ಡೋಂಗಿ ಗುರೂಜಿಗಳ ಕರಾಳ ಮುಖ-ಇವರು ಜನರಿಗೆ ಟೋಪಿ ಹಾಕಿದ್ದೇ ಜಾಸ್ತಿ!

Posted By: Super Admin
Subscribe to Boldsky

ಯಾವುದೇ ವಸ್ತುವಿನ ಮಾರಾಟದಲ್ಲಿ ಉತ್ಪನ್ನವನ್ನು ಗ್ರಾಹಕರು ನೋಡಲು ಸಾಧ್ಯವಾಗುವಂತಿರುವುದು ಅತ್ಯಂತ ಅಗತ್ಯ. ಏಕೆಂದರೆ ನಾವೆಲ್ಲರೂ ಹೊರಗಿನ ಥಳುಕಿಗೆ ಹೆಚ್ಚು ಮನಸೋಲುತ್ತೇವೆ ಹಾಗೂ ಒಳಗಿನ ಹುಳುಕನ್ನು ನೋಡುವ ತಾಳ್ಮೆ ತೋರುವುದಿಲ್ಲ. ಇದೇ ಅವಗಣನೆಯನ್ನು ಕೆಲವು ವ್ಯಕ್ತಿಗಳು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಾರೆ.

ಇವರು ತಮ್ಮನ್ನು ತಾವು ದೇವಾಂಶ ಸಂಭೂತರೆಂದು ಕರೆದುಕೊಂಡು ಜನರ ವಿಶ್ವಾಸ ಮತ್ತು ತನ್ಮೂಲಕ ಹಣವನ್ನು ಗಳಿಸುತ್ತಾರೆ. ಯಾವಾಗಲಾದರೊಮ್ಮೆ ಇವರ ಮಾತುಗಳು ಅಥವಾ ಕ್ರಿಯೆಗಳು ಸಮಾಜದ ಎದುರು ಪ್ರಕಟಗೊಂಡು ನ್ಯಾಯಾಲಯದವರೆಗೂ ಸಾಗಿರುವುದಿದೆ.

ಇಂದಿನ ಲೇಖನದಲ್ಲಿ ಇಂತಹ ಕೆಲವು ಗುರೂಜಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು ಕೆಲವು ಪ್ರಸಂಗಗಳಲ್ಲಿ ದೇವರ ಪ್ರತಿನಿಧಿಗಳಾಗಿದ್ದವರನ್ನು ನ್ಯಾಯಾಲಯ ಸಾಮಾನ್ಯ ಮನುಷ್ಯರಂತೆ ಪರಿಗಣಿಸಿ ಶಿಕ್ಷೆಯನ್ನೂ ವಿಧಿಸಿದೆ. ಬನ್ನಿ, ತನ್ನ ವಿವಾದಗಳ ಮೂಲಕ ಕುಖ್ಯಾತರಾದ ಇಂತಹ ಕೆಲವು ಗುರೂಜಿಗಳ ಬಗ್ಗೆ ಅರಿಯೋಣ.... 

ಆಸಾರಾಂ ಬಾಪು

ಆಸಾರಾಂ ಬಾಪು

ಇವರಿಗೆ ವಿಶ್ವದಾದ್ಯಂತ 425ಕ್ಕೂ ಹೆಚ್ಚು ಆಶ್ರಮಗಳು ಮತ್ತು ಐವತ್ತಕ್ಕೂ ಹೆಚ್ಚು ಗುರುಕುಲಗಳಿವೆ. ಇವರನ್ನು ಹಿಂಬಾಲಿಸುವವರ ಸಂಖ್ಯೆ ಬಹಳ ದೊಡ್ಡದಿದ್ದು ಭಾರತದಷ್ಟೇ ವಿದೇಶಗಳಲ್ಲಿಯೂ ಹಿಂಬಾಲಕರಿದ್ದಾರೆ. ಆದರೆ ಕೆಲವು ಸಮಯ ಹಿಂದಷ್ಟೇ ಇವರು ತಮ್ಮ ಮಗನೊಂದಿಗೆ ಏಳುನೂರು ಎಕರೆ ಜಾಗವನ್ನು ಅಕ್ರಮವಾಗಿ ಕಬಳಿಸಿದ ಆರೋಪವನ್ನು ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ ಹೊರಿಸಿತ್ತು. ಈ ಬಗ್ಗೆ ತನಿಖೆ ನಡೆಸುತ್ತಿದ್ದಂತೆಯೇ ಈ ಗುರೂಜಿಯವರು ಹಿಂದಿನ ದಿನಗಳಲ್ಲಿ ಅಕ್ರಮವಾಗಿ ಹಣ ಸಂಪಾದಿಸಿದ ಹಲವು ಪ್ರಕರಣಗಳೆಲ್ಲಾ ಎಳೆ ಎಳೆಯಾಗಿ ಹೊರಬರತೊಡಗಿದವು.

ಆಸಾರಾಂ ಬಾಪು

ಆಸಾರಾಂ ಬಾಪು

ಅಷ್ಟೇ ಅಲ್ಲ, ಜೋಧಪುರದ ಆಶ್ರಮದಲ್ಲಿ ಹದಿನಾರು ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪವೂ ಇವರ ಮೇಲಿದೆ. ಈ ಗುರೂಜಿಯವರ ಪೂರ್ಣ ಅಕ್ರಮಗಳ ವಿವರಗಳು ಹೊರಬರಬೇಕಾಗಿರುವುದು ಇನ್ನೂ ಬಹಳಷ್ಟಿದ್ದು ಪೂರ್ಣ ವಿಚಾರಣೆ ಮುಗಿಯಲು ವರ್ಷಗಳೇ ಬೇಕಾಗಬಹುದು.

ಚಂದ್ರಸ್ವಾಮಿ

ಚಂದ್ರಸ್ವಾಮಿ

ತಮ್ಮನ್ನು ಭಗವಂತನೆಂದೇ ಬಿಂಬಿಸಿಕೊಂಡ ಚಂದ್ರಸ್ವಾಮಿಯನ್ನು ವಿಚಾರಣೆಗೊಳಪಡಿಸಿದ ಬಳಿಕ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಿರುವುದು ಕಂಡುಬಂದಿದೆ. ಹಲವು ವಿದೇಶೀ ವಿನಿಮಯ ವ್ಯವಹಾರ ನಿರ್ವಹಣೆಯ ಅಕ್ರಮಗಳ ಒಟ್ಟು ಹದಿಮೂರು ಪ್ರಕರಣಗಳ ಬಗ್ಗೆ ಈ ವ್ಯಕ್ತಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟು ಒಟ್ಟು ಒಂಭತ್ತು ಕೋಟಿ ರೂಪಾಯಿಗಳನ್ನು ದಂಡ ಕಟ್ಟಲು ನಿರ್ದೇಶಿಸಿದೆ.

ಜಯೇಂದ್ರ ಸರಸ್ವತಿ

ಜಯೇಂದ್ರ ಸರಸ್ವತಿ

ಕಾಂಚಿಪುರಂನಲ್ಲಿರುವ ವರದರಾಜೇಂದ್ರಪೆರುಮಾಳ್ ದೇವಸ್ಥಾನದಲ್ಲಿ ಮ್ಯಾನೇಜರ್ ಆಗಿದ್ದ ಸಂಕರರಾಮನ್ ಎಂಬುವರನ್ನು 2004ರ ಸೆಪ್ಟೆಂಬರ್ 3 ರಂದು ಕೊಲೆ ಮಾಡಿದ ಆರೋಪದ ಮೇಲೆ ಕಾಂಚಿ ಕ್ಷೇತ್ರದ ಸ್ವಾಮಿ ಜಯೇಂದ್ರ ಸರಸ್ವತಿ ಹಾಗೂ ಇವರ ಶಿಷ್ಯ ವಿಜಯೇಂದ್ರರನ್ನು ಬಂದಿಸಲಾಗಿತ್ತು.

ರಾಧೇ ಮಾ

ರಾಧೇ ಮಾ

ತಮ್ಮನ್ನು ತಾವು ಭಗವಂತನ ಅವತಾರವೆಂದು ಕರೆದುಕೊಂಡ ಈ ಮಹಿಳೆ ಪ್ರಥಮ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಬಳಿಕ ಕ್ಷಿಪ್ರ ಸಮಯದಲ್ಲಿ ಖ್ಯಾತಿ ಗಳಿಸಿದ್ದರು. ತಮ್ಮ ದಿಟ್ಟತನದಿಂದ ಓರ್ವ ಧಾರ್ಮಿಕ ವ್ಯಕ್ತಿ ಹೇಗಿರಬೇಕು ಎಂಬುದನ್ನು ತೋರಿಸಿದರು.

ರಾಧೇ ಮಾ

ರಾಧೇ ಮಾ

ಈ ವ್ಯಕ್ತಿತ್ವನ್ನು ನಂಬಿದ ಸಾವಿರಾರು ಜನರು ಅವರ ಭಕ್ತರಾಗಿ ಹೋದರು. ಆದರೆ ಅವರು ತಮ್ಮ ಖಾಸಗಿ ಸಮಯದಲ್ಲಿ ಹೇಗಿರುತ್ತಾರೆ ಎಂಬುದನ್ನು ತೋರಿಸಿದ ಕೆಲವು ಚಿತ್ರಗಳು ಅಂತರ್ಜಾಲದಲ್ಲಿ ಯಾವಾಗ ಪ್ರಕಟಗೊಂಡವೋ ಜನರಿಗೆ ಇವರ ಭಗವಂತನ ಅವತಾರದ ಮೇಲೆ ನಂಬಿಕೆ ಹೊರಟುಹೋಗಿದೆ. ಇವರು ಚಿಕ್ಕ ಕೆಂಪು ಉಡುಗೆ ತೊಟ್ಟು ಅಸಹ್ಯವಾಗಿ ಕಾಣುತ್ತಿರುವ ಚಿತ್ರಗಳು ಅವರ ಭಕ್ತರ ನಂಬಿಕೆ ಉಡುಗಿಸಲಿಕ್ಕೆ ಸಾಕಾಗಿದೆ.

ನಿರ್ಮಲ್ ಬಾಬಾ

ನಿರ್ಮಲ್ ಬಾಬಾ

ಓರ್ವ ವ್ಯಾಪಾರಿಯಾಗಿದ್ದ ನಿರ್ಮಲ್ ಯಾವಾಗ ತಮ್ಮನ್ನು ತಾವು ದೇವಾಂಶ ಸಂಭೂತರೆಂದು ಕರೆಯಲುತೊಡಗಿದರೋ, ಆಗ ಅವರ ವಾಣಿಜ್ಯ ವಹಿವಾಟುಗಳೂ ಗಗನಕ್ಕೇರತೊಡಗಿದವು. ಆದರೆ ಇವರ ಆಶ್ರಮದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ದೂರು ಬಂದ ಬಳಿಕ ನಡೆಸಿದ ತನಿಖೆಯಲ್ಲಿ ಭಕ್ತರಿಂದ ಅವರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಲೆಂದು ಸಂಗ್ರಹಿಸಿದ್ಧ ಅಪಾರ ಧನರಾಶಿ ಕಂಡುಬಂದಿತ್ತು. ಈಗ ಈ ಹಣ ಹೇಗೆ ಬಂತು ಎಂಬುದನ್ನು ಇವರು ವಿವರಿಸಲು ವಿಫಲರಾಗಿದ್ದು ನ್ಯಾಯಾಂಗ ವಿಚಾರಣೆ ಎದುರಿಸುತ್ತಿದ್ದಾರೆ.

For Quick Alerts
ALLOW NOTIFICATIONS
For Daily Alerts

    English summary

    Indian Gurus Who Are Famous For Controversies

    People tend to believe things that are shown to them and a human brain works in a way where we do not think of getting to the depth of the matter and beliefs. This has lead to the birth of many self-proclaimed Godmen and Godwomen. Here, in this article, we are sharing some of the worst controversies that the Indian gurujis have got involved in. These are the cases that have been reported in the media and some of the gurujis (godmen) have faced punishments as well. Check out the list of these Indian gurujis who are famous for their controversies.
    Story first published: Sunday, May 21, 2017, 7:01 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more