For Quick Alerts
ALLOW NOTIFICATIONS  
For Daily Alerts

ಯಾವ್ಯಾವ ರಾಶಿಯವರು ಹೇಗೆಲ್ಲಾ ಸುಳ್ಳು ಹೇಳುತ್ತಾರೆ ನೋಡಿ...

By Deepu
|

ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುವ ಜನರು ನಮ್ಮೊಂದಿಗೆ ಇದ್ದಾರೆ. ಸುಳ್ಳು ಹೇಳುವುದು ತಪ್ಪು. ಸದಾ ಸತ್ಯವನ್ನೇ ಹೇಳಬೇಕು ಎನ್ನುವುದು ಎಲ್ಲರೂ ತಿಳಿದಿರುತ್ತಾರೆ. ಆದರೂ ಸುಳ್ಳನ್ನು ಹೇಳುತ್ತಾರೆ. ಅಂದರೆ ಅನೇಕ ಸಂದರ್ಭಲ್ಲಿ ವ್ಯಕ್ತಿ ತಾನು ಒಳ್ಳೆಯ ವ್ಯಕ್ತಿ ಎನ್ನುವುದನ್ನು ತೋರಿಸಿಕೊಳ್ಳುವ ಉದ್ದೇಶದಿಂದ ಸುಳ್ಳನ್ನು ಹೇಳುತ್ತಾನೆ. ಒಮ್ಮೊಮ್ಮೆ ಒಂದು ಸುಳ್ಳನ್ನು ಮುಚ್ಚಲು ಇನ್ನೊಂದು ಸುಳ್ಳು ಹೇಳುತ್ತಾರೆ. ಹಾಗೆಯೇ ಸುಳ್ಳಿನ ಸುರಿಮಳೆಯೇ ಸುರಿಯುವ ಸಾಧ್ಯತೆಗಳಿರುತ್ತವೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ತನ್ನ ರಾಶಿಚಕ್ರಗಳಿಗೆ ಅನುಗುಣವಾಗಿ ಸುಳ್ಳನ್ನು ಹೇಳುತ್ತಾನೆ. ಆ ಸುಳ್ಳು ಬಹುತೇಕ ಸಂದರ್ಭದಲ್ಲಿ ಒಂದೇ ಬಗೆಯಲ್ಲಿ ಇರುತ್ತವೆ ಎಂದು ಹೇಳಲಾಗುವುದು. ಹಾಗಾದರೆ ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಯಾವ ಸುಳ್ಳನ್ನು ಹೇಳುವಿರಿ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದಿದ್ದರೆ ಈ ಮುಂದೆ ನೀಡಿರುವ ವಿವರಣೆಯನ್ನು ಓದಿ ತಿಳಿಯಿರಿ....

ಮೇಷ:

ಮೇಷ: "ನಾನು ಚೆನ್ನಾಗಿದ್ದೇನೆ"

ಇವರು ಇತರರ ಮುಂದೆ ತಾವು ಚೆನ್ನಾಗಿದ್ದೇವೆ ಎನ್ನುವುದನ್ನು ತೋರಿಸಲು ಇಷ್ಟಪಡುತ್ತಾರೆ. ಹಾಗಾಗಿ ಬಹುತೇಕ ಸಂದರ್ಭದಲ್ಲಿ ಚೆನ್ನಾಗಿದ್ದೇವೆ ಎಂದು ತೋರಿಸಿಕೊಳ್ಳುವರು. ಹಾಗೊಮ್ಮೆ ಇವರ ಸ್ಥಿತಿ ಅಷ್ಟು ಉತ್ತಮವಾಗಿಲ್ಲವಾದರೆ ಅದನ್ನು ಮರೆ ಮಾಚಲು ಇಷ್ಟಪಡುವರು. ಇವರು ಇತರರಿಗೆ ಕಿರಿಕಿರಿಯನ್ನುಂಟುಮಾಡುವ ಸಾಧ್ಯತೆಗಳಿವೆ.

ವೃಷಭ:

ವೃಷಭ:"ಎಂದಿಗೂ ಸುಳ್ಳು ಹೇಳುವುದಿಲ್ಲ"

ಇವರು ಸದಾ ನೈತಿಕವಾಗಿ ಪರಿಪೂರ್ಣರು ಎಂದು ತೋರಿಸಲು ಬಯಸುತ್ತಾರೆ. ಇವರು ತಮ್ಮ ನಿರ್ಧಾರಗಳು ಸರಿಯಾಗಿವೆ ಎನ್ನುವುದು ಇತರರಿಗೆ ತಿಳಿದಿರಬೇಕು ಹಾಗೂ ಅವರು ತಮ್ಮನ್ನು ಪ್ರಶಂಸಿಸಬೇಕು ಎಂದು ಬಯಸುತ್ತಾರೆ. ಈ ಉದ್ದೇಶದಿಂದ ಸುಳ್ಳು ಹೇಳುತ್ತಾರೆ. ನಂತರ ತಾವು ಸುಳ್ಳನ್ನು ಹೇಳುವುದಿಲ್ಲ ಎಂದುನಂಬುವಂತೆ ಮಾತನಾಡುವರು.

ಮಿಥುನ:

ಮಿಥುನ:" ಮತ್ತೆ ನಿಮ್ಮನ್ನು ಸಂಪರ್ಕಿಸುತ್ತೇನೆ"

ಇವರು ಸಂವಹನದ ವಿಚಾರದಲ್ಲಿ ಅಷ್ಟು ಉತ್ತಮರಾಗಿರುವುದಿಲ್ಲ. ಅಂತರ್ಮುಖಿ ಸ್ವಭಾವದಿಂದಾಗಿ ಬಹುತೇಕ ಸಂದರ್ಭದಲ್ಲಿ ಸಂವಹನವನ್ನು ನಡೆಸಲು ಸಾಧ್ಯವಾಗದು. ಕೆಲವು ಸಾರಿ ನಂಬಿಕೆ ಇಲ್ಲದವರಂತೆ ವರ್ತನೆ ತೋರುವರು.

ಕರ್ಕ:

ಕರ್ಕ: "ನಾನು ಬಹುತೇಕ ಸಿದ್ಧನಾಗಿದ್ದೇನೆ"

ಸಮಯಕ್ಕೆ ಸರಿಯಾಗಿ ವಿಷಯ ಅಥವಾ ಕೆಲಸವನ್ನು ಮುಗಿಸಲು ಇವರು ಸ್ವಲ್ಪ ಕಷ್ಟ ಪಡುವರು. ಹಾಗಾಗಿ ಕೆಲಸದ ಬಗ್ಗೆ ಕೇಳಿದಾಗ ಇನ್ನೂ ಐದು ನಿಮಿಷ ಬೇಕು, ಬಹುತೇಕವಾಗಿ ಎಲ್ಲವೂ ಮುಗಿದಿದೆ ಎನ್ನುವ ಉತ್ತರವನ್ನು ನೀಡುತ್ತಾರೆ. ಉತ್ತಮ್ಮ ಸಂಭಾಷಣೆಯ ಕೌಶಲ್ಯ ವಿದೆ ಎಂದು ಹೇಳಲಾಗುವುದು.

ಸಿಂಹ:

ಸಿಂಹ:"ಇದೊಂದು ದೊಡ್ಡ ವಿಚಾರವಲ್ಲ"

ಇವರು ಸದಾ ಉತ್ಸಾಹ ಭರಿತರಾಗಿ ಇರುತ್ತಾರೆ. ಜೊತೆಗೆ ಎಲ್ಲಾ ಕೆಲಸ ಮಾಡಲೂ ಮುಂದೆ ಬರುವರು. ಇವರಲ್ಲಿ ಯಾವುದೇ ವಿಷಯ ಅಥವಾ ಕೆಲಸದ ಬಗ್ಗೆ ಚರ್ಚಿಸಿದಾಗ ಅದರ ಬಗ್ಗೆ ಸೂಕ್ತವಾಗಿ ತಿಳಿಯದೇ ಇದ್ದರೂ ಸಹ "ಇದೊಂದು ದೊಡ್ಡ ವಿಚಾರವಲ್ಲ" ಎನ್ನುವ ರೀತಿಯಲ್ಲಿ ಮಾತನಾಡುವರು. ಇವರು ಎಲ್ಲವನ್ನೂ ತುಂಬಾ ಗಾಢವಾಗಿ ಅನುಭವಿಸುವರು.

ಕನ್ಯಾ:

ಕನ್ಯಾ:"ನನಗೆ ಅರ್ಥವಾಗುತ್ತದೆ"

ಈ ರಾಶಿವರು ಸರ್ವಕಾಲಿಕವಾಗಿಯೂ ಹೇಳುವ ಸುಳ್ಳು ಎಂದರೆ "ನನಗೆ ಅರ್ಥವಾಗುತ್ತದೆ" ಎನ್ನುವುದನ್ನು ಹೇಳುತ್ತಾರೆ. ಯಾರೂ ಎಲ್ಲವನ್ನೂ ಬಲ್ಲವರಾಗಿರುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುತ್ತಾರೆ. ಆದರೆ ಇವರು ಸಾಮೂಹಿಕವಾಗಿ ಈ ಸುಳ್ಳನ್ನು ಹೇಳುತ್ತಾರೆ.

ತುಲಾ:

ತುಲಾ: "ನಾನು ಯಾರಿಗೂ ಹೇಳುವುದಿಲ್ಲ"

ಇತರರೊಂದಿಗೆ ಬಹುಬೇಗ ಸ್ನೇಹ ಹಾಗೂ ಬಾಂಧವ್ಯವನ್ನು ಹೊಂದುವ ವ್ಯಕ್ತಿಗಳಾಗಿರುತ್ತಾರೆ. ಜೊತೆಗ ಇತರರು ಇವರನ್ನು ಬಹುಬೇಗ ನಂಬುತ್ತಾರೆ. ಇತರರು ಇವರಲ್ಲಿ ಹೇಳಿಕೊಂಡ ವಿಚಾರವನ್ನು ಇವರು ಗೌಪ್ಯವಾಗಿಡಲು ಕಷ್ಟಪಡುವರು. ಬಾಯಲ್ಲಿ ಯಾರಿಗೂ ಹೇಳುವುದಿಲ್ಲ ಎನ್ನುವ ಸುಳ್ಳು ಭರವಸೆಯನ್ನು ನೀಡುತ್ತಾರೆಯೇ ಹೊರತು ಅದನ್ನು ಪಾಲಿಸಲು ಇವರಿಗೆ ಕಷ್ಟವಾಗುವುದು. ಇವರು ಇತರರೊಂದಿಗೆ ಬಹುಬೇಗ ರಹಸ್ಯವನ್ನು ಹಂಚಿಕೊಳ್ಳುವರು.

ವೃಶ್ಚಿಕ:

ವೃಶ್ಚಿಕ: "ನಾನು ನಿನ್ನನ್ನು ಕ್ಷಮಿಸುವುದಿಲ್ಲ"

ಇವರು ಸದಾ ಶ್ರಮಜೀವಿಗಳು ಹಾಗೂ ಭಾವನಾತ್ಮಕ ವ್ಯಕ್ತಿಗಳು ಎನ್ನಬಹುದು. ಇವರ ಭಾವನೆಗೆ ಅಥವಾ ಯಾವುದೇ ವಿಚಾರದಲ್ಲಿ ಮೋಸ ಅಥವಾ ದ್ರೋಹವನ್ನು ಎಸಗಿದರೆ ಬಹುಬೇಗ ಮಾನಸಿಕವಾಗಿ ನೋವನ್ನು ಅನುಭವಿಸುವರು. ಈ ಹಿನ್ನೆಲೆಯಲ್ಲಿಯೇ ಅವರು ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂಬ ಸುಳ್ಳನ್ನು ಹೇಳುವರು.

ಧನು:

ಧನು: "ಈಗಲೇ ಮಾಡುತ್ತೇನೆ"

ಬಹಳ ಉತ್ಸಾಹ ಪ್ರವೃತ್ತಿಯವರಾದ ಇವರು ಕೆಲಸವನ್ನು ಮುಗಿಸಲು ಸದಾ ಉತ್ಸಾಹದಲ್ಲಿ ಇರುತ್ತಾರೆ. ಇವರು ತಮ್ಮ ಹೆಸರನ್ನು ಉಳಿಸಿಕೊಳ್ಳಲು ಹಾಗೂ ಅದ್ಭುತ ವ್ಯಕ್ತಿ ಎಂದು ತೋರಿಸಿಕೊಳ್ಳಲು "ಈಗಲೇ ಮಾಡುವೆ" ಎನ್ನುವ ಸಾಮಾನ್ಯ ಸುಳ್ಳನ್ನು ಹೇಳುತ್ತಲೇ ಇರುತ್ತಾರೆ.

ಮಕರ:

ಮಕರ: "ಭರವಸೆ ನೀಡುತ್ತೇನೆ "

ಇವರು ಇತರರಿಂದ ಭರವಸೆಯನ್ನು ಹೊಂದಲು ಬಯಸುತ್ತಾರೆ. ಅಲ್ಪ ವ್ಯಕ್ತಿಯಿಂದ ದೂರ ಇರಲು ಬಯಸುತ್ತಾರೆ. ಇವರು ತಮ್ಮ ಹತ್ತಿರದ ವ್ಯಕ್ತಿಗಳ ಬಗ್ಗೆ ಹೆಚ್ಚು ವಿಶ್ವಾಸ ಹೊಂದಬೇಕು. ಇವರು ಇತರರಿಗೆ ಭರವಸೆ ನೀಡುತ್ತೇನೆ ಎನ್ನುವ ಸುಳ್ಳನ್ನು ಸುಲಭವಾಗಿ ಹೇಳುತ್ತಾರೆ.

ಕುಂಭ:

ಕುಂಭ: "ತಮಾಷೆ ಮಾಡುತ್ತಿದ್ದೇನೆ"

ಇವರು ಭಾವನೆಗೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲಕ್ಕೆ ಒಳಗಾಗಿರುತ್ತಾರೆ. ಇತರರು ಇವರನ್ನು ವಿಲಕ್ಷಣವಾಗಿ ಗ್ರಹಿಸುವ ಸಾಧ್ಯತೆಗಳು ಇವೆ. ಕೆಲವೊಮ್ಮೆ ಇವರಿಗೆ ಏನು ಮಾತನಾಡಬೇಖು ಎಂದು ತಿಳಿದಿರುವುದಿಲ್ಲ. ಯಾವುದೇ ಯೋಚನೆಯಿಲ್ಲದೆ ಮಾತನಾಡುತ್ತಾರೆ. ಬಳಿಕ ತಮಾಷೆ ಮಾಡಿದೆ ಎನ್ನುವ ಸುಳ್ಳನ್ನು ಹೇಳುವುದರ ಮೂಲಕ ವಿಷಯವನ್ನು ಸಮಾಪ್ತಿ ಗೊಳಿಸುವರು.

ಮೀನ:

ಮೀನ: "ನಾನು ಅದನ್ನು ಒಮ್ಮೆ ಪ್ರಯತ್ನಿಸಲು ಬಯಸುತ್ತೇನೆ"

ಇವರು ಆಕರ್ಷಣೀಯ ವ್ಯಕ್ತಿಯಾಗಿರಲು ಬಯಸುತ್ತಾರೆ. ಇವರು ಆಹಾರ, ಪ್ರೀತಿ ಹಾಗೂ ಜೀವನದ ಬಗ್ಗೆ ಹೆಚ್ಚು ಆಸಕ್ತರಾಗಿರುತ್ತಾರೆ. ಹಾಗಾಗಿ ಯಾರಾದರೂ ಏನಾದರೂ ಹೊಸ ಸಂಗತಿಯ ಬಗ್ಗೆ ಮಾತನಾಡಿದರೆ ತಮಗೆಲ್ಲಾ ತಿಳಿದಿದೆ ಎನ್ನುವ ರೀತಿಯಲ್ಲಿ "ನಾನು ಅದನ್ನು ಒಮ್ಮೆ ಮಾಡಲು ಪ್ರಯತ್ನಿಸುತ್ತೇನೆ" ಎನ್ನುವ ಸುಳ್ಳನ್ನು ಹೇಳುತ್ತಾರೆ.

English summary

Common Lies That You Tell According To Your Zodiac Sign

Most of us often tend to lie to ourselves that we can handle a lot better than what has been going around. These lies are something that we tell to avoid bringing down our spirits or to stay positive. Here, in this article, we are revealing the details about the most common lies that most of us tell and the strange bit is, these lies have their connection with our zodiac sign.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more