Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕತ್ತೆಗೆ ಜಿಬ್ರಾದ ಬಣ್ಣ ಬಳಿದ ಮೃಗಾಲಯದ ಸಿಬ್ಬಂದಿ ಮಾಡಿದ್ದೇನು?
ಕೆಲವೊಂದು ಟಿವಿ ಚಾನೆಲ್ ಗಳನ್ನು ನೋಡಿದರೆ ಅಲ್ಲಿ ಜನರನ್ನು ಮೂರ್ಖರನ್ನಾಗಿಸಿಕೊಂಡು ನಗಿಸುವಂತಹ ಕಾರ್ಯಕ್ರಮಗಳು ಕಾಣಸಿಗುತ್ತದೆ. ಮೂರ್ಖರನ್ನಾಗಿಸಲು ಹೆಚ್ಚಿನ ಬುದ್ಧಿ, ಕ್ರಿಯಾತ್ಮಕತೆ ಹಾಗೂ ಚುರುಕುತನ ಬೇಕಾಗುತ್ತದೆ. ಈ ಕಾರ್ಯಕ್ರಮದಲ್ಲಿ ಕೆಲವರು ಇದರಲ್ಲಿ ಮೂರ್ಖರಾದರೂ ಇನ್ನು ಕೆಲವರು ಮೂರ್ಖರನ್ನಾಗಿಸಲು ಬಂದವರನ್ನೇ ಬೆಚ್ಚಿಬೀಳಿಸಿದ್ದಾರೆ. ಇಂತಹ ಘಟನೆಯೊಂದು ಈಜಿಪ್ಟ್ ನ ಮೃಗಾಲಯವೊಂದರಲ್ಲಿ ನಡೆದಿದೆ. ಇಲ್ಲಿಗೆ ಬರುವಂತಹ ಪ್ರವಾಸಿಗರನ್ನು ಮೋಸ ಮಾಡುವ ಸಲುವಾಗಿ ಮೃಗಾಲಯದ ಸಿಬ್ಬಂದಿ ಕತ್ತೆಯೊಂದಕ್ಕೆ ಜಿಬ್ರಾದ ಬಣ್ಣ ಹಚ್ಚಿದ್ದಾರೆ.
ಇದು ದೊಡ್ಡ ಜೋಕ್ ಎಂದು ನಿಮಗೆ ಅನಿಸಬಹುದು. ಆದರೆ ಇದು ನಿಜ. ಕತ್ತೆ ಜಿಬ್ರಾವಾಗಿರುವುದನ್ನು ಕೆಲವು ಜಾಣ ಪ್ರವಾಸಿಗರು ಪತ್ತೆ ಹಚ್ಚಿ, ಮೃಗಾಲಯದ ಸಿಬ್ಬಂದಿಯೇ ಬೆಚ್ಚಿಬೀಳುವಂತೆ ಮಾಡಿದ್ದಾರೆ.

ಕತ್ತೆಗೆ ಬಿಳಿ ಹಾಗೂ ಕಪ್ಪು ಬಣ್ಣವನ್ನು ಹಚ್ಚಿ ಜಿಬ್ರಾದಂತೆ ಮಾಡಿದ್ದರು. ಆದರೆ ಬಣ್ಣ ಕರಗಲು ಆರಂಭವಾದಾಗ ಏನಾಯಿತು ನೀವೇ ನೋಡಿ...
ಕೈರೋದಲ್ಲಿ ವಿದ್ಯಾರ್ಥಿಯಾಗಿರುವಂತಹ ಮಹಮ್ಮದ್ ಎ. ಸರಹಾನಿ ಈ ವಿಚಿತ್ರ ಜಿಬ್ರಾದ ಫೋಟೊ ತೆಗೆದು ಅದನ್ನು ಶೇರ್ ಮಾಡಿದ್ದಾನೆ. ಇದಕ್ಕೆ ಉದ್ದ ಕೂದಲು ಮಾತ್ರವಲ್ಲದೆ ದೇಹಕ್ಕೆ ವಿಚಿತ್ರವಾಗಿ ಬಣ್ಣ ಕೂಡ ಹಚ್ಚಲಾಗಿತ್ತು. ತುಂಬಾ ಹತ್ತಿರದಿಂದ ಪರಿಶೀಲನೆ ಮಾಡಿದರೆ ಈ ಜಿಬ್ರಾವು ತನ್ನ ಜಾತಿಯ ವಿಶೇಷ ಕೇಸರ ಹೊಂದಿಲ್ಲವೆಂದು ತಿಳಿದುಬಂತು. ಕತ್ತೆಯ ಕೂದಲು ಕತ್ತರಿಸಿ ನುಣ್ಣಗೆ ಮಾಡಿಕೊಂಡು ಅದಕ್ಕೆ ಜಿಬ್ರಾದಂತೆ ಬಿಳಿ ಹಾಗೂ ಕಪ್ಪು ಬಣ್ಣ ಹಚ್ಚಿದ್ದಾರೆ.
ಜಿಬ್ರಾವು ಅಸಲಿಯಲ್ಲ ನಕಲಿ, ಇದು ಒಂದು ಕತ್ತೆಯೆಂದು ತಿಳಿದ ಹಲವಾರು ಮಂದಿ ಈ ಫೋಟೊವನ್ನು ಶೇರ್ ಮಾಡಿದ್ದಾರೆ. ಕೆಲವರು ಇದನ್ನು ನೋಡಿ ಬಿದ್ದು ಬಿದ್ದು ನಕ್ಕರೆ, ಇನ್ನು ಕೆಲವು ಪ್ರಾಣಿ ಪ್ರಿಯರು ಕತ್ತೆಗೆ ಬಣ್ಣದ ರಾಸಾಯನಿಕದಿಂದ ಹಾನಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.



Click it and Unblock the Notifications
