ಹಸ್ತದ ಮೇಲಿನ ರೇಖೆಗಳಲ್ಲಿ 'X' ಗುರುತು! ಏನಿದರ ರಹಸ್ಯ?

By: manu
Subscribe to Boldsky

ಹಸ್ತಸಾಮುದ್ರಿಕೆ ಒಂದು ಕುತೂಹಲಕರ ವಿದ್ಯೆ. ಹಸ್ತವನ್ನು ನೋಡಿ ಭವಿಷ್ಯ ಹೇಳುವವರದ್ದು ಬರೀ ಬೂಟಾಟಿಕೆ ಎಂದು ಕುಹಕವಾಡುವವರ ಹಾಗೂ ಹಸ್ತ ಸಾಮುದ್ರಿಕೆಯನ್ನು ನಂಬಿ ಆ ಪ್ರಕಾರವೇ ನಡೆಯುವ ಜನರ ಸಂಖ್ಯೆ ಹೆಚ್ಚೂ ಕಡಿಮೆ ಸರಿಸಮವಾಗಿದೆ. ಇತ್ತೀಚೆಗೆ ಈ ನಿಟ್ಟಿನಲ್ಲಿ ಹಲವಾರು ಸಂಶೋಧನೆಗಳು ನಡೆಯುತ್ತಿದ್ದು ರೇಖೆಗಳು ನೀಡುವ ವಿವರಗಳು ನಿಜವೇ ಎಂದು ಅಂಕಿ ಅಂಶಗಳ ಮೂಲಕ ಒರೆಹಚ್ಚಲಾಗುತ್ತಿದೆ.    ಕೈ ಬೆರಳಿನ ಉದ್ದವನ್ನು ಪರಿಗಣಿಸಿ, ಭವಿಷ್ಯವನ್ನು ನಿರ್ಧರಿಸಿ!

ಹಸ್ತಸಾಮುದ್ರಿಕಾ ತಜ್ಞರ ಪ್ರಕಾರ ಹಸ್ತದ ಪ್ರತಿ ರೇಖೆ ಹಾಗೂ ಚಿಹ್ನೆಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಪ್ರಕಟಿಸುತ್ತಿದ್ದು ಭವಿಷ್ಯದ ಜೀವನದ ಬಗ್ಗೆಯೂ ವಿವರಗಳನ್ನು ನೀಡುತ್ತದೆ. ಇದರಲ್ಲಿ ಉದ್ಯೋಗ, ಜೀವನ, ವಿವಾಹ, ಹಣ ಮತ್ತು ಆರೋಗ್ಯ ಮೊದಲಾದ ಪ್ರಮುಖ ವಿಷಯಗಳು ಸೇರಿವೆ.  ಅಚ್ಚರಿ, ಕುತೂಹಲ ಕೆರಳಿಸುವ ಎಡಗೈ ಹಸ್ತದಲ್ಲಿ ಮೂಡುವ ರೇಖೆ!

ಈ ರೇಖೆಗಳಲ್ಲಿ ಮುಖ್ಯವಾದುದೆಂದರೆ ಎರಡು ಗೆರೆಗಳು ಕೂಡುವಲ್ಲಿ ಮೂಡುವ 'X' ಅಕ್ಷರ. ಹೀಗೆ ಮೂಡುವ 'X' ಏನನ್ನು ತಿಳಿಸುತ್ತದೆ? ಹಸ್ತದ ಯಾವ ಭಾಗದಲ್ಲಿದ್ದರೆ ಅಥವಾ ಯಾವ ಹಸ್ತದಲ್ಲಿದ್ದರೆ ಇದರ ಮಹತ್ವ ಹೇಗಿರುತ್ತದೆ ಎಂಬುದನ್ನು ಇಂದು ನೋಡೋಣ. ಅಂದಹಾಗಿ ಈ 'X' ಸ್ಪಷ್ಟವಾಗಿ ಗೋಚರಿಸುವ ವ್ಯಕ್ತಿಗಳು ಈ ಜಗತ್ತಿನಲ್ಲಿ ಅಪರೂಪ. ಆದರೆ ಈ ವ್ಯಕ್ತಿಗಳು ಜಗತ್ತಿನ ದೆಸೆಯನ್ನು ಬದಲಿಸಬಲ್ಲ ವ್ಯಕ್ತಿತ್ವವುಳ್ಳವರಾಗಿದ್ದು ನಾಯಕತ್ವದ ಗುಣ ಹೊಂದಿರುತ್ತಾರೆ ಎಂದು ತಜ್ಞರು ತಿಳಿಸುತ್ತಾರೆ. ಬನ್ನಿ, ತಜ್ಞರು ಇನ್ನೇನು ಹೇಳುತ್ತಾರೆ ಎಂದು ನೋಡೋಣ....    

ಇದು ಉದಾತ್ತ ನಾಯಕನ ಚಿಹ್ನೆಯಾಗಿದೆ

ಇದು ಉದಾತ್ತ ನಾಯಕನ ಚಿಹ್ನೆಯಾಗಿದೆ

ಯಾರ ಹಸ್ತದಲ್ಲಿ 'X' ಚಿಹ್ನೆ ಸ್ಪಷ್ಟವಾಗಿ ಗೋಚರಿಸುತ್ತದೆಯೋ ಅವರು ಒಂದೇ ನಾಯಕರಾಗಿರುತ್ತಾರೆ ಅಥವಾ ಸಮಾಜದಲ್ಲಿ ಅತಿ ಗಣ್ಯ ವ್ಯಕ್ತಿಗಳಾಗಿರುತ್ತಾರೆ ಎಂದು ಹೇಳಲಾಗುತ್ತದೆ. ಇವರು ಮಾಡುವ ಕೆಲಸಗಳೂ ಐತಿಹಾಸಿಕವಾಗಿದ್ದು ಜೀವನವನ್ನು ಬದಲಿಸುವಂತಿರುತ್ತವೆ ಹಾಗೂ ಇದೇ ಕಾರಣದಿಂದ ಇವರ ಹೆಸರು ಇತಿಹಾಸದಲ್ಲಿ ಉಳಿದಿರುತ್ತದೆ.

ಈ ಚಿಹ್ನೆ ಇರುವ ವ್ಯಕ್ತಿಗಳು-ಕೇವಲ ಮೂರು ಶೇಖಡಾ ಮಾತ್ರ!

ಈ ಚಿಹ್ನೆ ಇರುವ ವ್ಯಕ್ತಿಗಳು-ಕೇವಲ ಮೂರು ಶೇಖಡಾ ಮಾತ್ರ!

ಈಜಿಪ್ಟ್‌ನ ಹಸ್ತಸಾಮುದ್ರಿಕಾ ತಜ್ಞರ ಪ್ರಕಾರ ಈ ತರಹ ಸ್ಪಷ್ಟವಾದ 'X' ಗುರುತು ಇರುವ ವ್ಯಕ್ತಿಗಳು ಜಗತ್ತಿನಲ್ಲಿ ಕೇವಲ ಮೂರು ಶೇಖಡಾ ಇರುತ್ತಾರೆ. ಇತಿಹಾಸದ ಪ್ರಮುಖ ವ್ಯಕ್ತಿಯಾಗಿದ್ದ ಚಕ್ರವರ್ತಿ ಅಲೆಕ್ಸಾಂಡರ್ ದ ಗ್ರೇಟ್ ಸಹಾ ಎರಡೂ ಹಸ್ತಗಳಲ್ಲಿ 'X' ಗುರುತನ್ನು ಹೊಂದಿದ್ದ ಎಂದು ದಾಖಲೆಗಳು ತಿಳಿಸುತ್ತವೆ.

ಈ ನಾಯಕರ ಹಸ್ತಗಳಲ್ಲಿಯೂ 'X' ಇದೆ

ಈ ನಾಯಕರ ಹಸ್ತಗಳಲ್ಲಿಯೂ 'X' ಇದೆ

'X' ಗುರುತು ಇರುವವರೆಲ್ಲರೂ ನಾಯಕರು ಆಗಿರುತ್ತಾರೆ ಎಂಬ ಮಾಹಿತಿಯ ಇನ್ನೊಂದು ದಿಕ್ಕಿನಿಂದ ನೋಡಿದರೆ ಎಲ್ಲಾ ನಾಯಕರ ಹಸ್ತದಲ್ಲಿಯೂ ಈ 'X' ಗುರುತು ಇರಬೇಕಲ್ಲವೇ? ಖ್ಯಾತ ನಾಯಕರಾದ ಅಬ್ರಹಾಂ ಲಿಂಕನ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೊದಲಾದವರ ಹಸ್ತಗಳಲ್ಲಿ 'X' ಗುರುತು ಸ್ಪಷ್ಟವಾಗಿರುವುದನ್ನು ಕಂಡಾಗ ಈ ಮಾತು ಸತ್ಯ ಎನ್ನಿಸುತ್ತದೆ.

ಇವರು ಜಗತ್ತಿಗೆ ಮಹತ್ತರವಾದ ಕೊಡುಗೆ ನೀಡಿದ್ದಾರೆ

ಇವರು ಜಗತ್ತಿಗೆ ಮಹತ್ತರವಾದ ಕೊಡುಗೆ ನೀಡಿದ್ದಾರೆ

ಒಂದು ವೇಳೆ ಎರಡೂ ಹಸ್ತಗಳಲ್ಲಿ ಸ್ಪಷ್ಟವಾಗಿ 'X' ಗುರುತು ಇರುವ ವ್ಯಕ್ತಿಗಳು ತಮ್ಮ ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸುತ್ತಾ ಜಗತ್ತಿನಿಂದ ನಿರ್ಗಮಿಸಿದ ಬಳಿಕವೂ ನೂರಾರು ವರ್ಷಗಳವರೆಗೆ ತಮ್ಮ ಹೆಸರು ಚಿರಸ್ಥಾಯಿಯಾಗುವಂತೆ ಮಾಡಿದ್ದಾರೆ. ಒಂದು ಹಸ್ತದ ಮೇಲೆ ಮಾತ್ರವೇ ಸ್ಪಷ್ಟವಾದ 'X' ಗುರುತು ಇರುವ ವ್ಯಕ್ತಿಗಳು ಜೀವನದಲ್ಲಿ ಅತ್ಯಂತ ಯಶಸ್ವೀ ವ್ಯಕ್ತಿಗಳೂ ಜನಪ್ರಿಯರೂ ಆಗಿರುತ್ತಾರೆ.

ಈ ವ್ಯಕ್ತಿಗಳು ಅಪಾರವಾದ ದೂರದೃಷ್ಟಿ-ಅಪರೋಕ್ಷ ಜ್ಞಾನ ಹೊಂದಿರುತ್ತಾರೆ

ಈ ವ್ಯಕ್ತಿಗಳು ಅಪಾರವಾದ ದೂರದೃಷ್ಟಿ-ಅಪರೋಕ್ಷ ಜ್ಞಾನ ಹೊಂದಿರುತ್ತಾರೆ

ಕನಿಷ್ಠ ಒಂದು ಹಸ್ತದಲ್ಲಿ 'X' ಗುರುತು ಇರುವ ವ್ಯಕ್ತಿಗಳು ಅಪಾರವಾದ ದೂರದರ್ಶಿತ್ವ ಹಾಗೂ ಅಪರೋಕ್ಷ ಜ್ಞಾನ ಅಥವಾ ಆರನೆಯ ಇಂದ್ರಿಯದಂತೆ ಗ್ರಹಿಸುವ ಶಕ್ತಿಯನ್ನು ಹೊಂದಿರುತ್ತಾರೆ. ಇವರು ಮುಂದೆ ಎದುರಾಗಲಿರುವ ಆಪತ್ತು, ಅಪಾಯ, ದ್ರೋಹ, ಕೃತಘ್ನತೆ ಮೊದಲಾದವನ್ನು ಕೊಂಚ ದೂರದಿಂದಲೇ ಗ್ರಹಿಸುವ ಶಕ್ತಿಯನ್ನು ಪಡೆದಿರುತ್ತಾರೆ.

ಅಪಾರ ಜ್ಞಾನ ಇವರ ಬತ್ತಳಿಕೆಯಲ್ಲಿರುವ ಬಾಣ

ಅಪಾರ ಜ್ಞಾನ ಇವರ ಬತ್ತಳಿಕೆಯಲ್ಲಿರುವ ಬಾಣ

ಈ ವ್ಯಕ್ತಿಗಳು ಅತ್ಯಂತ ಚುರುಕಾಗಿದ್ದು ಸದಾ ಕಲಿಯುತ್ತಲೇ ಇರುವ ಹಂಬಲವುಳ್ಳವರಾಗಿರುತ್ತಾರೆ. ಇವರು ತಮ್ಮ ಕ್ಷೇತ್ರದಲ್ಲಿ ಅಪಾರವಾದ ಪಾಂಡಿತ್ಯವನ್ನು ಹೊಂದಿದ್ದು ತಮ್ಮ ಸುತ್ತಮುತ್ತಲ ವ್ಯಕ್ತಿಗಳೊಂದಿಗೆ ಹಾಗೂ ಸಂದರ್ಭಕ್ಕೆ ತಕ್ಷಣವೇ ಹೊಂದಿಕೊಳ್ಳುವ ವ್ಯಕ್ತಿತ್ವ ಹೊಂದಿರುತ್ತಾರೆ. ಇವರು ತಮ್ಮ ಸುತ್ತಮುತ್ತಲ ಪರಿಸರ ಹೇಗೇ ಇರಲಿ ಅದಕ್ಕೆ ಹೊಂದಿಕೊಳ್ಳುತ್ತಾರೆಯೇ ಹೊರತು ಕುಂದುಕೊರತೆಗಳನ್ನೇ ವಿಜೃಂಭಿಸುವುದಿಲ್ಲ.

ನಿಮ್ಮ ಹಸ್ತದಲ್ಲಿಯೂ ಈ ತರಹದ ಗುರುತು ಇದ್ದರೆ ಅಭಿನಂದನೆಗಳು!

ನಿಮ್ಮ ಹಸ್ತದಲ್ಲಿಯೂ ಈ ತರಹದ ಗುರುತು ಇದ್ದರೆ ಅಭಿನಂದನೆಗಳು!

ಒಂದು ವೇಳೆ ನಿಮ್ಮ ಹಸ್ತದಲ್ಲಿಯೂ ಈ ತರಹದ ಗುರುತು ಇದ್ದರೆ ಅಭಿನಂದನೆಗಳು. ನೀವು ಸಹಾ ಜಗತ್ತಿನ ವಿರಳ ವ್ಯಕ್ತಿಗಳ ಪಟ್ಟಿಗೆ ಸೇರಿದವರಾಗಿದ್ದು ನಿಮ್ಮ ಬಗ್ಗೆ ಅರಿಯಲು ನಮಗೆ ಕುತೂಹಲವಿದೆ. ನಿಮ್ಮ ಬಗ್ಗೆ ಕೆಲವು ವಾಕ್ಯಗಳನ್ನು ಕೆಳಗಿನ ಕಮೆಂಟ್ಸ್ ವಿಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ.

English summary

What Does Letter X On Your Palms Reveal

There are very few people on this earth who have the letter X on their palms. Check out what exactly it means…
Subscribe Newsletter