For Quick Alerts
ALLOW NOTIFICATIONS  
For Daily Alerts

ಕಿಡ್ನಿ ಕ್ಯಾನ್ಸರ್ ಗೆ ತುತ್ತಾಗಿರುವ ಬಾಲಕಿಯ ಹಾಡು ಕೇಳಿ...

By Hemanth
|

ಕ್ಯಾನ್ಸರ್ ಎನ್ನುವ ಮಾರಕ ಕಾಯಿಲೆಯ ಹೆಸರು ಕೇಳಿದರೆ ಆಗ ಅರ್ಧಜೀವವೇ ಹಾರಿ ಹೋಗುವುದು. ಕ್ಯಾನ್ಸರ್ ಎನ್ನುವುದು ದೇಹದಲ್ಲಿ ಪತ್ತೆಯಾದ ಬಳಿಕ ಅದಕ್ಕೆ ಮಾಡಬೇಕಾದ ಚಿಕಿತ್ಸೆ ಕೂಡ ಯಾತನಮಯ. ಈ ಮಾರಕ ಕಾಯಿಲೆಗೆ ಯಾವುದೇ ಭೇದವಿಲ್ಲ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರ ತನಕ ಪ್ರತಿಯೊಬ್ಬರನ್ನೂ ಇದು ಕಾಡುವುದು. ಅದರಲ್ಲೂ ಸಣ್ಣ ಮಕ್ಕಳಲ್ಲಿ ಇದು ಕಂಡುಬಂದರೆ ಅವರು ಪಡುವಂತಹ ಕಷ್ಟ ಯಾವ ಶತ್ರುವಿಗೂ ಬೇಡವೆನ್ನುವ ಭಾವನೆ ಮೂಡಿಸುವುದು.

ಇಲ್ಲೊಬ್ಬಳು ಸಣ್ಣ ಹುಡುಗಿ ತನಗೆ ಕಿಡ್ನಿ ಕ್ಯಾನ್ಸರ್ ಇದೆಯೆಂದು ತಿಳಿದಿದ್ದರೂ ಅದರಿಂದ ಮೇಲೆ ಬರಲು ಯಾವಾಗಲೂ ತನ್ನ ನಗುಮೊಗದೊಂದಿಗೆ ಇದ್ದು, ನೋವನ್ನು ಮರೆಯುವಳು. ಇದಕ್ಕಾಗಿ ಆಕೆ ಮದುವೆಯ ಕಾರ್ಯಕ್ರಮದಲ್ಲಿ ಹಾಡೊಂದನ್ನು ಹಾಡಿದ್ದಾಳೆ. ಅನ್ಯಾ ಒಟ್ಲೆ ಎನ್ನುವ ಕ್ಯಾನ್ಸರ್ ಪೀಡಿತ ಬಾಲಕಿ ಮದುವೆ ಕಾರ್ಯಕ್ರಮದಲ್ಲಿ ಹಾಡಿರುವಂತಹ ಈ ಹಾಡು ಈಗ ವೈರಲ್ ಆಗಿದೆ.

Anya Ottley singing song

ತನ್ನೊಳಗಿನ ಕಾಯಿಲೆಯು ನಿಧಾನವಾಗಿ ತನ್ನನ್ನು ಕೊಲ್ಲುತ್ತಿದೆ ಎಂದು ತಿಳಿದಿದ್ದರೂ ಆಕೆ ಆತ್ಮವಿಶ್ವಾಸದಿಂದ ಇದನ್ನು ಎದುರಿಸಿ, ಚಿಕಿತ್ಸೆ ಪಡೆದುಕೊಳ್ಳುತ್ತಾ ಇದ್ದಾಳೆ. ಮದುವೆ ಕಾರ್ಯಕ್ರಮದಲ್ಲಿ ಈ ಬಾಲಕಿಯು ರಾಚೆಲ್ ಪ್ಲಾಟನ್ ರ ಫೈಟ್ ಸಾಂಗ್' ಹಾಡಿದ್ದಾಳೆ. ಈ ಧೈರ್ಯವಂತ ಬಾಲಕಿ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯಿರಿ.

2107ರಲ್ಲಿ ಅನ್ಯಾ ಒಟ್ಲೆಗೆ ಕಿಡ್ನಿ ಕ್ಯಾನ್ಸರ್ ಇದೆ ಎನ್ನುವುದನ್ನು ವೈದ್ಯರು ಪತ್ತೆಹಚ್ಚಿದರು. ಇದರ ಬಳಿಕ ಈ ಬಾಲಕಿಯು ಈಗಾಗಲೇ 28 ಸಲ ಕಠಿಣ ಕಿಮೋಥೆರಪಿಗೆ ಒಳಗಾಗಿದ್ದಾಳೆ. ಚಿಕಿತ್ಸೆಯ ಕೊನೆಯ ಹಂತದಲ್ಲಿರುವ ಆಕೆ ಇದರ ಬಳಿಕ ರಿಂಗ್ ದ ಬೆಲ್'' ಪಾರ್ಟಿ ಆಯೋಜಿಸಲಿದ್ದಾಳಂತೆ.

ಪುಟಾಣಿ ಅನ್ಯಾ ಒಟ್ಲೆ ತನ್ನ ಪಾರ್ಟಿಯಲ್ಲಿ ದಿಸ್ ಇಸ್ ಮೈ ಫೈಟ್ ಸಾಂಗ್, ಟೇಕ್ ಬ್ಯಾಕ್ ಮೈ ಲೈಫ್ ಸಾಂಗ್, ಪ್ರೂವ್ ಐ ಆಮ್ ಆನ್ ಆಲ್ ರೈಟ್ ಸಾಂಗ್''ಹಾಡನ್ನು ಹಾಡಲು ತಯಾರಿ ಮಾಡಿಕೊಂಡಿದ್ದಾಳೆ.

ಮದುವೆ ಕಾರ್ಯಕ್ರಮದಲ್ಲಿ ಈ ಹಾಡನ್ನು ಆಕೆ ಹಾಡಿ ತನ್ನ ಪಾರ್ಟಿಗೆ ಸಿದ್ಧತೆ ಮಾಡಿಕೊಂಡಿದ್ದಾಳೆ. ಅನ್ಯಾ ಒಟ್ಲೆ ದೇಹದಲ್ಲಿದ್ದ ಕ್ಯಾನ್ಸರ್ ತೀವ್ರ ಸ್ವರೂಪಕ್ಕೆ ತಲುಪುವ ಮೊದಲೇ ಪತ್ತೆಯಾಗಿದೆ. ಆಕೆಯ ಹೊಟ್ಟೆಯಲ್ಲಿ ಸಣ್ಣ ಕಲ್ಲಂಗಡಿ ಗಾತ್ರದ ಕ್ಯಾನ್ಸರ್ ಗಡೆಯಿತ್ತು ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ.

ದುರಾದೃಷ್ಟವೆಂದರೆ ಕ್ಯಾನ್ಸರ್ ಎನ್ನುವ ಮಾರಿಯು ಅನ್ಯಾ ಒಟ್ಲೆಳ ಎಡ ಕಿಡ್ನಿಯನ್ನು ಬಲಿ ತೆಗೆದುಕೊಂಡಿದೆ ಮತ್ತು ಕ್ಯಾನ್ಸರ್ ಕೋಶಗಳನ್ನು ಸಂಪೂರ್ಣವಾಗಿ ಕೊಲ್ಲಲು ಆಕೆ ಕಿಮೋಥೆರಪಿಗೆ ಒಳಗಾಗುತ್ತಿದ್ದಾಳೆ.

ಅನ್ಯಾ ಒಟ್ಲೆ ಕಿಮೋಥೆರಪಿ ಚಿಕಿತ್ಸೆಯನ್ನು ತುಂಬಾ ಧೈರ್ಯದಿಂದ ಎದುರಿಸುವಳು. ಇದರಿಂದ ಆಕೆ ದೇಹ ಬಸವಳಿದರೂ ಇದು ತನಗೆ ಕೆಟ್ಟದಲ್ಲ ಮತ್ತು ಬೇರೆ ಮಕ್ಕಳು ಇದಕ್ಕಿಂತ ಹೆಚ್ಚು ನೋವು ತಿನ್ನುತ್ತಿದ್ದಾರೆಂದು ಆಕೆ ತನ್ನ ಬಳಿ ಹೇಳಿರುವುದಾಗಿ ಆಕೆಯ ತಾಯಿ ತಿಳಿಸಿದ್ದಾರೆ.

ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆಯು ತುಂಬಾ ದುರ್ಬಲವಾಗಿರುವ ಕಾರಣದಿಂದಾಗಿ ಅನ್ಯಾ ಒಟ್ಲೆ ಗೆ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಇದರಿಂದ ಆಕೆ ಮನೆಯಲ್ಲಿಯೇ ಅಭ್ಯಾಸ ಮಾಡುತ್ತಿದ್ದಾಳೆ. ಕಿಮೋಥೆರಪಿ ಚಿಕಿತ್ಸೆಯಿಂದಾಗಿ ಕೂದಲು ತೆಗೆಸಿಕೊಂಡಿದ್ದರೂ ಆಕೆ ವಿಗ್ ಧರಿಸಲು ನಿರಾಕರಿಸುತ್ತಾಳೆ. ತನ್ನಲ್ಲಿರುವ ಕ್ಯಾನ್ಸರ್ ನ್ನು ಮುಚ್ಚಿಡಲು ಬಯಸುವುದಿಲ್ಲವೆಂದು ಆಕೆ ಹೇಳುತ್ತಾಳೆ. ಅನ್ಯಾ ಒಟ್ಲೆ ಭವಿಷ್ಯಕ್ಕೆ ಒಳ್ಳೆಯದಾಗಲಿ ಎಂದು ಬೋಲ್ಡ್ ಸ್ಕೈ ಹಾರೈಸುತ್ತದೆ ಮತ್ತು ಆಕೆಯು ಕ್ಯಾನ್ಸರ್ ನಿಂದ ಸಂಪೂರ್ಣವಾಗಿ ಮುಕ್ತಳಾಗಲಿ ಎನ್ನುವುದು ನಮ್ಮೆಲ್ಲರ ಪ್ರಾರ್ಥನೆ.

English summary

Girl With Kidney Cancer Sings Sweetly

Fighting cancer is one of the bravest things for anybody and for a child who is very young and suffering from cancer, it can be painful to see them handle life. Here is one such video of a young girl who has kidney cancer and yet is trying hard to spread smiles to her loved ones by singing a song at a wedding. The young girl, Anya Ottley took to the floor with confidence, grabbed the mic and started singing in a video that became an overnight viral sensation. This young brave little girl shows incredible determination to beat the illness that has been killing her slowly.
Story first published: Saturday, August 4, 2018, 13:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more