Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಮ್ಯೂಸಿಕ್ ಕಿರಿಕಿರಿಯಾದ ಪಕ್ಷಿಯೊಂದು ಸ್ಪೀಕರ್ ಗಳ ವೈಯರ್‌ನ್ನೇ ಕಿತ್ತುಹಾಕಿದ ವಿಡಿಯೋ
ಸಂಗೀತ ಕೇಳುವಾಗ ಅದು ಮಿತವಾದ ಶಬ್ದದಲ್ಲಿರಬೇಕು. ಅಬ್ಬರದ ಸಂಗೀತ ಕೇಳಲು ಹೆಚ್ಚಿನವರಿಗೆ ಇಷ್ಟವಾಗಲ್ಲ. ಇದು ಮನುಷ್ಯರು ಮಾತ್ರವಲ್ಲ, ಪ್ರಾಣಿಪಕ್ಷಿಗಳಿಗೂ ಶಬ್ದವೆನ್ನುವುದು ತುಂಬಾ ಕಿರಿಕಿರಿ ಉಂಟು ಮಾಡುವುದು. ಸಾಕು ಪ್ರಾಣಿಗಳು ದೊಡ್ಡ ಶಬ್ದಕ್ಕೆ ಹೆದರಿ ದೂರ ಹೋಗುವುದು.
ಇನ್ನು ಕೆಲವು ನಾಯಿಗಳು ಪಟಾಕಿ ಶಬ್ದಕ್ಕೆ ಇನ್ನಿಲ್ಲದಂತೆ ಹೆದರುವುದು. ಈ ವಿಡಿಯೋದಲ್ಲಿ ಸಾಕು ಗಿಳಿಯೊಂದು ಲ್ಯಾಪ್ ಟಾಪ್ ನಿಂದ ನುಡಿಸಲ್ಪಡುತ್ತಿದ್ದ ಅಬ್ಬರದ ಸಂಗೀತದಿಂದ ಕಿರಿಕಿರಿಯಾಗಿ ಸ್ಪೀಕರ್ ನ ವಯರ್ ಗಳನ್ನೇ ಕಿತ್ತುಹಾಕಿರುವುದನ್ನು ನೋಡಬಹುದಾಗಿದೆ.
ಮನೆ ಯಜಮಾನ ಮತ್ತೆ ವಯರ್ ಸಿಕ್ಕಿಸಿ ಮತ್ತೆ ಹಾಡನ್ನು ಹಾಕುತ್ತಾನೆ. ಆದರೆ ಗಿಳಿ ಬೊಬ್ಬೆ ಹಾಕುತ್ತಾ ಮತ್ತೆ ವಯರ್ ಕಿತ್ತುಹಾಕುತ್ತದೆ. ಯಜಮಾನನಿಗೆ ಇಷ್ಟವಾದ ಸಂಗೀತವು ಗಿಳಿಗೆ ಇಷ್ಟವಾದಂತೆ ಕಾಣುವುದಿಲ್ಲ. ಇದರಿಂದ ಅದು ಪದೇ ಪದೇ ವಯರ್ ಕಿತ್ತುಹಾಕುತ್ತಿದೆ.

ಇದರ ಬಳಿಕ ಗಿಳಿಯು ಕೋರ್ಡ್ ಮತ್ತು ಲ್ಯಾಪ್ ಟಾಪ್ ನ ಪ್ಲಗ್ ಪಾಯಿಂಟ್ ನ್ನು ಧ್ವಂಸ ಮಾಡಲು ಪ್ರಯತ್ನಿಸುತ್ತದೆ. ಗಿಳಿಗೆ ವಿದ್ಯುತ್ ಆಘಾತವಾಗುತ್ತದೆಯಾ ಎನ್ನುವ ಚಿಂತೆ ನಮ್ಮನ್ನು ಕಾಡುವುದು. ಆದರೆ ಅದೃಷ್ಟವಶಾತ್ ಹಾಗೇನೂ ಆಗಿಲ್ಲ. ಇಲ್ಲಿ ಗಿಳಿ ಮತ್ತು ಯಜಮಾನನ ಮಧ್ಯೆ ಹೋರಾಟವು ಮುಂದುವರಿಯುತ್ತದೆ. ಇಲ್ಲಿ ಯಾರು ಗೆದ್ದರು ಎಂದು ನಿಮಗನಿಸುತ್ತದೆ? ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ಗೆ ಹಾಕಿ. ಇಂತಹ ಮತ್ತಷ್ಟು ರೋಚಕ ವಿಡಿಯೋಗಳಿಗಾಗಿ ಇದೇ ಸೆಕ್ಷನ್ ನಲ್ಲಿ ನೀವು ನೋಡುತ್ತಲಿರಿ.



Click it and Unblock the Notifications
