Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
ಭಕ್ತರ ತಲೆಗೆ ತೆಂಗಿನಕಾಯಿ ಒಡೆಯುವ ಅರ್ಚಕ! ವಿಡಿಯೋ ನೋಡಿ
ಭಾರತದಲ್ಲಿರುವ ಧರ್ಮ, ಜಾತಿ, ಸಂಪ್ರದಾಯ ಮತ್ತು ಆಚರಣೆಗಳು ಬೇರೆ ಯಾವುದೇ ದೇಶದಲ್ಲೂ ಸಿಗಲಿಕ್ಕಿಲ್ಲ. ಇಲ್ಲಿರುವ ಕೆಲವು ಸಂಪ್ರದಾಯ ಮತ್ತು ನಂಬಿಕೆಗಳು ಬೆಚ್ಚಿಬೀಳಿಸುತ್ತದೆ. ಕೆಲವೊಂದು ಸಲ ದೈಹಿಕವಾಗಿ ನೋವುಂಟು ಮಾಡುವ ಮುಳ್ಳುಗಳಿಗೆ ಮಕ್ಕಳ ಎಸೆಯುವುದು, ಸೂಜಿ ಚುಚ್ಚಿಕೊಳ್ಳುವುದು, ಚರ್ಮಕ್ಕೆ ಕೊಕ್ಕೆ ಹಾಕಿ ಎಳೆಯುವುದು ಇತ್ಯಾದಿ ಆಚರಣೆಗಳು ಕೂಡ ಚಾಲ್ತಿಯಲ್ಲಿದೆ.
ದೇವರ ಶಾಪಕ್ಕೆ ಒಳಗಾಗಬಾರದು ಎನ್ನುವ ಕಾರಣಕ್ಕಾಗಿ ಹೆಚ್ಚಿನವರು ಇದನ್ನು ಅನುಸರಿಸಿಕೊಂಡು ಹೋಗುವರು. ತಮಿಳುನಾಡಿನ ದೇವಸ್ಥಾನವೊಂದರಲ್ಲಿ ತುಂಬಾ ವಿಚಿತ್ರ ಸಂಪ್ರದಾಯವಿದ್ದು, ಇಲ್ಲಿ ಭಕ್ತರ ತಲೆಗೆ ತೆಂಗಿನಕಾಯಿ ಒಡೆಯಲಾಗುವುದು!
ಜಾತ್ರೆಯ ಸಮಯದಲ್ಲಿ ಭಕ್ತರ ತಲೆಗೆ ತೆಂಗಿನಕಾಯಿ ಒಡೆಯಲಾಗುತ್ತದೆ ಮತ್ತು ತಮ್ಮ ತಲೆಗೆ ತೆಂಗಿನಕಾಯಿ ಒಡೆಸಿಕೊಳ್ಳಲು ಇಲ್ಲಿ ಭಕ್ತರು ಸಾಲುಗಟ್ಟಿ ನಿಲ್ಲುವರು.

ತಮಿಳುನಾಡಿನ ಮೆಟ್ಟು ಮಹಾದನಪುರಂನಲ್ಲಿ
ತಮಿಳುನಾಡಿನ ಮೆಟ್ಟು ಮಹಾದನಪುರಂನಲ್ಲಿರುವ ದೇವಾಲಯದಲ್ಲಿ ವಾರ್ಷಿಕ ಜಾತ್ರೆ ಸಂದರ್ಭದಲ್ಲಿ ಇದನ್ನು ಆಚರಿಸಲಾಗುವುದು. `ಆದಿ ಪೆರುಕ್ಕು' ಜಾತ್ರೆಯಲ್ಲಿ ನಡೆಯುವ ದೈಹಿಕವಾಗಿ ನೋವುಂಟು ಮಾಡುವ ಈ ಆಚರಣೆಯಲ್ಲಿ ಹಿಂದೂ-ತಮಿಳು ಭಕ್ತರು ಭಾಗಹಿಸುವರು.

ಸಾವಿರಕ್ಕೂ ಹೆಚ್ಚು ಭಕ್ತರು ಜಾತ್ರೆಯಲ್ಲಿ ಭಾಗಿಯಾಗುತ್ತಾರೆ
ಜೀವನೀಡುವ ಗುಣ ಹೊಂದಿರುವ ನೀರನ್ನು ಪೂಜಿಸುವ ಶ್ರೀ ಮಹಾಲಕ್ಷ್ಮಿ ದೇವಾಲಯದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಭಕ್ತರು ಜಾತ್ರೆಯಲ್ಲಿ ಭಾಗಿಯಾಗುತ್ತಾರೆ ಎಂದು ವರದಿಗಳು ಹೇಳಿವೆ.

ಗಾಯವಾದರೆ ವಿಭೂತಿ ಮತ್ತು ಅರಿಶಿನ ಹಚ್ಚುತ್ತಾರೆ
ತೆಂಗಿನಕಾಯಿ ಒಡೆಯುವ ವೇಳೆ ಭಕ್ತರಿಗೆ ಗಾಯವಾದರೆ ಆಗ ವಿಭೂತಿ(ಭಸ್ಮ) ಮತ್ತು ಅರಿಶಿನ ಮಿಶ್ರಣವನ್ನು ಗಾಯಕ್ಕೆ ಹಚ್ಚಲಾಗುವುದು.

ಮಾನವ ಹಕ್ಕು ಸಂಘಟನೆಗಳು ಇದಕ್ಕೆ ತುಂಬಾ ವಿರೋಧ ವ್ಯಕ್ತಪಡಿಸುತ್ತಾರೆ
ಗಾಯಾಳುಗಳಾಗುವ ಭಕ್ತರ ಸಂಖ್ಯೆಯು ಮಿತಿಮೀರುತ್ತಿರುವ ಕಾರಣದಿಂದಾಗಿ ರಾಜ್ಯ ಮಾನವ ಹಕ್ಕು ಸಂಘಟನೆಗಳು ಇದಕ್ಕೆ ತುಂಬಾ ವಿರೋಧ ವ್ಯಕ್ತಪಡಿಸಿದೆ. ಆದರೆ ಜನರು ಮಾತ್ರ ಈ ಆಚರಣೆ ಪಾಲಿಸಿಕೊಂಡು ಹೋಗುತ್ತಿದ್ದಾರೆ.



Click it and Unblock the Notifications
