Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ವೈದ್ಯರ ಪಿತ್ತಕೋಶದಲ್ಲಿತ್ತು ಹತ್ತುಸಾವಿರ ಕಲ್ಲುಗಳು...!
ಮಹಾತ್ಮ ಗಾಂಧೀಜಿಯವರು ಯಾರಿಗಾದರೂ ಉಪದೇಶ ಮಾಡುವ ಮೊದಲು ಅದನ್ನು ತಾನೇ ಪಾಲಿಸಿಕೊಂಡು ತನ್ನಿಂದ ಸಾಧ್ಯವಾದರೆ ಮಾತ್ರ ಬೇರೆಯವರಿಗೆ ಉಪದೇಶ ಮಾಡಲು ಹೋಗುತ್ತಲಿದ್ದರು. ಉಪದೇಶ ಮಾಡುವ ಮೊದಲು ಅದನ್ನು ಪಾಲಿಸಬೇಕು ಎಂದು ಹಿಂದಿನವರು ಕೂಡ ಹೇಳಿರುತ್ತಾರೆ. ನಾವು ಯಾವುದೇ ಕಾಯಿಲೆ ಬಂದರೂ ವೈದ್ಯರಲ್ಲಿಗೆ ಓಡಿಕೊಂಡು ಹೋಗುತ್ತೇವೆ.
ಅವರಿಂದ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಅವರಿಗೆ ಮನಸ್ಸಿನಲ್ಲೇ ಧನ್ಯವಾದ ಹೇಳುತ್ತೇವೆ. ಆದರೆ ವೈದ್ಯರು ಕೂಡ ಮನುಷ್ಯ, ಅವರಿಗೆ ಕೂಡ ಕೆಲವೊಂದು ಸಲ ಕಾಯಿಲೆಗಳು ಬರಬಹುದು. ಕಾಯಿಲೆ ಬಂದಾಗ ಅವರು ತಮ್ಮ ಆರೋಗ್ಯದ ಕಾಳಜಿ ವಹಿಸಬೇಕು.
ಈ ಲೇಖನದಲ್ಲಿ ತುಂಬಾ ಅಪರೂಪದ ಸಮಸ್ಯೆಯಿಂದ ಬಳಲುತ್ತಿರುವ ವೃತ್ತಿಯಲ್ಲಿ ಪೋಷಕಾಂಶ ತಜ್ಞರಾಗಿರುವ ವೈದ್ಯರೊಬ್ಬರ ಬಗ್ಗೆ ನಿಮಗೆ ಹೇಳಲಿದ್ದೇವೆ. ಇವರ ಪಿತ್ತಕೋಶದಲ್ಲಿ ಸುಮಾರು ಹತ್ತು ಸಾವಿರದಷ್ಟು ಕಲ್ಲುಗಳಿದ್ದವು. ಮುಂದಕ್ಕೆ ಓದಿ...

ಅವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತು
ಒಂದುವರೆ ತಿಂಗಳಿಂದ ಕೊಲ್ಕತ್ತಾದ ಚೌಧರಿ ಎಂಬ ವೈದ್ಯರಿಗೆ ತೀವ್ರವಾದ ಹೊಟ್ಟೆನೋವು ಕಾಣಿಸಿಕೊಂಡಿತು. ಮೊದಲಿಗೆ ಅವರು ಇದನ್ನು ಕಡೆಗಣಿಸಿದರು. ಆದರೆ ಅಂತಿಮವಾಗಿ ನೋವು ತೀವ್ರ ಸ್ವರೂಪ ಪಡೆದಾಗ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಯುಎಸ್ ಜಿಯ ಪ್ರಕಾರ ವೈದ್ಯರ ಪಿತ್ತಕೋಶದಲ್ಲಿ ಕಲ್ಲುಗಳಿರುವುದು ಕಾಣಿಸಿಕೊಂಡಿತು.

ಎಷ್ಟು ಕಲ್ಲುಗಳಿದೆ ಎಂದು ವೈದ್ಯರಿಗೆ ತಿಳಿದಿರಲಿಲ್ಲ…
ಪೋಷಕಾಂಶ ತಜ್ಞರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿದ ವೈದ್ಯರು ಒಂದು ಕ್ಷಣ ಅವಕ್ಕಾದರು. ಯಾಕೆಂದರೆ ಅವರಿಗೆ ಎಷ್ಟು ಪ್ರಮಾಣದಲ್ಲಿ ಕಲ್ಲುಗಳು ಇರಬಹುದು ಎಂದು ಊಹೆಯೇ ಇರಲಿಲ್ಲ. ಕಲ್ಲುಗಳನ್ನು ಲೆಕ್ಕ ಹಾಕಿದಾಗ ಸುಮಾರು 10.356 ಕಲ್ಲುಗಳು ಸಿಕ್ಕಿವೆ. ಶಸ್ತ್ರಚಿಕಿತ್ಸೆಗೆ ಕೇವಲ 40 ನಿಮಿಷ ಬೇಕಾಯಿತು. ಆದರೆ ಕಲ್ಲುಗಳನ್ನು ಲೆಕ್ಕ ಹಾಕಲು ಇದಕ್ಕಿಂತ ಹೆಚ್ಚಿನ ಸಮಯ ಬೇಕಾಯಿತಂತೆ!

ಇದು ಮೊದಲ ಪ್ರಕರಣವಲ್ಲ…
ಕೊಲ್ಕತ್ತಾದಲ್ಲಿ ಇದು ಕಾಣಿಸಿಕೊಂಡಿರುವಂತಹ ಎರಡನೇ ಪ್ರಕರಣವಾಗಿದೆ. ಮೊದಲ ಪ್ರಕರಣದಲ್ಲಿ ಡಾ. ಮಖನ್ ಲಾಲ್ ಸಾಹಾ ಎಂಬವರು ವ್ಯಕ್ತಿಯೊಬ್ಬನ ಶಸ್ತ್ರಚಿಕಿತ್ಸೆ ಮಾಡಿದಾಗ ಅವರಿಗೆ ಸುಮಾರು 12 ಸಾವಿರ ಕಲ್ಲುಗಳು ಸಿಕ್ಕಿದ್ದವು.

ಪಿತ್ತಕೋಶದ ಕಲ್ಲುಗಳಿಗೆ ಕಾರಣಗಳು
ಅಧಿಕ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಇರುವಂತಹ ವ್ಯಕ್ತಿಗಳಲ್ಲಿ ಪಿತ್ತಕೋಶದ ಕಲ್ಲುಗಳು ಹೆಚ್ಚಾಗಿ ಕಂಡುಬರುವುದು. ಕೊಲೆಸ್ಟ್ರಾಲ್ ಜಮೆಯಾಗುವ ಕಾರಣದಿಂದಾಗಿ ಕಲ್ಲುಗಳು ನಿರ್ಮಾಣವಾಗುವುದು ಎನ್ನಲಾಗಿದೆ. ಅನುವಂಶೀಯ ಮತ್ತು ಜಡ ಜೀವನಶೈಲಿಯು ಪಿತ್ತಕೋಶದಲ್ಲಿ ಕಲ್ಲುಗಳ ನಿರ್ಮಾಣಕ್ಕೆ ಕಾರಣವಾಗಿದೆ.



Click it and Unblock the Notifications