Latest Updates
-
ಬಿಸಿಗಾಳಿಯ ಅಬ್ಬರ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಉಪಾಯಗಳು -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮ ಪಾಲಿಸಿ -
ಫ್ಯಾಶನ್ ರೆವಲ್ಯೂಷನ್ ಡೇ: ಬಟ್ಟೆಯನ್ನು ಉಲ್ಟಾ ಧರಿಸಿ ಫೋಟೋ ಹಾಕುತ್ತಿರುವುದೇಕೆ? ಈ ಟ್ರೆಂಡ್ ಹಿಂದಿದೆ ದೊಡ್ಡ ಕಥೆ! -
ಬಿಸಿಲ ಅಲೆ: ಸುಡುವ ಬಿಸಿಲಿನಲ್ಲಿ ವ್ಯಾಯಾಮ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಉತ್ತರ ಭಾರತದ ಬಿಸಿಲ ಬೇಗೆ: ಮದುವೆ ಶಾಸ್ತ್ರಗಳೆಲ್ಲಾ ಈಗ ಸೂರ್ಯ ಮುಳುಗಿದ ಮೇಲೆ! -
ಬಿಸಿಗಾಳಿಯ ಆರ್ಭಟ: ನಿಮ್ಮ ಮನೆಯನ್ನು ಫ್ರಿಡ್ಜ್ನಂತೆ ತಂಪಾಗಿಡಲು ಇಲ್ಲಿವೆ ಅದ್ಭುತ ದೇಸಿ ಟಿಪ್ಸ್! -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ಹೊಡೆತದಿಂದ ಪಾರಾಗಲು ಮನೆಯಲ್ಲೇ ತಯಾರಿಸಿ ಈ ಜೀವ ರಕ್ಷಕ ಪಾನೀಯ! -
ಬಿಸಿಗಾಳಿಯ ಆರ್ಭಟ: ಸುಡುವ ಬಿಸಿಲಿನಿಂದ ಪಾರಾಗಲು ನೀವು ಮಾಡಲೇಬೇಕಾದ ಬದಲಾವಣೆಗಳೇನು? -
ಬಿಸಿಗಾಳಿಯ ಆರ್ಭಟ: ನಿಮ್ಮ ಬೆಳಗಿನ ವ್ಯಾಯಾಮದ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ!
ಮೇಷ, ಮಿಥುನ, ಕುಂಭ ಈ 3 ರಾಶಿಯವರಿಗೆ ಆಗಸ್ಟ್ ತಿಂಗಳಲ್ಲಿ ಕಷ್ಟ ಬರಲಿದೆ
ಪ್ರತೀ ತಿಂಗಳ ಮೊದಲ ತಾರೀಕು ಬಂದಾಗ ಹೆಚ್ಚಿನವರು ಇಂಟರ್ನೆಟ್ ನಲ್ಲಿ ಹುಡುಕುವ ವಿಷಯ ತಿಂಗಳ ರಾಶಿ ಭವಿಷ್ಯ. ಹೌದು, ನಿಮಗೆ ಇದನ್ನು ಹೇಳಿ ಅಚ್ಚರಿಯಾಗಬಹುದು. ಆದರೆ ಇದು ನಿಜ. ಯಾಕೆಂದರೆ ಮುಂದಿನ ತಿಂಗಳಾದರೂ ಒಳ್ಳೆಯದಾಗಿರಲಿ ಎಂದು ಬಯಸುವವರು ಹೆಚ್ಚು. ಹೀಗಾಗಿ ಅವರು ತಮ್ಮ ರಾಶಿಭವಿಷ್ಯ ನೋಡಿಕೊಂಡು ಮುಂದಿನ ತಿಂಗಳಿಗೆ ಹೇಗೆ ತಯಾರಿ ಮಾಡಿಕೊಳ್ಳಬಹುದು ಎಂದು ಚಿಂತಿಸುವರು.
ಆದರೆ ಈ ಲೇಖನದಲ್ಲಿ ಮೂರು ರಾಶಿಗಳಿಗೆ ಅಗಸ್ಟ್ 2018 ತುಂಬಾ ಕೆಟ್ಟದಾಗಿರಲಿದೆ ಎಂದು ಹೇಳುತ್ತಲಿದ್ದೇನೆ. ಮೇಷ, ಮಿಥುನ ಮತ್ತು ಕುಂಭ ರಾಶಿಯವರಿಗೆ ಅಗಸ್ಟ್ ತಿಂಗಳು ತುಂಬಾ ಕಠಿಣವಾಗಿರಲಿದೆ. ಜ್ಯೋತಿಷಿಗಳು ನಕ್ಷತ್ರಗಳನ್ನು ನೋಡಿಕೊಂಡು ರಾಶಿಭವಿಷ್ಯ ಹೇಳುವರು. ಆದರೆ ಇದರಲ್ಲಿ ಎಲ್ಲವೂ ನಿಮ್ಮ ಮೇಲೆ ಪರಿಣಾಮ ಬೀರಬೇಕೆಂದಿಲ್ಲ. ಹೀಗಾಗಿ ಸ್ವಲ್ಪ ಮಟ್ಟಿಗೆ ಸಮಾಧಾನಪಡಿ. ಯಾಕೆಂದರೆ ಪ್ರತಿಯೊಬ್ಬರ ಜಾತಕವು ತುಂಬಾ ಭಿನ್ನವಾಗಿರುವುದು.
ಉದಾಹರಣೆಗೆ ನಿಮ್ಮ ರಾಶಿಯು ಮಿಥುನವಾಗಿದ್ದು, ಕುಂಭ ಪ್ರಾಬಲ್ಯದೊಂದಿಗೆ, ವೃಷಭದಲ್ಲಿ ಬುಧ ಮತ್ತು ಕರ್ಕಾಟಕದಲ್ಲಿ ಚಂದ್ರನಿದ್ದರೆ....ನೀವು ಕೇವಲ ಮಿಥುನ ರಾಶಿಯವರಾಗಿರುವ ಕಾರಣದಿಂದ ಇದಕ್ಕೆ ಸಂಬಂಧಿಸಿರುವ ಪ್ರತಿಯೊಂದು ವಿಚಾರವು ನಿಮ್ಮ ಮೇಲೆ ಪರಿಣಾಮ ಬೀರಬೇಕೆಂದಿಲ್ಲ. ಭಾವನಾತ್ಮಕವಾಗಿ ತುಂಬಾ ಉನ್ನತಮಟ್ಟದಲ್ಲಿರುವಂತಹ ವ್ಯಕ್ತಿಯು ಸಂವಹನಕ್ಕೆ ಸಮಯ ತೆಗೆದುಕೊಂಡು ತನ್ನ ಪ್ರಭಾವ ಬೀರಬಹುದು. ದಾಖಲೆಗಳ ಪ್ರಕಾರ ಮಿಥುನ ರಾಶಿಯವರು ಭಾವನಾತ್ಮಕ ವ್ಯಕ್ತಿಗಳಲ್ಲ.
ಮಿಥುನ ರಾಶಿಯವರು ತುಂಬಾ ನಯ ಹಾಗೂ ನಿಧಾನವಾಗಿ ಮಾತನಾಡಿ ಮಾತು ಮುಗಿಸಲ್ಲ. ಮಿಥುನ ರಾಶಿಯವರು ಒಂದು ವಿಚಾರದ ಬಗ್ಗೆ ಐದು ನಿಮಿಷಕ್ಕಿಂತ ಹೆಚ್ಚಿಗೆ ಮಾತನಾಡಿದ್ದರೆ ಆಗ ನೀವು ಅವರ ಜಾತಕ ಕೇಳಲು ಹಿಂಜರಿಯಬೇಡಿ. ಅಗಸ್ಟ್ ನಲ್ಲಿ ಈ ಮೂರು ರಾಶಿಯವರ ಕಠಿಣ ಪರಿಸ್ಥಿತಿ ಬಗ್ಗೆ ತಿಳಿಯುವ...

ಮೇಷ: ಪ್ರತಿಯೊಂದು ಎಳೆಯುವಂತೆ ಭಾಸವಾಗುವುದು
ಮೇಷ ರಾಶಿಯವರ ನೋವು ಖಂಡಿತವಾಗಿಯೂ ನನಗೆ ತಿಳಿಯುತ್ತಿದೆ. ಈ ರಾಶಿಚಕ್ರದ ಅಧಿಪತಿಯಾಗಿರುವ ಮಂಗಳನು ಹಿಮ್ಮುಖಚಲನೆಯಲ್ಲಿದ್ದು, ಪ್ರತಿಯೊಂದು ಹೊರೆಯಾಗಿ ಪರಿಣಮಿಸಬಹುದು. ನೀವು ತುಂಬಾ ತಿಕ್ಕಲು ಸ್ವಭಾವ ಮತ್ತು ಆಲಸಿಯಾಗಿರಬಹುದು ಅಲ್ಲವೇ? ಇದಕ್ಕೆ ಚಿಂತೆ ಮಾಡಬೇಕೆಂದಿಲ್ಲ. ಮಂಗಳನು ಒಂದು ಕಾರಣಕ್ಕಾಗಿ ಹಿಮ್ಮುಖವಾಗಿದ್ದಾನೆ ಮತ್ತು ಈ ಸಮಯದಲ್ಲಿ ಒಳ್ಳೆಯದು ಮಾಡಿಕೊಳ್ಳುವುದು ನಿಮ್ಮ ಮೇಲಿದೆ. ನಿಮ್ಮನ್ನು ಮುಂದೆ ಸಾಗದಂತೆ ತಡೆಯುವಂತಹ ವಿಚಾರಗಳತ್ತ ಗಮನ ಹರಿಸಿ. ಈ ಸಮಯದ ಲಾಭ ಪಡೆಯಿರಿ.

ಆ. 27ರ ನಂತರ ಎಲ್ಲವೂ ಸರಿಯಾಗಲಿದೆ
ರಾಶಿಗಳಲ್ಲಿ ನೀವು ಯೋಧ. ಆದರೆ ಯೋಧ ಕೂಡ ಕೆಲವೊಮ್ಮೆ ವಿರಮಿಸಿ, ಸಮಯಕ್ಕೆ ತಕ್ಕಂತೆ ಪರಿಸ್ಥಿತಿಯನ್ನು ವಿಮರ್ಶಿಸಿಕೊಳ್ಳಬೇಕಾಗುತ್ತದೆ. ಈ ವೇಳೆ ನಿಮ್ಮ ಹೋರಾಟಕ್ಕೆ ಹೊಸ ಮಾರ್ಗಗಳು ಕೂಡ ಸಿಗಬಹುದು. ಆ. 27ರಂದು ಮಂಗಳನು ಮತ್ತೆ ನೇರ ಚಲನೆ ಆರಂಭಿಸಲಿದ್ದಾನೆ. ಇದರಿಂದ ಎಲ್ಲವೂ ಸರಿಯಾಗಲಿದೆ. ಅಲ್ಲಿಯ ತನಕ ಕಾಯಿರಿ.

ಮಿಥುನ: ನಿಮ್ಮ ಆತಂಕವು ಉನ್ನತ ಮಟ್ಟದಲ್ಲಿದೆ
ನಿಮ್ಮ ರಾಶಿಚಕ್ರದ ಅಧಿಪತಿಯಾಗಿರುವ ಬುಧನು ವಿರುದ್ಧಗತಿಯಲ್ಲಿದ್ದಾನೆ. ಇದರಿಂದ ನಿಮಗೆ ಹಾಗೂ ಕನ್ಯಾ ರಾಶಿ ಮೇಲೆ ಹೆಚ್ಚಿನ ಪ್ರಭಾವ ಉಂಟಾಗಲಿದೆ. ಇದು ಹೇಗೆ ಸಾಗಲಿದೆ ಎಂದು ಮಿಥುನ ರಾಶಿಯವರಿಗೆ ತಿಳಿದಿದೆ. ಸಿಂಹ ರಾಶಿಯಲ್ಲಿ ಬುಧನ ಹಿಮ್ಮುಖವಾಗಿರುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದು ನಿಮ್ಮ ಮೇಲೆ ಮತ್ತಷ್ಟು ಭಾರ ಹಾಕುವ ಕಾರಣದಿಂದ ಅಹಂನ್ನು ದೂರವಿಡಬೇಕು.

ಬುಧನು ವಿರುದ್ಧಗತಿಯಾಗಿರುತ್ತಾನೆ
ನೀವು ಹೃದಯದಿಂದ ಮಾತನಾಡಲು ಬಯಸುತ್ತಿರುವಿರಾ ಅಥವಾ ಬೇರೆಯವರನ್ನು ಖುಷಿ ಪಡಿಸಲು ಪ್ರಯತ್ನಿಸುತ್ತಿದ್ದೀರಾ? ಇದರಿಂದಾಗಿಯೇ ಎಲ್ಲವೂ ನಿಧಾನವಾಗಿರುವುದು. ಆದರೆ ದಿನದ ಅಂತ್ಯಕ್ಕೆ ನಿಮಗೆ ಅನುಭವ ಪಾಠ ಕಲಿಸಲಿದೆ. ನಿಮ್ಮ ಮೂರನೇ ಮನೆಯಲ್ಲಿ ಬುಧನು ವಿರುದ್ಧಗತಿಯಾಗುತ್ತಾನೆ. ಇದರಿಂದ ಎಲ್ಲವೂ ಸಾಮಾನ್ಯವಾಗಲಿದೆ.

ಕುಂಭ: ಅಂತಃಶಕ್ತಿಗೆ ವಿರಾಮವಿಲ್ಲದೆ ನಿಮ್ಮಿಂದ ಶ್ರೇಷ್ಠವಾಗಿರುವುದನ್ನು ಪಡೆಯುವುದು
ನೀವು ಮುಖಾಮುಖಿಯಲ್ಲಿ ತುಂಬಾ ಉತ್ತಮವಾಗಿರುವಿರಿ. ಆದರೆ ನೀವು ಭಾವನಾತ್ಮಕ ವ್ಯಕ್ತಿಯಲ್ಲದಿರುವ ಕಾರಣ ನೀವು ನಂಬಿರುವಂತಹ ವಿಚಾರಕ್ಕೆ ಹೋರಾಟ ಮಾಡುವುದು ದೊಡ್ಡ ವಿಷಯವೇನಲ್ಲ. ನಿಮ್ಮ ರಾಶಿಯಲ್ಲಿ ಮಂಗಳನು ವಿರುದ್ಧಗತಿಯಾಗುವ ಮೊದಲು ಎಲ್ಲವೂ ಹೀಗಿತ್ತು. ಜುಲೈ ತಿಂಗಳ ಕೊನೆಯಲ್ಲಿ ನಡೆದಿರುವಂತಹ ಚಂದ್ರಗ್ರಹಣದಿಂದ ನೀವು ಸಂಪೂರ್ಣವಾಗಿ ಹೊರಬಂದಿಲ್ಲವೆನ್ನುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಕುಂಭ: ಇದೆಲ್ಲವೂ ನಿಮ್ಮ ರಾಶಿಯಲ್ಲಿ ನಡೆಯಲಿದೆ
ನನ್ನನ್ನು ನಂಬಿ, ಕೆಲವೊಂದು ವಿಚಾರಗಳು ಇನ್ನಷ್ಟು ಸಂಕಷ್ಟವನ್ನು ಉಂಟು ಮಾಡಲಿದೆ. ನಿಮ್ಮ ರಾಶಿಚಕ್ರದ ಅಧಿಪತಿಯಾಗಿರುವ ಯುರೇನಸ್ ಆ.7ರಂದು ವಿರುದ್ಧಗತಿ ಹಿಡಿಯುವನು. ಇದೆಲ್ಲವೂ ನಿಮ್ಮ ರಾಶಿಯಲ್ಲಿ ನಡೆಯಲಿದೆ. ನೀವು ಯಾವುದನ್ನೂ ತಡೆಯಲು ಪ್ರಯತ್ನಿಸಬೇಡಿ ಮತ್ತು ಪ್ರವಾಹ ಬಂದಂತೆ ಸಾಗಿ. ಈ ವ್ಯಾಪ್ತಿಯಲ್ಲಿ ಇನ್ನು ದೊಡ್ಡ ವಿಚಾರಗಳಿವೆ. ಕಾದು ನೋಡಿ...



Click it and Unblock the Notifications