For Quick Alerts
ALLOW NOTIFICATIONS  
For Daily Alerts

ನಿಮ್ಮ ರಾಶಿಗೆ ಯಾವ ಹರಳು ಅದೃಷ್ಟ?

By Super
|

ರತ್ನದ ಕಲ್ಲು ಅಥವಾ ಹರಳುಗಳಿರುವ ಆಭರಣಗಳನ್ನು ಜನರು ತಮ್ಮ ರಾಶಿಗೆ ತಕ್ಕಂತೆ ಮಾಡಿಸಿಕೊಳ್ಳುತ್ತಾರೆ. ರಾಶಿಗೆ ತಕ್ಕಂತೆ ರತ್ನದ ಹರಳುಗಳನ್ನು ಧರಿಸಿದರೆ ಅದೃಷ್ಟ ಅನ್ನುವ ನಂಬಿಕೆ ನಮ್ಮಲ್ಲಿ ಬಲವಾಗಿದೆ. ಕೆಲವರಂತೂ ಜೋತಿಷ್ಯರ ಹತ್ತಿರ ನಮಗೆ ಯಾವ ಕಲ್ಲು ಸೂಕ್ತವೆಂದು ಕೇಳಿದ ಬಳಿಕವಷ್ಟೇ ಈ ರತ್ನದ ಹರಳುಗಳನ್ನು ಧರಿಸುತ್ತಾರೆ.

ರಾಶಿಯಲ್ಲಿ ದೋಷವಿದ್ದಾಗ ಈ ಕಲ್ಲುಗಳನ್ನು ಧರಿಸಿ ದೋಷ ನಿವಾರಣೆ ಮಾಡಬಹುದೆಂದು ಹೇಳುತ್ತಾರೆ. ಗ್ರಹ ದೋಷ ನಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಈ ಗ್ರಹದೋಷವನ್ನು ಹೋಗಲಾಡಿಸಲು ಕೂಡ ರತ್ನದ ಹರಳುಗಳನ್ನು ಧರಿಸುತ್ತಾರೆ. ನಿಜವಾಗಲೂ ದೋಷ ಪರಿಹಾರವಾಗುವುದಾ? ಅನ್ನುವುದು ಮಾತ್ರ ಜನರ ನಂಬಿಕೆಗೆ ಬಿಟ್ಟದ್ದು.

ನೀವು ಈ ರತ್ನ ಶಾಸ್ತ್ರದಲ್ಲಿ ನಂಬಿಕೆ ಇರುವವರಾದರೆ ನಿಮ್ಮ ರಾಶಿಫಲಕ್ಕೆ ಯಾವ ಬಣ್ಣದ ಹರಳುಗಳು ಅದೃಷ್ಟವನ್ನು ತರುತ್ತದೆ ಎಂಬ ಮಾಹಿತಿ ನೀಡಿದ್ದೇವೆ ನೋಡಿ:

ಮೇಷ ರಾಶಿ

ಮೇಷ ರಾಶಿ

ಮಾರ್ಚ್ 21 ರಿಂದ ಏಪ್ರಿಲ್ 19ರ ನಡುವೆ ಹುಟ್ಟಿದರೆ ನಿಮ್ಮದು ಮೇಷರಾಶಿ. ನಿಮಗೆ ವಜ್ರ ಮತ್ತು ರಕ್ತ ವರ್ಣದ ಕಲ್ಲುಗಳು ಅದೃಷ್ಟವನ್ನು ತರುತ್ತದೆ.

ವೃಷಭ ರಾಶಿ

ವೃಷಭ ರಾಶಿ

ಏಪ್ರಿಲ್ 20 ಮತ್ತು ಮೇ 20ರ ನಡುವೆ ಜನಿಸಿದರೆ ನಿಮ್ಮ ರಾಶಿ ವೃಷಭ. ಈ ರಾಶಿಯವರಿಗೆ ಪಚ್ಚೆಕಲ್ಲು ಶುಭವನ್ನು ತರುವುದು.

ಮಿಥುನ ರಾಶಿ

ಮಿಥುನ ರಾಶಿ

ಮೇ 21 ಮತ್ತು ಜೂನ್ 21ರ ನಡುವೆ ಹುಟ್ಟಿದವರು ಮಿಥುನ ರಾಶಿಗೆ ಸೇರುತ್ತಾರೆ. ಇವರಿಗೆ ಮುತ್ತಿನ ಹರಳುಗಳು ಅದೃಷ್ಟದ ಸಂಕೇತವಾಗಿದೆ.

ಕಾರ್ಕಟಕ ರಾಶಿ

ಕಾರ್ಕಟಕ ರಾಶಿ

ಜೂನ್ 22 ಮತ್ತು ಜುಲೈ 22ರ ನಡುವೆ ಹುಟ್ಟಿದರೆ ಅವರದ್ದು ಕಾರ್ಕಟಕ ರಾಶಿ. ಹೊಳೆಯುವ ಚಂದ್ರನ ಬಣ್ಣದ ರತ್ನದ ಹರಳುಗಳು ಈ ರಾಶಿಯವರಿಗೆ ಶುಭವನ್ನು ತರುವುದು.

ಸಿಂಹ ರಾಶಿ

ಸಿಂಹ ರಾಶಿ

ಜುಲೈ 23 - ಆಗಸ್ಟ್ 23 ರ ನಡುವೆ ಹುಟ್ಟಿದರೆ ನಿಮ್ಮದು ಸಿಂಹರಾಶಿ. ಇವರಿಗೆ ಹವಳಗಳು ಅದೃಷ್ಟವನ್ನು ತರುವ ಕಲ್ಲುಗಳಾಗಿವೆ.

ಕನ್ಯಾರಾಶಿ

ಕನ್ಯಾರಾಶಿ

ಆಗಸ್ಟ್ 24-ಸೆಪ್ಟೆಂಬರ್ 22ರ ನಡುವೆ ಹುಟ್ಟಿದರೆ ಕನ್ಯಾರಾಶಿಗೆ ಸೇರುತ್ತೀರಿ. ಕಡು ನೀಲಿ ಬಣ್ಣದ ಹರಳುಗಳನ್ನು (Blue Sapphire) ಧರಿಸಿದರೆ ಈ ರಾಶಿಯವರಿಗೆ ಅದೃಷ್ಟ.

ತುಲಾ ರಾಶಿ

ತುಲಾ ರಾಶಿ

ಸೆಪ್ಟೆಂಬರ್ 23ರಿಂದ ಅಕ್ಟೋಬರ್ 22ರ ನಡುವೆ ಹುಟ್ಟಿದ್ದರೆ ನಿಮ್ಮದು ತುಲಾರಾಶಿ. ನಿಮ್ಮ ಅದೃಷ್ಟದ ಹರಳು ಪಚ್ಚೆ(Peridot).

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಅಕ್ಟೋಬರ್ 23ರಿಂದ ನಮವೆಂಬರ್ 21ರ ನಡುವೆ ಹುಟ್ಟಿದ್ದರೆ ನಿಮ್ಮ ಲಕ್ಕಿ ಸ್ಟೋನ್ Amethyst.

ಧನು ರಾಶಿ

ಧನು ರಾಶಿ

ನೀವು ಅಕ್ಟೋಬರ್ 22ರಿಂದ ಡಿಸೆಂಬರ್ 21ರ ನಡುವೆ ಹುಟ್ಟಿದ್ದವರದ್ದು ಧನುರಾಶಿ. ಧನುರಾಶಿಯವರಿಗೆ ಚಿತ್ರದಲ್ಲಿ ತೋರಿಸಿದಂತಹ Topaz ಹರಳು ಅದೃಷ್ಟವನ್ನು ತರುತ್ತದೆ. ಅಲ್ಲದೆ ಈ ರಾಶಿಯವರಿಗೆ ಹವಳ, ಪಚ್ಚೆ ಕೂಡ ಒಳ್ಳೆಯದು.

ಮಕರ ರಾಶಿ

ಮಕರ ರಾಶಿ

ನೀವು ಹುಟ್ಟಿದ ದಿನಾಂಕ ಡಿಸೆಂಬರ್ 22ರಿಂದ ಜನವರಿ 19ರ ನಡುವೆ ಇದ್ದರೆ ನಿಮ್ಮ ರಾಶಿ ಮಕರ. ನಿಮಗೆ Amber, Turquoise, Labradorite ಈ ಹರಳುಗಳು ಅದೃಷ್ಟವನ್ನು ತರುವುದು.

ಕುಂಭ ರಾಶಿ

ಕುಂಭ ರಾಶಿ

ಜನವರಿ 20ರಿಂದ ಫೆಬ್ರವರಿ 18ರ ನಡುವೆ ಹುಟ್ಟಿದ್ದರೆ ನಿಮ್ಮ ಅದೃಷ್ಟದ ಕಲ್ಲುGarnet

ಮೀನ ರಾಶಿ

ಮೀನ ರಾಶಿ

ಫೆಬ್ರವರಿ 19ರಿಂದ ಮಾರ್ಚ್ 20ರ ನಡುವೆ ಹುಟ್ಟಿದರೆ ನಿಮ್ಮದು ಮೀನ ರಾಶಿ. ಇವರಿಗೆ Aquamarine ಹರಳು ಅದೃಷ್ಟವನ್ನು ತರುವುದು.

read in english

Read more about: ಜೀವನ life
English summary

Gemstones As Per Sun Signs

Wearing gemstones based on your sun sign helps strengthen the ruling and weak planets. A weak planet can imbalance your life, bring financial obstacles and spoil your health. So, you need to work on these weak planets by offering prayers and wearing specific gemstones.
X
Desktop Bottom Promotion