For Quick Alerts
ALLOW NOTIFICATIONS  
For Daily Alerts

ವಿವಿಧ ಕೆಲಸ ಕಾರ್ಯಗಳಿಗೆ ಮಂಗಳಕರವಾದ ವಾರದ ದಿನಗಳು

|

ಯಾವುದೇ ಕೆಲಸವನ್ನು ಕೈಗೊಳ್ಳುವ ಮೊದಲು ಅದರ ಆರಂಭಕ್ಕೆ ಸೂಕ್ತ ದಿನಗಳನ್ನು ಪರಿಗಣಿಸುವುದು ಸಹಜ. ಯಾವ ಘಳಿಗೆ, ಯಾವ ವಾರ ನಮ್ಮ ಕೆಲಸಗಳಿಗೆ ಶುಭವನ್ನು ತರುವುದು ಎನ್ನುವುರ ಆಧಾರದ ಮೇಲೆ ಕೆಲಸದ ಆರಂಭ ಕಾಣುವುದು. ಅದು ಕೇವಲ ಮಂಗಳ ಕಾರ್ಯಗಳು ಎನ್ನುವುದಕ್ಕೆ ಸೀಮಿತವಾದ ಸಂಗತಿಯಲ್ಲ. ಮನೆಯಲ್ಲಿ ಕೈಗೊಳ್ಳುವ ಸಣ್ಣ ಪುಟ್ಟ ಕೆಲಸಗಳಿಂದ ಹಿಡಿದು ವಿಜ್ಞಾನಿಗಳು ಕೈಗೊಳ್ಳುವ ಕೆಲವು ಕೆಲಸ ಕಾರ್ಯಗಳಿಗೂ ಸೂಕ್ತ ಸಮಯ ಹಾಗೂ ವಾರಗಳನ್ನು ನೋಡುತ್ತಾರೆ. ಇದು ಮೇಲ್ನೋಟಕ್ಕೆ ಕೆಲವರಿಗೆ ಹಾಸ್ಯಾಸ್ಪದ ಅಥವಾ ಅನರ್ಥವಾದ ಕೆಲಸ ಎನಿಸಬಹುದು. ಆದರೆ ವಾಸ್ತವದ ಸಂಗತಿಯಲ್ಲಿ ಇದು ಉತ್ತಮವಾದ ವಿಚಾರ.

ಧನಾತ್ಮಕ ಹಾಗೂ ಋಣಾತ್ಮಕ ಎನ್ನುವ ಶಕ್ತಿ ನಮ್ಮ ಸುತ್ತಲೂ ಸದಾ ಇರುತ್ತವೆ. ನಮ್ಮಲ್ಲಿರುವ ಧನಾತ್ಮಕತೆಯು ಋಣಾತ್ಮಕಶಕ್ತಿಯನ್ನು ದೂರ ಇರಿಸಲು ಸಹಾಯ ಮಾಡುವುದು. ಅಂತೆಯೇ ನಾವು ಧನಾತ್ಮಕ ಶಕ್ತಿ ಉತ್ತಮವಾಗಿರುವಾಗ ಕೈಗೊಳ್ಳುವ ಕೆಲಸ ಉತ್ತಮ ಆರಂಭ ಹಾಗೂ ಅತ್ಯವನ್ನು ಕಾಣುವುದು. ಅಲ್ಲದೆ ಕೈಗೊಂಡ ಕೆಲಸಗಳು ಯಶಸ್ಸನ್ನು ಕಾಣುವುದು ಎಂದು ಹೇಳಲಾಗುವುದು. ಹಾಗಾಗಿ ಪುರಾತನ ಕಾಲದಿಂದಲೂ ಯಾವುದೇ ಕೆಲಸವನ್ನು ಕೈಗೊಳ್ಳುವ ಮೊದಲು ನಾವು ಸೂಕ್ತ ಸಮಯ ಹಾಗೂ ದಿನವನ್ನು ಪರಿಗಣಿಸಬೇಕು ಎನ್ನುವ ನಂಬಿಕೆಯನ್ನು ಹೊಂದಿದ್ದೇವೆ. ಅಂತೆಯೇ ನಡೆದುಕೊಂಡು ಬರುತ್ತಿದ್ದೇವೆ.

Best Days Of The Week Auspicious For Different Tasks

ನಿತ್ಯದ ಜೀವನದಲ್ಲಿ ಸಮಯಕ್ಕೆ ಅನುಗುಣವಾಗಿ ಏಳು ವಾರಗಳನ್ನು ಮಾಡಲಾಗಿದೆ. ಈ ಏಳು ವರಾಗಳಲ್ಲಿ ಪ್ರತಿಯೊಂದು ದಿನವೂ ಒಂದೊಂದು ದೇವತೆ ಹಾಗೂ ಗ್ರಹಗಳಿಗೆ ಪ್ರಸಿದ್ಧವಾದ ದಿನ ಎನ್ನಲಾಗುವುದು. ಅಂತೆಯೇ ಆಯಾ ದೇವತೆಗಳಿಗೆ ಹಾಗೂ ಗ್ರಹಗಳಿಗೆ ಅನುಗುಣವಾಗಿ ಆ ವಾರದಲ್ಲಿ ಅವರ ಶಕ್ತಿ ಹಾಗೂ ಪ್ರಭಾವವು ಅಧಿಕವಾಗಿರುತ್ತದೆ ಎನ್ನಲಾಗುವುದು. ಅಂತಹ ಸಂದರ್ಭದಲ್ಲಿ ಕೈಗೊಂಡ ಕೆಲಸದ ಆರಂಭವೂ ಅನುಗಣವಾಗಿ ನೆರವೇರುವುದು ಎನ್ನಲಾಗುವುದು.

ವಾರದ ವಿಭಿನ್ನ ದಿನಗಳು ವಿಭಿನ್ನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಮಂಗಳಕರವಾದ ಸಮಯ ಎಂದು ಕೇಳುತ್ತಾರೆ. ಇದನ್ನು ವಾಸ್ತು ಮತ್ತು ತತ್ತ್ವ ಶಾಸ್ತ್ರ ಸಮರ್ಥಿಸುತ್ತದೆ ಎನ್ನಲಾಗುವುದು. ಕೆಲವು ಕೆಲಸಗಳನ್ನು ಆಯಾ ವಾರಕ್ಕೆ ಅನುಗುಣವಾಗಿ ಕೈಗೊಳ್ಳುವುದರಿಂದ ಅತ್ಯುತ್ತಮ ಪರಿಹಾರ ಹಾಗೂ ಯಶಸ್ಸನ್ನು ಪಡೆದುಕೊಳ್ಳುವುದು ಎನ್ನಲಾಗುವುದು. ನಿಮಗೂ ನಿಮ್ಮ ಮನಸ್ಸಿನಲ್ಲಿ ಕೆಲವು ಯೋಜನೆಗಳಿವೆ, ಅವುಗಳ ಆರಂಭಕ್ಕೆ ಯಾವ ದಿನ ಸೂಕ್ತ ಎನ್ನುವುದನ್ನು ಹುಡುಕುತ್ತಿದ್ದರೆ ಅಥವಾ ಯಾವ ಕೆಲಸಗಳಿಗೆ ಯಾವ ವಾರ ಸೂಕ್ತವಾದ ದಿನವಾಗುವುದು? ಎನ್ನುವುದರ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿದ್ದರೆ ಬೋಲ್ಡ್ ಸ್ಕೈ ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ....

ಭಾನುವಾರ

ಭಾನುವಾರ

ಭಾನುವಾರ ಎಂದರೆ ವಿರಾಮದ ವಾರ ಅಥವಾ ಕೆಲಸ ಕಾರ್ಯಗಳ ಆರಂಭಕ್ಕೆ ಅನುಕೂಲಕರವಾದ ದಿನ ಎಂದು ಎಲ್ಲರೂ ಭಾವಿಸುತ್ತಾರೆ. ಭಾನುವಾರವು ಕಲೆಗೆ ಸಂಬಂಧಿತ ಕೆಲಸವನ್ನು ಪ್ರಾರಂಭಿಸಲು ಅತ್ಯಂತ ಶುಭಕರವಾದ ಸೂಚನೆಯನ್ನು ಸೂಚಿಸುತ್ತದೆ. ಕಲೆಗೆ ಸಂಬಂಧಿಸಿದ ಎಲ್ಲಾ ಕ್ಷೇತ್ರದ ಕೆಲಸವನ್ನು ಭಾನುವಾರ ಆರಂಭಿಸಬಹುದು ಎನ್ನಲಾಗುವುದು. ಕಲೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ಆರಂಭಿಸಲು ಈ ದಿನವು ಅತ್ಯಂತ ಶ್ರೇಷ್ಠವಾದದ್ದು ಎಂದು ಹೇಳುತ್ತಾರೆ. ಉದಾಹರಣೆಗೆ ವರ್ಣಚಿತ್ರ, ಕರಕುಶಲ ವಸ್ತುಗಳ ಕೆಲಸ, ಕಲಾ ಶಾಲೆಯ ಪ್ರಾರಂಭದ ಕೆಲಸ, ಸ್ವಂತ ಅಧ್ಯಯನ ಅಥವಾ ಅದೇ ಕೇತ್ರದ ಕೋರ್ಸ್‍ಗಳನ್ನು ಪ್ರಾರಂಭಿಸಲು ಸೂಕ್ತವಾದ ದಿನವಾಗಿರುತ್ತದೆ ಎಂದು ಹೇಳಲಾಗುವುದು.

ಸೋಮವಾರ

ಸೋಮವಾರ

ಸೋಮವಾರವು ಶಿವನಿಗೆ ಹಾಗೂ ಚಂದ್ರನಿಗೆ ಮೀಸಲಾದ ದಿನ ಎಂದು ಪರಿಗಣಿಸಲಾಗುವುದು. ಆದ್ದರಿಂದ ರತ್ನದ ಹರಳನ್ನು ಧರಿಸಲು ಬಯಸುವವರು ಈ ದಿನವನ್ನು ಆಯ್ಕೆಮಾಡಿಕೊಳ್ಳಬೇಕು. ಜ್ಯೋತಿಷ್ಯ ಶಾಸ್ತ್ರದಲ್ಲಿ ರತ್ನದ ಹರಳನ್ನು ಮಂಗಳಕರವಾದ ಈ ದಿನದಂದೇ ಧರಿಸಬೇಕು ಎಂದು ಹೇಳುವುದು. ಮೊದಲ ಬಾರಿಗೆ ರತ್ನದ ಹರಳನ್ನು ಧರಿಸಲು ಸೋಮವಾರವನ್ನೇ ಆಯ್ಕೆ ಮಾಡಬೇಕು ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಅಲ್ಲದೆ ಈ ವಾರ ಎಲ್ಲಾ ಬಗೆಯ ಧಾರ್ಮಿಕ ಕಾರ್ಯಗಳಿಗೆ ಹಾಗೂ ಶುಭ ಕೆಲಸಗಳಿಗೆ ಉತ್ತಮವಾದ ದಿನ ಎಂದು ಪರಿಗಣಿಸಲಾಗುವುದು.

ಮಂಗಳವಾರ

ಮಂಗಳವಾರ

ಮಂಗಳವಾರವು ಹನುಂತ ದೇವರಿಗೆ ಮೀಸಲಾದ ದಿನ. ಮಂಗಳ ಗ್ರಹಕ್ಕೆ ಮೀಸಲಾದ ದಿನ ಎಂದು ಹೇಳಲಾಗುವುದು. ದೈಹಿಕ ಶ್ರಮವನ್ನು ಒಳಗೊಂಡಿರುವ ಕೆಲಸ ಕಾರ್ಯಗಳನ್ನು ಪ್ರಾರಂಭಿಸಲು ಈ ದಿನ ಉತ್ತಮವಾದದ್ದು ಎಂದು ಹೇಳಲಾಗುತ್ತದೆ. ಮಂಗಳವಾರದಂದು ಮಾಡುವ ವಿತ್ತೀಯ ವ್ಯವಹಾರವು ಮಂಗಳಕಾರವಾಗಿರುತ್ತವೆ. ಈ ದಿನದಂದು ಮಾಡುವ ಆಸ್ತಿ ಪಾಲು, ಮಾರುಕಟ್ಟೆಯ ವ್ಯವಹಾರ ಸೇರಿದಂತೆ ಇನ್ನಿತರ ವ್ಯಾಪಾರ ವ್ಯವಹಾರಗಳಲ್ಲಿಯೂ ಉತ್ತಮ ಲಾಭವನ್ನು ತಂದುಕೊಡುವುದು ಎನ್ನುತ್ತಾರೆ. ಮಂಗಳವಾರ ಯಾವುದೇ ಕಾರಣಕ್ಕೂ ಸಾಲವನ್ನು ತೆಗೆದುಕೊಳ್ಳಬಾರದು. ಏಕೆಂದರೆ ಸಾಲವನ್ನು ಮರುಪಾವತಿಸಲು ಕಷ್ಟವಾಗುವುದು ಎಂದು ಹೇಳಲಾಗುತ್ತದೆ.

ಬುಧವಾರ

ಬುಧವಾರ

ಬುಧ ಗ್ರಹಕ್ಕೆ ಮೀಸಲಾದ ದಿನ ಬುಧವಾರ ಎಂದು ಹೇಳಲಾಗುವುದು. ಈ ದಿನದಂದು ಹೊಸ ಉದ್ಯೋಗವನ್ನು ಪ್ರಾರಂಭಿಸಲು ಮುಂದಾಗಬೇಕು. ಈ ಹಿಂದೆ ಮಾಡುತ್ತಿದ್ದ ಕೆಲಸದಲ್ಲಿ ಪ್ರಗತಿ ಅಥವಾ ಲಾಭ ದೊರೆಯುತ್ತಲಿಲ್ಲವಾಗಿದ್ದರೆ ಬುಧವಾರದಂದು ಹೊಸ ಕೆಲಸವನ್ನು ಆರಂಭಿಸಬೇಕು ಎಂದು ಹೇಳಲಾಗುವುದು. ಇದರಿಂದ ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಸಹಾಯವಾಗುವುದು. ಅಲ್ಲದೆ ನಿಮ್ಮ ಆಸೆಯು ನೆರವೇರುವುದು. ಹಾಗಾಗಿ ಒಂದು ಹೊಸ ಉದ್ಯೋಗ ಅಥವಾ ಯೋಜನೆಯನ್ನು ಪ್ರಾರಂಭಿಸಲು ಬುಧವಾರವು ಶುಭಕರವಾಗಿರುತ್ತದೆ.

Most Read: ಪ್ರತಿ ಬುಧವಾರ ಶ್ರೀ ಕೃಷ್ಣನ ಮಂತ್ರ ಪಠಿಸಿ, ಎಲ್ಲವೂ ಒಳ್ಳೆಯದಾಗುವುದು!

ಗುರುವಾರ

ಗುರುವಾರ

ಗುರು ಗ್ರಹದ ಪ್ರಭಾವ ಹೆಚ್ಚಾಗಿರುವ ವಾರ ಗುರುವಾರ. ಗುರುವಿಗೆ ಮೀಸಲಾದ ಈ ದಿನವು ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಕೈಗೊಳ್ಳಬಹುದು. ಈ ದಿನವನ್ನು ನೀವು ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ವಿಷಯಗಳೊಂದಿಗೆ ಪ್ರಾರಂಭಿಸಿದರೆ ಯಶಸ್ಸಿಗೆ ಹೆಚ್ಚಿನ ಅವಕಾಶವನ್ನು ಕಲ್ಪಿಸಿಕೊಡುವುದು. ಹಣಕಾಸಿಗೆ ಸಂಬಂಧಿಸಿದಂತೆ ಹಣವನ್ನು ಎರವಲು ಪಡೆಯುವುದು ಅಥವಾ ಸಾಲಕೊಡುವುದನ್ನು ಯಾವಾಗಲೂ ತಡೆಯಬೇಕು ಎಂದು ಹೇಳಲಾಗುವುದು.

Most Read: ಗುರುವಾರ ವಿಷ್ಣುವಿಗೆ ಪೂಜೆ ಮಾಡಿ ಲಕ್ಷ್ಮೀ ದೇವಿಯನ್ನು ಮನೆಗೆ ಬರಮಾಡಿಕೊಳ್ಳಿ

ಶುಕ್ರವಾರ

ಶುಕ್ರವಾರ

ಶುಕ್ರವಾರವು ದೇವಿಗೆ ಹಾಗೂ ಶುಕ್ರನಿಗೆ ಸಂಬಂಧಿಸಿದ ದಿನವಾಗಿರುತ್ತದೆ. ಕಾನೂನಿಗೆ ಸಂಬಂಧಿಸಿದಂತೆ ಕೆಲವು ತೊಂದರೆಗೆ ಒಳಗಾಗಿದ್ದರೆ ಅವುಗಳ ನಿವಾರಣೆಯ ಕೆಲಸ ಕಾರ್ಯವನ್ನು ಶುಕ್ರವಾರದಂದು ಕೈಗೊಳ್ಳಿ. ಶಿಕ್ಷಣಕ್ಕೆ ಸಂಬಂಧಿಸಿದ ಕೆಲಸ ಹಾಗೂ ಹಣಕಾಸಿನ ವ್ಯವಹಾರವನ್ನು ಕೈಗೊಳ್ಳಲು ಶುಕ್ರವಾರವು ಶುಭಕರವಾದದ್ದು. ಬಿತ್ತನೆ, ಕೊಯ್ಲು ಸೇರಿದಂತೆ ಇನ್ನಿತರ ಕೃಷಿ ಸಂಬಂಧಿತ ಕೆಲಸವನ್ನು ಕೈಗೊಳ್ಳಲು ಶುಕ್ರವಾರವು ಶುಭಕರವಾದ ದಿನವಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಶನಿವಾರ

ಶನಿವಾರ

ಶನಿ ದೇವ ಹಾಗೂ ಶನಿ ಗ್ರಹಕ್ಕೆ ಮೀಸಲಾದ ದಿನ ಎಂದು ಹೇಳಲಾಗುವುದು. ಈ ದಿನದಂದು ಔಷಧಿಗೆ ಸಂಬಂಧಿಸಿದ ವ್ಯವಹಾರ ಅಥವಾ ಕೆಲಸವನ್ನು ಕೈಗೊಳ್ಳಬಹುದು. ಶನಿ ದೇವನಿಗೆ ಮೀಸಲಾದ ಈ ದಿನವಾಗಿರುವುದರಿಂದ ವಿವಿಧ ಪರಿಹಾರವನ್ನು ಕೈಗೊಳ್ಳಲು ಅತ್ಯುತ್ತಮವಾದ ದಿನವಾಗಿರುತ್ತದೆ. ಹಾಗಾಗಿ ಆರೋಗ್ಯಕ್ಕೆ ಮತ್ತು ಔಷಧಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಕೈಗೊಳ್ಳಲು ಈ ದಿನ ಸೂಕ್ತವಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

English summary

Best Days Of The Week Auspicious For Different Tasks

We always look for an auspicious time while beginning an important task. We believe that something done keeping in mind the auspicious timings becomes a success. We have even heard that different days of the week are auspicious for performing different tasks. Vastu Shastra also advocates the same philosophy. Here we have brought to you a list of best days of the week auspicious for different tasks. Take a look.
X
Desktop Bottom Promotion