Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಾಯಿಮರಿ ಉಡುಗೊರೆ ಕಂಡ ಹುಡುಗನ ಪ್ರತಿಕ್ರಿಯೆ!
ನಮ್ಮ ಪ್ರೀತಿಪಾತ್ರರ ಇಚ್ಛೆ ಪೂರೈಸಬೇಕೆನ್ನುವುದು ನಮ್ಮೆಲ್ಲರ ಅಭಿಲಾಷೆಯಾಗಿರುವುದು. ಅದರಲ್ಲೂ ಸಣ್ಣ ಮಕ್ಕಳು ಇಡುವಂತಹ ಕೆಲವೊಂದು ಬೇಡಿಕೆಗಳನ್ನು ಪೂರೈಸಿದಾಗ ಮನಸ್ಸಿಗೆ ಸಿಗುವಂತಹ ಸಂತೋಷವು ಮತ್ತೆ ಎಲ್ಲೂ ಸಿಗದು. ಇಂತಹ ಸಮಯದಲ್ಲಿ ಪ್ರತಿಯೊಬ್ಬರು ಮಕ್ಕಳ ಬೇಡಿಕೆಗಳನ್ನು ಹೆಚ್ಚಾಗಿ ಪೂರೈಸುವರು. ಅದರಲ್ಲೂ ಅವರಿಗೆ ಅಚ್ಚರಿ ಮೂಡಿಸಿ, ಅವರ ಬೇಡಿಕೆ ಈಡೇರಿಸಿದರೆ ಅದರ ನೆನಪು ಅವರಲ್ಲಿ ಜೀವನಪೂರ್ತಿ ಹಾಗೆ ಉಳಿದುಬಿಡುವುದು. ಇಷ್ಟು ಮಾತ್ರವಲ್ಲದೆ ನಮಗೂ ಅದರಿಂದ ಮನಸ್ಸಿಗೆ ತುಂಬಾ ಸಂತೋಷವಾಗುವುದು.
ಇನ್ನು ಸಣ್ಣ ಮಕ್ಕಳಿಗೆ ನಾರಿಮರಿ, ಬೆಕ್ಕಿನ ಮರಿ ಇತ್ಯಾದಿಗಳ ಬಗ್ಗೆ ಅತಿಯಾದ ಆಸೆ. ಅವುಗಳೊಂದಿಗೆ ಆಟವಾಡುತ್ತಾ ಸಮಯ ಕಳೆಯಬೇಕೆಂದು ಬಯಸುವರು. ಇಲ್ಲಿ ಕೂಡ ಬಾಲಕನೊಬ್ಬನ ಬಹುದಿನದ ಬೇಡಿಕೆಯಾದ ನಾಯಿ ಮರಿಯನ್ನು ಆತನ ಪೋಷಕರು ಅಚ್ಚರಿಯ ಉಡುಗೊರೆಯಾಗಿ ನೀಡಿದಾಗ ಆತನ ಪ್ರತಿಕ್ರಿಯೆ ಹೇಗಿತ್ತು ಎಂದು ತಿಳಿಯಲು ವಿಡಿಯೋ ನೋಡಿ.
ಫ್ಲೋರಿಡಾದ ಹತ್ತರ ಹರೆಯದ ಬಾಲಕ ವಯ್ಲೊನ್ ಎನ್ನುವಾತ ಮಾತು ಬಂದ ದಿನದಿಂದ ತನ್ನ ಪೋಷಕರಲ್ಲಿ ನಾಯಿ ಮರಿ ಬೇಕೆಂದು ಬೇಡಿಕೆಯನ್ನಿಟ್ಟಿದ್ದ. ತನ್ನ ಪೋಷಕರು ಏನೋ ಅಚ್ಚರಿ ನೀಡುತ್ತಾರೆಂದು ಆತನಿಗೆ ತಿಳಿದಿದ್ದರೂ ಇದು ನಾಯಿಮರಿಯೆಂದು ಆತನಿಗೆ ಸುಳಿವು ಕೂಡ ಇರಲಿಲ್ಲ. ಶಿಬಿರದಿಂದ ಮರಳಿದ ಆತನಿಗೆ ಮನೆಯಲ್ಲಿ ಅಚ್ಚರಿ ಕಾದಿತ್ತು. ಆತನಿಗೆ ಒಂದು ಕಾಗದದಲ್ಲಿ ಸಂದೇಶವನ್ನು ಬರೆಯಲಾಗಿತ್ತು. ಈ ವೇಳೆ ಆತನ ಪ್ರತಿಕ್ರಿಯೆ ನೋಡಲು ಎಲ್ಲವನ್ನು ವಿಡಿಯೋ ಮಾಡಲು ಆತನ ತಾಯಿ ನಿರ್ಧರಿಸಿದ್ದರು.

ನಿನಗೆ ವಿಶೇಷವಾದ ಉಡುಗೊರೆ ನಾನು ನೀಡುತ್ತಿದ್ದೇವೆ. ಇದಕ್ಕಾಗಿ ನೀನು ತುಂಬಾ ಸಮಯದಿಂದ ಕೇಳುತ್ತಾ, ಬಯಸುತ್ತಾ ಇದ್ದಿ. ನನಗೂ ಒಂದು ತಂದುಕೊಡಬಾರದೆ ಎಂದು?''
ನೀನು ಪ್ರತಿದಿನ ಅವಳನ್ನು ಪ್ರೀತಿಸುತ್ತೀಯಾ ಎಂದು ನಮಗೆ ತಿಳಿದಿದೆ. ಅವಳನ್ನು ತುಂಬಾ ವಿಶೇಷವಾಗಿ ಪ್ರೀತಿಸಬೇಕು. ಆಕೆ ನಿನ್ನ ಅತ್ಯುತ್ತಮ ಗೆಳತಿ. ಎಲ್ಲಕ್ಕಿಂತ ಹೆಚ್ಚಿಗೆ ಪ್ರೀತಿಸುವ, ಯಾವಾಗಲೂ ನಿನ್ನ ಕರೆಗೆ ಬೆಂಬಲವಾಗಿ ನಿಲ್ಲುವಳು. ಆಕೆ ಬೆಳೆಯುತ್ತಾ ಇರುವಂತಹ ನಿನ್ನ ಮೇಲೆ ಅವಲಂಬಿತವಾಗುವಳು ಮತ್ತು ಜವಾಬ್ದಾರಿ ಕಳುಹಿಸುವಳು. ನಿನ್ನ ನಾಯಿ ಮರಿಯನ್ನು ಭೇಟಿಯಾಗು. ಆಕೆಯ ಹೆಸರು ಲಿಬರ್ಟಿ''ಮಗನಿಗೆ ತಾಯಿ ನೀಡಿದ ಸುಂದರ ಉಡುಗೊರೆ ಇದಲ್ಲವೇ? ಇಷ್ಟು ಸುಂದರವಾಗಿ ಅಚ್ಚರಿಯನ್ನು ಯಾರಾದರೂ ನೀಡಿದ್ದಾರೆಯಾ? ಹಾಗಾದರೆ ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಇದರ ಬಗ್ಗೆ ಬರೆಯಿರಿ.



Click it and Unblock the Notifications
