Latest Updates
-
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ! -
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು? -
ಬಿಸಿಲ ಧಗೆಗೆ ತಂಪಾದ ಗುಡ್ ನ್ಯೂಸ್: ಮೇ 8 ರಿಂದ ಶುರುವಾಗಲಿದೆ ಗ್ರೇಟ್ ಸಮ್ಮರ್ ಸೇಲ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಪದ್ಧತಿಯಿಂದ ಇಡೀ ದಿನ ಇರಿ ಫ್ರೆಶ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಕೂಲ್ ಆಗಿರಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ!
ಸೂರ್ಯಗ್ರಹಣದಿಂದ ರಾಶಿಚಕ್ರಗಳ ಮೇಲೆ ಆಗುವ ಪರಿಣಾಮಗಳು
ಖಗೋಲಮಂಡಲದಲ್ಲಿ ನಡೆಯುವಂತಹ ಪ್ರತಿಯೊಂದು ವಿದ್ಯಮಾನವು ವಿಜ್ಞಾನಿಗಳಲ್ಲಿ ಹೆಚ್ಚಿನ ಕೌತುಕವನ್ನು ಉಂಟು ಮಾಡುವುದು. ಅದರಲ್ಲೂ ಈ ವರ್ಷದಲ್ಲಿ ಖಗೋಲ ವಿಜ್ಞಾನಿಗಳಿಗೆ ಹಬ್ಬವೆನ್ನಬಹುದು. ಯಾಕೆಂದರೆ ಈ ವರ್ಷದ ಮೂರನೇ ಗ್ರಹಣವು ಆಗಸ್ಟ್ 11, 2018ರಂದು ಗೋಚರಿಸಲಿದೆ. ಇದು ಉತ್ತರ ಅಮೆರಿಕಾ, ಯುರೋಪ್, ಗ್ರೀನ್ ಲ್ಯಾಂಡ್ ಮತ್ತು ಈಶಾನ್ಯ ಏಶ್ಯಾದಲ್ಲಿ ಕಾಣಿಸಿಕೊಳ್ಳಲಿದೆ.
ಆ.11ರಂದು ಬೆಳಗ್ಗೆ 8.02ರಿಂದ 9.46ರ ತನಕ ಗ್ರಹಣವಿರಲಿದೆ. ಒಂದು ಗಂಟೆಗಳ ಕಾಲ ಕಾಣಿಸಿಕೊಳ್ಳುವ ಗ್ರಹಣದ ಪರಿಣಾಮವು ಸುಮಾರು 180 ದಿನಗಳ ಕಾಲ ಇರಲಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಈ ಸೂರ್ಯಗ್ರಹಣವು ನಿಮ್ಮ ರಾಶಿಚಕ್ರಗಳ ಮೇಲೆ ಯಾವ ರೀತಿ ಪರಿಣಾಮ ಬೀರುವುದು ಎಂದು ತಿಳಿಯುವ...

ಮೇಷ: ಮಾ.21- ಎಪ್ರಿಲ್ 19
ಮೇಷ ರಾಶಿಯವರೇ ನೀವು ಹೆಚ್ಚಿನ ಜವಾಬ್ದಾರಿಯನ್ನು ಪಡೆಯಲು ತಯಾರಾಗಿರಬೇಕು. ಚಿಂತೆಯಾಯಿತೇ? ಚಿಂತಿಸಬೇಡಿ. ಯಾಕೆಂದರೆ ನೀವು ಹುಟ್ಟಿನಿಂದಲೇ ಒಳ್ಳೆಯ ನಾಯಕತ್ವ ಹೊಂದಿರುವವರು. ಕೇವಲ ಒಳ್ಳೆಯದು ಮಾತ್ರ ನಿಮ್ಮನ್ನು ಎದುರುಗೊಳ್ಳದು, ಕೆಲವು ಕೆಟ್ಟದನ್ನು ಎದುರಿಸಬೇಕಾಗುತ್ತದೆ. ವೃತ್ತಿಯಲ್ಲಿ ನಿಮಗೆ ಖಂಡಿತವಾಗಿಯೂ ಶುಭಸೂಚನೆಗಳಿವೆ.

ವೃಷಭ: ಎಪ್ರಿಲ್ 20-ಮೇ 20
ಸೂರ್ಯಗ್ರಹಣದಂದು ಬುಧ ಮತ್ತು ಮಂಗಳನು ವಿರುದ್ಧಗತಿಯಲ್ಲಿರುವ ಕಾರಣದಿಂದಾಗಿ ನಿಮ್ಮ ಕೆಲವೊಂದು ಯೋಜನೆಗಳು ವಿಳಂಬವಾಗುವ ಸಾಧ್ಯತೆಗಳಿವೆ. ಕೆಲವು ವೃಷಭ ರಾಶಿಯವರು ತಮ್ಮ ಯೋಜನೆಗಳನ್ನು ಜಾರಿಗೆ ತರಲು ಒಳ್ಳೆಯ ಸಮಯಕ್ಕಾಗಿ ಕಾಯುತ್ತಿರಬಹುದು. ಆದರೆ ಸಪ್ಟೆಂಬರ್ ತನಕ ನೀವು ಇದನ್ನು ಮುಂದೂಡುವುದು ಒಳ್ಳೆಯದು. ಹೀಗೆ ಮಾಡಿದರೆ ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ವೃತ್ತಿಯೊಂದಿಗೆ ವೈಯಕ್ತಿಕ ವಿಚಾರಗಳನ್ನು ಜೋಡಿಸಬೇಡಿ.

ಮಿಥುನ: ಮೇ 21- ಜೂನ್ 20
ನಿಮ್ಮನ್ನು ನಿಜವಾದ ರತ್ನವೆಂದು ಕರೆದರೆ ಯಾವುದೇ ತಪ್ಪಿಲ್ಲ. ಯಾಕೆಂದರೆ ನಿಮ್ಮನ್ನು ಬಯಸುವವರಿಗೆ ನೀವು ಸಹಾಯಹಸ್ತ ನೀಡುವಿರಿ. ಆದರೆ ನೀವು ಹೆಚ್ಚು ಜಾಗೃತೆಯಿಂದ ಇರಬೇಕು. ಯಾಕೆಂದರೆ ಮಿಥುನ ರಾಶಿ ಮೇಲೆ ನಕಾರಾತ್ಮಕ ಪರಿಣಾಮವಿದೆ. ಸಂವಹನ ಸಮಸ್ಯೆಯಿಂದಾಗಿ ನೀವು ಸ್ವಲ್ಪ ನಿಧಾನವಾಗುವಿರಿ. ಆದರೆ ಆಲೋಚನೆಗಳಲ್ಲಿ ನೀವು ತುಂಬಾ ಕ್ರಿಯಾತ್ಮಕವಾಗಿರುವಿರಿ.

ಕರ್ಕಾಟಕ: ಜೂನ್ 22-ಜುಲೈ 22
ನಿಧಾನಗತಿಯ ಆಗಸ್ಟ್ ತಿಂಗಳಿಂದಾಗಿ ನೀವು ತುಂಬಾ ನಿಧಾನವಾಗಿದ್ದೀರಿ ಎಂದಲ್ಲ. ಜೀವನದಲ್ಲಿ ಬರುವಂತಹ ಕೆಲವೊಂದು ಬದಲಾವಣೆಗಳಿಗೆ ನೀವು ತಯಾರಾಗಿರಬೇಕು. ಜೀವನದಲ್ಲಿ ಮಿಶ್ರ ಫಲಿತಾಂಶದೊಂದಿಗೆ ನಿಮಗೆ ಶುಭ ಸುದ್ದಿಯು ಕಾದಿದೆ. ಗ್ರಹಣದಿಂದಾಗಿ ನಿಮ್ಮಲ್ಲಿ ಹೆಚ್ಚಿನ ಶಕ್ತಿಯು ಬರಲಿದೆ.

ಸಿಂಹ: ಜುಲೈ 23- ಆ. 22
ಟೀಕೆ ಮತ್ತು ಟಿಪ್ಪಣಿಗಳಿಗೆ ಹೇಗೆ ಉತ್ತರಿಸಬೇಕೆಂದು ಸಿಂಹ ರಾಶಿಯವರಿಗೆ ಹೇಳಿಕೊಡಬೇಕಾಗಿಲ್ಲ. ಗ್ರಹಣದ ಸುತ್ತಮುತ್ತ ನೀವು ಬೇರೆಯವರೊಂದಿಗೆ ವಾಗ್ವಾದದಲ್ಲಿ ತೊಡಗುವ ಕಾರಣ ತಾಳ್ಮೆಯಿಂದ ಇರಿ ಎನ್ನುವುದು ನಮ್ಮ ಸಲಹೆ. ನೀವು ಕಾಯುತ್ತಿರುವ ಯೋಜನೆಗಳನ್ನು ಜಾರಿಗೊಳಿಸಲು ಸಮಯವು ಬರಲಿದೆ.

ಕನ್ಯಾ: ಆ.23-ಸೆ.22
ಬುಧನು ವಿರುದ್ಧಗತಿಯಲ್ಲಿರುವ ಕಾರಣದಿಂದಾಗಿ ಜೀವನದಲ್ಲಿ ಉತ್ತಮ ವೇಗ ಪಡೆಯಲು ನಿಮಗೆ ಕಷ್ಟವಾಗಬಹುದು. ಈ ಸಮಯದಲ್ಲಿ ಯಾವುದೇ ಹೊಸ ಆರಂಭಕ್ಕೆ ಮುಂದಾಗಬೇಡಿ. ವಿದ್ಯಾರ್ಥಿಗಳಿಗೆ ತುಂಬಾ ಲಾಭವಾಗಲಿದೆ. ಅದಾಗ್ಯೂ, ಧನಾಗಮನದ ನಿರೀಕ್ಷೆಯಿದೆ. ಆದರೆ ಸಂಪೂರ್ಣ ಸಮಯವು ನಿಮ್ಮ ಪರವಾಗಿಲ್ಲ.

ತುಲಾ: ಸೆ.24-ಅ.22
ತಾಯಿಯ ಆರೋಗ್ಯದ ಕಡೆ ನೀವು ಗಮನಹರಿಸಬೇಕಾಗುತ್ತದೆ. ವೃತ್ತಿಪರವಾಗಿ ನೀವು ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಬಹುದು. ನೀವು ಯಾವುದೇ ಯೋಜನೆ ಅನುಷ್ಠಾನಗೊಳಿಸಲು ಯೋಚಿಸಿದ್ದರೆ ಸ್ವಲ್ಪ ತಾಳ್ಮೆ ವಹಿಸುವುದು ಒಳ್ಳೆಯದು.

ವೃಶ್ಚಿಕ: ಅ.23-ನ.21
ಗ್ರಹಣದ ಸಮಯದಲ್ಲಿ ನಿಮಗೆ ತುಂಬಾ ಧನಾತ್ಮಕ ಸಮಯವು ಕಾಯುತ್ತಲಿದೆ. ನಿಮ್ಮಲ್ಲಿ ಶಕ್ತಿ ತುಂಬಿದಂತೆ ಯಾವುದಾದರೂ ವಾಗ್ವಾದದಲ್ಲಿ ತೊಡಗುವಿರಿ. ಇದರ ಬಗ್ಗೆ ಎಚ್ಚರ ಅಗತ್ಯ.

ಧನು: ನ.22-ಡಿ.21
ಎಲ್ಲಾ ಸಮಸ್ಯೆಗಳ ಹೊರತಾಗಿಯೂ ನಿಮ್ಮ ಆರ್ಥಿಕ ಸಮಸ್ಯೆಯನ್ನು ನಿಭಾಯಿಸಲು ಯಶಸ್ವಿಯಾಗುವಿರಿ. ಇದರಿಂದ ನಿಮಗೆ ಅತ್ಯುತ್ಸಾಹ ಬರುವುದು ಮತ್ತು ಹಲವಾರು ಆಲೋಚನೆಗಳು ಕೂಡ. ಮುಂದೆ ಸಾಗಲು ನೀವು ಒಳ್ಳೆಯ ಸಮಯ ಬಳಸಿಕೊಳ್ಳಿ.

ಮಕರ: ಡಿ.22-ಜ.19
ಹಳೆ ಸಮಸ್ಯೆಗಳು ಮೇಲೆದ್ದು ಬಂದರೆ ಆಗ ಹೆಚ್ಚು ಚಿಂತೆ ಮಾಡಬೇಡಿ. ಈಗ ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಡಿ. ನೀವು ಉದ್ಯೋಗ ಬದಲಾಯಿಸುವ ಬಗ್ಗೆ ಯೋಚಿಸಿರಬಹುದು. ಆದರೆ ಇದು ಅಸ್ಥಿರ ಸಮಯವಾಗಿರುವ ಕಾರಣದಿಂದ ಎಲ್ಲವೂ ಬೇಗನೆ ಸರಿಯಾಗಲಿದೆ. ಇದರಿಂದ ದೊಡ್ಡ ನಿರ್ಧಾರಕ್ಕೆ ಕೈಹಾಕಬೇಡಿ.

ಕುಂಭ: ಜ.20-ಫೆ.18
ಕುಂಭ ರಾಶಿಯವರಿಗೆ ಒಳ್ಳೆಯ ಸಮಯವು ಎದುರಾಗಲಿದೆ. ಹೊಸ ವ್ಯಕ್ತಿಯನ್ನು ನೀವು ಭೇಟಿಯಾಗಬಹುದು. ಇವರು ಸ್ನೇಹಿತ ಅಥವಾ ಉದ್ಯೋಗದ ಜತೆಗಾರನಾಗಬಹುದು. ಪ್ರಯಾಣಕ್ಕೆ ನೀವು ಯೋಜನೆ ಹಾಕಿಕೊಳ್ಳುವುದರಿಂದ ದೂರವಿರಿ. ಮೋಸದ ಬಗ್ಗೆ ಎಚ್ಚರಿಕೆ ವಹಿಸಿ. ಯಾಕೆಂದರೆ ಧನನಷ್ಟವಾಗುವ ಸಂಭವವಿದೆ.

ಮೀನ: ಫೆ.19-ಮಾ.20
ಸಣ್ಣಪುಟ್ಟ ವಿಚಾರಗಳು ನಿಮ್ಮ ಮೇಲೆ ಪರಿಣಾಮ ಬೀರದೆ ಹೋಗಬಹುದು. ನೀವು ಮನಸ್ಸಿನಿಂದ ಯೋಚಿಸುವ ಬದಲು ಬುದ್ಧಿಯನ್ನು ಬಳಸಿ. ವಿಶ್ರಾಂತಿ ಪಡೆಯಿರಿ ಮತ್ತು ಮುಂದಿನ ದಿನಗಳಲ್ಲಿ ವೃತ್ತಪರ ಯಶಸ್ಸಿಗೆ ತಯಾರಾಗಿ. ಗ್ರಹಣವು ಮೀನ ರಾಶಿ ಮೇಲೆ ಯಾವುದೇ ಪರಿಣಾಮ ಬೀರದು.



Click it and Unblock the Notifications