಮೇಷ

  ಮೇಷ

  ಈ ಸೂರ್ಯಗ್ರಹಣವು ನಿಮ್ಮ ಕುಟುಂಬ ಜೀವನದ ಮೇಲೆ ಗಾಢ ಪರಿಣಾಮ ಬೀರುವುದು. ಈ ಕೆಟ್ಟ ಶಕ್ತಿಯು ನಿಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುವುದು. ಈ ಕುರಿತು ಸಾಕಷ್ಟು ಎಚ್ಚರಿಕೆಯನ್ನು ವಹಿಸಲೇಬೇಕು. ಮುಂಬರುವ ದಿನಗಳಲ್ಲಿ ಅರ್ಥ ಗರ್ಭಿತ ಶಕ್ತಿಯು ಹೆಚ್ಚುವುದು. ಆಂತರಿಕ ಮನಸ್ಸು ಹೇಳುವ ಸದ್ವಿಚಾರಗಳ ಬಗ್ಗೆ ಹೆಚ್ಚು ಗಮನ ನೀಡಿ. ಮುಂದಿನ ದಿನಗಳು ನಿಮ್ಮ ಯೋಗ್ಯತೆ ಹೆಚ್ಚಿಸಲು ಹಾಗೂ ಸುಧಾರಿತ ಜೀವನವನ್ನು ಹೊಂದಲು ಸಹಾಯ ಮಾಡುವುದು.

   ವೃಷಭ

  ವೃಷಭ

  ಗ್ರಹಣವು ನಿಮ್ಮ ಮೇಲೆ ಪ್ರಭಲ ಪರಿಣಾಮವನ್ನು ಬೀರುವುದು. ನೀವು ನಿರ್ವಹಿಸುವ ವ್ಯವಹಾರದ ಮೇಲೆ ಸಾಕಷ್ಟು ಗಮನ ಹರಿಸುವುದು ಸೂಕ್ತ ಎಂದು ಹೇಳಲಾಗುವುದು. ಮುಂಬರುವ ದಿನಗಳಲ್ಲಿ ನಿಮ್ಮ ಪ್ರಮುಖ ಕಾಗದ ಪತ್ರಗಳನ್ನು ಕಾಳಜಿಯಿಂದ ಇಟ್ಟುಕೊಂಡಿರಬೇಕು. ಕೆಲವು ವಿಚಾಋಗಳಿಗೆ ಸೂಕ್ತ ಒಪ್ಪಂದಗಳನ್ನು ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಜೀವನದ ಹೊಸ ಆರಂಭವನ್ನು ಕಾಣುವಿರಿ.

  ಮಿಥುನ

  ಮಿಥುನ

  ಈ ಗ್ರಹಣವು ನಿಮ್ಮ ಆರ್ಥಿಕ ವಲಯದ ಮೇಲೆ ಧನಾತ್ಮಕ ಪರಿಣಾಮ ಬೀರುವುದು ಎಂದು ಹೇಳಲಾಗುತ್ತದೆ. ಇದು ನಿಮ್ಮ ವ್ಯವಸ್ಥೆಯ ಮೇಲೆ ಭದ್ರತೆಯ ಅರ್ಥವನ್ನು ತುಂಬುತ್ತದೆ. ಮುಂಬರುವ ದಿನಗಳಲ್ಲಿ ಹೂಡಿಕೆ, ಆದಾಯ ಮತ್ತು ವಸ್ತು ಸತ್ಯಗಳ ಮೇಲೆ ಹೆಚ್ಚು ಗಮನ ಹರಿಸುವಿರಿ. ನಿಮ್ಮ ಹೆಚ್ಚಿನ ಸಮಯದಲ್ಲಿ ನೀವು ತೆರೆದ ಮನಸ್ಸಿನವರಾಗಿರಬೇಕು. ನಿಮ್ಮ ಮಾರ್ಗದಲ್ಲಿ ಬರುವ ಹೊಸ ಸಂಗತಿಗಳನ್ನು ಸ್ವೀಕರಿಸಿ.

  ಕರ್ಕ

  ಕರ್ಕ

  ನಿಮ್ಮ ರಾಶಿಚಕ್ರಕ್ಕಾಗಿ ಉತ್ತಮ ಸಮಯಗಳು ಬದಲಾಗುತ್ತಲೇ ಇರುತ್ತವೆ. ಕೆಲವು ಸಂದರ್ಭದಲ್ಲಿ ನೀವು ಶಾಂತವಾಗಿರುವುದನ್ನು ಕಲಿಯಬೇಕು. ವಿಷಯಗಳನ್ನು ಆದಷ್ಟು ಶಾಂತ ಚಿತ್ತದಿಂದ ಸ್ವೀಕರಿಸಿ. ಇತರರಿಗೆ ಕಾಳಜಿ ಹಾಗೂ ಪೋಷಣೆ ನೀಡುವ ಹಾಗೆ ನಿಮ್ಮ ಬಗ್ಗೆಯೂ ಒಂದಷ್ಟು ಕಾಳಜಿ ವಹಿಸಿ. ನೀವು ವಿಷಯುಕ್ತ ಸಂಬಂಧಗಳ ಬಗ್ಗೆ ಕಾಳಜಿ ವಹಿಸಬೇಕು.

  ಸಿಂಹ

  ಸಿಂಹ

  ಗ್ರಹಣದ ಪ್ರಭಾವದಿಂದ ಇವರು ಆಧ್ಯಾತ್ಮಕಿ ಚಿಂತನೆಗಳ ಕಡೆಗೆ ಬಾಗುತ್ತಾರೆ. ಮುಂಬರುವ ದಿನಗಳಲ್ಲಿ ನಿಮ್ಮ ಕನಸು ಬಹಳ ಶಕ್ತಿಯುತವಾಗಿ ಇರುವುದು. ನೀವು ಕಾಣುವ ಎಲ್ಲಾ ಕನಸುಗಳಿಗೆ ಹೆಚ್ಚು ಗಮನ ನೀಡಬೇಕು. ನಿಮ್ಮಿಂದ ದೂರವಿಟ್ಟ ಅಥವಾ ರಹಸ್ಯವಾದ ವಿಚಾರವು ನಿಮ್ಮ ಗಮನಕ್ಕೆ ಬರುವುದು. ನಿಮ್ಮ ಮಾರ್ಗದಲ್ಲಿ ಬರುವ ಎಲ್ಲಾ ವಿಚಾರಗಳ ಬಗ್ಗೆಯೂ ಹೆಚ್ಚಿನ ಗಮನ ನೀಡಬೇಕು.

  ಕನ್ಯಾ

  ಕನ್ಯಾ

  ಈ ರಾಶಿಯ ಮೇಲೆ ಗ್ರಹಣವು ಅನನ್ಯವಾದ ಪರಿಣಾಮವನ್ನು ಬೀರುವುದು. ಸಮಾಜದಲ್ಲಿ ಇವರ ಪಾತ್ರಕ್ಕೆ ಹೊಸ ಆರಂಭ ದೊರೆಯುವುದು. ನಿಮ್ಮ ಆಂತರಿಕ ಮಾನವೀಯತೆಯ ಗುಣವು ಹೆಚ್ಚು ಸಂಪರ್ಕಗಳನ್ನು ಕಲ್ಪಿಸಿಕೊಡುವುದು. ಮುಂದಿನ ದಿನಗಳಲ್ಲಿ ನೀವು ಮಾಡುವ ಎಲ್ಲಾ ಕೆಲಸಗಳಲ್ಲೂ ಹೆಚ್ಚಿನ ಶಕ್ತಿ ಹಾಗೂ ಪರಿಪೂರ್ಣತೆ ಇರುತ್ತದೆ. ಮಹತ್ವ ಪೂರ್ಣ ಜನರೊಂದಿಗೆ ನೀವು ಸುತ್ತುವರಿಯುವಿರಿ.

  ತುಲಾ

  ತುಲಾ

  ಈ ಗ್ರಹಣವು ನಿಮ್ಮ 10ನೇ ಮನೆಯ ಅಧಿಕಾರ, ವೃತ್ತಿಜೀವನ ಹಾಗೂ ವಿಶ್ವದ ವಿನಾಶವನ್ನು ಹಗುರಗೊಳಿಸುವುದು. ವೃತ್ತಿ ಜೀವನದಲ್ಲಿ ಹೊಸ ಪ್ರಾರಂಭವನ್ನು ಕಾಣುವಿರಿ. ನೀವು ನಂಬಿಕೆಯ ಮೇಲೆ ಅಧಿಕ ಭರವಸೆ ಇಡಬೇಕು. ನಿಮಗೆ ಕುಟುಂಬವು ಗಮನಾರ್ಹ ಪ್ರಭಾವ ಬೀರುವುದು. ನಿಮಗೆ ಉಂಟಾಗುವ ಸಮಸ್ಯೆಗಳಿಗೆ ನೀವು ತಲೆಕೆಡಿಸಿಕೊಳ್ಳುವುದು ಅಥವಾ ಭಯಕ್ಕೆ ಒಳಗಾಗುವ ಅಗತ್ಯ ಇರುವುದಿಲ್ಲ ಎಂದು ಹೆಳಲಾಗುವುದು.

  ವೃಶ್ಚಿಕ

  ವೃಶ್ಚಿಕ

  ಈ ಗ್ರಹಣವು ಇವರ ವಿಸ್ತೀರ್ಣತೆಯನ್ನು ಬೆಳಗಿಸುವುದು. ಮುಂದಿನ ದಿನಗಳಲ್ಲಿ ಪ್ರವಾಸ ಕೈಗೊಳ್ಳುವುದು ಅಥವಾ ಹೊಸ ಕಲಿಕೆಯನ್ನು ಆರಂಭಿಸುವ ಸಾಧ್ಯತೆಗಳಿವೆ. ಸೂಕ್ತ ನಿರ್ಧಾರ ಕೈಗೊಳ್ಳುವಾಗ ಅಧಿಕ ಚಿಂತನೆ ಅಥವಾ ಪರಿಶೋಧನೆಗೆ ಒಳಗಾಗುವ ಅಗತ್ಯವಿಲ್ಲ ಎಂದು ಹೇಳಲಾಗುತ್ತದೆ. ಹಾಗೆಯೇ ಕೆಲವು ತೊಂದರೆಗಳು ಸಹ ಎದುರಾಗುವ ಸಾಧ್ಯತೆಗಳಿವೆ.

  ಧನು

  ಧನು

  ಈ ಬಾರಿಯ ಗ್ರಹಣದ ಪ್ರಭಾವ ನಿಮಗೆ ಇತ್ತೀಚೆಗೆ ಸಂಭವಿಸಿದ ಅತ್ಯುತ್ತಮ ಸಂಗತಿ ಎಂದು ಹೇಳಬಹುದು. ನಿಮ್ಮ ಸಮಸ್ಯೆಗಳು ಕಳೆಯಲು ಹಾಗೂ ವಿಕಾಸದ ಪ್ರಕ್ರಿಯೆಯನ್ನು ಹೊಂದಲು ಇದು ಸಹಾಯ ಮಾಡುವುದು. ಮುಂದಿನ ದಿನಗಳಲ್ಲಿ ನಿಮಗೆ ಅತ್ಯುತ್ತಮ ಪ್ರಗತಿಯಿದೆ.

  ಮಕರ

  ಮಕರ

  ಈ ಗ್ರಹಣವು ನಿಮ್ಮ 7ನೇ ಮನೆಯ ಪಾಲುದಾರಿಕೆಯಲ್ಲಿ ಕೆಲಸ ಮಾಡುವಂತೆ ತೋರುತ್ತದೆ. ಈ ಬದಲಾವಣೆಯು ಹೊಸ ಪ್ರೀತಿಯಲ್ಲಿ ಆಸಕ್ತಿ ತೋರುವಂತೆ ಮಾಡುವುದು. ಒಂದಿಷ್ಟು ಬದಲಾವಣೆಗಳು ನಿಮ್ಮ ದಿಗಂತದ ಅಂಚಿನಲ್ಲಿದೆ ಎಂದು ಹೇಳಲಾಗುವುದು. ಹಾಗಾಗಿ ನೀವು ಉಂಟಾಗುವ ಬದಲಾವಣೆಗೆ ಸಿದ್ಧವಾಗಿರಬೇಕು.

  ಕುಂಭ

  ಕುಂಭ

  ಈ ಸೂರ್ಯ ಗ್ರಹಣವು ನಿಮ್ಮ ದಿನನಿತ್ಯದ ಕೆಲಸ ಹಾಗೂ ಆರೋಗ್ಯದ ಮೇಲೆ ಹೊಸ ಆರಂಭವನ್ನು ತರುವುದು. ಈ ಶಕ್ತಿಯು ನಿಮ್ಮ 6ನೇ ಮನೆ ಮತ್ತು ದೈನಂದಿನ ಜೀವನವನ್ನು ಬೆಳಗಿಸುತ್ತದೆ. ಮುಂಬರುವ ದಿನಗಳಲ್ಲಿ ನೀವು ಸಂಪೂರ್ಣ ಹೊಸ ವಿಧಾನವನ್ನು ಮತ್ತು ಉತ್ತಮ ಜೀವನವನ್ನು ನೋಡುತ್ತೀರಿ.

  ಮೀನ

  ಮೀನ

  ಈ ಗ್ರಹಣವು ಇವರ 5ನೇ ಮನೆಯ ಸೃಜನಶೀಲತೆ ಹಾಗೂ ಭಾವೋದ್ರೇಕದ ಮೇಲೆ ಪರಿಣಾಮ ಬೀರುವುದು. ನಿಮ್ಮ ಕಲೆಯಲ್ಲಿ ನೀವು ಮಾಂತ್ರಿಕ ಶಕ್ತಿ ಹೊಂದಿರುವುದನ್ನು ಮರೆಯುವಂತಿಲ್ಲ. ಮುಂದಿನ ದಿನದಲ್ಲಿ ನೀವು ನಿಮ್ಮ ಜೀವನದ ಹೊಸ ಬಣ್ಣವನ್ನು ಕಂಡುಕೊಳ್ಳುವಿರಿ. ಜೀವನವು ಸುಂದರಗೊಳ್ಳುವುದು. ನಿಮ್ಮ ನಿರೀಕ್ಷೆಯಂತೆ ಅಗತ್ಯವಾದ ಶಕ್ತಿಯು ಹೆಚ್ಚುವುದು.

  English summary

  how--partial-solar-eclipse-brings-in-change-for-your-zodiac-sign

  The zodiac experts reveal that the July 13th partial solar eclipse will an impact on all the zodiac signs for the coming days as the partial solar eclipse will be illuminating the Cancer-Capricorn axis. According to astrology, the illuminating of the Cancer-Capricorn axis occurrence happens with the powerful lunations. This will impact all the zodiac signs starting from today until 2020.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more