For Quick Alerts
ALLOW NOTIFICATIONS  
For Daily Alerts

ಜುಲೈ 27 ರ ಚಂದ್ರ ಗ್ರಹಣ: ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಹೇಗಿರುತ್ತದೆ?

By Deepu
|

ಶತಮಾನದ ಅತೀ ದೀರ್ಘ ಚಂದ್ರ ಗ್ರಹಣ ಜುಲೈ ಜುಲೈ 27, ,2018ರಂದು ನಡೆಯಲಿದೆ. ಇದನ್ನು ವರ್ಷದ ಎರಡನೇ ಅತಿ ದೊಡ್ಡ ಗ್ರಹಣ ಎಂದು ಪರಿಗಣಿಸಲಾಗಿದೆ. ವಿಶೇಷವೆಂದರೆ ಅದೇ ದಿನವೇ ಗುರುಪೂರ್ಣಿಮೆ ಬಂದಿರುವುದು. ಚಂದ್ರಗ್ರಹಣವು 27ರ ರಾತ್ರಿ 11:54 ರಿಂದ 28ರ ಬೆಳಿಗ್ಗೆ 3:55ರ ತನಕ ಇರುವುದು.

ಇನ್ನು ಈ ಚಂದ್ರಗ್ರಹಣವು ಶತಮಾನದ ಅತೀ ದೀರ್ಘ ಚಂದ್ರಗ್ರಹಣವೆಂದು ಹೇಳಲಾಗುತ್ತಿದೆ ಮತ್ತು ಈ ವೇಳೆ ಬ್ಲಡ್ ಮೂನ್ ಕಾಣಿಸಿಕೊಳ್ಳಲಿದೆ. ಇದು ತುಂಬಾ ಅಪರೂಪದ ವಿದ್ಯಮಾನ. ಜುಲೈ 27 ಮತ್ತು ಜುಲೈ 28ರ ರಾತ್ರಿಗಳಲ್ಲಿ ಬ್ಲಡ್ ಮೂನ್ ಕಾಣಿಸಿಕೊಳ್ಳಲಿದೆ. ಜುಲೈ 27ರಂದು ನಡೆಯಲಿರುವ ಚಂದ್ರಗ್ರಹಣವು ಸುಮಾರು ಒಂದು ಗಂಟೆ ಮತ್ತು 43 ನಿಮಿಷಗಳ ಕಾಲ ಸುದೀರ್ಘವಾಗಲಿದೆ.

ಜ್ಯೋತಿಶಾಸ್ತ್ರದ ಪ್ರಕಾರ ಚಂದ್ರನ ಮೇಲೆ ರಾಹುವಿನ ದೃಷ್ಟಿ ಬಿದ್ದಾಗ ಅದು ದೊಡ್ಡ ಮಟ್ಟದ ಚಂದ್ರದೋಷವೆಂದು ಕರೆಯಲಾಗುತ್ತದೆ. ಜನ್ಮ ಕುಂಡಲಿಯಲ್ಲಿ ಚಂದ್ರನು ಕೆಲವೊಂದು ಅಪವಿತ್ರ ಸ್ಥಾನಗಳಲ್ಲಿ ಇದ್ದರೆ ಆಗ ಚಂದ್ರದೋಷವು ಕಂಡುಬರುವುದು. ಇದರಿಂದಾಗಿ ಅತಿಯಾದ ಚಿಂತೆ ಮತ್ತು ಒತ್ತಡ ಬರುವುದು. ಇದರಿಂದ ಆದಷ್ಟು ಮಟ್ಟಿಗೆ ನೀವು ಚಂದ್ರಗ್ರಹಣ ನೋಡುವುದರಿಂದ ದೂರವಿರಿ. ವಿವಾಹಿತರಿಗೂ ಇದರಿಂದ ದೂರವಿರಲು ಹೇಳಲಾಗುತ್ತದೆ. ಅದರಲ್ಲೂ ಗರ್ಭಿಣಿ ಮಹಿಳೆಯರು ಚಂದ್ರಗ್ರಹಣ ವೀಕ್ಷಿಸಲೇಬಾರದು.

ಈ ಗ್ರಹಣದ ಸಮಯದಲ್ಲಿ ಶನಿಯ ಮನೆ ಮತ್ತು ಚಂದ್ರನ ಮನೆಯಿಂದ ಪರಿಣಾಮ ಉಂಟಾಗುವುದು. ಇದರಿಂದಾಗಿ ಧನು, ಮಕರ ಮತ್ತು ವೃಶ್ಚಿಕ ರಾಶಿಯವರಿಗೆ ಈ ಮೂಲಕ ಸಾಡೇ ಸಾತಿ ಶನಿಯು ಪ್ರಾರಂಭವಾಗುವುದು. ಇದರ ಪರಿಣಾಮವಾಗಿ ರಾಶಿಚಕ್ರಗಳು ಋಣಾತ್ಮಕ ಪರಿಣಾಮವನ್ನು ಎದುರಿಸಬೇಕಾಗುವುದು. ಆದರೆ ಇದಕ್ಕೆ ಚಿಂತಿಸಬೇಕಾಗಿಲ್ಲ ಋಣಾತ್ಮಕ ಪರಿಣಾಮಕ್ಕೆ ಒಳಗಾಗುವ ರಾಶಿಯವರು ಈಶ್ವರ ದೇವರನ್ನು ಆರಾಧಿಸಬೇಕು. ಚಂದ್ರಗ್ರಹಣದ ದಿನ ದಾನ ಮಾಡಿದರೆ ತುಂಬಾ ಫಲಪ್ರದವಾಗಿರುವುದು. ಯಾವ ರೀತಿಯ ದಾನ ಮಾಡಬೇಕೆಂದರೆ ಚಿನ್ನದಿಂದ ಮಾಡಿದ ಸರ್ಪ, ಬೆಳ್ಳಿ ಅಥವಾ ತಾಮ್ರವನ್ನು ತಾಮ್ರದ ಪಾತ್ರೆಯಲ್ಲಿ ಹಾಕಿ ಅದರೊಟ್ಟಿಗೆ ಕಪ್ಪು ಎಳ್ಳನ್ನು ಹಾಕಿ ಕೊಟ್ಟರೆ ತುಂಬಾ ಪವಿತ್ರವೆಂದು ಪರಿಗಣಿಸಲಾಗಿದೆ.

ಇನ್ನು ಗ್ರಹಣದ ಸಮಯವು ಸೂತಕದ ಕಾಲ ಎಂದು ಕರೆಯಲಾಗುವುದು. ಗ್ರಹಣದ ಪರಿಣಾಮವು 108 ದಿನಗಳ ಕಾಲ ಇರುತ್ತದೆ ಎನ್ನುವ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿಯೇ ಯಾವ ರಾಶಿಯವರು ಬದಲಾವಣೆಯನ್ನು ಅನುಭವಿಸಬೇಕಾಗುವುದು ಎನ್ನುವುದನ್ನು ಪರಿಶಿಲಿಸಿ.

ಮೇಷ

ಮೇಷ

ಇವರಿಗೆ ಈ ಗ್ರಹಣದಿಂದ ಮಂಗಳಕರವಾದ ಸಮಯ ಒದಗಿ ಬರುವುದು. ಗ್ರಹಣದಿಂದ ಹೊಸ ಮತ್ತು ಉತ್ತಮ ಅವಕಾಶಗಳನ್ನು ವೃತ್ತಿಪರವಾಗಿ ಸೇರಿಸುವುದರ ಮೂಲಕ ಹಣಕಾಸಿನ ಲಾಭವನ್ನು ತಂದುಕೊಡುವುದು ಎಂದು ಹೇಳಗಾಗುತ್ತದೆ. ಮೇಷ ರಾಶಿಯವರು ಮಂಗಳ ಗ್ರಹದಿಂದ ಆಳಲ್ಪಡುತ್ತಾರೆ. ಇವರು ತ್ರಿಮುಖ ರುದ್ರಾಕ್ಷಿಯನ್ನು ಧರಿಸಬೇಕು. ಆಗ ಉತ್ತಮ ಅದೃಷ್ಟ ದೊರೆಯುವುದು. ಇನ್ನು ಈ ರುದ್ರಾಕ್ಷಿಯನ್ನು ಧರಿಸುವಾಗ "ಓ೦ ಕ್ಲೀ೦ ನಮ:" ಮಂತ್ರವನ್ನು ಪಠಿಸಬೇಕು

ವೃಷಭ

ವೃಷಭ

ಈ ಗ್ರಹಣವು ವೃಷಭ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಉತ್ತಮ ಅವಕಾಶವನ್ನು ತಂದುಕೊಡುವುದು ಎಂದು ಹೇಳಲಾಗುವುದು. ಈ ಸಮಯದಲ್ಲಿ ಹನುಮಾನ್ ಚಾಲೀಸ ಓದುವುದರಿಂದ ಅದೃಷ್ಟ ದ್ವಿಗುಣವಾಗುವುದು.

ಹನುಮಾನ್ ಚಾಲೀಸ ಮಂತ್ರ

ಜಯ ಹನುಮಾನ್ ಜ್ಞಾನ ಗುಣಸಾಗರ ! ಜಯ ಕಪೀಶ ತಿಹುಲೋಕ ವುಜಾಗರ

ರಾಮದೂತ ಆತುಲಿತ ಬಲಧಮಾ

ಅಂಜನೀಪ್ರತ್ರ- ಪವನಸುತ ನಾಮಾ

ಮಹಾವೀರ ವಿಕ್ರಮ ಬಜರಂಗೀ ಕುಮತಿ ನಿವಾರಾ ಸುಮತಿ ಕೇ ಸಂಗೀ

ಕಂಚನವರಣ ವಿರಾಜ ಸುವೇಶಾ ಕಾನನ ಕುಂಡಲ ಕುಂಚಿತ ಕೇಶಾ

ಮಿಥುನ

ಮಿಥುನ

ಇವರಿಗೆ ಆರೋಗ್ಯ, ಬುದ್ಧಿವಂತಿಕೆಗೆ ಸಂಬಂಧಿಸಿದಂತೆ ಕೆಲವು ನಕಾರಾತ್ಮಕ ಫಲಿತಾಂಶವನ್ನು ಅನುಭವಿಸಬೇಕಾಗುವುದು. ಕೆಲವು ಅನಿರೀಕ್ಷಿತ ತೊಂದರೆಯನ್ನು ಅನುಭವಿಸಬೇಕಾಗುವುದು. ಆದರೆ ಆರ್ಥಿಕವಾಗಿ ಕೆಲವು ಲಾಭವನ್ನು ಅನುಭವಿಸುವರು.

ಕರ್ಕ

ಕರ್ಕ

ಇವರು ಚಂದ್ರಗ್ರಹಣದಿಂದ ಚಂದ್ರನಷ್ಟೇ ಕಷ್ಟದ ಸಮಯವನ್ನು ಅನುಭವಿಸಬೇಕಾಗುವುದು. ಸುರಕ್ಷತೆಗಾಗಿ ಆದಷ್ಟು ಎಚ್ಚರಿಕೆಯಿಂದ ಇರಬೇಕಾಗುವುದು. ಸಾಮಾನ್ಯವಾಗಿ ಕರ್ಕ ರಾಶಿಯವರು ಚಂದ್ರನಿಂದ ಆಳಲ್ಪಡುತ್ತಾರೆ. ಇವರು ದ್ವಿಮುಖ ರುದ್ರಾಕ್ಷಿಯನ್ನು ಧರಿಸಬೇಕು. ಆಗ ಉತ್ತಮ ಅದೃಷ್ಟ ದೊರೆಯುವುದು.ಇದನ್ನು ದೋಮುಖಿ ರುದ್ರಾಕ್ಷಿಯನ್ನು ದೇವದೇವೇಶ್ವರನೆ೦ದೂ ಕೂಡ ಕರೆಯುತ್ತಾರೆ. ಸಕಲ ಮನೋಭೀಷ್ಟೆಗಳ ಈಡೇರಿಕೆಗಾಗಿ ರುದ್ರಾಕ್ಷಿವನ್ನು ಧರಿಸಿಕೊಳ್ಳಬೇಕು. ಈ ರುದ್ರಾಕ್ಷಿಕ್ಕೆ ಸ೦ಬ೦ಧಿಸಿದ ಮ೦ತ್ರವು "ಓ೦ ನಮ:" ಎ೦ದಾಗಿದೆ. ದೋಮುಖಿ ರುದ್ರಾಕ್ಷಿವನ್ನು ಧರಿಸಿಕೊ೦ಡಿರುವಾಗ ಈ ಮ೦ತ್ರವನ್ನು ಪಠಿಸಬೇಕು.

ಸಿಂಹ

ಸಿಂಹ

ಇವರಿಗೆ ಒಂದಿಷ್ಟು ಸಂತೋಷ ಹಾಗೂ ಅದೃಷ್ಟವು ದೊರೆಯುವುದು. ಕುಟುಂಬದವರೊಡನೆ ಘರ್ಷಣೆ ಉಂಟಾದರೂ ಕೆಲವು ಸಂತೋಷದ ಸುದ್ದಿಯನ್ನು ಕೇಳುವರು. ಇವರಿಗೆ ಗ್ರಹಣವು ಮಿಶ್ರ ಫಲವನ್ನು ನೀಡುವುದು.

ಕನ್ಯಾ

ಕನ್ಯಾ

ಈ ರಾಶಿಯವರು ಗ್ರಹಣದ ಸಮಯದಲ್ಲಿ ಶಿವನ ಜಪವನ್ನು ಮಾಡಬೇಕು. ಇವರು ಹೀಗೆ ಮಾಡುವುದರಿಂದ ದೇವರ ಆಶೀರ್ವಾದ ಪಡೆದುಕೊಳ್ಳುವರು. ಜೊತೆಗೆ ಒಂದಿಷ್ಟು ಅದೃಷ್ಟಗಳು ಲಭಿಸುವುದು.

ತುಲಾ

ತುಲಾ

ಇವರಿಗೆ ಗ್ರಹಣವು ಉತ್ತಮ ಸುದ್ದಿಯನ್ನು ತಂದುಕೊಡುವುದು. ಆಸ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುವರು.

ವೃಶ್ಚಿಕ

ವೃಶ್ಚಿಕ

ಗ್ರಹಣ ಇವರಿಗೆ ಮಿಶ್ರ ಫಲವನ್ನು ನೀಡುವುದು. ಮುಂಬರುವ ದಿನಗಳಲ್ಲಿ ಹೆಚ್ಚು ಉತ್ತಮ ಅವಕಾಶಗಳನ್ನು ಪಡೆದುಕೊಳ್ಳುವರು.

 ಧನು

ಧನು

ಈ ರಾಶಿಯವರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಕುಟುಂಬ ಸಮಸ್ಯೆ ಹಾಗೂ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಭಾದಿಸುವುದು. ಆದರೆ ಇದಕ್ಕೆ ಚಿಂತಿಸಬೇಕಾಗಿಲ್ಲ, ಈ ರಾಶಿಯವರಯ ಗುರುಗ್ರಹದಿಂದ ಆಳಲ್ಪಡುತ್ತಾರೆ ಇವರು ಪಂಚ ಮುಖ ರುದ್ರಾಕ್ಷಿಯನ್ನು ಧರಿಸಬೇಕು. ಆಗ ಉತ್ತಮ ಅದೃಷ್ಟ ದೊರೆಯುವುದು. ತಮ್ಮೆಲ್ಲಾ ದು:ಖದುಮ್ಮಾನಗಳನ್ನು ನಿವಾರಿಸಿಕೊಳ್ಳಬಯಸುವವರು ಹಾಗೂ ತಮ್ಮ ಕೋರಿಕೆಗಳೆಲ್ಲವೂ ನೆರವೇರಬೇಕೆ೦ದು ಇಚ್ಚಿಸುವವರು ಈ ರುದ್ರಾಕ್ಷಿಯನ್ನು ಧರಿಸಿಕೊಳ್ಳಬೇಕು. ಈ ರುದ್ರಾಕ್ಷಿಕ್ಕೆ ಸ೦ಬ೦ಧಿಸಿದ ಮ೦ತ್ರವು " ಓ೦ ಹ್ರೀ೦ ನಮ:" ಎ೦ದಾಗಿದೆ. ಪಾ೦ಚ್ ಮುಖಿ ರುದ್ರಾಕ್ಷಿವನ್ನು ಧರಿಸಿಕೊ೦ಡಿರುವಾಗ ಈ ಮ೦ತ್ರವನ್ನು ಪಠಿಸಬೇಕು.

ಮಕರ

ಮಕರ

ಚಂದ್ರಗ್ರಹಣವು ಈ ರಾಶಿಯ ಮೇಲೆ ಹಿಡಿಯುತ್ತದೆ ಎನ್ನಲಾಗಿದೆ. ಇವರಿಗೆ ಕೆಲವು ಅವಕಾಶಗಳು ದೊರೆಯುತ್ತವೆಯಾದರೂ ಮಾನಸಿಕ ಚಿಂತೆ ಹೆಚ್ಚು ಕಾಡುವುದು ಎನ್ನಲಾಗುತ್ತದೆ. ಮಕರ ರಾಶಿಯವರಯ ಶನಿಗ್ರಹದಿಂದ ಆಳಲ್ಪಡುತ್ತಾರೆ ಇವರು ಸಪ್ತ(7)ಮುಖ ಮತ್ತು ಚತುರ್ದಶ ಮುಖ ರುದ್ರಾಕ್ಷಿಯನ್ನು ಧರಿಸಿ "ಓ೦ ಹು೦ ನಮ:" ಮಂತ್ರವನ್ನು ಪಠಿಸಬೇಕು

ಕುಂಭ

ಕುಂಭ

ದೈಹಿಕ ಹಾಗೂ ಮಾನಸಿಕ ಚಿಂತನೆಗಳು ಈ ರಾಶಿಚಕ್ರದವರಿಗೆ ಹೆಚು ಕಾಡುವುದು. ಗ್ರಹಣದ ಫಲವು ಇವರಿಗೆ ಋಣಾತ್ಮಕವಾಗಿದೆ ಎಂದು ಹೇಳಲಾಗುವುದು.

ಮೀನ

ಮೀನ

ಈ ವ್ಯಕ್ತಿಗಳು ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಜಾಗರೂಕರಾಗಿರಬೇಕು. ಆದಾಗ್ಯೂ ಅವರಿಗೆ ಪರಿಣಾಮಗಳು ಕಡಿಮೆ ಬೀರುತ್ತವೆ. ಗ್ರಹಣದ ಪ್ರಭಾವವು ಒಟ್ಟಾರೆ ರಾಶಿ ಚಕ್ರಗಳಿಗೆ ಮಿಶ್ರ ಫಲಿತಾಂಶವನ್ನು ನೀಡುತ್ತದೆ. ಇನ್ನು ಮೀನ ರಾಶಿಯವರಯ ಗುರುಗ್ರಹದಿಂದ ಆಳಲ್ಪಡುತ್ತಾರೆ ಇವರು ಪಂಚ ಮುಖ ಮತ್ತು ತ್ರಿಮುಖ ರುದ್ರಾಕ್ಷಿಯನ್ನು ಧರಿಸಬೇಕು. ಆಗ ಉತ್ತಮ ಅದೃಷ್ಟ ದೊರೆಯುವುದು.

English summary

Effects of Lunar Eclipse on Zodiac Signs and Remedies

The biggest lunar eclipse of the century is going to occur on Jul 27, 2018. It is the second big eclipse of the year. On the same day, shall we celebrate, Guru Purnima. This eclipse will occur on July 27, 2018,from 11:54 pm on July 27, to 3:55 am on July 28. As the eclipse in occurring in Capricorn, the house of Lord Shani, both the Saturn as well as Moon will be showing their effects on it. Sagittarius, Capricorn and Scorpion are going through the Saade Saati period.
Story first published: Thursday, July 26, 2018, 17:04 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more