ಅಚ್ಚರಿ, ಕುತೂಹಲ ಕೆರಳಿಸುವ ಎಡಗೈ ಹಸ್ತದಲ್ಲಿ ಮೂಡುವ ರೇಖೆ!

By: manu
Subscribe to Boldsky

ಜನರಿಗೆ ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ಹೆಚ್ಚಾಗಿಯೇ ಇರುತ್ತದೆ. ಅದಕ್ಕಾಗಿಯೇ ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಕವಡೆ ಶಾಸ್ತ್ರ, ಗಿಣಿ ಶಾಸ್ತ್ರ, ಟ್ಯಾರಟ್ ಇತ್ಯಾದಿ ಇತ್ಯಾದಿ ಎಂದು ತಮ್ಮ ಭವಿಷ್ಯವನ್ನು ತಿಳಿಸುವ ಮಾರ್ಗವನ್ನು ಇವರು ಹುಡುಕುತ್ತಾ ಇರುತ್ತಾರೆ. ಅಂತಹದರಲ್ಲಿ ಹಸ್ತವನ್ನು ನೋಡಿ ಹೇಳುವ ಹಸ್ತ ಸಾಮುದ್ರಿಕಾ ಎಂಬ ಭವಿಷ್ಯವು ಒಂದು.

ಇದು ನಮ್ಮ ಭಾರತದಲ್ಲಿ ತುಂಬಾ ಹಿಂದಿನ ಕಾಲದಿಂದಲೂ ಚಾಲ್ತಿಯಲ್ಲಿರುವ ಒಂದು ಭವಿಷ್ಯ ಹೇಳುವ ಪ್ರಕಾರವಾಗಿದೆ. ಭಾರತವಷ್ಟೇ ಅಲ್ಲದೆ, ಚೀನಾ, ಈಜಿಪ್ಟ್, ಅರಬ್ ಮುಂತಾದ ದೇಶಗಳಲ್ಲಿ ಕೂಡ ಇದು ಭಾರೀ ಜನಪ್ರಿಯಗೊಂಡಿದೆ. ಕೈಯನ್ನು ನೋಡಿ, ನಮ್ಮ ಸ್ಥಿತಿ ಮತ್ತು ಭವಿಷ್ಯವನ್ನು ಹೇಳಬಹುದಾ? ಎಂದು ಅಚ್ಚರಿಪಡುವವರು ತುಂಬಾ ಜನ ಇದ್ದಾರೆ.  ಉಗುರು ನೋಡಿ ಭವಿಷ್ಯ ಹೇಳಬಹುದಂತೆ! ನಂಬುತ್ತೀರಾ..?

ಆದರೆ ಒಂದು ವಿಚಾರ ನೆನಪಿಡಿ, ನಾವು ಹುಟ್ಟಿದಾಗ ನಮ್ಮ ಕೈ ಹೇಗೆ ಇರುತ್ತದೆಯೋ, ಹಾಗೆಯೇ ಜೀವನ ಪರ್ಯಂತ ಇರುವುದಿಲ್ಲ. ಅದು ಕಾಲ ಕಾಲಕ್ಕೆ ಮಂದ ಗತಿಯಲ್ಲಿ ಬದಲಾವಣೆಯಾಗುತ್ತಾ ಹೋಗುತ್ತಿರುತ್ತದೆ. ಆದರೆ ಇದನ್ನು ಸೂಕ್ಷ್ಮವಾಗಿ ನೋಡದ ಹೊರತು ಇದನ್ನು ಗ್ರಹಿಸಲು ನಮ್ಮಿಂದ ಸಾಧ್ಯವಾಗದು.

ಕೆಲವೊಂದು ರೇಖೆಗಳು ಆಗಾಗ ಕಾಣಿಸಿಕೊಳ್ಳುತ್ತಿರುತ್ತವೆ ಮತ್ತು ಕೆಲವೊಂದು ಮಾಯವಾಗುತ್ತಿರುತ್ತವೆ. ಇದನ್ನು ಇಂಗ್ಲೀಷ್ ಭಾಷೆಯಲ್ಲಿ "ಮಾರ್ಕಿಂಗ್" ಎಂದು ಕರೆಯುತ್ತಾರೆ. ಬನ್ನಿ ನಿಮ್ಮ ಕೈ ನಿಮ್ಮ ಕುರಿತಾಗಿ, ನಿಮ್ಮ ಭವಿಷ್ಯದ ಕುರಿತಾಗಿ ಏನು ತಿಳಿಸುತ್ತಿದೆ ಎಂದು ತಿಳಿಯಲು ನಿಮಗೆ ಕುತೂಹಲ ತಡೆಯಲಾಗುತ್ತಿಲ್ಲ ಎಂದು ನಮಗೂ ಗೊತ್ತು. ಅದು ಏನು ಎಂದು ನೋಡೋಣ ಬನ್ನಿ...

ಜೀವನ ರೇಖೆ

ಜೀವನ ರೇಖೆ

ಈ ರೇಖೆಯು ಒಬ್ಬ ವ್ಯಕ್ತಿಯ ದೈಹಿಕ ಸಾಮರ್ಥ ಮತ್ತು ಹುರುಪಿನ ಕುರಿತಾಗಿ ತಿಳಿಸುತ್ತದೆ. ಈ ರೇಖೆಯು ನಿಮ್ಮ ಆರೋಗ್ಯದ ಸ್ಥಿತಿಯನ್ನು ಕುರಿತು ತಿಳಿಸುತ್ತದೆ. ಜೊತೆಗೆ ನೀವು ವಾಸಿಸುವ ಪರಿಸರದ ಬದಲಾವಣೆಯನ್ನು ಸಹ ನಾವು ಈ ರೇಖೆಯಿಂದ ಗುರುತಿಸಬಹುದು. ದಪ್ಪಗಿರುವ ರೇಖೆಯು ಉತ್ತಮ ಆರೋಗ್ಯವನ್ನು ಪ್ರತಿಬಿಂಬಿಸುತ್ತದೆ, ಅರ್ಧಂಬರ್ಧ ಇರುವ ರೇಖೆಯು ನೀವು ಒತ್ತಡದಲ್ಲಿದ್ದೀರಿ,ಗಾಯಗೊಂಡಿದ್ದೀರಿ ಅಥವಾ ರೋಗರುಜಿನಗಳಿಗೆ ತುತ್ತಾಗಿದ್ದೀರಿ ಎಂದು ತಿಳಿಸುತ್ತದೆ.

ಮದುವೆ ರೇಖೆ

ಮದುವೆ ರೇಖೆ

ಹಸ್ತಸಾಮುದ್ರಿಕಾದಲ್ಲಿ ಅತಿ ಹೆಚ್ಚು ಚರ್ಚೆಗೊಳಗಾಗಿರುವ ರೇಖೆ ಎಂದರೆ ಇದೇ. ನಿಮ್ಮ ಜೀವನದಲ್ಲಿನ ಪ್ರಸಕ್ತ ಪ್ರೇಮದ ಸ್ಥಿತಿ ಗತಿಯ ಕುರಿತು ಇದು ತಿಳಿಸಿಕೊಡುತ್ತದೆ. ಈ ಭಾಗದಲ್ಲಿ ಹಲವಾರು ಸಣ್ಣ ಸಣ್ಣ ರೇಖೆಗಳು ಇದ್ದಲ್ಲಿ, ಅದು ನೀವು ಏಕಮುಖ ಪ್ರೇಮಿ ಎಂದು ತಿಳಿಸಿಕೊಡುತ್ತದೆ. ಒಡೆದ ತುದಿಯಿರುವ ರೇಖೆಗಳು ನಿಮ್ಮ ಮದುವೆಯು ವಿಚ್ಛೇಧನದಲ್ಲಿ ಅಂತ್ಯವಾಗುತ್ತದೆ ಎಂದು ತಿಳಿಸುತ್ತದೆ. ಪರಸ್ಪರ ಒಂದರ ಮೇಲೆ ಒಂದು ಹೋಗುವಂತಹ ರೇಖೆಗಳು ನೀವು ಒಬ್ಬ ಸರಿಯಾದ ಸಂಗಾತಿಗಾಗಿ ಹುಡುಕುತ್ತಿದ್ದೀರಿ ಎಂದು ತಿಳಿಸುತ್ತಿದೆ. ಒಂದು ವೇಳೆ ನಿಮಗೆ ಮದುವೆ ರೇಖೆಯು ಇಲ್ಲದಿದ್ದಲ್ಲಿ ಗಾಬರಿಯಾಗಬೇಡಿ. ಅದು ನಿಮಗೆ ಮದುವೆಯಾಗುವ ಆಲೋಚನೆ ಸದ್ಯಕ್ಕೆ ಇಲ್ಲ ಎಂದು ತಿಳಿಸುತ್ತದೆ.

ತಲೆ ಗೆರೆ

ತಲೆ ಗೆರೆ

ಈ ತಲೆ ರೇಖೆಯು ಬುದ್ಧಿವಂತಿಕೆ ಮತ್ತು ಆಲೋಚನಾ ಕ್ರಮದ ಕುರಿತಾಗಿ ತಿಳಿಸಿಕೊಡುತ್ತದೆ. ಇದು ಕಲ್ಪನೆಯನ್ನು ಸಹ ಒಳಗೊಂಡಿರುತ್ತದೆ. ಒಂದು ವೇಳೆ ಈ ರೇಖೆಯು ಜೀವನ ರೇಖೆಯ ಮೇಲೆ ಇದ್ದಲ್ಲಿ, ಅದು ನಿಮ್ಮ ಆಲೋಚನೆಯಲ್ಲಿ ಒಳ್ಳೆಯ ಸಮತೋಲನ ಇದೆ ಎಂದು ಸೂಚಿಸುತ್ತದೆ. ಉದ್ದವಾದ ಮತ್ತು ವಿಸ್ತರಿಸಲ್ಪಟ್ಟ ತಲೆ ಗೆರೆಯು ನಿಮ್ಮ ಮನಸ್ಸನ್ನು ಇತರರು ನಿಯಂತ್ರಿಸುತ್ತಾರೆ ಎಂದು ಸೂಚಿಸುತ್ತದೆ. ನಿಮ್ಮ ಜೀವನದಲ್ಲಿ ಅವರೇ ನಿರ್ಧಾರಗಳನ್ನು ತೆಗೆದುಕೊಳ್ಳುವವರು ಎಂದು ಸಹ ಸೂಚಿಸುತ್ತದೆ. ಈ ರೇಖೆಗಳು ಎರಡು ಅಥವಾ ಅದಕ್ಕಿಂತ ಹೆಚ್ಚಾಗಿ ಇದ್ದಲ್ಲಿ, ನೀವು ನಿಮಗೆ ನೀವೇ ಸಾಟಿ ಎನ್ನುವಂತಹ ಒಬ್ಬ ವ್ಯಕ್ತಿ ಎಂದು ಸೂಚಿಸುತ್ತದೆ. ನಿಮ್ಮ ಆಲೋಚನೆಗಳು, ಸೃಜನಶೀಲತೆ ಇತ್ಯಾದಿಗಳಲ್ಲಿ ನಿಮಗೆ ನೀವೇ ಸಾಟಿ.

ವಿಧಿ ರೇಖೆ

ವಿಧಿ ರೇಖೆ

ಈ ವಿಧಿ ರೇಖೆಯು ನಿಮ್ಮ ಪ್ರಸ್ತುತ ವಿಧಿಯ ಕುರಿತಾಗಿ ತಿಳಿಸುತ್ತದೆ. ದಪ್ಪಗಿರುವ ರೇಖೆಯು ನಿಮ್ಮ ಜೀವನದಲ್ಲಿ ಉಂಟಾಗುತ್ತಿರುವ ನಾಟಕೀಯ ಬದಲಾವಣೆಗಳನ್ನು ಸೂಚಿಸುತ್ತದೆ. ತೆಳುವಾದ ರೇಖೆಯು ನಿಮ್ಮ ಜೀವನವನ್ನು ಇತರರು ನಿಯಂತ್ರಿಸುತ್ತಿದ್ದಾರೆ ಎಂದು ಸೂಚಿಸುತ್ತದೆ. ಎರಡು ಅಥವಾ ಹೆಚ್ಚಿನ ರೇಖೆಗಳು ನಿಮ್ಮ ಜೀವನದಲ್ಲಿ ನೀವು ಬುದ್ಧಿವಂತರು ಮತ್ತು ಜನಪ್ರಿಯರು ಸಹ ಆಗಿದ್ದೀರಿ ಎಂದು ತಿಳಿಸುತ್ತದೆ.

ಹಣದ ರೇಖೆ

ಹಣದ ರೇಖೆ

ನಿಮ್ಮ ಉಂಗುರದ ಬೆರಳಿನಿಂದ ಕೆಳಗೆ ಸಾಗುವ ಈ ರೇಖೆಯು ಹಣದ ರೇಖೆಯೆಂದು ಗುರುತಿಸಲ್ಪಟ್ಟಿದೆ. ಸಣ್ಣ ರೇಖೆಗಳು ನೀವು ಹಣದ ಜೊತೆಗೆ ಆಳವಾದ ಸಂಬಂಧವನ್ನು ಹೊಂದಿದ್ದೀರಿ ಎಂದು ತೋರಿಸುತ್ತದೆ. ಉದ್ದವಾದ ರೇಖೆಗಳು ನಿಮಗೆ ಹಣ ಮುಖ್ಯ ಮತ್ತು ನೀವು ಸಮಯವನ್ನು ಸಹ ಉಳಿಸುತ್ತೀರಿ ಎಂದು ಸೂಚಿಸುತ್ತದೆ. ಹಣದ ರೇಖೆಗಳು ಹೆಚ್ಚಾಗಿದ್ದಲ್ಲಿ ನೀವು ಹಣವನ್ನು ಸಿಕ್ಕಾಪಟ್ಟೆ ಖರ್ಚು ಮಾಡುತ್ತೀರಿ ಎಂದು ತಿಳಿಸುತ್ತದೆ.

ಕಂಕಣ ರೇಖೆಗಳು

ಕಂಕಣ ರೇಖೆಗಳು

ನಿಮ್ಮ ಕೈ ಮಣಿಕಟ್ಟಿನ ಬಳಿ ಕಂಕಣದಂತೆ ಕಾಣುವ ರೇಖೆಗಳು, ನೀವು ಹೊಂದಿರುವ ಹಣದ ಪ್ರಮಾಣವನ್ನು ಸೂಚಿಸುತ್ತವೆ. ಜೊತೆಗೆ ನೀವು ಎಷ್ಟು ಪ್ರಮಾಣದ ಹಣವನ್ನು ಪಡೆಯುವಿರಿ ಎಂದು ಸಹ ಇದರಿಂದ ತಿಳಿಯಬಹುದು. ಹೆಚ್ಚಿನ ರೇಖೆಗಳು ಹೆಚ್ಚಿನ ಹಣವನ್ನು ತಿಳಿಸುತ್ತವೆ.

ಸಂತೋಷದ ರೇಖೆ

ಸಂತೋಷದ ರೇಖೆ

ಕೆಲವೊಂದು ಅಪರೂಪದ ಹಸ್ತಗಳಲ್ಲಿ ಮೀನಿನ ಆಕಾರದ ವಿನ್ಯಾಸವಿರುವ ರೇಖೆಗಳು ಕಾಣಿಸಿಕೊಳ್ಳುತ್ತವೆ. ಇದು ನಿಮಗೆ ಜೀವನದಲ್ಲಿರುವ ಸಂತೋಷವನ್ನು ತಿಳಿಸುತ್ತವೆ.

English summary

Look At Your Left Palm To Know More About Your Life

Divination method to see your characteristics, talents, health and fortunes by observing your hand's lines and their thickness. A lot of people who get absorbed in palm reading depend their entire life on the lines drawn on the palm. So, take a look at these 7 important lines on your left palm that tell you more about your life. It will leave you amazed!
Please Wait while comments are loading...
Subscribe Newsletter