ಮನೆಯ 'ಬಾಗಿಲಿನ ವಾಸ್ತು' ಸರಿ ಇಲ್ಲವಾದರೆ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ!

By: manu
Subscribe to Boldsky

ನಮ್ಮದೊಂದು ಪುಟ್ಟ ಮನೆಯಿರಬೇಕು. ಆ ಮನೆಯಲ್ಲಿ ಸದಾ ಸುಖ-ಶಾಂತಿ ತುಂಬಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಮನೆಯ ನಿರ್ಮಾಣದ ಸಮಯದಲ್ಲಿ ಮಾಡುವ ಕೆಲವು ವಾಸ್ತು ದೋಷದಿಂದ ನಮ್ಮ ಕನಸು ಹಾಗೆಯೇ ಉಳಿದು ಬಿಡುತ್ತದೆ. ಮನೆಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸಿ ಕಟ್ಟಿದರೂ, ವಾಸ್ತು ಸರಿಯಾಗದಿದ್ದರೆ ಮನೆಯಲ್ಲಿ ಸದಾ ಜಗಳ, ಒಬ್ಬರ ಮೇಲೆ ಒಬ್ಬರಿಗೆ ದ್ವೇಷ, ಮನೆಯಲ್ಲಿ ಒಂದಲ್ಲಾ ಒಂದು ಸಮಸ್ಯೆಗಳು ತಲೆ ದೂರುತ್ತಲೇ ಇರುವುದು.

ಮನೆಯ ಮುಂಬಾಗಿಲು ಹೇಗಿರಬೇಕೆಂಬ ವಾಸ್ತು ಟಿಪ್ಸ್ 

ಅದರಲ್ಲೂ ಮನೆಯ ಪ್ರಧಾನ ಬಾಗಿಲು ವಾಸ್ತು ಶಾಸ್ತ್ರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕೆಟ್ಟ ಶಕ್ತಿಗಳನ್ನು ತಡೆದು ಸಕಾರಾತ್ಮಕ ಶಕ್ತಿಯನ್ನು ಮಾತ್ರ ಮನೆಯೊಳಗೆ ಪ್ರವೇಶಿಸಲು ಅನುವುಮಾಡಿಕೊಡುತ್ತದೆ. ಅದಕ್ಕಾಗಿಯೇ ಮನೆಯ ನಿರ್ಮಾಣದ ವೇಳೆ ಹಾಗೂ ದಿನನಿತ್ಯ ಕೆಲವು ನಿಯಮಗಳನ್ನು ಅನುಸರಿಸಿದರೆ ಮನೆಗೆ ಒಳ್ಳೆಯದಾಗುತ್ತದೆ ಎನ್ನಲಾಗುವುದು. ಅವು ಯಾವವು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ. ನೋಡಿ ನೀವೂ ಅನುಸರಿಸಿ...

ಲಕ್ಷ್ಮಿ ದೇವರ ಪಟ

ಲಕ್ಷ್ಮಿ ದೇವರ ಪಟ

ಮನೆಯಲ್ಲಿ ಸಂಪತ್ತು ಸದಾ ತುಂಬಿರಲು ಲಕ್ಷ್ಮಿದೇವರ ಪಟ ಅಥವಾ ಮುದ್ರಿತ ಗೋಡೆಯ ಟೈಲ್ಸ್ ಅನ್ನು ಮನೆಯ ಪ್ರಧಾನ ಬಾಗಿಲಿಗೆ ಎದುರಾಗಿ, ಅಂದರೆ ಮನೆಯ ಒಳಗೆ ಅಡಿಯಿಡುತ್ತಿದ್ದಂತೆಯೇ ಕಾಣುವಂತೆ ಇರಿಸಿ. ಆದರೆ ಇದಕ್ಕೆ ಎದುರಾಗಿ ಪಾದರಕ್ಷೆಗಳು ಅಥವಾ ಪಾದರಕ್ಷೆಗಳ ಕಪಾಟು ಇರಿಸಕೂಡದು.

ಗಾಜಿನ ಪಾತ್ರೆ

ಗಾಜಿನ ಪಾತ್ರೆ

ಒಂದು ದೊಡ್ಡ ಗಾಜಿನ ಜಾಡಿ ಅಥವಾ ಗಾಜಿನ ಲೋಟದಲ್ಲಿ ನೀರು ತುಂಬಿ ಇದರಲ್ಲಿ ನಿತ್ಯವೂ ತಾಜಾ ಹೂವುಗಳನ್ನಿರಿಸಿ. ಇದು ಮನೆಯ ಸಮೃದ್ಧಿಗೆ ಅಗತ್ಯವಾಗಿದೆ. ಪ್ರತಿದಿನ ಹಳೆಯ ಹೂವುಗಳನ್ನು ನಿವಾರಿಸಿ ತಾಜಾ ಹೂವುಗಳನ್ನು ಇರಿಸಿ.

ಹೂವಿನ ಮಾಲೆ

ಹೂವಿನ ಮಾಲೆ

ಅರಳಿ, ಮಾವು ಅಥವಾ ಅಶೋಕ ವೃಕ್ಷದ ಎಲೆಗಳನ್ನು ಒಂದು ಗಟ್ಟಿಯಾದ ದಾರಕ್ಕೆ ಕಲಾತ್ಮಕವಾಗಿ ಪೋಣಿಸಿ ಮಾಲೆ ತಯಾರಿಸಿ. ಈ ಮಾಲೆಯನ್ನು ಪ್ರಧಾನ ಭಾಗಿಲಿನ ಮೇಲೆ, ಮನೆಯ ಹೊರಭಾಗದಲ್ಲಿ ನೇತು ಹಾಕಿ. ಇದರಿಂದ ಮನೆಯೊಳಗೆ ಪ್ರವೇಶ ಪಡೆಯಲೆತ್ನಿಸುವ ಋಣಾತ್ಮಕ ಶಕ್ತಿಯನ್ನು ತಡೆಯಲು ಸಾಧ್ಯ. ಈ ಎಲೆಗಳು ಒಣಗಿದ ಬಳಿಕ ಮತ್ತೊಮ್ಮೆ ತಾಜಾ ಎಲೆಗಳಿಂದ ಮಾಲೆಯನ್ನು ಬದಲಿಸಿ.

ಸ್ವಚ್ಛವಾಗಿರಲಿ

ಸ್ವಚ್ಛವಾಗಿರಲಿ

ಮನೆಯ ಮುಖ್ಯ ಬಾಗಿಲ ಬಳಿ ಸ್ವಚ್ಛತೆಯನ್ನು ಕಾಪಾಡಬೇಕು. ಬಾಗಿಲು ತೆರೆದರೆ ಸೂರ್ಯನ ಕಿರಣ ಮನೆಯೊಳಗೆ ಪ್ರವೇಶಿಸುವಂತಿರಬೇಕು.

ಸ್ವಸ್ತಿಕ್ ಚಿಹ್ನೆ

ಸ್ವಸ್ತಿಕ್ ಚಿಹ್ನೆ

ಪ್ರವೇಶದ್ವಾರದಲ್ಲಿ ಸ್ವಸ್ತಿಕವನ್ನು ಇಡಬೇಕು. ಸ್ವಸ್ತಿಕ, ಓಂ, ಸೇರಿದಂತೆ ಇನ್ನಿತರ ಧರ್ಮದ ಚಿಹ್ನೆಯನ್ನು ಇಡಬಹುದು. ಇದು ಸಕಾರಾತ್ಮಕ ಶಕ್ತಿಯೊಂದಿಗೆ ಅದೃಷ್ಟವನ್ನು ಹೆಚ್ಚಿಸುತ್ತದೆ.

ಬಾಗಿಲು ತೆರೆದರೆ

ಬಾಗಿಲು ತೆರೆದರೆ

ಪ್ರವೇಶದ್ವಾರ ತೆರೆದರೆ ಆನಂದದ ಅನುಭವ ಆಗಬೇಕು. ನೋಡುವವರಿಗೂ ಸಾತ್ವಿಕ ಅನುಭವ ನೀಡಬೇಕು.

ಶುಭ-ಲಾಭ ಪಟ

ಶುಭ-ಲಾಭ ಪಟ

ಮನೆಯ ಪ್ರಧಾನ ಬಾಗಿಲಿನ ಮೇಲೆ ಶುಭ ಲಾಭ ಎಂದು ಬರೆಸಿ ಅಥವಾ ಹೀಗೆ ಬರೆದ ಪಟವನ್ನು ಬಾಗಿಲ ಮೇಲೆ ಅಳವಡಿಸಿ. ಇದರಿಂದ ಮನೆಯಲ್ಲಿ ಅನಾರೋಗ್ಯ ನುಸುಳಲು ಅಸಾಧ್ಯವಾಗುತ್ತದೆ.

ದೊಡ್ಡ ಬಾಗಿಲಾಗಿರಲಿ

ದೊಡ್ಡ ಬಾಗಿಲಾಗಿರಲಿ

ಮನೆಯಲ್ಲಿ ಅದೆಷ್ಟೇ ಬಾಗಿಲುಗಳಿದ್ದರೂ ಸರಿ. ಆದರೆ ಮುಖ್ಯ ಬಾಗಿಲು ಉಳಿದ ಬಾಗಿಲುಗಳಿಗಿಂತ ಅಳತೆಯಲ್ಲಿ ದೊಡ್ಡದಾಗಿರಬೇಕು.

ಪ್ರಧಾನ ಬಾಗಿಲಿ ಗುಣಮಟ್ಟ

ಪ್ರಧಾನ ಬಾಗಿಲಿ ಗುಣಮಟ್ಟ

ಗುಣಮಟ್ಟ ಮನೆಯ ಇತರ ಬಾಗಿಲುಗಳನ್ನು ಯಾವುದೇ ಮರ ಅಥವಾ ಇತರ ವಸ್ತುಗಳನ್ನು ಬಳಸಿ ತಯಾರಿಸಿದರೂ ಪ್ರಧಾನ ಬಾಗಿಲಿಗೆ ಮಾತ್ರ ಅತ್ಯುತ್ತಮವದ ಕಚ್ಚಾವಸ್ತುಗಳನ್ನೇ ಉಪಯೋಗಿಸಬೇಕು. ಕಡಿಮೆ ಗುಣಮಟ್ಟದ ಮರ ಮನೆಯ ವಾಸ್ತುವಿಗೆ ಸರಿಯಾಗಲಾರದು.

ಇವುಗಳು ಬೇಡ

ಇವುಗಳು ಬೇಡ

ಕೆಲವರಿಗೆ ಮನೆಯ ಬಾಗಿಲ ಹಿಂದೆ ಕಸದ ಬುಟ್ಟಿಯನ್ನು ಇಡುವ ಅಭ್ಯಾಸ ಇರುತ್ತದೆ. ಇದು ವಾಸ್ತು ದೋಷವಾಗುತ್ತದೆ. ಮುಖ್ಯ ಬಾಗಿಲ ಹಿಂದೆ ಮನೆಯ ಕಸವನ್ನು ಇಡಬಾರದು.

ಬೆಳಕಿರಬೇಕು

ಬೆಳಕಿರಬೇಕು

ಮನೆಯ ಪ್ರವೇಶದ್ವಾರದಲ್ಲಿ ಕತ್ತಲೆ ಇರಬಾರದು. ಈ ಸ್ಥಳದಲ್ಲಿ ಸದಾ ಸೂರ್ಯನ ಕಿರಣ ಬೀಳುವಂತಿರಬೇಕು. ಆಗಲೇ ಆರೋಗ್ಯಕರ ಗಾಳಿ ಮನೆಯೊಳಗೆ ಪ್ರವೇಶಿಸುವುದು.

English summary

Vaastu Tips For The Main Entrance Door Of Your House To Bring In Peace And Prosperity

Main entrance is the place brings in good vibes and is a gateway to peace and prosperity. Entrance of a house is an important part because the energies constantly go in and come out from that area, and that is why it is important to locate it in a particular direction and maintain it with utmost good care.
Subscribe Newsletter