ಮಾಸಿಕ ಋತುಸ್ರಾವ-ತಪ್ಪು ಕಲ್ಪನೆಗಳಿಂದ ಹೊರ ಬರೋಣ...

By: manu
Subscribe to Boldsky

ಮಾಸಿಕ ಋತುಸ್ರಾವವನ್ನು ಹಿಂದಿನ ದಿನಗಳಿಂದಲೂ ಒಂದು ಅಶುಭ ಅಥವಾ ಪಾಪ ಎಂಬ ಭಾವನೆಯಿಂದ ವಿಶ್ವದ ಹಲವಾರು ದೇಶಗಳಲ್ಲಿ ಕಾಣಲಾಗುತ್ತಾ ಬರಲಾಗಿತ್ತು. ವಿಜ್ಞಾನ ಮುಂದುವರೆದಂತೆ ಈ ಬಗ್ಗೆ ಹೆಚ್ಚು ತಿಳಿವಳಿಕೆ ದೊರಕಿ ಹೆಚ್ಚಿನ ಕಡೆಯಲ್ಲಿ ಈ ಭಾವನೆಗಳು ಬದಲಾಗುತ್ತಿವೆ. ಆ ದಿನಗಳಲ್ಲಿ ಕಾಡುವ ಅತೀವ ರಕ್ತಸ್ರಾವ! ಕಾರಣವೇನು?

ಆದರೆ ಭಾರತ ಸಹಿತ ಇನ್ನೂ ಹಲವಾರು ದೇಶಗಳಲ್ಲಿ ಈ ಬಗ್ಗೆ ಪೂರ್ವಾಗ್ರಹವಾಗಿ ಬಂದಿರುವ ತಪ್ಪು ನಂಬಿಕೆಗಳು ಮಹಿಳೆಯರ ಈ ನೈಸರ್ಗಿಕ ಕ್ರಿಯೆಯನ್ನು ತಪ್ಪಿತಸ್ಥ ಭಾವನೆಯಿಂದ ನೋಡುವ ಮೂಲಕ ಶಾರೀರಿಕವಾಗಿಯೂ ಮಾನಸಿಕವಾಗಿಯೂ ಹೆಚ್ಚು ನೋವನ್ನು ಅನುಭವಿಸುವಂತಾಗುತ್ತದೆ. ಮುಟ್ಟಿನ ಅವಧಿಯಲ್ಲಿ ಮಹಿಳೆಯರು ಏಕೆ ಅನಗತ್ಯ ರಂಪಾಟ ಮಾಡುತ್ತಾರೆ?

ಈ ನಂಬಿಕೆಗಳಲ್ಲಿ ಕೆಲವು ಅತ್ಯಂತ ವಿಚಿತ್ರವೂ, ತಬ್ಬಿಬ್ಬಾಗಿಸುವಂತಹವೂ ಆಗಿದ್ದು ವಿಜ್ಞಾನ ಇಷ್ಟೊಂದು ಮುಂದುವರೆದಿದ್ದರೂ ಶತಮಾನಗಳ ಹಿಂದಿನ ನಂಬುಗೆಗಳನ್ನೇ ಇಂದಿಗೂ ಮುಂದುವರೆಸಿಕೊಂಡು ಬರುತ್ತಿದ್ದಾರಲ್ಲಾ ಎಂದು ಮರಗುವಂತಾಗುತ್ತದೆ. ಬನ್ನಿ, ನಿಸರ್ಗದ ಈ ಕ್ರಿಯೆಯ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಮತ್ತು ಪೂರ್ವಾಗ್ರಹಗಳ ಬಗ್ಗೆ ಅರಿತು ಮನಸ್ಸನ್ನು ಬದಲಿಸಿಕೊಳ್ಳೋಣ....   

ಸಾಕಷ್ಟು ವಯಸ್ಸಾಗುವವರೆಗೂ ಟ್ಯಾಂಪೋನ್ ಬಳಸಬಾರದು

ಸಾಕಷ್ಟು ವಯಸ್ಸಾಗುವವರೆಗೂ ಟ್ಯಾಂಪೋನ್ ಬಳಸಬಾರದು

ಮಾಸಿಕ ರಕ್ತಸ್ರಾವವನ್ನು ಸಮರ್ಥವಾಗಿ ಹೀರಿಕೊಳ್ಳಬಲ್ಲ ಪ್ಯಾಡ್‌ಗಳಿಗಿಂತಲೂ ಇನ್ನೂ ಹೆಚ್ಚು ಸಮರ್ಥವಾದ ಉಪಕರಣವನ್ನು ಈಗ ಪರಿಚಯಿಸಲಾಗುತ್ತಿದೆ. ಇವೇ ಶರೀರದ ಒಳಗೆ ತೂರಿಸಿಕೊಳ್ಳಬಹುದಾದ ಟ್ಯಾಂಪೋನ್‌ಗಳು.

ಸಾಕಷ್ಟು ವಯಸ್ಸಾಗುವವರೆಗೂ ಟ್ಯಾಂಪೋನ್ ಬಳಸಬಾರದು

ಸಾಕಷ್ಟು ವಯಸ್ಸಾಗುವವರೆಗೂ ಟ್ಯಾಂಪೋನ್ ಬಳಸಬಾರದು

ಆದರೆ ಕನ್ಯೆಯರು ಇದನ್ನು ಬಳಸಬಾರದು, ಇದರಿಂದ ಅವರ ಕನ್ಯತ್ವ ನಷ್ಟವಾಗುತ್ತದೆ ಎಂದು ನಂಬಲಾಗುತ್ತಿದೆ. ವಾಸ್ತವವಾಗಿ ಈ ಟ್ಯಾಂಪೋನ್ ಗಳ ಬಳಕೆಯಿಂದ ಕನ್ಯಾಪೊರೆ ಹರಿಯುವುದಿಲ್ಲ ಹಾಗೂ ಯಾವುದೇ ವಯಸ್ಸಿನವರು ಇದನ್ನು ಸುರಕ್ಷಿತವಾಗಿ ಬಳಸಬಹುದು.

ಮಾಸಿಕ ಸ್ರಾವದ ದಿನಗಳಲ್ಲಿ ಗರ್ಭ ನಿಲ್ಲುವುದಿಲ್ಲ

ಮಾಸಿಕ ಸ್ರಾವದ ದಿನಗಳಲ್ಲಿ ಗರ್ಭ ನಿಲ್ಲುವುದಿಲ್ಲ

ಇದೊಂದು ತಪ್ಪು ಕಲ್ಪನೆಯಾಗಿದ್ದು ಈ ದಿನಗಳೂ ಸುರಕ್ಷಿತವಲ್ಲ ಎಂದು ವಿಜ್ಞಾನ ಸಾಬೀತು ಪಡಿಸಿದೆ. ಏಕೆಂದರೆ ಪುರುಷನ ವೀರ್ಯಾಣು ಮಹಿಳೆಯ ದೇಹದೊಳಗೆ ಸುಮಾರು ಐದು ದಿನಗಳವರೆಗೂ ಜೀವಂತವಿರುತ್ತದೆ.

ಮಾಸಿಕ ಸ್ರಾವದ ದಿನಗಳಲ್ಲಿ ಗರ್ಭ ನಿಲ್ಲುವುದಿಲ್ಲ

ಮಾಸಿಕ ಸ್ರಾವದ ದಿನಗಳಲ್ಲಿ ಗರ್ಭ ನಿಲ್ಲುವುದಿಲ್ಲ

ಸ್ರಾವದ ಬಳಿಕ ಮೂರರಿಂದ ಐದನೆಯ ದಿನ ಆಗಮಿಸುವ ಅಂಡಾಣುವೊಡನೆ ಈ ವೀರ್ಯಾಣು ಸಮಾಗಮಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಆದ್ದರಿಂದ ಈ ದಿನಗಳಲ್ಲಿ ಯಾವ ಚಟುವಟಿಕೆ ನಡೆಸದಿರುವುದೇ ಜಾಣತನ.

ಈ ಸ್ರಾವ ಸರಿಯಾಗಿ ಒಂದು ವಾರದ ಅವಧಿಯಲ್ಲಿ ಆಗಲೇಬೇಕು

ಈ ಸ್ರಾವ ಸರಿಯಾಗಿ ಒಂದು ವಾರದ ಅವಧಿಯಲ್ಲಿ ಆಗಲೇಬೇಕು

ಮಾಸಿಕ ಸ್ರಾವದ ಅವಧಿ ಪ್ರತಿ ಮಹಿಳೆಯ ಆರೋಗ್ಯವನ್ನು ಆಧರಿಸಿ ಭಿನ್ನವಾಗಿರುತ್ತದೆ. ವಿಜ್ಞಾನ ಕಂಡುಕೊಂಡಂತೆ ಅತಿ ಸಾಮಾನ್ಯವಾದ ದಿನಗಳೆಂದರೆ ಮೂರರಿಂದ ಏಳು ದಿನಗಳು. ಆದರೆ ಕೆಲವರಲ್ಲಿ ಇದು ಎರಡೇ ದಿನಕ್ಕೂ, ಕೆಲವರಲ್ಲಿ ಹತ್ತು ಹದಿನೈದು ದಿನಗಳವರೆಗೂ ಏರುಪೇರಾಗಬಹುದು. ಆದ್ದರಿಂದ ಒಂದು ವೇಳೆ ಹೀಗೆ ಏರುಪೇರಾಗಿದ್ದರೆ ತಜ್ಞ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.

ಈ ಅವಧಿಯಲ್ಲಿ ಕೇವಲ ಆರಾಮ ಮಾಡಿ, ವ್ಯಾಯಾಮ ಮಾಡಬೇಡಿ

ಈ ಅವಧಿಯಲ್ಲಿ ಕೇವಲ ಆರಾಮ ಮಾಡಿ, ವ್ಯಾಯಾಮ ಮಾಡಬೇಡಿ

ಈ ತಪ್ಪು ಕಲ್ಪನೆಯನ್ನು ಯಾರು ಹರಿಬಿಟ್ಟಿದ್ದಾರೋ ಗೊತ್ತಿಲ್ಲ, ಆದರೆ ಇದರ ಹಿಂದೆ ಕೆಲಸದಿಂದ ತಪ್ಪಿಸಿಕೊಳ್ಳುವ ಹುನ್ನಾರವಿರುವುದಂತೂ ಖಚಿತ. ಏಕೆಂದರೆ ಈ ದಿನಗಳಲ್ಲಿ ಇತರ ದಿನಗಳಿಗಿಂತಲೂ ಹೆಚ್ಚಾಗಿ ವ್ಯಾಯಾಮದ ಅವಶ್ಯಕತೆ ಇದೆ. ಆದರೆ ಭಾರೀ ವ್ಯಾಯಾಮಗಳಲ್ಲ, ಸುಲಭ ವ್ಯಾಯಾಮಗಳು ಮಾತ್ರ. ಇದರಿಂದ ಹೆಚ್ಚು ರಕ್ತಸಂಚಾರ ಲಭ್ಯವಾಗಿ ಹೆಚ್ಚಿನ ಆಮ್ಲಜನಕ ದೊರಕುತ್ತದೆ. ಪರಿಣಾಮವಾಗಿ ಮಾಸಿಕ ದಿನಗಳ ನೋವು ಸಹಿಸಲು ಸಾಧ್ಯವಾಗುವಷ್ಟು ಕಡಿಮೆಯಾಗುತ್ತದೆ ಹಾಗೂ ನಂತರದ ದಿನಗಳ ಪರಿಣಾಮಗಳೂ ಇಲ್ಲವಾಗುತ್ತವೆ.

ಟ್ಯಾಂಪೋನ್ ಕಳೆದೇ ಹೋಗಬಹುದು

ಟ್ಯಾಂಪೋನ್ ಕಳೆದೇ ಹೋಗಬಹುದು

ಈ ನಂಬಿಕೆಯನ್ನು ಈ ಶತಮಾನದ ಜೋಕ್ ಎಂದು ಕರೆದರೂ ಆದೀತು. ಏಕೆಂದರೆ ಮಹಿಳೆಯರ ಗುಪ್ತಾಂಗವೇನೂ ನೀಳವಾದ ಕೊಳವೆಯಲ್ಲ, ಅಲ್ಲದೇ ಗರ್ಭಕಂಠದ ಬಳಿಕ ಮುಂದಕ್ಕೆ ಹೋಗಲೂ ದಾರಿಯಿಲ್ಲ. ಹೀಗಿದ್ದಾಗ ಟ್ಯಾಂಪೋನ್ ಎಲ್ಲಿ ಕಳೆದುಹೋಗುತ್ತದೆ?

 
English summary

Period Myths That Need To Be Cleared Right Away!

This article is going to clear some of the most weirdest, bizarre myths and beliefs about periods that all need to know. Learning about these myths is important because menstruation is not a shameful thing, but a natural process. Check out some of the most weird myths about periods that people have been following/believing in blindly!
Please Wait while comments are loading...
Subscribe Newsletter