ಮಚ್ಚೆಗಳಿಂದಲೇ ಬಯಲಾಗುತ್ತದೆ ನಿಮ್ಮ ಸಂಗಾತಿಯ ನಿಯತ್ತು!

By: Deepak
Subscribe to Boldsky

ಮುಖ ನೋಡಿ ಮೊಳ ಹಾಕಬಾರದು ಎಂಬುದು ಒಂದು ಗಾದೆ. ಆದರೆ ಮಚ್ಚೆ ನೋಡಿ ಮೊಳ ಹಾಕಬಾರದು ಎಂದು ಹೇಳಿಲ್ಲವಲ್ಲ. ಅದಕ್ಕೆ ಇಂದು ನಾವು ಮಚ್ಚೆ ಪುರಾಣವನ್ನು ನಿಮ್ಮ ಮುಂದೆ ಇರಿಸುತ್ತಿದ್ದೇವೆ. ಮಚ್ಚೆಗಳು ಯಾವು, ಯಾವುದು ಎಲ್ಲಿವೆ ಎಂದು ನೋಡಿ. ಇದರಿಂದ ನಿಮ್ಮ ಸಂಗಾತಿಯ ನಿಯತ್ತು ಮತ್ತು ಚರಿತ್ರೆ ಸಹ ನಿಮಗೆ ತಿಳಿಯುತ್ತದೆ ಎಂದು ಹೇಳುತ್ತಾರೆ ಮಚ್ಚೆ ತಜ್ಞರು.

ದೇಹದ ಈ 8 ಸ್ಥಳಗಳಲ್ಲಿ ಮಚ್ಚೆ ಇದ್ದವರಿಗೆ, ಸ್ವಲ್ಪ ಹಣದ ಸಮಸ್ಯೆ ಕಾಡುತ್ತೆ!

ಮಚ್ಚೆಗಳು ನಿಮ್ಮ ಸಂಗಾತಿ ನಿಮಗೆ ಬದ್ಧರಾಗಿದ್ದಾರೆಯೇ ಇಲ್ಲವೇ ಎಂಬುದನ್ನು ತಿಳಿಸುತ್ತವೆ ಎಂದು ಹೇಳುತ್ತಾರೆ ತಿಳಿದವರು. ಬನ್ನಿ ನಿಮ್ಮ ಕುತೂಹಲವನ್ನು ನಾವು ಇನ್ನು ನಾವು ತಡೆಯಲು ಹೋಗುವುದಿಲ್ಲ. ಮಚ್ಚೆಗಳ ಕುರಿತಾದ ಕುತೂಹಲ ಕೆರಳಿಸುವ ಅಂಶಗಳನ್ನು ತಿಳಿದುಕೊಳ್ಳಿ... 

ಹಣೆಯ ಮೇಲಿನ ಮಚ್ಚೆ

ಹಣೆಯ ಮೇಲಿನ ಮಚ್ಚೆ

ಹಣೆಯ ಮೇಲಿನ ಮಚ್ಚೆ ಇರುವವರು ಯಾವುದೇ ಪ್ರವಾಹಕ್ಕೆ ಎದುರಾಗಿ ಈಜಬಲ್ಲ ದೃಢ ಮನಸ್ಕರು. ಆದರೆ ಮದುವೆಯಲ್ಲಿ ಈ ಮಾತು ಅವರಿಗೆ ಅನ್ವಯವಾಗುವುದಿಲ್ಲ. ಅವರ ಸಂಗಾತಿ ಅವರಿಗೆ ನಿಯತ್ತಾಗಿದ್ದರೂ ಇವರಿಗೆ ಮಾತ್ರ ಸಂಗಾತಿಯ ಮೇಲೆ ಪ್ರೀತಿ ಇರುವುದಿಲ್ಲ.

ಗಡ್ಡದ ಮೇಲಿನ ಮಚ್ಚೆ

ಗಡ್ಡದ ಮೇಲಿನ ಮಚ್ಚೆ

ಈ ಭಾಗದಲ್ಲಿ ಮಚ್ಚೆ ಇದ್ದರೆ ನಿಮ್ಮ ಸಂಗಾತಿ ನಿಮ್ಮೊಂದಿಗೆ ನೀವು ಅಂದುಕೊಂಡಂತೆ ಪ್ರೀತಿಯಿಂದ ನಡೆದುಕೊಳ್ಳುವುದಿಲ್ಲ ಹಾಗು ಅನುಕಂಪ ತೋರುವುದಿಲ್ಲ. ನಿಮ್ಮ ನಡುವೆ ನಂಬಿಕೆಯನ್ನು ಉಂಟು ಮಾಡುವ ಯಾವುದೇ ಸಂಗತಿಗಳು ನಡೆಯುವುದಿಲ್ಲ.

ಕೆನ್ನೆಯ ಮೇಲಿನ ಮಚ್ಚೆ

ಕೆನ್ನೆಯ ಮೇಲಿನ ಮಚ್ಚೆ

ನಿಮ್ಮ ಸಂಗಾತಿಗೆ ಈ ಭಾಗದಲ್ಲಿ ಮಚ್ಚೆ ಇದ್ದರೆ ನೀವೇ ಅದೃಷ್ಟಶಾಲಿಗಳು. ನಿಮ್ಮ ಮದುವೆಯ ಕಷ್ಟದ ಪ್ರತಿಫಲ ಮತ್ತು ಪ್ರೀತಿ ಎರಡನ್ನು ಒಳಗೊಂಡಿರುತ್ತದೆ. ಯಾರಿಗೆ ಎಡಗೆನ್ನೆಯ ಮೇಲೆ ಮಚ್ಚೆಗಳು ಇರುತ್ತವೆಯೋ ಅವರು ತಮ್ಮ ಸಂಗಾತಿಯ ಬಗ್ಗೆ ಎಚ್ಚರದಿಂದಿರಬೇಕು. ಏಕೆಂದರೆ ಅವರ ಸಂಗಾತಿ ಇವರನ್ನು ಮೋಸಗೊಳಿಸಬಹುದು.

ಮಚ್ಚೆಯಲ್ಲಿ ಅಡಗಿದೆಯೇ ನಮ್ಮ ಭವಿಷ್ಯ?

ಕೈಯ ಮೇಲಿನ ಮಚ್ಚೆ

ಕೈಯ ಮೇಲಿನ ಮಚ್ಚೆ

ಬಲಗೈಯ ಮೇಲೆ ಮಚ್ಚೆ ಇದ್ದರೆ ಅದೃಷ್ಟವಂತರಾಗಿರುತ್ತಾರೆ ಏಕೆಂದರೆ ಅವರ ಸಂಗಾತಿಯು ಅವರಿಗೆ ಪ್ರತಿ ನಿಷ್ಠೆಯನ್ನು ತೋರುತ್ತಾರೆ. ಇವರ ಪ್ರೀತಿಯನ್ನು ಬದಲಿಸಲು ಸಾಧ್ಯವಿಲ್ಲ. ಇದರ ಜೊತೆಗೆ ಎಡಗೈಯಲ್ಲಿ ವ್ಯಕ್ತಿಗೆ ಮಚ್ಚೆ ಇದ್ದಲ್ಲಿ, ಅವರಿಗೆ ಮದುವೆಯಲ್ಲಿ ಸಮಸ್ಯೆಗಳು ಕಂಡು ಬರುತ್ತವೆ.

ದೇಹದ ಮೇಲಿರುವ ಮಚ್ಚೆ ನಿಮ್ಮ ಭವಿಷ್ಯದ ಬಗ್ಗೆ ಹೇಳುತ್ತೇ!

ಕಣ್ಣಿನ ಮೇಲೆ ಮಚ್ಚೆ

ಕಣ್ಣಿನ ಮೇಲೆ ಮಚ್ಚೆ

ಈ ಭಾಗದಲ್ಲಿ ಮಚ್ಚೆ ಇದ್ದಲ್ಲಿ, ಇದು ಅವರು ತಮ್ಮ ಸಂಗಾತಿಯ ಕುರಿತಾಗಿ ಇರಿಸಿಕೊಂಡಿರುವ ನಿಜವಾದ ಮತ್ತು ಆಳವಾದ ಪ್ರೀತಿಯನ್ನು ಇದು ತೋರುತ್ತದೆ. ಇದು ಎಡಗಡೆಯ ಕಣ್ಣಿನ ಮೇಲೆ ಇದ್ದಲ್ಲಿ ವೈವಾಹಿಕ ಜೀವನದಲ್ಲಿ ಸಂಘರ್ಷಗಳನ್ನು ತೋರಿಸುತ್ತದೆ.

ಹುಬ್ಬಿನ ಕೆಳಗೆ ಮಚ್ಚೆಗಳು

ಹುಬ್ಬಿನ ಕೆಳಗೆ ಮಚ್ಚೆಗಳು

ಈ ಭಾಗದಲ್ಲಿ ಮಚ್ಚೆ ಇದ್ದಲ್ಲಿ ಸಂಬಂಧಗಳಲ್ಲಿ ಯಾವಾಗಲೂ ಜಗಳ ಆಗಿ ಕುಟುಂಬ ಬೇಸರ ತರಿಸುತ್ತಿರುತ್ತದೆ. ಇದು ಕುಟುಂಬದಲ್ಲಿ ಅಸಂತೋಷವನ್ನು ಉಂಟು ಮಾಡುತ್ತದೆ.

ಮೂಗಿನ ಮಧ್ಯದಲ್ಲಿ ಮಚ್ಚೆ ಇದ್ದರೆ

ಮೂಗಿನ ಮಧ್ಯದಲ್ಲಿ ಮಚ್ಚೆ ಇದ್ದರೆ

ಈ ಭಾಗದಲ್ಲಿ ಮಚ್ಚೆ ಇದ್ದಲ್ಲಿ ಇವರು ಇತರರ ಜೊತೆಗೆ ಫ್ಲರ್ಟ್ ಮಾಡುತ್ತಿರುತ್ತಾರೆ ಎಂದು ಸೂಚಿಸುತ್ತದೆ. ಈ ವಿಚಾರವಾಗಿ ಇವರು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಹುಷರಾಗಿ ನೋಡಿಕೊಳ್ಳಿ.

ಮೂಗಿನ ತುದಿ

ಮೂಗಿನ ತುದಿ

ಈ ಭಾಗದಲ್ಲಿ ಮಚ್ಚೆ ಇದ್ದಲ್ಲಿ ಅವರಿಗೆ ಲೈಂಗಿಕ ಸಮಸ್ಯೆಗಳು ಇರುತ್ತವೆ. ಇದು ವೈವಾಹಿಕ ಜೀವನಕ್ಕೆ ಹಾನಿ ಮಾಡುತ್ತದೆ. ಇದು ಕೆಟ್ಟ ಮಚ್ಚೆ ಎಂದು ಕರೆಯಲಾಗುತ್ತದೆ. ಇದನ್ನು ತೆಗೆಸಿ ಹಾಕುವುದು ಒಳ್ಳೆಯದು. ಈ ಮಚ್ಚೆಯು ಹಲವಾರು ಸಮಸ್ಯೆಗಳನ್ನು ತರುತ್ತದೆ.

ಮೂಗಿನ ಪಕ್ಕದಲ್ಲಿ ಮಚ್ಚೆ

ಮೂಗಿನ ಪಕ್ಕದಲ್ಲಿ ಮಚ್ಚೆ

ಈ ಭಾಗದಲ್ಲಿ ಮಚ್ಚೆ ಇದ್ದಲ್ಲಿ ಅದು ಸಂಗಾತಿಯ ಜೊತೆಗೆ ಅನ್ಯೋನ್ಯ ಸಂಬಂಧವನ್ನು ಸೂಚಿಸುತ್ತದೆ ಮತ್ತು ಅವಿನಾಭಾವ ಬಾಂಧವ್ಯವನ್ನು ಸಹ ಸೂಚಿಸುತ್ತದೆ. ಮಹಿಳೆಯರಿಗೆ ಈ ಮಚ್ಚೆ ಕಂಡು ಬಂದರೆ ಅವರು ಇಡೀ ಜೀವನ ಸಂತೋಷದಿಂದ ಕಳೆಯುತ್ತಾರೆ.

ತುಟಿಯ ಕೆಳಗಿನ ಮಚ್ಚೆ

ತುಟಿಯ ಕೆಳಗಿನ ಮಚ್ಚೆ

ಈ ಭಾಗದಲ್ಲಿ ಮಚ್ಚೆ ಇದ್ದಲ್ಲಿ ಅವರು ತುಂಬಾ ರೊಮ್ಯಾಂಟಿಕ್ ಆಗಿರುತ್ತಾರೆ. ಇವರಿಗೆ ಹಲವಾರು ಲೈಂಗಿಕ ಸಂಗಾತಿಗಳು ಇರುತ್ತಾರೆ. ಇದರಿಂದ ಅವರಿಗೆ ಪಶ್ಚಾತ್ತಾಪ ಕಾಡುತ್ತಿರುತ್ತದೆ. ಜೊತೆಗೆ ಜೀವನದಲ್ಲಿ ಒತ್ತಡ ಸಹ ಕಾಣಿಸಿಕೊಳ್ಳುತ್ತದೆ.

ದೇಹದ ಮೇಲಿರುವ ಮಚ್ಚೆ ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆಯೇ?

ಕಾಲರ್ ಮೂಳೆಯ ಮೇಲಿನ ಮಚ್ಚೆ

ಕಾಲರ್ ಮೂಳೆಯ ಮೇಲಿನ ಮಚ್ಚೆ

ಈ ಭಾಗದಲ್ಲಿ ಮಚ್ಚೆ ಇದ್ದಲ್ಲಿ ಆ ವ್ಯಕ್ತಿಯು ದೃಢ ಮನಸ್ಕ ಮತ್ತು ಉತ್ತಮ ಪ್ರೇಮಿಯಾಗಿರುತ್ತಾರೆ. ಜೊತೆಗೆ ಸಂಗಾತಿಯಿಂದ ಉತ್ತಮ ಸಹಕಾರವನ್ನು ಸಹ ಪಡೆಯುತ್ತಾರೆ.

ಸೊಂಟದ ಮೇಲಿನ ಮಚ್ಚೆ

ಸೊಂಟದ ಮೇಲಿನ ಮಚ್ಚೆ

ಈ ಭಾಗದಲ್ಲಿ ಮಚ್ಚೆ ಇದ್ದಲ್ಲಿ ಅವರಿಗೆ ಸುಂದರವಾದ ಗಂಡ/ಹೆಂಡತಿ ದೊರೆಯುತ್ತಾರೆ. ಇದು ಈ ಮಚ್ಚೆ ಇರುವವರು ಸಹ ಸುಂದರವಾಗಿರುತ್ತಾರೆ ಎಂದು ಸೂಚಿಸುತ್ತದೆ.

 

English summary

Moles Reveal If Your Partner Is Faithful Or Not

Here, we are about to share some of the most interesting facts about a person's faithfulness towards their better half by mentioning about what the positions of the moles would convey. Check out on some of these body parts on which moles found can reveal about the faithfulness a partner would have.
Story first published: Thursday, May 25, 2017, 9:53 [IST]
Subscribe Newsletter