Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ವಾಟ್ಸ್ ಆಪ್‌ನಲ್ಲಿ ಸೋನಾಲಿ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ!
ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಹಬ್ಬುವಂತಹ ಸುಳ್ಳು ಸುದ್ದಿಗಳಿಗೆ ಯಾವುದೇ ನಿರ್ಬಂಧವಿಲ್ಲದೆ ಇರುವುದರಿಂದ ಹಲವಾರು ಮಂದಿ ಪ್ರಾಣ ಕಳೆದುಕೊಂಡು, ಇನ್ನು ಕೆಲವರು ಮಾನಹಾನಿಗೀಡಾಗಿರುವಂತಹ ಘಟನೆಗಳು ನಡೆಯುತ್ತಲೇ ಇದೆ. ಇತ್ತೀಚೆಗೆ ವಾಟ್ಸ್ ಆ್ಯಪ್ ನಲ್ಲಿ ಮಕ್ಕಳ ಕಳ್ಳರ ಬಗ್ಗೆ ಸುಳ್ಳು ಸುದ್ದಿಯು ಹಬ್ಬಿದ ಕಾರಣದಿಂದಾಗಿ ಕೆಲವು ಅಪರಿಚಿತರನ್ನು ಸ್ಥಳೀಯರು ಹೊಡೆದು ಕೊಂದಿದ್ದಾರೆ. ಇಂತಹದ್ದೇ ಸುದ್ದಿಯೊಂದು ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಅವರ ಬಗ್ಗೆ ಹಬ್ಬಿದೆ.
ಸೋನಾಲಿ ಬೇಂದ್ರೆ ಅವರಿಗೆ ಕ್ಯಾನ್ಸರ್ ಇದೇ ಎಂದು ಅವರು ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಿಡಿಗೇಡಿಗಳು, ವಾಟ್ಸ್ ಆ್ಯಪ್ ನಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಸೋನಾಲಿ ಬೇಂದ್ರೆ ಅವರ ಆರೋಗ್ಯ ಸ್ಥಿತಿಯು ತೀರ ಹದಗೆಟ್ಟಿದೆ ಮತ್ತು ಕ್ಯಾನ್ಸರ್ ಈಗಾಗಲೇ ಹಬ್ಬಿದೆ ಎನ್ನುವುದು ಹರಡುತ್ತಿರುವ ಸುಳ್ಳು ಸುದ್ದಿ. ಇದರ ಬಗ್ಗೆ ಮತ್ತಷ್ಟು ತಿಳಿಯಿರಿ...
ಎಲ್ಲವೂ ಸುಳ್ಳು ಸುದ್ದಿಗಳು.
ನಟಿ ಸೋನಾಲಿ ಬೇಂದ್ರೆಯ ಆರೋಗ್ಯವು ತೀರ ಹದಗೆಡುತ್ತಿದೆ. ಯಾಕೆಂದರೆ ಕ್ಯಾನ್ಸರ್ ಈಗಾಗಲೇ ಹಬ್ಬಿದೆ. ತಮ್ಮ ಆರೋಗ್ಯ ಸ್ಥಿತಿ ಬಗ್ಗೆ ಸೋನಾಲಿ ಬೇಂದ್ರೆ ಈಗಾಗಲೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಮಾಧ್ಯಮಗಳಿಗೆ ಆಕೆ ಇದರ ಬಗ್ಗೆ ತಿಳಿಸಿಲ್ಲ
ತಾನು ಕ್ಯಾನ್ಸರ್ ನಿಂದ ಬಳಲುತ್ತಿದ್ದೇನೆ ಎಂದು ಹೇಳಿರುವ ಸೋನಾಲಿ ಅವರು, ಇದು ಯಾವ ರೀತಿಯ ಕ್ಯಾನ್ಸರ್ ಎಂದು ಇದುವರೆಗೆ ಮಾಧ್ಯಮಗಳಿಗೂ ಹೇಳಿಲ್ಲ. ವರದಿಗಳ ಪ್ರಕಾರ ಆಕೆಗೆ ಗರ್ಭಕೋಶದ ಕ್ಯಾನ್ಸರ್ ಇರುವುದಾಗಿ ತಿಳಿದುಬಂದಿದೆ.
ವಾಟ್ಸ ಆ್ಯಪ್ ಸಂದೇಶ
ಮಹಿಳೆಯರು ಏನು ಮಾಡಬೇಕು ಮತ್ತು ಏನು ಮಾಡಬಾರದು ಎನ್ನುವ ಸಂದೇಶಗಳು ವಾಟ್ಸ್ ಆ್ಯಪ್ ನಲ್ಲಿ ಹರಿದಾಡುತ್ತಿರುವುದು ದೊಡ್ಡ ಸುಳ್ಳಿನ ಕಂತೆ.
ಇದು ನಗು ಮೂಡಿಸುವುದು
ಸೋನಾಲಿ ಬೇಂದ್ರೆ ಅವರಿಗೆ ಇರುವ ಗರ್ಭಾಶಯದ ಕ್ಯಾನ್ಸರ್ ಬಗ್ಗೆ ವಾಟ್ಸ್ ಆ್ಯಪ್ ಸಂದೇಶದ ಆರಂಭದಲ್ಲಿ ಚರ್ಚಿಸಲಾಗಿದೆ. ಇದರ ಬಳಿಕ ಅದು ನಿಧಾನವಾಗಿ ಸ್ತನ ಕ್ಯಾನ್ಸರ್ ನತ್ತ ವಾಲುತ್ತದೆ. ಸುದ್ದಿ ಬರೆದವನಿಗೆ ಆರೋಗ್ಯದ ಬಗ್ಗೆ ಕಿಂಚಿತ್ತು ಜ್ಞಾನವಿಲ್ಲ. ಯಾಕೆಂದರೆ ಅವೆಲ್ಲವೂ ಸುಳ್ಳು ಮುನ್ನೆಚ್ಚರಿಕೆಗಳು.
ವಾಟ್ಸ್ ಆ್ಯಪ್ ನಲ್ಲಿ ಕಾಣಿಸುವ ಸಂದೇಶಗಳು...
ನಿಮ್ಮ ದೇಹದ ಪೋಷಣೆ ಮಾಡಿ
ನಿಮ್ಮ ಬ್ರಾಗಳನ್ನು ದಿನಾಲೂ ತೊಳೆಯಿರಿ
ಬೇಸಿಗೆಯಲ್ಲಿ ಕಪ್ಪು ಬ್ರಾ ಧರಿಸಬೇಡಿ.
ಮಲಗುವಾಗ ಬ್ರಾ ಧರಿಸಬೇಡಿ.
ಸೂರ್ಯನ ಬಿಸಿಲಿಗೆ ಹೋಗುವಾಗ ನಿಮ್ಮ ಎದೆಯನ್ನು ಸಂಪೂರ್ಣವಾಗಿ ದುಪಟ್ಟಾ ಅಥವಾ ಸ್ಕ್ರಾಪ್ ನಿಂದ ಮುಚ್ಚಿಕೊಳ್ಳಿ.
ಡಿಯೋಡ್ರೆಂಟ್ ಬಳಸಿ, ಆಂಟಿಪೆರ್ಸ್ಪಿಂಟ್ ಅಲ್ಲ.
ಇದೆಲ್ಲವೂ ಸುಳ್ಳು ಸುದ್ದಿಗಳು ಮತ್ತು ಇದಕ್ಕೆ ಯಾವುದೇ ರೀತಿಯಿಂದಲೂ ವೈಜ್ಞಾನಿಕವಾದ ಸಾಕ್ಷ್ಯಗಳಿಲ್ಲ. ಇಂತಹ ಬರಹಗಳು ಕೇವಲ ಗೊಂದಲ ಮತ್ತು ಸುಳ್ಳು ನಂಬಿಕೆಗಳನ್ನು ಉಂಟು ಮಾಡುತ್ತದೆ ಎಂದು ಕಿಡಿಗೇಡಿಗಳು ಅರ್ಥ ಮಾಡಿಕೊಳ್ಳಬೇಕು.
ನೀವು ಕೂಡ ಇಂತಹ ಸಂದೇಶಗಳು ಬಂದಾಗ ಅದನ್ನು ಪರಾಮರ್ಶೆ ಮಾಡದೆ ಫಾರ್ವರ್ಡ್ ಮಾಡಲು ಹೋಗಬೇಡಿ. ಇದರ ಬಗ್ಗೆ ನಿಮ್ಮ ಅನಿಸಿಕೆಯೇನು? ಇದರ ಬಗ್ಗೆ ಕಮೆಂಟ್ ಬಾಕ್ಸ್ ನಲ್ಲಿ ನಮಗೆ ತಿಳಿಸಿ.