Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಎಂತಹ ಹುಚ್ಚ ನೋಡಿ- ಟ್ಯಾಟೂಗೋಸ್ಕರ ತನ್ನ ಶಿಶ್ನವನ್ನೇ ತೆಗೆಸಿದ!!
ಹಿಂದಿನ ಕಾಲದಲ್ಲಿ ಹಚ್ಚೆ ಹಾಕಿಕೊಳ್ಳುವುದು ತುಂಬಾ ನೋವಿನ ಸಂಗತಿಯಾಗಿರುತ್ತಿತ್ತು. ಕೆಲವೇ ಕೆಲವೇ ಮಂದಿ ಮಾತ್ರ ಹಚ್ಚೆ ಹಾಕಿಸಿಕೊಳ್ಳುತ್ತಿದ್ದರು. ಹಚ್ಚೆ ಈಗ ಯುವಜನರಲ್ಲಿ ಒಂದು ರೀತಿಯ ಹುಚ್ಚೆಬ್ಬಿಸಿದೆ. ಇದು ವಿದೇಶದಲ್ಲಿ ಅತಿಯಾಗಿದೆ. ಟ್ಯಾಟೂ ಎಂದು ಕರೆಯುವ ವಿದೇಶಿಗರು ಮೈತುಂಬಾ ಇದನ್ನು ಹಾಕಿಸಿಕೊಳ್ಳುವರು.
ಇನ್ನು ಕೆಲವರಿಗೆ ಇದು ಚಟವಾಗಿರುವುದು. ಕಣ್ಣಿನ ಒಳಗಡೆ ಕೂಡ ಹಚ್ಚೆ ಹಾಕಿಸಿಕೊಂಡವರ ಬಗ್ಗೆ ನೀವು ಇದೇ ವಿಭಾಗದಲ್ಲಿ ಓದಿರಬಹುದು. ಕೆಲವು ತಮ್ಮ ಮೈಮೇಲಿನ ಗಾಯ, ಕಲೆ ಇತ್ಯಾದಿಗಳನ್ನು ಮರೆ ಮಾಚಲು ಟ್ಯಾಟೂ ಹಾಕಿಸಿಕೊಳ್ಳುವರು. ಕ್ಯಾನ್ಸರ್ ನಿಂದ ಪಾರಾಗಿ ಬಂದಿರುವ ರಷ್ಯಾದ ಆ್ಯಡಂ ಕರ್ಲಿಕೆಲೆ ಎನ್ನುವಾತನಿಗೆ ಕೂಡ ಟ್ಯಾಟೂ ಎಂದರೆ ತುಂಬಾ ಪ್ರೀತಿ. ಟ್ಯಾಟೂ ಬಗ್ಗೆ ಎಷ್ಟರ ಮಟ್ಟಿಗಿನ ಪ್ರೀತಿಯೆಂದರೆ ದೇಹದಲ್ಲಿರುವ ಟ್ಯಾಟೂಗಳನ್ನು ತೋರಿಸಲು ಅಡ್ಡಿಯಾಗುತ್ತದೆ ಎನ್ನುವ ಕಾರಣಕ್ಕಾಗಿ ಜನನಾಂಗವನ್ನೇ ತೆಗೆಸಿಕೊಂಡಿದ್ದಾನೆ! ಈ ಕಥೆ ಬಗ್ಗೆ ಮತ್ತಷ್ಟು ಓದಿಕೊಳ್ಳಿ.
ಕ್ಯಾನ್ಸರ್ ನಿಂದ ಬದುಕುಳಿದ ಆ್ಯಡಂ!
ರಷ್ಯಾದ ಕಲಿನಿನ್ಸಾಡ್ ಪ್ರದೇಶದವನಾಗಿರುವ 32ರ ಹರೆಯದ ಆ್ಯಡಂ ಕರ್ಲಿಕೆಲೆಗೆ ಕ್ಯಾನ್ಸರ್ ಇದೆಯೆಂದು ತಿಳಿದ ಬಳಿಕ ತನ್ನ ಮೈಮೇಲೇ ಶೇ.90ರಷ್ಟು ಟ್ಯಾಟೂ ಹಾಕಿಸಿಕೊಳ್ಳಲು ಸುಮಾರು 12 ವರ್ಷಗಳನ್ನು ವ್ಯಯಿಸಿದ್ದಾನೆ. ಇದರಲ್ಲಿ ಕಣ್ಣಗುಡ್ಡೆಗಳು ಕೂಡ ಸೇರಿದೆ.
ಆತನಿಗೆ ಅಪೂರ್ಣತೆ ಕಾಡುತ್ತಲಿತ್ತು
ದೇಹದ ಶೇ.90ರಷ್ಟು ಭಾಗಕ್ಕೆ ಆತ ಟ್ಯಾಟೂ ಹಾಕಿಸಿಕೊಂಡಿದ್ದರೂ ಆತನಿಗೆ ಯಾವಾಗಲೂ ಅಪೂರ್ಣತೆಯು ಕಾಡುತ್ತಲಿತ್ತು. ದೇಹದ ಕೆಲವು ಭಾಗಕ್ಕೆ ಟ್ಯಾಟೂ ಹಾಕಿಸಿಕೊಂಡಿಲ್ಲ ಮತ್ತು ಇದರಿಂದ ದೇಹದ ಕಲೆ ಸಂಪೂರ್ಣವಾಗಿ ತೋರಿಸಲು ಸಾಧ್ಯವಾಗುತ್ತಿಲ್ಲವೆಂದು ಆತ ಭಾವಿಸಿದ್ದ.
ಶಸ್ತ್ರಚಿಕಿತ್ಸೆಗೆ ಹಣ ವ್ಯಯಿಸಿದ
ತನ್ನ ಅಪೂರ್ಣತೆಯ ಭಾವವನ್ನು ತೊಡೆದುಹಾಕಲು ಆ್ಯಡಂ, ತನ್ನ ದೇಹದಲ್ಲಿ ಇದುವರೆಗೆ ಟ್ಯಾಟೂ ಹಾಕದೆ ಇರುವಂತಹ ಜಾಗಕ್ಕೆ ಟ್ಯಾಟೂ ಹಾಕಿಕೊಳ್ಳಲು ನಿರ್ಧರಿಸಿದ. ಶಿಶ್ನ, ವೃಷಣಗಳು ಮತ್ತು ಸ್ತನಗಳನ್ನು ತೆಗೆಯಲು ಶಸ್ತ್ರಚಿಕಿತ್ಸೆ ಮಾಡಿಕೊಂಡ.
ಆತ ತುಂಬಾ ದೂರ ಪ್ರಯಾಣ ಮಾಡಿದ!
ರಷ್ಯಾದ ಕಲಿನಿನ್ಸಾಡ್ ನಿಂದ ಮ್ಯಾಕ್ಸಿಕೋದ ಗ್ವಾಡಲಜರ ತನಕ ಪ್ರಯಾಣ ಮಾಡಿ ಶಸ್ತ್ರಚಿಕಿತ್ಸೆ ಮಾಡಿಕೊಂಡ.
ಆತನ ಜನಪ್ರಿಯನಾದ!
ಪೋಲೆಂಡ್ ನ `ಸೆಕೆಂಡ್ ಫೇಸ್'ಎನ್ನುವ ಟಿವಿ ಕಾರ್ಯಕ್ರಮದಲ್ಲಿ ಆತ ಭಾಗವಹಿಸಿದ ಬಳಿಕ ಆ್ಯಡಂ ತುಂಬಾ ಜನಪ್ರಿಯನಾದ. ಕ್ಯಾನ್ಸರ್ ನಿಂದ ಬಂದಂತಹ ಕೆಲವೊಂದು ಕಲೆಗಳನ್ನು ತೊಡೆದುಹಾಕಲು ತಾನು ಟ್ಯಾಟೂ ಹಾಕಿಸಿಕೊಳ್ಳಬೇಕಾಗಿ ಬಂತು ಎಂದು ಆತ ಈ ವೇಳೆ ಹೇಳಿಕೊಂಡಿದ್ದಾನೆ.
ಕ್ಯಾನ್ಸರ್ ಮಾತ್ರ ಕಾರಣವಲ್ಲ!
ಕ್ಯಾನ್ಸರ್ ನಿಂದ ಚೇತರಿಸಿಕೊಂಡ ಬಳಿಕ ಕೂಡ ಆ್ಯಡಂ ಚರ್ಮವು ಜೋತುಬಿದ್ದಿತ್ತು. ಆ್ಯಡಂಗೆ ಅಲ್ಬಿನಿಸಂ ಇರುವುದಾಗಿ ವೈದ್ಯರು ಹೇಳಿದರು. ಇದರ ಬಳಿಕ ಆತ ಮತ್ತಷ್ಟು ಟ್ಯಾಟೂ ಹಾಕಿಸಿಕೊಂಡ.
ಕಪ್ಪು ಬಣ್ಣ ಆತನಿಗೆ ಇಷ್ಟ
ಕಪ್ಪು ಬಣ್ಣವು ತನಗೆ ಇಷ್ಟವೆಂದು ಆತ ಹೇಳಿದ್ದಾನೆ. ಇದನ್ನು ವಿವಿಧ ರೀತಿಯಿಂದ ಬಳಸಿಕೊಂಡಿದ್ದಾನೆ ಮತ್ತು ಇದರಿಂದಾಗಿ ಆತನ ದೇಹದ ಬಣ್ಣವು ಈಗ ಗ್ರ್ಯಾಫೇಟ್ ಆಗಿದೆ.
ಇನ್ನು ಟ್ಯಾಟೂ ಬೇಕಂತೆ
ತನ್ನ ದೇಹದ ಉಳಿದಿರುವ ಭಾಗಗಳಿಗೆ ಕೂಡ ಟ್ಯಾಟೂ ಹಾಕಿಸಿಕೊಳ್ಳಲು ಬಯಸಿದ್ದೇನೆ. ಕ್ಯಾನ್ಸರ್ ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಮಾಡುವ ಮೊದಲ ಕೆಲಸ ಇದಾಗಿದೆ. ವಿಶ್ವದ ಹಲವಾರು ವಿಚಿತ್ರ ವ್ಯಕ್ತಿಗಳ ಬಗ್ಗೆ ಇಂತಹ ಕಥೆಗಳನ್ನು ಓದಲು ನಿಮಗೆ ಇಷ್ಟವಿದ್ದರೆ ಇದೇ ಸೆಕ್ಷನ್ ನಲ್ಲಿ ಕಣ್ಣಾಡಿಸುತ್ತಾ ಇರಿ.