'ಮುಸ್ಲಿಂ ಮಹಿಳೆ'ಯ ಮನೆಯಲ್ಲಿ ಅರಳುವ ಶಿವಲಿಂಗದ ಕಥೆ ಇದು!

By: manu
Subscribe to Boldsky

ಜೀವನದಲ್ಲಿ ಅದೆಷ್ಟೇ ಕಷ್ಟಗಳು ಎದುರಾದರೂ ಸರಿ, ದೇವರ ಸ್ಮರಣೆ ಹಾಗೂ ಕೃಪೆಯಿದ್ದರೆ ಎಲ್ಲವನ್ನೂ ಸಹಿಸಿಕೊಂಡು, ಧೈರ್ಯದಿಂದ ಮುನ್ನಡೆಯಬಹುದು. ಯಾವುದೇ ಕೆಲಸವು ಸುಗಮವಾಗಿ ಹೋಗಬೇಕೆಂದರೆ ದೇವರೆನ್ನುವ ವಿಶೇಷ ಶಕ್ತಿಯ ಚಮತ್ಕಾರ ಆಗಲೇ ಬೇಕು. ಹಲವರು ಧರ್ಮ, ಜಾತಿಯಿದ್ದರೂ ಎಲ್ಲರಿಗೂ ದೇವನೊಬ್ಬನೇ. ಅವರವರ ಭಾವಕ್ಕೆ ಅನುಗುಣವಾಗಿ ದೇವರನ್ನು ಕಾಣುವ ಪರಿ ಬೇರೆಯಷ್ಟೇ. ದೇವರಿಗೆ ಆ ಧರ್ಮದ ವ್ಯಕ್ತಿ, ಈ ಧರ್ಮದ ವ್ಯಕ್ತಿ ಎನ್ನುವ ಭೇದವಿಲ್ಲ. ಆತನಿಗೆ ಎಲ್ಲರೂ ಮಕ್ಕಳೆ...

ಅಚ್ಚರಿಯ ಲೋಕ: ಕನಸಿನಲ್ಲಿ ತ್ರಿಶೂಲ, ಶಿವಲಿಂಗ ಕಂಡುಬಂದರೆ...

ಇಂತಹ ನಿರ್ಮಲವಾದ ವಿಚಾರಕ್ಕೆ ಸಾಕ್ಷಿಯಾಗಿ ನಿಲ್ಲುತ್ತಾರೆ ವಾರಣಾಸಿಯ ನಂಹಿ ಬೇಗಮ್. ಇವರು ಮುಸ್ಲಿಂ ಧರ್ಮದವರಾದರೂ ಹಿಂದೂ ದೇವರಾದ ಶಿವಲಿಂಗವನ್ನು ತಯಾರಿಸುತ್ತಾರೆ. ಹೇಳಿಕೇಳಿ ವಾರಣಾಸಿ ಹಿಂದೂಗಳ ಪವಿತ್ರ ಕ್ಷೇತ್ರದಲ್ಲೊಂದು. ಇಲ್ಲಿ ಇವರು ತಮ್ಮ ಜೀವನೋಪಾಯಕ್ಕಾಗಿ ಹಿಂದೂ ದೇವರ ತಯಾರಿಯನ್ನು ಮಾಡುತ್ತಿರುವುದು ಒಂದು ವಿಶೇಷ. ಬದುಕಿಗೆ ದೇವನೊಬ್ಬನೆ. ನಾಮ ಹಲವು ಎನ್ನುವುದನ್ನು ಇನ್ನೊಮ್ಮೆ ತೋರಿಸಿಕೊಟ್ಟಿದ್ದಾರೆ....

ಬೇಗಮ್ ಜೀವನ

ಬೇಗಮ್ ಜೀವನ

ವಾರಣಾಸಿಯ ಮೂಲದವರಾದ ನಂಹಿ ಬೇಗಮ್ ತನ್ನ ಜೀವನೋಪಾಯಕ್ಕೆ ಕಂಡುಕೊಂಡ ದಾರಿ ಶಿವಲಿಂಗವನ್ನು ತಯಾರಿಸುವುದು. ಗಂಡನಿಂದ ಕಲಿತ ಕೆಲಸ ಇದೀಗ ಅವರ ಜೀವನ ದೋಣಿಯನ್ನು ದೂಡುತ್ತಿದೆ.

ಗಂಡನಿಂದ ವ್ಯಾಪಾರ ಪ್ರಾರಂಭವಾಯಿತು

ಗಂಡನಿಂದ ವ್ಯಾಪಾರ ಪ್ರಾರಂಭವಾಯಿತು

57 ವರ್ಷದ ಬೇಗಮ್ 20 ವರ್ಷಗಳಿಂದ ಈ ವ್ಯಾಪಾರವನ್ನು ಮಾಡಿಕೊಂಡು ಬರುತ್ತಿದ್ದಾರೆ. ಪತಿಯ ಜೊತೆಯಲ್ಲಿಯೇ ಕಲಿತ ವ್ಯಾಪಾರ, ಇಂದು ಪತಿಯನ್ನು ಕಳೆದುಕೊಂಡು 12 ವರ್ಷವಾದರೂ ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಮಕ್ಕಳ ಸಹಾಯವೂ ಇದೆ

ಮಕ್ಕಳ ಸಹಾಯವೂ ಇದೆ

ಮಕ್ಕಳಾದ ನಿಶಿ(26) ಮತ್ತು ಫರಾಹ್ (23) ಇವರು ತಮ್ಮ ತಾಯಿಗೆ ಸಹಾಯ ಮಾಡುತ್ತಿದ್ದಾರೆ. ಪಾದರಸದಿಂದ ತಯಾರಿಸಲ್ಪಡುವ ಈ ಶಿವಲಿಂಗಕ್ಕೆ ಹೊಳಪನ್ನು ಕೊಡುವ ಕೆಲಸವನ್ನು ನಿರ್ವಹಿಸುತ್ತಾರೆ. ದಿನಕ್ಕೆ ಸುಮಾರು 50 ಶಿವಲಿಂಗಕ್ಕೆ ಮೆರಗು ನೀಡುತ್ತಾರೆ ಎನ್ನುತ್ತಾರೆ.

ಇವರ ಕೆಲಸದ ವಿಧಾನ

ಇವರ ಕೆಲಸದ ವಿಧಾನ

ಹೆಚ್ಚಿನ ತಾಪಮಾನದಲ್ಲಿ ಪಾದರಸವನ್ನು ಕರಗಿಸಿಕೊಂಡು, ಶಿವಲಿಂಗದ ಅಚ್ಚಿನಲ್ಲಿ ಸುರಿಯಲಾಗುತ್ತದೆ. ಗಟ್ಟಿಯಾದ ನಂತರ ಶಿವಲಿಂಗವನ್ನು ತೆಗೆದು ಹೊಳಪು ನೀಡುವ ಕೆಲಸ ಮಾಡಲಾಗುತ್ತದೆ.

ಕೊನೆಯಲ್ಲಿ ತುಪ್ಪ ಮತ್ತು ಹಾಲಿನಲ್ಲಿ ಶುದ್ಧಗೊಳಿಸಲಾಗುತ್ತದೆ

ಕೊನೆಯಲ್ಲಿ ತುಪ್ಪ ಮತ್ತು ಹಾಲಿನಲ್ಲಿ ಶುದ್ಧಗೊಳಿಸಲಾಗುತ್ತದೆ

ಇದರ ಹೊಳಪಿನ ಕೆಲಸದ ನಂತರ ಸ್ವಚ್ಛತೆಯ ಕೆಲಸ ನಡೆಯುತ್ತದೆ. ಕೊನೆಯಲ್ಲಿ ತುಪ್ಪ ಮತ್ತು ಹಾಲಿನಲ್ಲಿ ಶುದ್ಧಗೊಳಿಸಲಾಗುತ್ತದೆ. ಈ ಎಲ್ಲಾ ಕೆಲಸದ ನಂತರ ಶಿವಲಿಂಗ ಪೂಜೆಗೆ ಸಿದ್ಧವಾಗುತ್ತದೆ ಎನ್ನುತ್ತಾರೆ.

 ಇವರ ಲಾಭ ನಷ್ಟ

ಇವರ ಲಾಭ ನಷ್ಟ

ಶಿವಲಿಂಗ ಮಾಡಲು ಸುಮಾರು 60-70 ರೂಪಾಯಿ ವೆಚ್ಚಮಾಡಬೇಕಾಗುವುದು. ಚಿಲ್ಲರೆ ವ್ಯಾಪಾರಿಗಳಿಗೆ 100 ರೂಪಾಯಿಗೆ ಮಾರಲಾಗುವುದು.

120 ರೂಪಾಯಿಗೆ ಶಿವಲಿಂಗ ಮಾರುತ್ತಾರೆ....

120 ರೂಪಾಯಿಗೆ ಶಿವಲಿಂಗ ಮಾರುತ್ತಾರೆ....

ವ್ಯಾಪಾರಿಗಳು ಅದನ್ನು 120 ರೂಪಾಯಿಗೆ ಮಾರುತ್ತಾರೆ ಎನ್ನುತ್ತಾರೆ. ಇತ್ತೀಚೆಗೆ ರಾಸಾಯನಿಕ ಮತ್ತು ಪಾದರಸದ ಬೆಲೆ ಹಚ್ಚಿರುವುದರಿಂದ ದಿನದ ಅಂತ್ಯದಲ್ಲಿ ಲಾಭ ಸಿಗುವುದಿಲ್ಲ ಎನ್ನುವ ಬೇಸರ ವ್ಯಕ್ತ ಪಡಿಸುತ್ತಾರೆ ನಿಶಿ.

English summary

what shiva linga means this muslim lady

Shiva-linga, the holy symbol representative of Lord Shiva, is considered sacred and worshiped by the Hindus.But for Nanhi Begum and her daughters of Adampur in Varanasi, it is their only source of livelihood. The mother-daughters team has been making Shiva ling for years and they are proud of their job. 57-year-old Nanhi learned the art of making Shiva ling from her husband, who had been in the business for 20 years.
Subscribe Newsletter