For Quick Alerts
ALLOW NOTIFICATIONS  
For Daily Alerts

ಸಿಯಾಚಿನ್‍ನಲ್ಲಿ ಸದಾ ಯೋಧರ ರಕ್ಷಣೆಗೆ ನಿಲ್ಲುವ "ಒಪಿ ಬಾಬಾ''ನ ಆತ್ಮ!

By Divya
|

ಸಿಯಾಚಿನ್ ಅತಿ ಹೆಚ್ಚು ಚಳಿಯನ್ನು ಹೊಂದಿರುವ ಭಾರತದ ಗಡಿ ಪ್ರದೇಶ. ದೇಶದ ರಕ್ಷಣೆಗಾಗಿ ನಿಲ್ಲುವ ಅದೆಷ್ಟೋ ಯೋಧರು ಇಲ್ಲಿ ಪ್ರಾಣ ಬಿಟ್ಟಿದ್ದಾರೆ. ಹಿಮ ಮಳೆ, ಹಿಮದ ಕುಸಿತ, ತಡೆಯಲಾರದಷ್ಟು ಚಳಿಯ ಕೊರೆತ ಹಾಗೂ ಪಾಕಿಸ್ತಾನದ ನಡುವೆ ಇರುವ ವೈಷಮ್ಯದ ಹೋರಾಟದಲ್ಲಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅಂತಹವರಲ್ಲಿ ಸೈನಿಕ ಓಂ ಪ್ರಕಾಶವರು ಒಬ್ಬರು.

ದೇಶದ ರಕ್ಷಣೆಗಾಗಿ ತನ್ನ ಜೀವವನ್ನೇ ಮುಡಿಪಾಗಿಟ್ಟ ಓಂ ಪ್ರಕಾಶ್ ಅವರು ಗಡಿಯಲ್ಲಿರುವ ಯೋಧರನ್ನು ರಕ್ಷಿಸುತ್ತಿದ್ದಾರೆ. ಭಾರತದ ಸೈನಿಕರು ಸಹ ಇವರನ್ನು 'ಒಪಿ ಬಾಬಾ' ಎಂದು ಆರಾಧಿಸುತ್ತಾರೆ. ಅರೇ! ಇದೆಂತಹ ಕಥೆ ಎನ್ನುವ ಕುತೂಹಲ ಮನಸ್ಸಿಗೆ ಬಂದರೆ, ಲೇಖನವನ್ನು ಮುಂದೆ ಓದಿ....

ಕಥೆ

ಕಥೆ

ಓಂ ಪ್ರಕಾಶ್ ಎಂಬ ಯೋಧನು 1980ರಲ್ಲಿ ಸಿಯಾಚಿನ್ ಮಾಲುನ್‍ಅಲ್ಲಿ ಗಡಿ ರಕ್ಷಣೆಯ ಕಾರ್ಯವನ್ನು ನಿರ್ವಹಿಸುತ್ತಿದ್ದನು. ಒಮ್ಮೆ ಇತರ ಸೈನಿಕರು ತಾತ್ಕಾಲಿಕವಾಗಿ ಕೇಂದ್ರಕಾರ್ಯಾಲಯಕ್ಕೆ ಬಂದಿದ್ದ. ನಂತರ ಯೋಧ ಏನಾದ ಎನ್ನುವ ಸಮಾಚಾರ ಯಾರಿಗೂ ತಿಳಿದಿಲ್ಲ. ಹಿಮದ ಕೊರೆತದಿಂದ ಹಿಮದಲ್ಲಿ ಹುದುಗಿ ಹೋಗಿರಬಹುದು ಎನ್ನುವುದು ಕೆಲವರ ಊಹೆ.

ದೇಶದ ರಕ್ಷಣೆಗಾಗಿ ಪ್ರೇತವಾಗಿ ಕಾಯುತ್ತಿರುವ ಹುತಾತ್ಮ ಯೋಧನ ಕಥೆ!

ಆಶ್ಚರ್ಯ!

ಆಶ್ಚರ್ಯ!

ಅಂದಿನಿಂದ ಇಂದಿನ ವರೆಗೂ ಸಿಯಾಚಿನ್‍ನಲ್ಲಿ ಗಡಿ ರಕ್ಷಣೆಗೆ ನಿಲ್ಲುವ ಯೋಧರು ಅನೇಕ ತೊಂದರೆಗಳಿಗೆ ಈಡಾಗುತ್ತಿದ್ದಾರೆ. ಇವರುಗಳ ರಕ್ಷಣೆಗೆ ಓಂ ಪ್ರಕಾಶರ ಆತ್ಮವು ನಿಲ್ಲುತ್ತದೆ ಎಂದು ನಂಬುತ್ತಿದ್ದಾರೆ.

ರಕ್ಷಣೆ

ರಕ್ಷಣೆ

ಶತ್ರುಗಳ ದಾಳಿ ಮತ್ತು ಅಪಾಯಕಾರಿ ಹಿಮದ ಕೊರೆತವಿದ್ದರೆ, ಈ ಆತ್ಮವು ಸಿಯಾಚಿನ್‌ನಲ್ಲಿ ಕೆಲಸ ನಿರ್ವಹಿಸುವ ಯೋಧರ ಕನಸಿನಲ್ಲಿ ಬಂದು ಎಚ್ಚರಿಕೆ ನೀಡುತ್ತದೆ. ಜೊತೆಗೆ ಅವರ ರಕ್ಷಣೆಗೆ ಮುಂದಾಗುತ್ತದೆ ಎನ್ನುವ ನಂಬಿಕೆ ಇದೆ.

ನಂಬಿಕೆ...

ನಂಬಿಕೆ...

ಈ ಆತ್ಮಕ್ಕೆ ಒಪಿ ಬಾಬಾ ಎಂದು ಹೆಸರಿಸಿ, ಒಂದು ಮಂದಿರವನ್ನು ನಿರ್ಮಿಸಲಾಗಿದೆ. ಇಲ್ಲಿ ಸೈನ್ಯದ ಕಮಾಂಡಿಂಗ್ ಆಫೀಸರ್ ದೇವಾಲಯಕ್ಕೆ ವರದಿಯನ್ನು ಸಲ್ಲಿಸುತ್ತಾರೆ. ಅಲ್ಲದೆ ಸೈನಿಕರ ಮೇಲೆ ಉಂಟಾಗುವ ದಾಳಿಯ ಬಗ್ಗೆ ಮಾಹಿತಿಯನ್ನು ಬಾಬಾ ಸೂಚಿಸುತ್ತಾರೆ ಎನ್ನುವ ಪ್ರತೀತಿ ಇದೆ.

Image Courtesy

ದೇವರಂತೆ ಪೂಜಿಸುತ್ತಾರೆ...

ದೇವರಂತೆ ಪೂಜಿಸುತ್ತಾರೆ...

ಎಲ್ಲಾ ಸೈನಿಕರು ಕರ್ತವ್ಯ ನಿರ್ವಹಿಸಲು ಹೋಗುವ ಮುನ್ನ ಬಾಬಾ ಮಂದಿರಕ್ಕೆ ಬರುತ್ತಾರೆ. ಬಾಬನಿಗೆ ನಮಸ್ಕರಿಸಿ ಕೆಲಸಕ್ಕೆ ಯಶಸ್ಸು ಸಿಗಲಿ ಎಂದು ಕೇಳಿಕೊಳ್ಳುತ್ತಾರೆ.

Image courtesy

ಪೂಜ್ಯ ಭಾವ

ಪೂಜ್ಯ ಭಾವ

2003ರಲ್ಲಿ ಬಾಬಾ ಮಂದಿರವು ಬಹಳ ಶಕ್ತಿಯನ್ನು ಹೊಂದಿರುವ ದೇವಾಲಯ ಎಂದು ಪರಿಗಣಿಸಲಾಯಿತು. ಅಲ್ಲದೆ ಇಂದಿಗೂ ಸೈನಿಕರು ಮೊದಲು ಬಾಬನಿಗೆ ಔಪಚಾರಿಕ ವರದಿಯನ್ನು ಇಟ್ಟು, ಎಲ್ಲಾ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.

ಇಂದಿಗೂ ನಮ್ಮ ಯೋಧರ ರಕ್ಷಣೆಗೆ ನಿಲ್ಲುವ ಬಾಬಾ...

ಇಂದಿಗೂ ನಮ್ಮ ಯೋಧರ ರಕ್ಷಣೆಗೆ ನಿಲ್ಲುವ ಬಾಬಾ...

1984ರ ಬೇಸಿಗೆಯಿಂದ ಇಂದಿಗೂ ಸಿಯಾಚಿನ್‌ನಲ್ಲಿ ಕಾರ್ಯ ನಿರ್ವಹಿಸುವ ಯೋಧರ ಪಾಲನೆಯನ್ನು ಈ ಆತ್ಮ ಮಾಡುತ್ತದೆ ಎನ್ನುವ ನಂಬಿಕೆ ಇದೆ.

ತರಬೇತಿ

ತರಬೇತಿ

ಸಿಯಾಚಿನ್ ಬೇಸ್ ಕ್ಯಾಂಪ್‍ಗಳಲ್ಲಿ ಸೈನಿಕರಿಗೆ ಮೂರುತಿಂಗಳ ಕಾಲ ತರಬೇತಿ ನೀಡಲಾಗುತ್ತದೆ.

English summary

Story about OP Baba in Siachen

As the legend goes, a soldier named Om Prakash single-handedly fended off an enemy attack at the Malaun post in Siachen in the late 1980s, while the other soldiers had been temporarily called to the headquarters. Now, who this soldier was and what happened to him remains a mystery. The army also had no inforamtion about the whereabouts of this soldier.
X
Desktop Bottom Promotion