For Quick Alerts
ALLOW NOTIFICATIONS  
For Daily Alerts

  ಜ್ಯೋತಿಷ್ಯದಷ್ಟೇ ಪುರಾತನದ ವಿದ್ಯೆ 'ಸಂಖ್ಯಾಶಾಸ್ತ್ರ'ದ ಒಳಗುಟ್ಟು...

  By Deepu
  |

  ಸಂಖ್ಯಾಶಾಸ್ತ್ರವು ಜ್ಯೋತಿಷ್ಯದಷ್ಟೇ ಪುರಾಣವಾಗಿರುವಂತದ್ದಾಗಿದೆ. ಸಂಖ್ಯಾಶಾಸ್ತ್ರ ವಿಶ್ವದೆಲ್ಲೆಡೆಯಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ. ಇದು ಮನುಷ್ಯನ ನಡವಳಿಕೆ ತಿಳಿಯುವ ಒಂದು ರೀತಿಯ ವಿಜ್ಞಾನವಾಗಿದೆ. ಅತೀಂದ್ರಿಯ ಸಂಖ್ಯೆಗಳನ್ನು ಲೆಕ್ಕ ಹಾಕುವ ಮೂಲಕ ಸಂಖ್ಯಾಶಾಸ್ತ್ರ ಹೇಳಲಾಗುತ್ತದೆ. ಅತೀಂದ್ರಿಯ ಸಂಖ್ಯೆಗಳೂ ನಿಮ್ಮ ನಡವಳಿಕೆ ಮತ್ತು ವ್ಯಕ್ತಿತ್ವದ ಬಗ್ಗೆ ಹೇಳುವುದು. ಇನ್ನೊಂದು ಜೀವನದ ಹಾದಿಯ ಸಂಖ್ಯೆಯು ನಿಮ್ಮನ್ನು ಗುರಿಯತ್ತ ಸಾಗಿಸುವುದು.

  ಈ ಲೇಖನದಲ್ಲಿ ಸಂಖ್ಯಾಶಾಸ್ತ್ರವು ನಿಮ್ಮ ಜೀವನ ಮತ್ತು ವೈವಾಹಿಕ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂದು ತಿಳಿಯಬಹುದು. ಇದನ್ನು ಹುಟ್ಟುಹಬ್ಬದ ದಿನಾಂಕದಿಂದ ತಿಳಿಯಬಹುದು. ಉದಾಹರಣೆಗೆ ನಿಮ್ಮ ಜನ್ಮದಿನವು ಜನವರಿ 1, 1991 ಆಗಿದ್ದರೆ ಆಗ 1+1+1+9+9+1=22. ಇದನ್ನು ಏಕ ಅಂಕೆಯಾಗಿ ಪರಿವರ್ತಿಸಲು 2+2=4 ಮಾಡಬೇಕು.

  1 ಅಂಕೆ

  ಈ ಅಂಕೆಯ ಜನರು ಪ್ರೀತಿಯ ಜೀವನದಲ್ಲಿ ಮುಂದಿರುವರು ಮತ್ತು ಇವರು ವೈಭವದ ಪ್ರೇಮಿಗಳಾಗಿರುವರು. ಇವರಿಗೆ ತುಂಬಾ ಆಕ್ರಮಣಕಾರಿ ಲೈಂಗಿಕತೆ ಇಷ್ಟ ಮತ್ತು ಇವರು ಸ್ವಭಾವದಲ್ಲಿ ತುಂಬಾ ಹಿಡಿತ ಸಾಧಿಸುವವರಾಗಿರುವರು. ಇನ್ನುಈ ಜನ್ಮ ದಿನಾಂಕದಂದು ಜನಿಸಿದವರು ನಾಯಕತ್ವ ಗುಣಗಳನ್ನು ಹೊಂದಿದ್ದಾರೆ. ಇವರದು ಹೆಚ್ಚು ಕ್ರಿಯಾತ್ಮಕ ಮನಸ್ಸಾಗಿದ್ದು ಯಾವುದೇ ಕೆಲಸಗಳನ್ನು ಚಟುವಟಿಕೆಯಿಂದ ನಡೆಸುವವರಾಗಿದ್ದಾರೆ. ತಮ್ಮತನದಲ್ಲಿ ಇವರು ನಂಬಿಕೆಯನ್ನು ಇರಿಸಿಕೊಂಡಿದ್ದು ಸ್ವತಂತ್ರರಾಗಿರುತ್ತಾರೆ

  number 7

  2 ಅಂಕೆ

  ಸಂಬಂಧವು ಸುಗಮವಾಗಿ ಸಾಗುವಂತಾಗಲು ಈ ವ್ಯಕ್ತಿಗಳು ಯಾವುದೇ ಹಂತಕ್ಕೂ ಹೋಗಲು ತಯಾರಾಗಿರುವರು. ಇವರು ಯಾವುದೇ ಸಮಯದಲ್ಲೂ ತಮ್ಮ ಸಂಗಾತಿಗೆ ಭಾವನಾತ್ಮಕ ರಕ್ಷಣೆ ನೀಡುವರು. ಇನ್ನು ಈ ದಿನಾಂಕದಂದು ಜನಿಸಿದವರು ತಮ್ಮ ಜೀವನದಲ್ಲಿ ನಡೆಯುವ ಏರು ತಗ್ಗುಗಳನ್ನು ಸಮಾನವಾಗಿ ನಿಭಾಯಿಸುವ ಗುಣವನ್ನು ಹೊಂದಿದವರಾಗಿದ್ದಾರೆ. ಇತರರ ಸಮಸ್ಯೆಗಳನ್ನು ಅರಿಯುವ ಹೃದಯ ವೈಶಾಲ್ಯ ಇವರಿಗಿರುತ್ತದೆ. ಇತರರೊಂದಿಗೆ ಇವರು ಕೆಲಸವನ್ನು ಮಾಡಿದರೂ ಆತ್ಮಸ್ಥೈರ್ಯ ಇವರ ಕೀಲಿಕೈಯಾಗಿದೆ. ಪ್ರೀತಿ ಮತ್ತು ಪಾಲುದಾರತ್ವ ಇವರಿಗೆ ಹೆಚ್ಚು ಮುಖ್ಯವಾಗಿರುತ್ತದೆ.

  ಸಂಖ್ಯಾ ಶಾಸ್ತ್ರ: ಹುಟ್ಟಿದ ದಿನಾಂಕ ಹೇಳಿ ಅದೃಷ್ಟದ ವರ್ಷ ತಿಳಿಯಿರಿ!

  3 ಅಂಕೆ

  ಇವರು ತುಂಬಾ ತಮಾಷೆ, ಉಲ್ಲಾಸದ ಮತ್ತು ಲೈಂಗಿಕತೆಯಲ್ಲಿ ಪ್ರಯೋಗ ಮಾಡಲು ಬಯಸುವರು. ವೈಯಕ್ತಿಕವಾಗಿ ಇವರು ತುಂಬಾ ಅಸ್ವಾಭಾವಿಕ ಮತ್ತು ಸೃಜನಶೀಲರಾಗಿರುವರು. ಇವರಿಗೆ ಲೈಂಗಿಕತೆ ಎನ್ನುವುದು ಸಂತೋಷ ಹಾಗೂ ಮನರಂಜನೆಯ ಮೂಲ. ಈ ದಿನಾಂಕದಂದು ಜನಿಸಿದವರು ಹಾಸ್ಯ ಪ್ರವೃತ್ತಿಯವರಾಗಿರುತ್ತಾರೆ. ಇತರರೊಂದಿಗೆ ಸಂವಹಿಸುವ ಗುಣ ಇವರಿಗಿದೆ. ಇವರಲ್ಲಿ ಹೆಚ್ಚು ಕ್ರಿಯಾತ್ಮಕ ಮತ್ತು ರಚನಾತ್ಮಕ ಗುಣವಿದೆ. ಇವರ ಆಕರ್ಷಕ ವ್ಯಕ್ತಿತ್ವ ಇತರರನ್ನು ಇವರತ್ತ ಸೆಳೆಯುತ್ತದೆ.

  4 ಅಂಕೆ

  ಈ ಸಂಖ್ಯೆಯ ವ್ಯಕ್ತಿಗಳಿಗೆ ರೋಮ್ಯಾನ್ಸ್ ಮತ್ತು ತಮಗಾಗಿ ಲೈಂಗಿಕತೆ ನಡೆಸುವುದರಲ್ಲಿ ಆಸಕ್ತಿಯಿರುವುದು. ತುಂಬಾ ಕಾಳಜಿಯ ಸ್ವಭಾವದವರಾಗಿರುವ ಇವರು ತಮ್ಮ ಸಂಗಾತಿಗೆ ನೆರವಾಗುವರು ಮತ್ತು ಪ್ರೀತಿ ಮಾಡುವುದು ಇವರಿಗೆ ಗಂಭೀರ ವಿಚಾರ. ಈ ದಿನಾಂಕದಂದು ಜನಿಸಿದವರು ಹೆಚ್ಚು ದೃಢ ಸ್ವಭಾವದವರಾಗಿದ್ದಾರೆ. ತಮಗೆ ಮತ್ತು ಇತರರಿಗೆ ಅವರು ಹೆಚ್ಚು ಪ್ರಮಾಣ ಅಂಶಗಳನ್ನು ನಿರ್ಧರಿಸುತ್ತಾರೆ. ನಿಷ್ಟೆ ಅವರಿಗೆ ಮುಖ್ಯವಾಗಿರುತ್ತದೆ. ಹೆಚ್ಚು ಕ್ರಿಯಾಶೀಲರಾಗಿ ಮತ್ತು ನಿಷ್ಟೆಯಿಂದ ಕಾರ್ಯನಿರ್ವಹಿಸುವವರು ಇವರಾಗಿದ್ದು ತಮ್ಮ ಕೆಲಸದ ಗುಣಮಟ್ಟವನ್ನು ಇವರು ಕಾಯ್ದುಕೊಳ್ಳುತ್ತಾರೆ. ಇತರರು ಹೆಚ್ಚು ನಂಬಿಕೆಯನ್ನು ಇವರ ಮೇಲೆ ಹೊಂದಿರುತ್ತಾರೆ.

  5 ಸಂಖ್ಯೆ

  ಇವರು ತುಂಬಾ ಭಾವೋದ್ರೀಕ್ತರು ಮತ್ತು ಉತ್ಕಟ ಲೈಂಗಿಕತೆ ಹೊಂದಿರುವರು. ಇವರು ಭೀತಿಯಿಲ್ಲದ ಪ್ರೇಮಿಯಾಗಿರುವರು ಮತ್ತು ಕೆಲವೊಂದು ಸಲ ತುಂಬಾ ಕ್ರೂರಿ ಹಾಗೂ ಹುಚ್ಚುತನ ಪ್ರದರ್ಶಿಸಬಹುದು. ಈ ಸಂಖ್ಯೆಯವರು ವಿರುದ್ಧ ಲಿಂಗದವರಿಗೆ ಹೆಚ್ಚು ಆಕರ್ಷಿತರಾಗುವರು. ಈ ದಿನಾಂಕದಂದು ಜನಿಸಿದವರು ಉತ್ತಮ ಸಂವಾದಕರು ಎಂದೆನಿಸುತ್ತಾರೆ. ಇತರರೊಂದಿಗೆ ಯಾವುದೇ ವಿಷಯದ ಕುರಿತಾಗಿ ಸಲೀಸಾಗಿ ಮಾತನಾಡುವ ಕಲೆ ಇವರಿಗೆ ಸಿದ್ಧಿಸಿರುತ್ತದೆ. ಇವರು ಹೆಚ್ಚು ಬುದ್ಧಿವಂತಾಗಿದ್ದು ಅಧಿಕ ಆಸಕ್ತಿಯನ್ನು ಹೊಂದಿದವರಾಗಿರುತ್ತಾರೆ.

  ಸಂಖ್ಯೆ 6

  ಈ ಸಂಖ್ಯೆಯವರಿಗೆ ಅಪಶ್ರುತಿಯು ಇಷ್ಟವಿರುವುದಿಲ್ಲ ಮತ್ತು ವೇಗವನ್ನು ಕಾಯ್ದುಕೊಳ್ಳಲು ಇವರು ತುಂಬಾ ಕಠಿಣ ಪರಿಶ್ರಮ ಪಡುವರು. ವೈಯಕ್ತಿಕವಾಗಿ ಇವರು ಮನೆ ಹಾಗೂ ಕುಟುಂಬದವರಿಗೆ ತುಂಬಾ ಹತ್ತಿರವಾಗಿರುವರು. ಸ್ಥಿರವಾಗಿರುವ ಸಂಗಾತಿ ಸಿಕ್ಕಿದರೆ ಈ ಸಂಖ್ಯೆಯವರು ಅತ್ಯುತ್ತಮವಾಗಿರುವರು. ಈ ದಿನಾಂಕದಂದು ಜನಿಸಿದ ವ್ಯಕ್ತಿಗಳು ಹೆಚ್ಚು ನಂಬಿಕಸ್ಥರು ಮತ್ತು ದೃಢಚಿತ್ತರು ಎಂದೆನಿಸಿರುತ್ತಾರೆ. ಇತರರ ಬಗ್ಗೆ ಹೆಚ್ಚು ಕಾಳಜಿಯನ್ನು ಇವರು ಹೊಂದಿರುತ್ತಾರೆ. ಇವರಿಂದ ಉಪದೇಶವನ್ನು ಸಲಹೆಯನ್ನು ಕೇಳಲು ಜನರು ಉತ್ಸುಕರಾಗಿರುತ್ತಾರೆ. ಕುಟುಂಬ ಸ್ನೇಹಿ ಜನರು ಇವರು ಎಂದೆನಿಸಿದ್ದು ಪ್ರೀತಿ ಎಂಬುದು ಇವರಿಗೆ ಮುಖ್ಯವಾದ ಅಂಶವಾಗಿದೆ.

  7 ಅಂಕೆ

  ಈ ಸಂಖ್ಯೆಯವರು ಏಕಾಂತ ಬಯಸುವಂತಹ ಪ್ರೇಮಿಗಳಾಗಿರುವರು. ಕೆಲವೊಂದು ಸಲ ಇವರು ಅದನ್ನು ತಲುಪಲು ಕಠಿಣ ಶ್ರಮ ವಹಿಸುವರು. ಇನ್ನೊಂದು ಕಡೆಯಲ್ಲಿ ಇವರಿಗೆ ವೈವಾಹಿಕ ಜೀವನದ ಬಗ್ಗೆ ಆಸಕ್ತಿ ಇರಲ್ಲ ಮತ್ತು ಆಧ್ಯಾತ್ಮಿಕತೆ ಕಡೆ ವಾಲುವರು. ಇದರಿಂದಾಗಿ ಅವರು ಹಾಸಿಗೆಯಲ್ಲಿ ಜಾಣ ಸಂಗಾತಿಯಾಗುವರು. ಸಂಬಂಧದ ವಿಚಾರಕ್ಕೆ ಬಂದರೆ ಇವರು ತುಂಬಾ ನಿಷ್ಠರಾಗಿರುವರು. ಈ ದಿನಾಂಕದಂದು ಜನಿಸಿದ ವ್ಯಕ್ತಿಗಳು ಆಳವಾದ ಮತ್ತು ಹೆಚ್ಚು ಚಿಂತನೆಯುಳ್ಳವರಾಗಿದ್ದಾರೆ. ಇವರಿಗೆ ಆಜ್ಞೆ ಮಾಡುವುದು ಎಂದರೆ ಇಷ್ಟವಾಗದೇ ಇರುವಂತಹ ಅಂಶವಾಗಿದೆ. ವಿಷಯದ ಆಚೆ ಕಡೆ ಹೋಗಿ ಇವರು ಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಾರೆ. ಜೀವನದ ತೊಡಕುಗಳ ಮಧ್ಯೆ ಕೂಡ ಸಮಯ ಮಾಡಿಕೊಂಡು ಶಾಂತಿಯನ್ನು ಬಯಸುವುದು ಇವರ ಜಾಯಮಾನವಾಗಿದೆ. ತಮ್ಮದೇ ನಿರ್ಧಾರಗಳನ್ನು ತೆಗೆದುಕೊಂಡು ಆ ಮೂಲಕ ಇವರು ಜೀವನದಲ್ಲಿ ಮುಂದುವರೆಯುತ್ತಾರೆ.

  8 ಅಂಕೆ

  ಈ ಸಂಖ್ಯೆಯ ಜನರು ಲೈಂಗಿಕತೆ, ನೋಟ ಮತ್ತು ಸ್ವಭಾವದ ಬಗ್ಗೆ ತುಂಬಾ ಅತ್ಯುತ್ಸಾಹಿಗಳಾಗಿರುವರು. ಇವರು ತುಂಬಾ ಸೂಕ್ಷ್ಮ ಹಾಗೂ ಮೃಧು ಸ್ವಭಾವ. ಇವರು ವ್ಯಥಾ ಮತ್ತು ಭಾವೋದ್ರೀಕ್ತರಾಗಿರುವರು. ಈ ಸಂಖ್ಯೆಯವರಿಗೆ ಲೈಂಗಿಕತೆಯೆಂದರೆ ಶಕ್ತಿ. ಇವರು ಲೈಂಗಿಕತೆಯನ್ನು ಅಧಿಕಾರ ಮತ್ತು ಲಾಬಿಗಾಗಿ ಬಳಸಿಕೊಳ್ಳುವ ಅವಕಾಶವಾದಿಗಳು. ಈ ದಿನಾಂಕದಂದು ಜನಿಸಿದವರು ನಾಯಕತ್ವ ಗುಣವನ್ನು ಹೊಂದಿದವರು. ಇವರು ತಾರ್ಕಿಕ ಮನೋಭಾವ ಉಳ್ಳವರು ಎಂದೆನಿಸಿದ್ದಾರೆ. ಇವರು ಉತ್ತಮ ನಿರ್ದೇಶಕರು ಎಂದೆನಿಸಿದ್ದಾರೆ. ಇವರಿಗೆ ಪ್ರಶಂಸೆ ಮತ್ತು ಸಾಧನೆ ಅತಿ ಮುಖ್ಯವಾಗಿರುತ್ತದೆ.

  9 ಅಂಕೆ

  ಇವರು ತುಂಬಾ ನೆರವಾಗುವ ಮತ್ತು ಸಂಬಂಧದಲ್ಲಿ ಒಳಗೊಳ್ಳುವ ಪ್ರೇಮಿಗಳು. ಇವರು ತುಂಬಾ ದಯಾಳುವಾಗಿರುವ ಕಾರಣದಿಂದ ಮೋಸ ಹೋಗುವುದು ಹೆಚ್ಚು. ತಮ್ಮ ಸಂಗಾತಿಯ ಸಮಸ್ಯೆಯು ತನ್ನದೆನ್ನುವ ಮೂಲಕ ಸಂಗಾತಿಗೆ ನೆರವು ನೀಡುವ ಮೂಲಕ ತಮ್ಮ ಪ್ರೀತಿ ವ್ಯಕ್ತಪಡಿಸುವರು. ಇವರಿಗೆ ಆಕರ್ಷಣೆ ಮತ್ತು ಲೈಂಗಿಕತೆ ಬಗ್ಗೆ ಯಾವಾಗಲೂ ಗೊಂದಲವಿರುವುದು. ಆದರೆ ಇವರು ಯಾವಾಗಲೂ ತಮ್ಮ ಸಂಗಾತಿಯ ಜತೆಯಾಗಿರುವರು. ಈ ದಿನಾಂಕದಂದು ಜನಿಸಿದವರು ವಿಶಾಲ ಮನೋಭಾವದವರಾಗಿದ್ದಾರೆ. ಜೀವನದಲ್ಲಿ ಗುರಿಯನ್ನಿಟ್ಟುಕೊಂಡು ಮುನ್ನುಗ್ಗುವ ಪ್ರವೃತ್ತಿ ಇವರದ್ದಾಗಿದೆ. ಇವರು ಹೆಚ್ಚಿನ ವಿಷಯಗಳಲ್ಲಿ ಬುದ್ಧಿವಂತರಾಗಿರುತ್ತಾರೆ.

  English summary

  How Does Numerology Influence Your Life & Intimacy

  Numerology is the science of numbers where an individual can try to understand something about the human behaviour. Numerology is done by calculating your psychic numbers. These psychic numbers are the numbers that rule your characteristics and personality. On the other hand, the life path number is where your destiny takes you. Here, in this article, we are revealing on the facts about how numerology influences your life and the intimacy factor in your love life. These predictions are based on your date of birth.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more