ಅಸ್ವಸ್ಥತೆ ಮೆಟ್ಟಿ ನಿಂತು ಪ್ರಸಿದ್ಧ ರೂಪದರ್ಶಿಯಾದಳು…!

Subscribe to Boldsky

ಯಾವುದೇ ವ್ಯಕ್ತಿ ಯಶಸ್ವಿಯಾಗಬೇಕಾದರೆ ಆತನಿಗೆ ಜೀವನದಲ್ಲಿ ಅಡೆತಡೆಗಳನ್ನು ನಿವಾರಿಸಬೇಕಾಗುತ್ತದೆ. ದುರ್ಬಲತೆಗಳನ್ನು ಸ್ವೀಕರಿಸಿಕೊಂಡು ಕೆಲಸ ಮಾಡಿಕೊಂಡು ಹೋದರೆ ಆಗ ಯಶಸ್ಸು ಖಂಡಿತವಾಗಿಯೂ ನಮಗೆ ಸಿಗುವುದು. ಅನುವಂಶೀಯ ಅಸ್ವಸ್ಥತೆಯಿಂದ ಬಳಲುತ್ತಿರುವ ರೂಪದರ್ಶಿಯೊಬ್ಬಳ ಕಥೆಯಿದು.

ಖತರ್ನಾಕ್ ಕಾಯಿಲೆ ಎದುರಿಸಿ, ಕೊನೆಗೂ ಆಕೆ ರೂಪದರ್ಶಿಯಾದಳು!

ಮೆಲೇನ್ ಗೆಡೋಸ್ ಎನ್ನುವ ರೂಪದರ್ಶಿಯು ತುಂಬಾ ಅಪರೂಪದ ಅನುವಂಶೀಯ ಕಾಯಿಲೆ ಎಕ್ಟೊಡರ್ಮಲ್ ಡಿಸ್ಪ್ಲಾಸಿಯಾಯಿಂದ ಬಳಲುತ್ತಿದ್ದಾಳೆ. ಈ ತೊಂದರೆಯ ಹೊರತಾಗಿಯೂ ಆಕೆ ಇಂದು ಫ್ಯಾಷನ್ ಲೋಕದಲ್ಲಿ ದೊಡ್ಡ ಖ್ಯಾತಿ ಗಳಿಸಿರುವಳು. ಆಕೆಗಿರುವ ಕಾಯಿಲೆಯಿಂದಾಗಿ ಬೆಳವಣಿಗೆ ಅಸಾಮಾನ್ಯವಾಗಿದೆ. ಆದರು ಆಕೆ ಫ್ಯಾಷನ್ ಲೋಕದಲ್ಲಿ ಸಂಚಲನ ಉಂಟು ಮಾಡಿದ್ದಾಳೆ. ಇದರ ಬಗ್ಗೆ ನೀವು ಓದಿಕೊಳ್ಳಿ.

ಆಕೆ ಈ ಅಸ್ವಸ್ಥತೆಯೊಂದಿಗೆ ಹುಟ್ಟಿದಳು

ಆಕೆ ಈ ಅಸ್ವಸ್ಥತೆಯೊಂದಿಗೆ ಹುಟ್ಟಿದಳು

ಮೆಲೇನ್ ಗೆಡೋಸ್ ಅನುವಂಶೀಯ ಕಾಯಿಲೆ ಎಕ್ಟೊಡರ್ಮಲ್ ಡಿಸ್ಪ್ಲಾಸಿಯಾದಿಂದ ಬಳಲುತ್ತಿರುವಳು. ಈ ಅಸ್ವಸ್ಥತೆಯಲ್ಲಿ ವ್ಯಕ್ತಿಯ ಹಲ್ಲುಗಳು, ರಂಧ್ರಗಳು, ಮೃಧುಎಲುಬು, ಉಗುರುಗಳು ಮತ್ತು ಸಣ್ಣ ಮೂಳೆಗಳ ಕಾಣಿಸುವುದು. ಈ ಪರಿಸ್ಥಿತಿಯಲ್ಲಿ ಮೆಲೇನ್ ತಲೆ ಬೋಳಾಗಿತ್ತು ಮತ್ತು ಆಕೆಗೆ ಪ್ರೌಢ ಹಲ್ಲುಗಳು ಬಂದಿರಲಿಲ್ಲ.

ಆಕೆಯ ಪಯಣ ಸುಲಭವಾಗಿರಲಿಲ್ಲ

ಆಕೆಯ ಪಯಣ ಸುಲಭವಾಗಿರಲಿಲ್ಲ

ಫ್ಯಾಷನ್ ಲೋಕದಲ್ಲಿ ಆಕೆಯ ಪಯಣವು ಅಷ್ಟೊಂದು ಸುಲಭವಾಗಿರಲಿಲ್ಲ. ಆಕೆಗೆ ಪ್ರತೀ ಹೆಜ್ಜೆಯಲ್ಲೂ ಟೀಕೆಗಳು ಎದುರಾದವು. ನಕಾರಾತ್ಮಕವಾಗಿರುವ ಅಭಿಪ್ರಾಯಗಳು ಬಂದವು. ಹಲ್ಲುಗಳು ಇಲ್ಲದೆ ಇದ್ದರೂ ಕೃತಕ ಹಲ್ಲುಗಳನ್ನು ಇಡಲು ಆಕೆ ನಿರಾಕರಿಸಿದಳು. ಇದರಿಂದಾಗಿ ಆಕೆ ಮಾನಸಿಕವಾಗಿ ಮತ್ತಷ್ಟು ಬಲಿಷ್ಠವಾದಳು.

ರೂಪರ್ಶಿಯಾಗಲು ಆಕೆಯ ಬಾಯ್ ಫ್ರೆಂಡ್ ಪ್ರೇರೇಪಿಸಿದ

ರೂಪರ್ಶಿಯಾಗಲು ಆಕೆಯ ಬಾಯ್ ಫ್ರೆಂಡ್ ಪ್ರೇರೇಪಿಸಿದ

ಆಕೆಯಂತೆ ಕಾಣುವವರು ಬೇರೆ ಯಾರೂ ಇಲ್ಲ ಮತ್ತು ಸಾಮರ್ಥ್ಯವು ಇದೆ ಎಂದು ಆಕೆಯ ಬಾಯ್ ಫ್ರೆಂಡ್ ಹೇಳಿದ್ದ. ಆತನ ಸಲಹೆಯನ್ನು ಆಕೆ ಸ್ವೀಕರಿಸಿದಳು.

ಗುಂಪಿನಲ್ಲಿ ಎದ್ದುಕಂಡಳು

ಗುಂಪಿನಲ್ಲಿ ಎದ್ದುಕಂಡಳು

ಗುಂಪಿನಲ್ಲಿ ಆಕೆ ರೂಪದರ್ಶಿಯಾಗಿ ತುಂಬಾ ಭಿನ್ನವಾಗಿ ಕಾಣಿಸಿಕೊಳ್ಳತೊಡಗಿದಳು. ಆಕೆಗೆ ಪ್ರೌಢ ಹಲ್ಲುಗಳು ಇಲ್ಲದೆ ಇದ್ದ ಮತ್ತು ಆಕೆ ಕೃತಕ ಹಲ್ಲುಗಳನ್ನು ಅಳವಡಿಸಿಕೊಳ್ಳಲು ನಿರಾಕರಿಸಿದ ಕಾರಣ ಆಕೆ ತನ್ನಲ್ಲಿ ಇರುವುದರಲ್ಲಿ ಸಂತೃಪ್ತರಾಗಿದ್ದಳು.

ಆಕೆ ಮತ್ತೊಂದು ಸಮಸ್ಯೆಯಿಂದ ಬಳಲುತ್ತಿದ್ದಳು

ಆಕೆ ಮತ್ತೊಂದು ಸಮಸ್ಯೆಯಿಂದ ಬಳಲುತ್ತಿದ್ದಳು

ಆಕೆ ದ್ವಿಪಕ್ಷೀಯ ಅಂಚು ಅಂಗುಳ ಮತ್ತು ಬೋಳುತಲೆ ಹೊಂದಿದ್ದಳು. ಇದರಿಂದ ನೈಸರ್ಗಿಕವಾಗಿ ಕೂದಲು ಬೆಳೆಯುತ್ತಿರಲಿಲ್ಲ. ಆಕೆ ಕೃತಕ ದಂತಗಳನ್ನು ಅಳವಡಿಸಿಕೊಂಡಿದ್ದರೂ ಕೇವಲ ಎಂಟು ತಿಂಗಳಲ್ಲಿ ಅದನ್ನು ತೆಗೆದುಬಿಟ್ಟಳು. ಯಾಕೆಂದರೆ ಆಕೆ ಇದು ಸರಿ ಹೊಂದುತ್ತಿರಲಿಲ್ಲ.

ಜೀವನದ ಬಗ್ಗೆ ಆಕೆಯ ಅಭಿಪ್ರಾಯ…

ಜೀವನದ ಬಗ್ಗೆ ಆಕೆಯ ಅಭಿಪ್ರಾಯ…

ನಾನು ಹೇಗೆ ಇದ್ದೇನೆಯೋ ಅದರಿಂದ ನಾನು ತುಂಬಾ ಆರಾಮವಾಗಿದ್ದೇನೆ. ಯಾವುದೇ ಕೃತಕ ಅಳವಡಿಕೆ ಇಲ್ಲದೆ. ನಾನು ಅಪೂರ್ಣ ಎಂದು ಜನರು ಭಾವಿಸಬಹುದು. ಯಾಕೆಂದರೆ ಅವರಿಗೆ ಹಲ್ಲುಗಳಿವೆ ಅಥವಾ ಅದು ಹೇಗಿದೆಯೆಂದು ತಿಳಿದಿದೆ. ಇದರಿಂದಾಗಿ ಹಲ್ಲುಗಳು ಇಲ್ಲದೆ ಇರುವುದನ್ನು ಅರ್ಥಮಾಡಿಕೊಳ್ಳಲು ಅಥವಾ ಚಿತ್ರಿಸಲು ಅವರಿಗೆ ಸಾಧ್ಯವಿಲ್ಲ. ನನಗೆ ಹಲ್ಲುಗಳ ಕೊರತೆ ಕಾಣಲಿಲ್ಲ. ಯಾಕೆಂದರೆ ನನಗೆ ಆರಂಭದಿಂದಲೂ ಇದು ಇರಲಿಲ್ಲ ಎಂದು ಆಕೆ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದರು.

ಪ್ರಸಿದ್ಧಿ ಪಡೆದಿರುವುದು ಮತ್ತು ತನ್ನ ಕೆಲಸಕ್ಕೆ ಪರಿಗಣಿಸಲ್ಪಟ್ಟಿರುವುದು

ಪ್ರಸಿದ್ಧಿ ಪಡೆದಿರುವುದು ಮತ್ತು ತನ್ನ ಕೆಲಸಕ್ಕೆ ಪರಿಗಣಿಸಲ್ಪಟ್ಟಿರುವುದು

ನಾನು ಮತ್ತು ನನ್ನ ಬಗ್ಗೆ ಈಗ ನಾನು ತುಂಬಾ ಆತ್ಮವಿಶ್ವಾಸದಿಂದ ಇದ್ದೇನೆ. ನಾನು ವಿಗ್ ಧರಿಸದೆ ಈಗ ಮಾಡೆಲಿಂಗ್ ಮಾಡುತ್ತೇನೆ. ನಾನು ಯಾರೆನ್ನುವ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಮತ್ತು ನನ್ನ ಈ ಸ್ಥಿತಿಯಲ್ಲೇ ಹೆಚ್ಚು ಆರಾಮವಾಗಿದ್ದೇನೆ. ಈ ಪ್ರಕ್ರಿಯೆಂದಾಗಿ ನಾನು ತುಂಬಾ ಆತ್ಮವಿಶ್ವಾಸಿ, ಬಲಶಾಲಿ ಮತ್ತು ಸಂತೋಷದಿಂದ ಇದ್ದೇನೆ.ಇದು ನಿಜವಾಗಿಯೂ ತುಂಬಾ ಪ್ರೇರಣೆ ನೀಡುವಂತಹ ಕಥೆ ಮತ್ತು ಭೀತಿಯನ್ನು ದೂರವಿಟ್ಟು ಸಾಧಿಸಬೇಕು. ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಿ.

All Images Source

For Quick Alerts
ALLOW NOTIFICATIONS
For Daily Alerts

    English summary

    Her Disorder Did Not Stop Her From Becoming Famous!

    If a person wants to taste success, he/she needs to overcome a lot of hurdles and needs to be strong at any given point. Accepting our weaknesses and working on them will bring in success for sure. Here is the story of a model born with a rare genetic disorder. A model named Melanie Gaydos was born with a rare genetic condition called ectodermal dysplasia and inspite of her condition, today, she is a very well known name in the fashion industry.Check out her story of how she has overcome her medical condition
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more