For Quick Alerts
ALLOW NOTIFICATIONS  
For Daily Alerts

ಸಹೋದರನ ರಾಶಿಗೆ ಅನುಗುಣವಾಗಿ ಈ ಬಣ್ಣಗಳ ರಾಖಿ ಕಟ್ಟಿ…

By Hemanth
|

ಸೋದರ ಮತ್ತು ಸೋದರಿಯ ಪ್ರೀತಿಯ ಬೆಸುಗೆಯೇ ರಕ್ಷಾಬಂಧನ. ರಕ್ಷಾಬಂಧನವು ಸ್ನೇಹಿತರ ದಿನದಂತೆ ತುಂಬಾ ಮಹತ್ವವನ್ನು ಪಡೆದುಕೊಂಡಿದೆ. ತನ್ನ ಸೋದರನಿಗೆ ದೀರ್ಘಾಯುಷ್ಯ ಹಾಗು ಸುಖಶಾಂತಿಯು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಪೂಜೆ ಮಾಡುವ ಸೋದರಿಯು ಸೋದರನ ಮಣಿಗಂಟಿಗೆ ರಾಖಿಯನ್ನು ಕಟ್ಟುವಳು. ಸೋದರ ಮತ್ತು ಸೋದರಿಯು ಈ ಒಂದು ದಿನಕ್ಕಾಗಿ ಕಾಯುತ್ತಲಿರುವರು.

Choose Rakhi For Your Brother

ರಾಖಿ ಕಟ್ಟಿದ ತನ್ನ ತಂಗಿಗೆ ಸೋದರನು ಉಡುಗೊರೆಯನ್ನು ನೀಡುವನು. ರಾಶಿಚಕ್ರಗಳಿಗೆ ಹೊಂದಿಕೊಳ್ಳುವ ಬಣ್ಣದ ರಾಖಿಯನ್ನು ಕಟ್ಟಿದರೆ ಮತ್ತಷ್ಟು ಒಳ್ಳೆಯದು ಎಂದು ಜ್ಯೋತಿಷಿಗಳು ಹೇಳುವರು. ಇದರಿಂದ ಧನಾತ್ಮಕ ಶಕ್ತಿ ಬರುವುದು. ಯಾವ ರಾಶಿಯವರಿಗೆ ಯಾವ ಬಣ್ಣ ರಾಖಿ ಕಟ್ಟಬಹುದು ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿಯಿರಿ.

ಮೇಷ(ಮಾ.21-ಎ.19)

ಮೇಷ(ಮಾ.21-ಎ.19)

ಮೇಷ ರಾಶಿಯ ಅಧಿಪತಿಯ ಮಂಗಳ. ಈ ರಾಶಿಗೆ ಮಂಗಳ ದೇವರು. ಇದರಿಂದ ಮೇಷ ರಾಶಿಯ ಸೋದರನಿದ್ದರೆ ಆಗ ನೀವು ಕೆಂಪು ಬಣ್ಣದ ರಾಖಿ ಕಟ್ಟಿದರೆ ಒಳ್ಳೆಯದು. ಇದರಿಂದ ಆತನ ಜೀವನವು ತುಂಬಾ ಚಟುವಟಿಕೆ ಮತ್ತು ರೋಮಾಂಚನಕಾರಿಯಾಗುವುದು. ನೀವು ಇವರಿಗೆ ಕೇಸರಿ ಅಥವಾ ಹಳದಿ ಬಣ್ಣದ ರಾಖಿ ಕಟ್ಟಬಹುದು.

ವೃಷಭ(ಎಪ್ರಿಲ್ 20-ಮೇ 20)

ವೃಷಭ(ಎಪ್ರಿಲ್ 20-ಮೇ 20)

ಶುಕ್ರನು ಈ ರಾಶಿಯ ಅಧಿಪತಿಯಾಗಿರುವನು ಮತ್ತು ಶುಕ್ರ ದೇವನು ಇವರಿಗೆ ದೇವರು. ನಿಮ್ಮ ಸೋದರನು ವೃಷಭ ರಾಶಿಯವರಾಗಿದ್ದರೆ ಆಗ ನೀವು ನೀಲಿ ಬಣ್ಣದ ರಾಖಿ ಕಟ್ಟಬಹುದು. ಬೆಳ್ಳಿಯ ರಾಖಿ ಕೂಡ ಒಳ್ಳೆಯದು.

ಮಿಥುನ(ಮೇ 21-ಜೂನ್ 20)

ಮಿಥುನ(ಮೇ 21-ಜೂನ್ 20)

ಮಿಥುನ ರಾಶಿಯ ಅಧಿಪತಿ ಬುಧ. ಇದರಿಂದ ಇವರಿಗೆ ಬುಧನು ದೇವರು. ಬುಧ ದೇವರಿಗೆ ಹೊಂದಿಕೊಳ್ಳುವಂತಹ ಹಸಿರು ಬಣ್ಣದ ರಾಖಿಯನ್ನು ಮಿಥುನ ರಾಶಿಯ ನಿಮ್ಮ ಸೋದರನಿಗೆ ಕಟ್ಟಬಹುದು. ಬಿಳಿ ಬಣ್ಣದನ್ನು ಆಯ್ಕೆ ಮಾಡಬಹುದು. ಇದರಿಂದ ಅವರಿಗೆ ಜೀವನದಲ್ಲಿ ಸಂತೋಷ ಸಿಗುವುದು.

ಕರ್ಕಾಟಕ(ಜೂನ್ 21-ಜುಲೈ22)

ಕರ್ಕಾಟಕ(ಜೂನ್ 21-ಜುಲೈ22)

ಈ ರಾಶಿಯವರಿಗೆ ಚಂದ್ರ ದೇವರು ಅಧಿಪತಿ. ನೀವು ಬಿಳಿ ಬಣ್ಣದ, ಅದರಲ್ಲೂ ಸಿಲ್ಕ್ ನಿಂದ ಮಾಡಿರುವಂತಹ ರಾಖಿ ಕಟ್ಟಿ. ಅದರಲ್ಲಿ ಮುತ್ತುಗಳಿದ್ದರೆ ಹೆಚ್ಚು ಪವಿತ್ರ. ಇದು ಸೋದರ ಮತ್ತು ಸೋದರಿಯ ಭಾಂದವ್ಯ ಬಲಪಡಿಸುವುದು.

ಸಿಂಹ(ಜುಲೈ 23-ಆ.22)

ಸಿಂಹ(ಜುಲೈ 23-ಆ.22)

ಸಿಂಹ ರಾಶಿಗೆ ಸೂರ್ಯ ದೇವರು ಅಧಿಪತಿ. ಇದರಿಂದಾಗಿ ಈ ರಾಶಿಯವರು ಹೆಚ್ಚಾಗಿ ಕೆಂಪು ಬಣ್ಣವನ್ನು ಇಷ್ಟಪಡುವರು. ಇದರಿಂದ ನೀವು ಕೆಂಪು, ಕೇಸರಿ ಅಥವಾ ಗುಲಾಬಿ ಬಣ್ಣದ ರಾಖಿಯನ್ನು ಕಟ್ಟಬಹುದು. ಈ ಎಲ್ಲಾ ಬಣ್ಣಗಳು ಸೂರ್ಯದೇವನಿಗೆ ಸಂಬಂಧಿಸಿದ್ದಾಗಿದೆ. ಹೊಳಪನ್ನು ಹೊಂದಿರುವಂತಹ ಬಣ್ಣವನ್ನು ಆಯ್ಕೆ ಮಾಡಿ.

ಕನ್ಯಾ:ಆ.23-ಸೆ.22

ಕನ್ಯಾ:ಆ.23-ಸೆ.22

ಈ ರಾಶಿವರಿಗೆ ಅಧಿಪತಿ ಬುಧ ಮತ್ತು ಬುಧ ದೇವರನ್ನು ಇವರು ಪೂಜಿಸಬೇಕು. ಬಿಳಿ ಬಣ್ಣದ ಸಿಲ್ಕ್ ನಿಂದ ಮಾಡಿರುವ ಅಥವಾ ಹಸಿರು ಬಣ್ಣದ ರಾಖಿಯನ್ನು ನೀವು ಕನ್ಯಾ ರಾಶಿಯ ಸೋದರನ ಕೈಗೆ ಕಟ್ಟಿ.

ತುಲಾ: ಸೆ.23-ಅ.22

ತುಲಾ: ಸೆ.23-ಅ.22

ಶುಕ್ರನು ಇದರ ಅಧಿಪತಿ ಮತ್ತು ಇವರು ಶುಕ್ರ ದೇವರನ್ನು ಪೂಜಿಸಬೇಕು. ತಿಳಿನೀಲಿ ಅಥವಾ ನೇರಳೆ ಬಣ್ಣದ ರಾಖಿಯನ್ನು ಇವರಿಗೆ ಕಟ್ಟಿದರೆ ಸರಿಯಾಗಿರುವುದು. ಇದು ಕನ್ಯಾ ರಾಶಿಯವರಾಗಿರುವ ನಿಮ್ಮ ಸೋದರನ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡುವುದು. ರಾಖಿ ಕಟ್ಟುವುದರೊಂದಿಗೆ ನೀವು ಅವರಿಗೆ ಬಿಳಿ ಬಣ್ಣದ ಕರವಸ್ತ್ರ ನೀಡಿ ಮತ್ತು ಕೇಸರಿ ತಿಲಕವನ್ನಿಡಿ.

ಧನು(ನ.22-ಡಿ.21)

ಧನು(ನ.22-ಡಿ.21)

ಧನು ರಾಶಿಯವರ ಅಧಿಪತಿಯು ಗುರು. ಈ ರಾಶಿಯವರು ಗುರು ಬ್ರಹಸ್ಪತಿಯನ್ನು ಪೂಜಿಸಬೇಕು. ಇವರು ಎಲ್ಲಾ ಗುರುಗಳ ಗುರು ಎಂದು ಹೇಳಲಾಗುತ್ತದೆ. ಈ ರಾಶಿಗೆ ಹಳದಿ ಬಣ್ಣ. ಸಿಲ್ಕ್ ನಿಂದ ಮಾಡಿರುವಂತಹ ಹಳದಿ ಬಣ್ಣವು ಈ ರಾಶಿಯವರಿಗೆ ಒಳ್ಳೆಯದು. ಶ್ರೀಗಂಧದ ಬಣ್ಣವು ಇವರಿಗೆ ಹೊಂದಿಕೆಯಾಗುವುದು.

ಮಕರ(ಡಿ.22-ಜ.19)

ಮಕರ(ಡಿ.22-ಜ.19)

ಮಕರ ರಾಶಿಗೆ ಶನಿಯು ಅಧಿಪತಿ. ಶನಿದೇವರನ್ನು ಈ ರಾಶಿಯವರು ಪೂಜಿಸಬೇಕು. ಕಡುಬಣ್ಣದ ರಾಖಿಯನ್ನು ಈ ರಾಶಿಯವರಿಗೆ ಆಯ್ಕೆ ಮಾಡಬೇಕು. ಕೇಸರಿ ತಿಲಕವನ್ನು ಇವರ ಹಣೆಗೆ ಇಡಿ ಮತ್ತು ಅದೃಷ್ಟವು ಇವರಿಗೆ ಒಲಿದು ಬರುವುದು.

ಕುಂಭ(ಜ.20-ಫೆ.18)

ಕುಂಭ(ಜ.20-ಫೆ.18)

ಕುಂಭ ರಾಶಿಯರಿಗೆ ಕೂಡ ಶನಿ ದೇವರು ಅಧಿಪತಿಯಾಗಿರುವರು ಮತ್ತು ಇವರು ಶನಿ ದೇವರನ್ನು ಪೂಜಿಸಬೇಕು. ಈ ರಾಶಿಯವರಿಗೆ ನೀವು ತುಂಬಾ ಸಾಮಾನ್ಯ ರಾಖಿ ಆಯ್ಕೆ ಮಾಡಬಾರದು. ರುದ್ರಾಕ್ಷ ಇರುವಂತಹ ರಾಖಿ ಆಯ್ಕೆ ಮಾಡಿದರೆ ಒಳ್ಳೆಯದು. ಇದು ಅವರಿಗೆ ಜೀವನದಲ್ಲಿ ಶಾಂತಿ ಮತ್ತು ಯಶಸ್ಸು ತಂದುಕೊಡುವುದು.

ಮೀನ(ಫೆ.19-ಮಾ.20)

ಮೀನ(ಫೆ.19-ಮಾ.20)

ಈ ರಾಶಿಯವರ ಅಧಿಪತಿ ಗುರು. ಇವರು ಗುರು ಬ್ರಹಸ್ಪತಿಯನ್ನು ಪೂಜಿಸಬೇಕು. ಬ್ರಹಸ್ಮತಿ ದೇವರಿಗೆ ಹಳದಿ ಬಣ್ಣವು ಇಷ್ಟದ್ದಾಗಿರುವ ಕಾರಣ ಈ ರಾಶಿಯವರಿಗೆ ಹಳದಿ ಅಥವಾ ಬಿಳಿ ಬಣ್ಣದ ರಾಖಿಯನ್ನು ಕಟ್ಟಬೇಕು.

English summary

Choose Rakhi On The Basis Of Zodiac Sign

Raksha Bandhan celebrates the unmatched bond of love and care. In fact, this bond of brother and sister is just another form of a long-lasting friendship. Both the brother and the sister eagerly await this day. As the markets are full of varieties for rakhis, getting confused amidst such beautiful designs is inevitable. Astrology says that the colour we wear has a lot of effects on our personality as well as our aura. Wearing a colour on the basis of our stars helps make the cosmic energies positive and favourable.
Story first published: Saturday, August 25, 2018, 13:03 [IST]
X
Desktop Bottom Promotion