For Quick Alerts
ALLOW NOTIFICATIONS  
For Daily Alerts

  ಇಂದಿನ ನಿಮ್ಮ ಭವಿಷ್ಯ ಏನನ್ನು ಸಾರುವುದು ನೋಡಿ

  By Divya Pandith
  |

  ನಮ್ಮ ದಿನನಿತ್ಯದ ಏಳು ಬೀಳುಗಳು ನಾವು ಹುಟ್ಟಿದ ಘಳಿಗೆಯಿಂದಲೇ ಆರಂಭವಾಗಿರುತ್ತದೆ. ಹುಟ್ಟಿದ ಸಮಯದಲ್ಲಿ ನಮ್ಮ ನಕ್ಷತ್ರಗಳು ಹಾಗೂ ಗ್ರಹಗತಿಗಳ ಸಂಚಾರ ಯಾವ ರೀತಿಯಲ್ಲಿದೆ ಎನ್ನುವುದರ ಆಧಾರದ ಮೇಲೆಯೇ ನಮ್ಮ ಭವಿಷ್ಯ ನಿರ್ಧಾರವಾಗುತ್ತದೆ. ಕೆಲವರು ಈ ವಿಚಾರದ ಬಗ್ಗೆ ಮೂಗು ಮುರಿಯುತ್ತಾರೆಯಾದರೂ ಇದು ಸತ್ಯ. ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ನಮ್ಮ ಪಾಪ- ಪುಣ್ಯಗಳ ಆಧಾರದ ಮೇಲೆಯೇ ನಮ್ಮ ಜನ್ಮ ಹಾಗೂ ಭವಿಷ್ಯ ಅಡಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

  ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದ ವರೆಗೆ ಹಾಗೂ ಅದರ ನಂತರದ ಅವಧಿ ಸೇರಿದಂತೆ ಪ್ರತಿಯೊಂದು ಘಳಿಗೆಯೂ ನಮ್ಮ ರಾಶಿ ಚಕ್ರ ಹಾಗೂ ನಕ್ಷತ್ರ ಫಲವನ್ನು ಅವಲಂಭಿಸಿರುತ್ತದೆ. ಚಂದ್ರನು ಮೇಷ ರಾಶಿಯನ್ನು ಇಂದು ಸಂಯೋಜಿಸುತ್ತಾನೆ. ಇದರಿಂದ ರಾಶಿ ಚಕ್ರಕ್ಕೆ ಅನುಗುಣವಾಗಿ ಅನೇಕ ಬದಲಾವಣೆಯಾಗುವುದನ್ನು ಪರಿಶೀಲಿಸಬಹುದು. ಈ ಬದಲಾವಣೆಯಿಂದ ನಿಮ್ಮ ಈ ದಿನದ ಆಗು ಹೋಗುಗಳು ಹೇಗಿರುತ್ತವೆ? ಮುಂದಿನ ದಿನಗಳು ಹೇಗಿರುತ್ತವೆ? ಎನ್ನುವ ಕುತೂಹಲ ನಿಮಗಿದ್ದರೆ ನಾವಿಲ್ಲಿ ನೀಡಿರುವ ಸಂಕ್ಷಿಪ್ತವಾದ ವಿವರಣೆಯನ್ನು ನೋಡಿ....  

  ಮೇಷ

  ಮೇಷ

  ಚಂದ್ರನು ಮೇಷರಾಶಿಯಲ್ಲಿಯೇ ಸಂಯೋಗ ಹೊಂದಿದ್ದಾನೆ. ಈ ಬದಲಾವಣೆಯು ಹೆಚ್ಚು ಪ್ರಬಲವಾದ ಪರಿಣಾಮ ಬೀರುವುದು. ಈ ರಾಶಿಯವರಿಗೆ ವೈಯಕ್ತಿಕ ಯಶಸ್ಸಿಗೆ ಅವಕಾಶವನ್ನು ಕಲ್ಪಿಸಿ ಕೊಡುವುದಿಲ್ಲ ಎಂದು ಹೇಳಲಾಗುವುದಿಲ್ಲ. ಇಂದು ನೀವು ಇತರರ ಹಿತಾಸಕ್ತಿಯ ಬಗ್ಗೆ ಹೆಚ್ಚು ಗಮನವನ್ನು ನೀಡಿ. ನಿಮಗೆ ಒಳ್ಳೆಯ ಸಮಯ ಸದ್ಯದಲ್ಲಿಯೇ ಒದಗಿ ಬರಲಿದೆ. ಒಂದು ಅಳತೆಯ ಪ್ರಕಾರ ಹೇಳುವುದಾದರೆ 10ನೇ ದಿನದಲ್ಲಿ ನಿಮ್ಮ ಯಶಸ್ಸು ಇದೆ ಎಂದಾದರೆ ನೀವು ಇಂದು ಏಳನೇ ದಿನದಲ್ಲಿ ಇದ್ದೀರಿ ಎಂದು ಹೇಳಬಹುದು.

  ವೃಷಭ

  ವೃಷಭ

  ಇಂದು ನೀವು ಆಧ್ಯಾತ್ಮಿಕ ಚಿಂತನೆಗೆ ಹೆಚ್ಚು ಒತ್ತನ್ನು ನೀಡಿ. ಕೆಲವು ಸವಾಲಿನ ವಿಚಾರಗಳನ್ನು ಓದಿ ತಿಳಿದುಕೊಳ್ಳಿ. ಅಲ್ಲದೆ ವಿಶ್ವಾಸಾರ್ಹ ಮೂಲಗಳಿಂದ ಒಳ್ಳೆಯ ಸಲಹೆಗಳನ್ನು ನೀವು ಇಂದು ಹುಡುಕಬಹುದು. ಇಂದು ನೀವು ಶಾಂತಿ ಪ್ರತೀಕವಾದ ಬಣ್ಣದ ಉಡುಗೆಯನ್ನು ತೊಟ್ಟು, ವೈಯಕ್ತಿಕ ಬೆಳವಣಿಗೆಗೆ ಆಧ್ಯತೆ ನೀಡಲು ಇಂದು ಉತ್ತಮವಾದ ದಿನ.

  ಮಿಥುನ

  ಮಿಥುನ

  ಇಂದು ವೃತ್ತಿಪರ ಬೆಳವಣಿಗೆಗೆ ಉತ್ತಮವಾದ ದಿನ. ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಹಾಗೂ ಹೊಸ ಕೌಶಲ್ಯಗಳ ಕಲಿಕೆಗೆ ಅವಕಾಶವನ್ನು ಹುಡುಕಿಕೊಳ್ಳಲು ನೋಡಿ. ಮುಂದಿನ ದಿನದಲ್ಲಿ ಅದೃಷ್ಟ ಹಾಗೂ ಒಳ್ಳೆಯ ಸಮಯ ಬರುವುದು ಎನ್ನುವ ಭರವಸೆಯನ್ನು ಬೆಳೆಸಿಕೊಳ್ಳಬೇಕು. ಹೆಚ್ಚಿನ ಬದಲಾವಣೆಯು ಧನಾತ್ಮಕವಾಗಿರುತ್ತವೆ. ಆದರೆ ನಿಮ್ಮ ಪಯಣದ ಸಮಯದಲ್ಲಿ ಅಲ್ಲಲ್ಲಿ ಎದುರಾಗುವ ಹೊಸ ಸವಾಲುಗಳನ್ನು ಎದುರಿಸಬೇಕಾಗುವುದು.

  ಕರ್ಕ

  ಕರ್ಕ

  ಇಂದು ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು. ಉತ್ತಮ ಆಹಾರವನ್ನು ಸೇವಿಸಿ. ಇದು ನಿಮ್ಮ ಭವಿಷ್ಯದ ಆರೋಗ್ಯ ಉತ್ತಮವಾಗಿರುವಂತೆ ಮಾಡುತ್ತದೆ. ಸಕಾರಾತ್ಮಕ ಜೀವನ ಶೈಲಿಯ ಬದಲಾವಣೆ ಹೊಂದಲು ಇದೊಂದು ಉತ್ತಮ ಸಮಯ ಎನ್ನಬಹುದು. ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ನಿಮ್ಮ ಕೈಲಾದ ಸಹಾಯ ಮಾಡಿ. ಇದರಿಂದ ಧನಾತ್ಮಕ ಶಕ್ತಿಯು ನಿಮಗೆ ಒಳ್ಳೆಯದನ್ನು ಮಾಡುತ್ತದೆ.

  ಸಿಂಹ

  ಸಿಂಹ

  ಕುಟುಂಬದ ವಿಚಾರವಾಗಿ ಚಿಂತಿಸಲು ಇಂದು ಒಳ್ಳೆಯ ದಿನ. ಪ್ರತಿಯೊಂದು ಕುಟುಂಬವೂ ತನ್ನದೇ ಆದ ಗಾತ್ರ ಹಾಗೂ ಸಮಸ್ಯೆಯನ್ನು ಒಳಗೊಂಡಿರುತ್ತದೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ. ಕೆಲವು ಪ್ರಮುಖ ನಿರ್ಧಾರಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಪ್ರಯತ್ನಿಸಿ. ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿ. ಹತ್ತರ ಪ್ರಮಾಣದಲ್ಲಿ ನೀವು ಇಂದು ಏಳನೇ ಸ್ಥಾನದಲ್ಲಿದ್ದೀರಿ. ನಿಮ್ಮ ಸ್ವಲ್ಪ ಪ್ರಯತ್ನವು ಏಳನೇ ಸ್ಥಾನದಿಂದ 8ನೇ ಸ್ಥಾನಕ್ಕೆ ದೂಡಿದಂತಾಗುತ್ತದೆ.

  ಕನ್ಯಾ

  ಕನ್ಯಾ

  ಅಸಮಾನ್ಯ ಸ್ಥಳಗಳಲ್ಲಿ ನಿಮಗೆ ಉದ್ಯೋಗ ಅವಕಾಶ ಒದಗಿ ಬರುವ ಸಾಧ್ಯತೆಗಳಿವೆ. ಭಾಷೆಯ ವಿಚಾರವಾಗಿ ಚಿಂತಿಸಲು ನಿಮಗೆ ಇಂದು ಸೂಕ್ತವಾದ ದಿನ. ಹಳೆಯ ಮಾರ್ಗದಲ್ಲಿಯೇ ಸೃಜನಾತ್ಮಕವಾಗಿ ಕಲಿಯುವುದು ಅಥವಾ ಹೊಸ ಮಾರ್ಗದಲ್ಲಿ ಕಲಿಕೆಯನ್ನು ಮುಂದುವರಿಸಬೇಕು. ಓದಲು ಬಯಸುವ ಹೊಸ ಪುಸ್ತಕಗಳನ್ನು ಅನ್ವೇಶಿಸಿ. ನಿಮ್ಮ ಸಂಗಾತಿಗಳು ಭವಿಷ್ಯದಲ್ಲಿ ಹೆಚ್ಚು ಪ್ರಣಯಾತ್ಮಕವಾದ ಭಾವನೆ ತಳೆಯುವರು. ಹಳೆಯ ದ್ವೇಷವನ್ನು ಬಿಟ್ಟುಬಿಡುವರು.

  ತುಲಾ

  ತುಲಾ

  ಇಂದು ನಿಮಗೆ ಹೆಚ್ಚು ಸಮಯ ಸಿಗುವುದು ಎಂದು ಹೇಳಬಹುದು. ನಿಮ್ಮ ಮನಸ್ಸು ಹೇಳಬೇಕು ಎಂದುಕೊಂಡ ವಿಚಾರದ ಬಗ್ಗೆ ಆದಷ್ಟು ನಿಕಟವಾದ ವರ್ತನೆಯನ್ನು ತೋರಿ. ನಿಮ್ಮ ಕೆಲವು ಆಲೋಚನೆಗಳನ್ನು ನೀವು ವ್ಯಕ್ತ ಪಡಿಸದೆ ನಿಮ್ಮಲ್ಲೆ ಇರಿಸಿಕೊಳ್ಳುವುದು ಉತ್ತಮ. ಇಂದು ಮೂರು ದೊಡ್ಡ ಸಮಸ್ಯೆಗಳು ಎದುರಾಗಬಹುದು. ಕೆಲವು ಹೊಸ ಸಲಹೆಗಳನ್ನು ನಿಮ್ಮ ಹಳೆಯ ಸ್ನೇಹಿತರಿಂದ ಪಡೆದುಕೊಳ್ಳಿ.

  ವೃಶ್ಚಿಕ

  ವೃಶ್ಚಿಕ

  ಇಂದು ನೀವು ಹೆಚ್ಚು ಪ್ರಯಾಣ ಕೈಗೊಳ್ಳದೆ ಇರುವುದು ಸೂಕ್ತ. ನಿಮ್ಮ ಮನೆ ಹಾಗೂ ಹೃದಯದ ವಿಚಾರವಾಗಿ ಹೆಚ್ಚು ಗಮನ ನೀಡಿ. ನಿಮ್ಮ ವೈಯಕ್ತಿಕ ಬೆಳವಣಿಗೆಗೆ ಸ್ಥಳವನ್ನು ಪರಿಶೀಲಿಸಿ. ನಿಮ್ಮ ಭಾವೋದ್ರೇಕವು ನಿಮ್ಮ ಮಾರ್ಗದರ್ಶಿಯಾಗಿರಲಿ. ಹತ್ತಿರದ ವ್ಯಕ್ತಿಗಳಿಂದ ಕೆಲವೊಂದನ್ನು ಪಡೆದುಕೊಳ್ಳಲು ಹಿಂಜರಿಯದಿರಿ. ಅಲ್ಲದೆ ಅದನ್ನು ಹೊಸ ಮಾರ್ಗದಲ್ಲಿ ಬಳಸಿ. ನಿಮ್ಮ ತಂತ್ರಜ್ಞಾನ ಮತ್ತು ಸೃಜನಶೀಲ ಕೌಶಲ್ಯಕ್ಕೆ ಬಹುಮಾನ ಅಥವಾ ಪ್ರಶಂಸೆ ಪಡೆದುಕೊಳ್ಳುವಿರಿ.

  ಧನು

  ಧನು

  ಇಂದು ನಿಮಗೆ ಒಂದು ವಿಶೇಷವಾದ ದಿನ. ನಿಮ್ಮ ಹಿನ್ನಡೆಯ ಸಂಗತಿಗಳು ಭವಿಷ್ಯದ ಯೋಜನೆಯ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳಿ. ಹಣಕಾಸಿನ ವಿಚಾರದ ಬಗ್ಗೆ ಹೆಚ್ಚು ಗಮನ ನೀಡಿ. ಜೊತೆಗೆ ಆದಷ್ಟು ದೊಡ್ಡ ಮೊತ್ತದ ವಸ್ತುಗಳ ಖರೀದಿ ಮಾಡದಿರಿ. ನಿಮ್ಮ ಅದೃಷ್ಟದ ಹಾದಿಯ 5ನೇ ಮನೆಯಲ್ಲಿ ನೀವು ನಿಂತಿದ್ದೀರಿ. ನಿಮ್ಮ ಹೊಸ ಪ್ರೀತಿ ಹಾಗೂ ಹೊಸ ಅವಕಾಶಗಳಿಗೆ ನಿಮ್ಮ ಹುಡುಕಾಟವನ್ನು ವಿಸ್ತರಿಸಿ.

  ಮಕರ

  ಮಕರ

  ಇಂದು ನೀವು ನಿಮ್ಮ ಸಕಾರಾತ್ಮಕ ಮಾರ್ಗವನ್ನು ಮುಂದುವರಿಸಬೇಕು. ಹೆಚ್ಚು ಶ್ರಮದಾಯಕ ಕೆಲಸವು ಮುಂದಿನ ಭವಿಷ್ಯದಲ್ಲಿದೆ. ನಿಮ್ಮ ಹಿಂದೆ ಇರುವ ಅನೇಕ ತೊಂದರೆ ಹಾಗೂ ಹೋರಾಟಗಳ ಬಗ್ಗೆ ಸಾಂತ್ವಾನ ಹಾಗೂ ದೃಢತೆಯನ್ನು ಪಡೆದುಕೊಳ್ಳಿ. ನಿಮ್ಮ ದಾರಿಯಲ್ಲಿರುವ ದೀರ್ಘಕಾಲದ ಅಡೆ ತಡೆಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಿ.

  ಕುಂಭ

  ಕುಂಭ

  ನಿಮ್ಮ ದಾರಿಯಲ್ಲಿ ಅದೃಷ್ಟ ಜಿಗಿದು ಬರುವ ಸಾಧ್ಯತೆ ಇದೆ. ಅಜ್ಞಾತ ಮತ್ತು ಅನಿರೀಕ್ಷಿತ ಅನುಭವಗಳನ್ನು ಅನುಭವಿಸುವಿರಿ. ಭಯ ನಿಮ್ಮ ಮನೋಭಾವವನ್ನು ಹಾಳು ಮಾಡದಂತೆ ನೋಡಿಕೊಳ್ಳಿ. ಧನಾತ್ಮಕ ಚಿಂತನೆಯು ನಿಮ್ಮನ್ನು ರಕ್ಷಿಸುತ್ತದೆ. ಚಾರಿಟೇಬಲ್/ದತ್ತಿ ಸಂಸ್ಥೆಯ ಕೆಲಸವನ್ನು ಪೂರ್ಣಗೊಳಿಸಲು ಸೂಕ್ತ ಸಮಯವಾಗಿದೆ.

  ಮೀನ

  ಮೀನ

  ವೈಯಕ್ತಿಕ ಹಾಗೂ ವೃತ್ತಿ ಪರ ಜೀವನದಲ್ಲಿ ಹೊಸ ಯಜಮಾನಿಕೆಯನ್ನು ನಿರ್ವಹಿಸುವಿರಿ. ಗೊಂದಲ ಮಯವಾದ ಸಮಯದಲ್ಲಿ ಹೊಸ ಮಾರ್ಗದಶಿಯನ್ನು ಹುಡುಕಬೇಕಾಗುವುದು. ಅವಕಾಶಗಳು ಬಂದು ಹೋಗುತ್ತಲಿರುತ್ತವೆ. ಆದರೆ ನೀವು ಬೆಳೆಸಿಕೊಂಡ ಹೊಸ ಹೊಸ ನಡವಳಿಕೆಗಳು ನಿಮ್ಮನ್ನು ರಕ್ಷಿಸುತ್ತವೆ. ಸ್ನೇಹಿತರ ಸಹಾಯವನ್ನು ಎಂದಿಗೂ ತಿರಸ್ಕರಿಸದಿರಿ.

  English summary

  Here is your horoscope for October 6

  The Moon and the dwarf planet Eris are in conjunction today. The Moon is still nearly full, so Hunter's eyes will remain clear and guided. How you start your morning today will have a larger than usual impact on how the rest of the day proceeds.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more