For Quick Alerts
ALLOW NOTIFICATIONS  
For Daily Alerts

  ಯಾರಾದರೂ ಮಾಟ-ಮಂತ್ರ ಮಾಡಿದ್ದಾರೆಯೇ? ಅದನ್ನು ತೆಗೆದು ಹಾಕುವುದು ಹೇಗೆ ಗೊತ್ತೇ?

  |

  ಕೈಯಲ್ಲಿ ಆಗದವರು ಮೈಯೆಲ್ಲಾ ಪರಚಿಕೊಂಡರು ಎನ್ನುವ ಮಾತಂತೆ ಕೆಲವರು ತಮ್ಮ ನಿರೀಕ್ಷೆಯಂತೆ ಕೆಲಸ ಆಗದಿದ್ದರೆ ಅಥವಾ ಬಯಸಿದ ವ್ಯಕ್ತಿ ಅವರ ಕೈಗೆ ಸಿಗದಿದ್ದಾಗ ಅತ್ಯಂತ ವಿಕೃತ ಮನೋಭಾವಕ್ಕೆ ಒಳಗಾಗುತ್ತಾರೆ. ತಾವು ಬಯಸಿದ ವಸ್ತು ಸಿಗದೆ ಇದ್ದಾಗ ಅದನ್ನು ಹಾಳುಮಾಡುವ ಬುದ್ಧಿ ಬರುತ್ತದೆ. ಇಲ್ಲವೇ ತನ್ನ ಆಸೆ ನಿರಾಸೆಗೊಳಿಸಿದ ವ್ಯಕ್ತಿಗೆ ತೊಂದರೆ ಕೊಡಬೇಕೆಂಬ ಮನಸ್ಸು ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ಇವರು ಮಾಟ-ಮಂತ್ರಗಳ ಮೊರೆ ಹೋಗುತ್ತಾರೆ. ಇದರ ಪರಿಣಾಮವಾಗಿ ಒಂದಿಷ್ಟು ಸಮಸ್ಯೆಗಳನ್ನು ಇತರರು ಅನುಭವಿಸಬೇಕಾಗುವುದು.

  ಇನ್ನೂ ಕೆಲವೊಮ್ಮೆ ಯಾರಿಗೋ ಮಾಡಿರುವ ಮಾಟ-ಮಂತ್ರ ಅಥವಾ ಬ್ಲಾಕ್ ಮ್ಯಾಜಿಕ್ ಎನ್ನುವುದು ನಮಗೆ ಅಂಟಿಕೊಳ್ಳಬಹುದು. ಇದಕ್ಕೆ ಹೊಣೆಯಾರು ಎನ್ನುವುದಕ್ಕೆ ಉತ್ತರ ಇರುವುದಿಲ್ಲ. ಬರೇ ಕಷ್ಟಗಳನ್ನು ಹಾಗೂ ಸಮಸ್ಯೆಗಳನ್ನು ಅನುಭವಿಸುತ್ತಿರ ಬೇಕಾಗುವುದು. ಯಾವುದೋ ಜನ್ಮದಲ್ಲಿ ಮಾಡಿದ ತಪ್ಪಿಗೆ ಈಗ ಶಿಕ್ಷೆ ಅನುಭವಿಸುತ್ತಿದ್ದೇವೆ ಎನ್ನುವ ಭಾವನೆಯೂ ಒಮ್ಮೊಮ್ಮೆ ಕಾಡುವುದು.

  ಬಯಸದೆ ಬರುವ ಇಂತಹ ಸಮಸ್ಯೆಗಳನ್ನು ತೊಡೆದು ಹಾಕುವುದು ಹೇಗೆ? ಸಮಸ್ಯೆಗಳನ್ನು ಎದುರಿಸುತ್ತಿರುವ ಮನಸ್ಸಿಗೆ ಯಾವ ರೀತಿಯ ಸಾಂತ್ವನ ನೀಡಬೇಕು? ಮಾಟ-ಮಂತ್ರಗಳಿಂದ ದೂರ ಇರುವುದು ಹೇಗೆ? ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ? ಎನ್ನುವುದನ್ನು ಬೋಲ್ಡ್ ಸ್ಕೈ ಈ ಮುಮದೆ ವಿವರಣೆ ನೀಡಿದೆ...

  ಹೇಗೆ ತಿಳಿಯುವಿರಿ?

  ಹೇಗೆ ತಿಳಿಯುವಿರಿ?

  ನೀವು ಮಾಟ-ಮಂತ್ರಗಳಿಗೆ ಒಳಗಾಗಿದ್ದೀರಿ ಅಥವಾ ಋಣಾತ್ಮಕ ಶಕ್ತಿಯಿಂದ ಬಳಲುತ್ತಿದ್ದೀರಿ ಎಂದು ನೀವು ಹೇಗೆ ತಿಳಿಯುವಿರಿ? ಯಾರೋ ನಿಮ್ಮನ್ನು ಪ್ರೀತಿಸುವುದಾಗಿ ಕೇಳಿಕೊಂಡಾಗ ನಿರಾಕರಣೆ ಮಾಡಿರುವುದು ಅಥವಾ ಯಾವುದೋ ಕುಟುಂಬದ ವೈಶಮ್ಯದಿಂದ ಹೀಗೆ ಅನೇಕ ಕಾರಣಗಳಿಂದ ಒಳಗಾಗಿರಬಹುದು ಎನ್ನುವ ಸಂಶಯ ನಿಮ್ಮನ್ನು ಕಾಡಬಹುದು. ಪದೇ ಪದೇ ಎದುರಿಸುವ ಕಷ್ಟಗಳು, ಕೆಟ್ಟ ಅದೃಷ್ಟಗಳು, ಅನಾರೋಗ್ಯ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳು ಕಾಡುತ್ತಲೇ ಇದ್ದರೆ ನೀವು ಸಮಸ್ಯೆಗೆ ಒಳಗಾಗಿದ್ದೀರಿ ಎಂದು ಹೇಳಬಹುದು.

  ನಿಮ್ಮ ಅದೃಷ್ಟ ಕೆಟ್ಟದಾಗಿದೆಯೇ ನೋಡಿ...

  ನಿಮ್ಮ ಅದೃಷ್ಟ ಕೆಟ್ಟದಾಗಿದೆಯೇ ನೋಡಿ...

  ನೀವು ಕಡು ಕಷ್ಟಕ್ಕೆ ಅಥವಾ ನತದೃಷ್ಟವನ್ನು ಹೊಂದಿದ್ದರೆ ಯಾವುದೋ ಋಣಾತ್ಮಕ ಶಕ್ತಿ ನಿಮ್ಮನ್ನು ಬಾಧಿಸುತ್ತಿದೆ ಎಂದು ತಿಳಿಯಬಹುದು. ನಿಮಗೆ ಉಂಟಾಗುತ್ತಿರುವ ಕಷ್ಟ ಹಾಗೂ ತೊಂದರೆಗಳು ನೀಲಿ ಬಣ್ಣದಿಂದ ಉಂಟಾಗುತ್ತಿದ್ದರೆ ನೀವು ಶಾಪದಿಂದ ಹೊರಬರುವ ಪ್ರಯತ್ನ ಮಾಡಬೇಕಾಗುತ್ತದೆ. ಅಂತಹ ಶಾಪಗಳಿಗೆ ಒಳಗಾಗಿದ್ದೀರಿ ಎಂದಾದರೆ ಈ ರೀತಿಯ ಸಮಸ್ಯೆಗಳು ಉಂಟಾಗಬಹುದು...

  -ಸಾಮಾನ್ಯ ಶೀತ ಜ್ವರವಾಗಿದ್ದರೂ ಅತಿಯಾದ ಅನಾರೋಗ್ಯದಿಂದ ಬಳಲುವಿರಿ.

  - ಪರೀಕ್ಷೆಗಾಗಿ ಸಾಕಷ್ಟು ಪರಿಶ್ರಮದಿಂದ ಓದಿದ್ದರೂ ಉತ್ತಮ ಅಂಕ ಗಳಿಸಲು ಕಷ್ಟವಾಗುವುದು ಅಥವಾ ವಿಫಲರಾಗುವುದು.

  - ಮುಖದಲ್ಲಿ ಯಾವುದೇ ಮೊಡವೆ ಅಥವಾ ಕಲೆ ಹೊಂದಿದವರಲ್ಲದಿದ್ದರೂ ಪ್ರಾಣ ಸಂಗಾತಿಯೊಡನೆ ಏಕಾಂಗಿಯಾಗಿ ಸಮಯ ಕಳೆಯಲು ಹೋಗುವಾಗ ದೊಡ್ಡ ಮೊಡವೆಗಳು ಮತ್ತು ಕಲೆಗಳು ಕಾಣಿಸಿಕೊಳ್ಳುತ್ತವೆ.

  - ಕ್ರೀಡಾಪಟು ಆಯ್ಕೆಗೆ ಸೂಕ್ತ ಕಸರತ್ತು ಅಥವಾ ಅಭ್ಯಾಸ ಮಾಡಿದ್ದರೂ ಆಯ್ಕೆಯ ವೇಳೆಯಲ್ಲಿ ವಿಫಲತೆ ಹೊಂದಬಹುದು.

  -ಕುಟುಂಬದಲ್ಲಿ ಎಲ್ಲರೂ ಒಳ್ಳೆಯ ಭಾವನೆಗಳನ್ನು ಹೊಂದಿದ್ದರೂ ಅತಿಯಾದ ಕಲಹ ಅಥವಾ ದೂರ ಹೋಗುವ ಪರಿಸ್ಥಿತಿ ಒದಗಿ ಬರುವುದು.

   ಕೆಟ್ಟ ಸಮಯವು ಎಂದಿಗೂ ಶಾಪವಲ್ಲ ಎಂದು ತಿಳಿಯಿರಿ...

  ಕೆಟ್ಟ ಸಮಯವು ಎಂದಿಗೂ ಶಾಪವಲ್ಲ ಎಂದು ತಿಳಿಯಿರಿ...

  ಕೆಟ್ಟ ಸಂಗತಿಗಳು ಅಥವಾ ಅನುಭವಗಳು ನಿಮ್ಮೊಂದಿಗೆ ಅದೆಷ್ಟೇ ನಡೆದಿರಲಿ ಅದ್ಯಾವುದೂ ಶಾಪ ಎಂದು ಪರಿಗಣಿಸದಿರಿ. ಬದಲಿಗೆ ಅದೊಂದು ಜೀವನಕ್ಕೆ ಸಿಕ್ಕ ಪಾಠ ಎಂದು ತಿಳಿಯಿರಿ. ನಿಮ್ಮ ಶತ್ರುಗಳು ನಿಮಗೆ ಕೆಡಕನ್ನುಂಟುಮಾಡಬಹುದು ಎಂಬುದನ್ನು ನೀವು ತಿಳಿಯಬಹುದು. ನಿಮ್ಮ ಅದೃಷ್ಟ ಒಳ್ಳೆಯದಾಗಿರುವಾಗ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಹಾಗೊಮ್ಮೆ ನಿಮ್ಮ ಯೋಜನೆಗಳು ಪದೇ ಪದೇ ವಿಫಲತೆಯನ್ನು ಕಾಣುತ್ತಿದ್ದರೆ ಅದಕ್ಕೆ ಸೂಕ್ತವಾದ ಪ್ರಯತ್ನ ಇನ್ನೂ ಮಾಡಬೇಕಿದೆ ಎನ್ನುವುದನ್ನು ನೀವು ಅರಿಯ ಬೇಕು. ಸಮಸ್ಯೆ ಇದೆ ಎಂದು ಚಿಂತಿಸುತ್ತಿದ್ದರೆ ನಮಗೆ ಎಲ್ಲವೂ ಸಮಸ್ಯೆಯಾಗಿಯೇ ಕಾಣುವುದು. ನೀವು ಧನಾತ್ಮಕ ಚಿಂತನೆಯಿಂದ ಎಲ್ಲವನ್ನು ಕಂಡರೆ ಯಾವುದೂ ಸಮಸ್ಯೆಯಾಗಿ ಕಾಣದು.

  ಆತ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

  ಆತ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

  ನೀವು ನಿಮ್ಮ ಆತ್ಮ ಶಕ್ತಿಯನ್ನು ಅಥವಾ ಆಂತರಿಕ ಮನಸ್ಸನ್ನು ಹೆಚ್ಚು ಸ್ಪಷ್ಟ ಹಾಗೂ ಉತ್ತಮ ಚಿಂತನೆಯಿಂದ ಕೂಡಿರುವಂತೆ ಮಾಡಬೇಕು. ನಮ್ಮಲ್ಲಿ ದುರ್ಬಲತೆ ಇದ್ದಾಗ ಸಮಸ್ಯೆಗಳು ಹಾಗೂ ವೈಫಲ್ಯತೆಗಳು ಬೇಡವೆಂದರೂ ನಮಗೆ ಅಂಟಿಕೊಳ್ಳುವುದು. ಉತ್ತಮ ಆತ್ಮಶಕ್ತಿಯನ್ನು ಹೊಂದಿದ್ದರೆ ಯಾರು ಏನು ಮಾಡಲೂ ಸಾಧ್ಯವಿರುವುದಿಲ್ಲ. ಆತ್ಮಸ್ಥೈರ್ಯ ಚೆನ್ನಾಗಿದ್ದರೆ ಧನಾತ್ಮಕ ಶಕ್ತಿಯು ಸದಾ ನಮ್ಮ ಸುತ್ತಲು ಸುತ್ತುವರಿದಿರುವುದು. ಉತ್ತಮ ಮನಃಶಕ್ತಿಯನ್ನು ಹೊಂದಿದ್ದರೆ ಅದೇ ನಮ್ಮ ಜೀವನಕ್ಕೆ ಅತ್ಯುತ್ತಮ ಆಭರಣ. ಯಾವುದೋ ವಸ್ತುವಿನಿಂದ ನಿಮಗೆ ಅಲರ್ಜಿ ಉಂಟಾಗಿದ್ದರೆ ಅದು ಶಾಪ ಎಂದು ಪರಿಗಣಿಸದಿರಿ. ಅದರಿಂದ ದೂರ ಇರುವುದನ್ನು ಕಲಿಯಬೇಕು.

  ಉಪ್ಪು ಮತ್ತು ಗಿಡಮೂಲಿಕೆಯ ಸ್ನಾನ ಮಾಡಿ...

  ಉಪ್ಪು ಮತ್ತು ಗಿಡಮೂಲಿಕೆಯ ಸ್ನಾನ ಮಾಡಿ...

  ಧಾರ್ಮಿಕ ಅಥವಾ ಧನಾತ್ಮಕ ಶಕ್ತಿಯನ್ನು ನೀಡುವ ಸ್ನಾನವು ಕೆಟ್ಟ ಶಕ್ತಿಗಳನ್ನು ದೂರವಿಡುತ್ತದೆ. ಅವುಗಳಿಂದ ಯಾವುದೇ ಹಾನಿಗೆ ಒಳಗಾಗದಂತೆ ಇರಬಹುದು. ನೀವು ಯಾವದೋ ಶಾಪಕ್ಕೆ ಒಳಗಾಗಿದ್ದೀರಿ ಎಂದು ಭಾವಿಸಿದರೆ ಮೇಣದ ಬತ್ತಿಯನ್ನು ಬೆಳಗಿಸಿ ಅದರ ಶಾಖದಲ್ಲಿ ಸ್ನಾನ ಮಾಡಿ. ಉಪ್ಪು ಮತ್ತು ಗಿಡಮೂಲಿಕೆ ನೀರಿನಲ್ಲಿ ಸ್ವಲ್ಪ ಸಮಯ ಕಳೆಯುವುದರ ಮೂಲಕ ಸ್ನಾನ ಮಾಡಿ. ಸ್ನಾನದ ನೀರಿಗೆ ಚಿಟಿಕೆ ಉಪ್ಪು, ಹೈಸೊಪ್, ತುಳಸಿ, ಮರಗ, ದವನ, ದಪ್ಪೆಲೆ, ವೆಟಿವರ್, ವಾರ್ಮ್ ವುಡ್ ಗಳಂತಹ ಗಿಡಮೂಲಿಕೆಗಳ ಎಲೆಗಳನ್ನು ಅಥವಾ ರಸವನ್ನು ಸಿಂಪಡಿಸಿ ಸ್ನಾನ ಮಾಡಿ. ಉತ್ತಮ ಧನಾತ್ಮಕ ಚಿಂತನೆಗಳನ್ನು ಕೈಗೊಳ್ಳಬೇಕು.

  ದೂಪವನ್ನು ಬೆಳಗಿ...

  ದೂಪವನ್ನು ಬೆಳಗಿ...

  ಉತ್ತಮ ಔಷಧೀಯ ಗಿಡಮೂಲಿಕೆಗಳಿಂದ ತಯಾರಿಸುವ ದೂಪಗಳನ್ನು ನಿತ್ಯವೂ ಬೆಳಗಬೇಕು. ಮುಂಜಾನೆ, ಸಂಜೆಯ ಸಮಯದಲ್ಲಿ ಮನೆಯಲ್ಲಿ ದೂಪ ಬೆಳಗುವುದರ ಮೂಲಕ ದುಷ್ಟ ಶಕ್ತಿಯನ್ನು ಓಡಿಸಬಹುದು. ಇದರಿಂದ ಧನಾತ್ಮಕ ಶಕ್ತಿಯು ನಿಮ್ಮ ಮನೆ ಹಾಗೂ ಮನಸ್ಸಿನ ಸುತ್ತ ಹೆಚ್ಚಾಗುವುದು. ಇವುಗಳಿಮದ ನಿಮಗೆ ಅಂಟಿರುವ ಶಾಪವನ್ನು ತೆಗೆಯಬಹುದು. ಧಾರ್ಮಿಕ ಶಕ್ತಿಯನ್ನು ಹೆಚ್ಚಿಸುವ ಗಿಡಮೂಲಿಕೆಯನ್ನು ಸಣ್ಣ ಚೀಲದಲ್ಲಿ ತುಂಬಿ ನಿಮ್ಮ ಸೊಂಟಕ್ಕೆ ಕಟ್ಟಿಕೊಳ್ಳಬಹುದು. ಹೀಗೆ ಮಾಡುವುದರಿಂದಲೂ ದುಷ್ಟ ಶಕ್ತಿಯಿಂದ ನೀವು ದೂರಾಗಬಹುದು.

  ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ...

  ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ...

  ಕೆಟ್ಟ ಶಕ್ತಿಯ ಶಾಪಕ್ಕೆ ಒಳಗಾಗಿದ್ದೀರಿ ಎನ್ನುವುದನ್ನು ಭಾವ ನಿಮ್ಮದಾಗಿದ್ದರೆ ಅದರಿಂದ ಮೊದಲು ಹೊರಬರಬೇಕು. ಅದಕ್ಕಾಗಿ ಒಂದಿಷ್ಟು ಧಾರ್ಮಿಕ ಪುಸ್ತಕಗಳು ಹಾಗೂ ಉತ್ತಮ ಚಿಂತನೆಗಳನ್ನು ಒಳಗೊಂಡಿರುವ ಪುಸ್ತಕವನ್ನು ಓದಿ. ಸ್ನೇಹಿತರೊಂದಿಗೆ ಅಥವಾ ನಿಮ್ಮ ಆತ್ಮೀಯರೊಂದಿಗೆ ಒಂದಿಷ್ಟು ತಮಾಷೆಯ ಮಾತುಗಳು ಹಾಗೂ ನಗುವಿನಿಂದ ನಿಮ್ಮ ಸಮಯವನ್ನು ಕಳೆಯಲು ಪ್ರಯತ್ನಿಸಿ. ಈ ಪ್ರಯತ್ನಗಳಿಂದ ನೀವು ದುಷ್ಟ ಚಿಂತನೆಗಳು ಹಾಗೂ ಶಕ್ತಿಯಿಂದ ಬಹುದೂರ ಸಾಗಬಹುದು. ಅಲ್ಲದೆ ಆತ್ಮಸ್ಥೈರ್ಯವು ಹೆಚ್ಚುವುದು. ಜೀವನದಲ್ಲಿ ಸಮಸ್ಯೆಗಳು ಕರಗುವುದು.

  ಕೆಟ್ಟದ್ದನ್ನು ಒಳ್ಳೆಯದನ್ನಾಗಿ ಪರಿವರ್ತಿಸಿ...

  ಕೆಟ್ಟದ್ದನ್ನು ಒಳ್ಳೆಯದನ್ನಾಗಿ ಪರಿವರ್ತಿಸಿ...

  ಸಮಸ್ಯೆ ಹಾಗೂ ಕಷ್ಟಗಳು ಎಲ್ಲರನ್ನೂ ಕಂಗೆಡಿಸುತ್ತದೆ. ಕಷ್ಟಗಳು ಎದುರಾದಾಗ ಮನಸ್ಸು ಸಾಮಾನ್ಯವಾಗಿ ದುರ್ಬಲವಾಗುತ್ತದೆ. ಅಂತಹ ಸಮಯದಲ್ಲಿ ಅನೇಕ ತಪ್ಪುಗಳು ನಮ್ಮಿಂದ ಸಂಭವಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇದರಿಂದಾಗಿ ಇನ್ನಷ್ಟು ಕಷ್ಟ ಮತ್ತು ನೋವುಗಳು ತಲೆದೂರುತ್ತವೆ. ಹಾಗಾಗಿ ಎಂದತ ಕಷ್ಟಗಳು ಎದುರಾದರೂ ಅದನ್ನು ಸೂಕ್ತ ರೀತಿಯಲ್ಲಿ ಎದುರಿಸಿ. ಸಮಸ್ಯೆಗಳು ಎದುರಾದಾಗ ದೃತಿ ಗೆಡದೆ ಮುನ್ನಡೆದಾಗ ಸಕಾರಾತ್ಮಕ ಶಕ್ತಿಯು ನಮ್ಮ ಕೈಹಿಡಿಯುವುದು. ಸಮಸ್ಯೆಗಳು ನಿಧಾನವಾಗಿ ಜಾರಿ ನಮ್ಮ ಬದುಕಿನ ದಾರಿಯು ಸುಗಮವಾಗುವುದು. ಕತ್ತಲೆಯಿಂದ ಬೆಳಕಿನೆಡೆಗೆ ಬಂದಾಗ ಬದುಕು ಬೆಳಗುವುದು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಕತ್ತಲೆಯಲ್ಲಿ ನಾವಿದ್ದರೂ ಬೆಳಕಿನ ಹುಡುಕಾಟ ನಿರಂತರವಾಗಿ ಆಗಬೇಕು. ಆಗ ಬೆಳಕು ದೊರೆಯುವುದು.

  ಧಾರ್ಮಿಕ ಚಿಂತನೆಯನ್ನು ನಡೆಸಿ...

  ಧಾರ್ಮಿಕ ಚಿಂತನೆಯನ್ನು ನಡೆಸಿ...

  ಧಾರ್ಮಿಕ ಚಿಂತನೆಯಲ್ಲಿ ವ್ಯಕ್ತಿಯನ್ನು ತಿದ್ದುವ ಶಕ್ತಿಯಿರುತ್ತದೆ. ಆಧ್ಯಾತ್ಮಿ ರೀತಿಯಲ್ಲಿ ನಮ್ಮ ಜೀವನ ಶೈಲಿಯನ್ನು ರೂಪಿಸಿಕೊಂಡರೆ ಯಾವುದೇ ತೊಂದರೆಗಳು ಉಂಟಾಗದು. ವ್ಯಕ್ತಿಯನ್ನು ಕೆಟ್ಟ ವಿಚಾರದಲ್ಲಿ ತೊಡಗಿಕೊಳ್ಳದಂತೆ ನಿಯಂತ್ರಣಕ್ಕೆ ತರುವುದು. ಉತ್ತಮ ರೀತಿನೀತಿಗಳೊಂದಿಗೆ ಜೀವನ ನಡೆಸಲು ಸಲಹೆ ನೀಡುವುದು. ಜೊತೆಗೆ ಕೂಡಿ ಬಾಳುವ ಪ್ರೀತಿ ವಿಶ್ವಾಸದ ಮನೋಭಾವವನ್ನು ಬೆಳೆಸುವುದು. ಹೆಚ್ಚೆಚ್ಚು ಧಾರ್ಮಿಕ ಚಿಂತನೆಗಳನ್ನು ನಡೆಸುವುದರಿಂದ ಕೆಟ್ಟ ಶಕ್ತಿಗಳಿಂದ ಮುಕ್ತಿ ದೊರೆಯುವುದು. ಧ್ಯಾನ, ಯೋಗ ಸೇರಿದಂತೆ ಇನ್ನಿತರ ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಕೊಂಡರೆ ಜೀವನವು ಸಂತೋಷದಿಂದ ಸಾಗುವುದು.

  English summary

  How to get rid of black magic

  Do you feel like you’ve been cursed or hexed by someone playing with black magic? If so, don’t worry. There are some simple techniques you can use to break the spell.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more