ಸಂಖ್ಯಾಶಾಸ್ತ್ರ: ನಿಮ್ಮ ಅದೃಷ್ಟವನ್ನೇ ಖುಲಾಯಿಸುವ 'ಲಕ್ಕಿ ಸಂಖ್ಯೆಗಳು'

By: Hemanth
Subscribe to Boldsky

ಬಾಲಿವುಡ್ ತಾರೆಯರಿಂದ ಹಿಡಿದು ಕ್ರಿಕೆಟ್ ಆಟಗಾರರ ತನಕ ಪ್ರತಿಯೊಬ್ಬರು ಸಂಖ್ಯಾಶಾಸ್ತ್ರದಲ್ಲಿ ಹೆಚ್ಚಿನ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಸಂಖ್ಯಾಶಾಸ್ತ್ರದಿಂದ ವ್ಯಕ್ತಿಯೊಬ್ಬನ ಅದೃಷ್ಟ ಹಾಗೂ ದುರಾದೃಷ್ಟ ತಿಳಿದುಬರುತ್ತದೆ ಎನ್ನಲಾಗುತ್ತದೆ. ಹುಟ್ಟಿದ ದಿನಾಂಕ ಮತ್ತು ರಾಶಿ ಹಾಗೂ ಇನ್ನಿತರ ಕೆಲವೊಂದು ಗಣಿತಗಳನ್ನು ಕೂಡಿಸಿಕೊಂಡು ಸಂಖ್ಯಾಶಾಸ್ತ್ರವನ್ನು ಹೇಳಲಾಗುತ್ತದೆ. ನಿಮ್ಮ ರಾಶಿಗೆ ಯಾವ ಹರಳು ಅದೃಷ್ಟ?

ಸಂಖ್ಯಾಶಾಸ್ತ್ರ ಹೇಳುವ ಕೆಲವೊಂದು ಜನಪ್ರಿಯ ವ್ಯಕ್ತಿಗಳು ಕೂಡ ಭಾರತದಲ್ಲಿ ಇದ್ದಾರೆ. ಜ್ಯೋತಿಷ್ಯ ಶಾಸ್ತ್ರದಂತೆ ಸಂಖ್ಯಾಶಾಸ್ತ್ರ ಕೂಡ ಇಂದಿನ ದಿನಗಳಲ್ಲಿ ಭಾರೀ ಜನಪ್ರಿಯತೆಯನ್ನು ಪಡೆಯುತ್ತಾ ಇದೆ. 2017ರ ಸಂಖ್ಯಾಶಾಸ್ತ್ರವು ನಿಮ್ಮ ಬಗ್ಗೆ ಏನು ಹೇಳುತ್ತದೆ ಎಂದು ತಿಳಿದುಕೊಳ್ಳುವ....   

ಸಂಖ್ಯಾಶಾಸ್ತ್ರದಲ್ಲಿ 2017 ಅಂದರೆ 1

ಸಂಖ್ಯಾಶಾಸ್ತ್ರದಲ್ಲಿ 2017 ಅಂದರೆ 1

2017ನೇ ವರ್ಷದ ಸಂಖ್ಯಾ ಮೌಲ್ಯ 1. ಇದರಿಂದಾಗಿ ಈ ವರ್ಷವು ಹಲವಾರು ಕಾರಣಗಳಿಂದ ವಿಶೇಷವಾಗಿರಲಿದೆ. ವಿಸ್ತಾರ, ಅಭಿವೃದ್ಧಿ ಮತ್ತು ಕುಟುಂಬ ಹಾಗೂ ವ್ಯಾಪಾರದಲ್ಲಿ ಬೆಳವಣಿಗೆಯನ್ನು ಬಯಸುವವರಿಗೆ ಈ ವರ್ಷವು ತುಂಬಾ ವಿಶೇಷವಾಗಿರಲಿದೆ.

ಸಂಖ್ಯಾಶಾಸ್ತ್ರದಲ್ಲಿ 2017ರ ಮಹತ್ವ

ಸಂಖ್ಯಾಶಾಸ್ತ್ರದಲ್ಲಿ 2017ರ ಮಹತ್ವ

ಈ ವರ್ಷ ಹಲವಾರು ಸಾಮಾಜಿಕ ಕಾರ್ಯಕ್ರಮಗಳು ಜನರ ಮಧ್ಯೆ ಸಂಬಂಧವನ್ನು ಬೆಸೆಯಲಿದೆ. ಕ್ರಿಯಾತ್ಮಕತೆ ಹಾಗೂ ಕಲೆಯ ಗುಣವಿರುವಂತಹ ವ್ಯಕ್ತಿಗಳು ಈ ವರ್ಷ ಹೆಚ್ಚು ಬೆಳಕಿಗೆ ಬರಲಿದ್ದಾರೆ. ವಿಶ್ವದೆಲ್ಲೆಡೆಯಲ್ಲಿ ವಿವಿಧ ರೀತಿಯಲ್ಲಿ ಕೆಲವೊಂದು ಅದ್ಭುತವಾಗಿರುವ ಸಂಬಂಧಗಳು ಬೆಸೆದುಕೊಳ್ಳಲಿದೆ. ಜೀವನವೇ ಒಂದು ದೊಡ್ಡ ಸವಾಲು. ಇದರಿಂದ ಜನರು ಸಮಸ್ಯೆ ಹಾಗೂ ಜಗಳವನ್ನು ಬಿಟ್ಟು ಸಹಕಾರದೊಂದಿಗೆ ತಮ್ಮ ಕಾರ್ಯವನ್ನು ಮಾಡಿಕೊಳ್ಳುತ್ತಾ ಹೋಗಬೇಕು.

ವರ್ಷದ ಮಹತ್ವ

ವರ್ಷದ ಮಹತ್ವ

ಈ ವರ್ಷ ಎದುರಾಗುವಂತಹ ಪ್ರತಿಯೊಂದು ಸಮಸ್ಯೆ ಹಾಗೂ ಸಂಕಷ್ಟಗಳನ್ನು ತುಂಬಾ ಪರಿಣಾಮಕಾರಿಯಾಗಿ ಜಾಣ್ಮೆ, ತಾಳ್ಮೆ ಹಾಗೂ ಬುದ್ಧಿವಂತಿಕೆಯಿಂದ ಯಶಸ್ವಿಯಾಗಿ ನಿಭಾಯಿಸಲಾಗುತ್ತದೆ. ಜನರು ಗುರಿಯ ಕಡೆ ಗಮನಹರಿಸಿದಾಗ ಯಶಸ್ಸು ಹೆಚ್ಚು ದೂರವಿರುವುದಿಲ್ಲ. ನಿಮ್ಮ ರಾಶಿಯಂತೆ ಸಂಖ್ಯಾಶಾಸ್ತ್ರವು ಎಷ್ಟು ಯಶಸ್ಸನ್ನು ತಂದುಕೊಡಲಿದೆ ಎಂದು ನಿಮಗೆ ಹೇಳಿಕೊಡಲಾಗುವುದು.

ಮೇಷ ರಾಶಿಯವರಿಗೆ ಅದೃಷ್ಟ ಸಂಖ್ಯೆ

ಮೇಷ ರಾಶಿಯವರಿಗೆ ಅದೃಷ್ಟ ಸಂಖ್ಯೆ

ಮೇಷ ರಾಶಿಯವರಿಗೆ ವೈಯಕ್ತಿಕ ಹಾಗೂ ಕೌಂಟುಬಿಕ ವಿಚಾರಕ್ಕೆ ಸಂಬಂಧಿಸಿದ ಅದೃಷ್ಟ ಸಂಖ್ಯೆಯು 4, 7 ಮತ್ತು 27. ವೃತ್ತಿ ಹಾಗೂ ವ್ಯಾಪಾರಕ್ಕೆ ಸಂಬಂಧಪಟ್ಟ ಅದೃಷ್ಟಸಂಖ್ಯೆ 1, 11 ಮತ್ತು 23.

ವೃಷಭ ರಾಶಿಯವರಿಗೆ

ವೃಷಭ ರಾಶಿಯವರಿಗೆ

2, 12 ಮತ್ತು 19 ವೃಷಭ ರಾಶಿಯವರಿಗೆ ವೈಯಕ್ತಿಕ ಹಾಗೂ ಕೌಟುಂಬಿಕ ಅದೃಷ್ಟ ಸಂಖ್ಯೆ. ವೃತ್ತಿ ಹಾಗೂ ವ್ಯಾಪಾರಕ್ಕೆ ಸಂಬಂಧಪಟ್ಟ ಅದೃಷ್ಟ ಸಂಖ್ಯೆ 3, 5 ಮತ್ತು 24.

ಮಿಥುನ ರಾಶಿಯವರ ಅದೃಷ್ಟ ಸಂಖ್ಯೆ

ಮಿಥುನ ರಾಶಿಯವರ ಅದೃಷ್ಟ ಸಂಖ್ಯೆ

ವೈಯಕ್ತಿಕ ಹಾಗೂ ಕೌಟುಂಬಿಕ ಅದೃಷ್ಟ ಸಂಖ್ಯೆ 2, 10 ಮತ್ತು 22. ವೃತ್ತಿ ಹಾಗೂ ವ್ಯಾಪಾರಕ್ಕೆ ಸಂಬಂಧಪಟ್ಟ ಅದೃಷ್ಟ ಸಂಖ್ಯೆ 6, 11 ಮತ್ತು 28.

ಕರ್ಕಾಟಕ ರಾಶಿಯರಿಗೆ

ಕರ್ಕಾಟಕ ರಾಶಿಯರಿಗೆ

5,7 ಮತ್ತು 27 ಕರ್ಕಾಟಕ ರಾಶಿಯವರಿಗೆ ವೈಯಕ್ತಿಕ ಹಾಗೂ ಕೌಟುಂಬಿಕ ಅದೃಷ್ಟ ಸಂಖ್ಯೆ. ವೃತ್ತಿ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದ ಅದೃಷ್ಟ ಸಂಖ್ಯೆ 14, 11 ಮತ್ತು 29.

ಸಿಂಹ ರಾಶಿಯವರ ಅದೃಷ್ಟ ಸಂಖ್ಯೆ

ಸಿಂಹ ರಾಶಿಯವರ ಅದೃಷ್ಟ ಸಂಖ್ಯೆ

ಸಿಂಹ ರಾಶಿಯವರಿಗೆ 6,9 ಮತ್ತು 19 ವೈಯಕ್ತಿಕ ಹಾಗೂ ಕೌಟುಂಬಿಕ ಅದೃಷ್ಟ ಸಂಖ್ಯೆಗಳು. 10,12,23 ವೃತ್ತಿ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದ ಅದೃಷ್ಟ ಸಂಖ್ಯೆಗಳಾಗಿದೆ.

ಕನ್ಯಾ ರಾಶಿಗೆ

ಕನ್ಯಾ ರಾಶಿಗೆ

ವೈಯಕ್ತಿಕ ಹಾಗೂ ಕೌಟುಂಬಿಕ ಅದೃಷ್ಟ ಸಂಖ್ಯೆಯು 1, 18 ಮತ್ತು 19. ವೃತ್ತಿ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದ ಅದೃಷ್ಟ ಸಂಖ್ಯೆ 5, 7 ಮತ್ತು 23 ಆಗಿದೆ.

ತುಲಾ ರಾಶಿಯವರ ಅದೃಷ್ಟ ಸಂಖ್ಯೆ

ತುಲಾ ರಾಶಿಯವರ ಅದೃಷ್ಟ ಸಂಖ್ಯೆ

ವೈಯಕ್ತಿಕ ಹಾಗೂ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದ ಅದೃಷ್ಟ ಸಂಖ್ಯೆಯು 9, 10 ಮತ್ತು 19 ಆಗಿದೆ. ವೃತ್ತಿ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದ ಅದೃಷ್ಟ ಸಂಖ್ಯೆ 2, 8 ಮತ್ತು 18.

ವೃಶ್ಚಿಕ ರಾಶಿಯವರಿಗೆ

ವೃಶ್ಚಿಕ ರಾಶಿಯವರಿಗೆ

7, 21 ಮತ್ತು 26 ವೃಶ್ಚಿಕ ರಾಶಿಯವರಿಗೆ ವೈಯಕ್ತಿಕ ಹಾಗೂ ಕೌಟುಂಬಿಕ ಅದೃಷ್ಟ ಸಂಖ್ಯೆಯಾಗಿದೆ. ವೃತ್ತಿ ಮತ್ತು ವ್ಯಾಪಾರದಲ್ಲಿ 4, 5 ಮತ್ತು 18 ಇವರಿಗೆ ಅದೃಷ್ಟ ತಂದುಕೊಡಲಿದೆ.

ಧನುರಾಶಿಯವರ ಅದೃಷ್ಟ ಸಂಖ್ಯೆ

ಧನುರಾಶಿಯವರ ಅದೃಷ್ಟ ಸಂಖ್ಯೆ

ವೈಯಕ್ತಿಕ ಹಾಗೂ ಕೌಟುಂಬಿಕ ವಿಚಾರಗಳಿಗೆ 1, 13 ಮತ್ತು 25 ಇವರಿಗೆ ಅದೃಷ್ಟ ತರಲಿದೆ. ವೃತ್ತಿ ಹಾಗೂ ವ್ಯಾಪಾರದಲ್ಲಿ 16, 20 ಮತ್ತು 24ನ್ನು ನೆಚ್ಚಿಕೊಳ್ಳಬೇಕು.

ಮಕರ ರಾಶಿಗೆ ಅದೃಷ್ಟ ಸಂಖ್ಯೆ

ಮಕರ ರಾಶಿಗೆ ಅದೃಷ್ಟ ಸಂಖ್ಯೆ

5, 12 ಮತ್ತು 22 ಮಕರ ರಾಶಿಯವರಿಗೆ ವೈಯಕ್ತಿಕ ಹಾಗೂ ಕೌಟುಂಬಿಕ ಅದೃಷ್ಟ ಸಂಖ್ಯೆಯಾಗಿರುತ್ತದೆ. ವೃತ್ತಿ ಹಾಗೂ ವ್ಯಾಪಾರದಲ್ಲಿ 2, 9 ಮತ್ತು 17 ನ್ನು ಬಳಸಿಕೊಳ್ಳಿ.

ಕುಂಭ ರಾಶಿಯವರ ಅದೃಷ್ಟ ಸಂಖ್ಯೆ

ಕುಂಭ ರಾಶಿಯವರ ಅದೃಷ್ಟ ಸಂಖ್ಯೆ

ವೈಯಕ್ತಿಕ ಹಾಗೂ ಕೌಟುಂಬಿಕ ಅದೃಷ್ಟ ಸಂಖ್ಯೆಯು 2, 4 ಮತ್ತು 27 ಆಗಿರುತ್ತದೆ. 8, 12 ಮತ್ತು 19ನ್ನು ವೃತ್ತಿ ಹಾಗೂ ವ್ಯಾಪಾರದಲ್ಲಿ ನಿಮಗೆ ಅದೃಷ್ಟವನ್ನು ತರಲಿದೆ.

ಮೀನ ರಾಶಿಯವರಿಗೆ

ಮೀನ ರಾಶಿಯವರಿಗೆ

6, 7 ಮತ್ತು 24 ಸಂಖ್ಯೆಯು ಮೀನ ರಾಶಿಯವರಿಗೆ ವೈಯಕ್ತಿಕ ಹಾಗೂ ಕೌಟುಂಬಿಕ ವಿಚಾರದಲ್ಲಿ ಯಶಸ್ಸು ತಂದುಕೊಡಲಿದೆ. ವೃತ್ತಿ ಹಾಗೂ ವ್ಯಾಪಾರದಲ್ಲಿ 3, 5 ಮತ್ತು 23 ಅದೃಷ್ಟ ಸಂಖ್ಯೆಯಾಗಿದೆ.

 

 
English summary

Know Your Numerology Lucky Number For 2017

Numerology goes by the calculation of different numbers associated with people, including the numerical values of their names, date of births and zodiac signs. If you are keen to know your lucky number for 2017, read on to know on what numbers you can depend on.
Subscribe Newsletter