ಈ ಊರಿನಲ್ಲಿ 'ಅಜ್ಜಿಯರೂ' ಓದಲು ಶಾಲೆಗೆ ಬರುತ್ತಿದ್ದಾರಂತೆ!

By: Arshad
Subscribe to Boldsky

ವಿದ್ಯೆ ಕಲಿಯಲು ವಯಸ್ಸಿನ ನಿರ್ಬಂಧವಿಲ್ಲ. ಯಾವುದೇ ವಯಸ್ಸಿನಲ್ಲಿ ಯಾವುದೇ ವಿಷಯವನ್ನು ಕಲಿಯಬಹುದು. ಅದರಲ್ಲೂ ಬಾಲ್ಯದಲ್ಲಿ ಶಿಕ್ಷಣವಂಚಿತ ಹಿರಿಯರಿಗೆ ವಿದ್ಯೆ ಕಲಿಸುವುದು ಪುಣ್ಯದ ಕೆಲಸ ಹಾಗೂ ಹಲವರು ಸ್ವಯಂಪ್ರೇರಣೆಯಿಂದ ಕಲಿಸುತ್ತಾರೆ ಕೂಡಾ. ಮಹಾರಾಷ್ಟ್ರ ರಾಜ್ಯದ ಠಾಣೆ ಜಿಲ್ಲೆಯಲ್ಲಿರುವ ಫಂಗಾನೆ ಎಂಬ ಹಳ್ಳಿಯಲ್ಲಿ ಹಿರಿಯರ ಶಿಕ್ಷಣಕ್ಕೆಂದೇ ಒಂದು ಶಾಲೆ ಇದೆ.

ಇದಕ್ಕೆ 'ಅಜ್ಜಿಬಾಯಿ ಶಾಲಾ' ಎಂಬ ಹೆಸರೂ ಇದೆ. ಈ ಶಾಲೆಯಲ್ಲಿ 29 ವಿದ್ಯಾರ್ಥಿನಿಯರಿದ್ದಾರೆ. ಇವರ ಸರಾಸರಿ ವಯಸ್ಸು 60 ರಿಂದ 90ರ ನಡುವೆ ಇದ್ದು ಪ್ರತಿದಿನವೂ ತಪ್ಪದೇ ಶಾಲೆಗೆ ಬಂದು ಪಾಠ ಕಲಿಯುತ್ತಿದ್ದಾರೆ. ಈ ಶಾಲೆಯ ಬಗ್ಗೆ ಕುತೂಹಲಕಾರಿ ಕಥೆಯೊಂದಿದ್ದು ವಿಶ್ವಕ್ಕೇ ಪ್ರೇರಣೆಯಾಗುವಂತ್ತಿದೆ.  ಯಶಸ್ಸಿಗೆ ಅಡ್ಡಿಪಡಿಸುವ ಸಂಗತಿಗಳನ್ನು ಮೆಟ್ಟಿ ನಿಲ್ಲುವುದು ಹೇಗೆ?

ಇವರ ಹುಮ್ಮಸ್ಸನ್ನು ಕಂಡಾಗ ವಿದ್ಯೆ ಕಲಿಯಲು ವಯಸ್ಸೆಂದೂ ಅಡ್ಡಿಯಾಗದು ಎಂಬುದು ಮನದಟ್ಟಾಗುತ್ತದೆ. ಅಲ್ಲದೇ ವಯಸ್ಸಾಗಿದೆ, ನಮಗೇಕೆ ಎಂಬ ನಿರ್ಲಿಪ್ತ ಭಾವನೆಯನ್ನು ಪ್ರಕಟಿಸುವ ಇತರ ಹಿರಿಯರಿಗೆ ವಿದ್ಯೆ ಕಲಿಯುವ ಬಗ್ಗೆ ಪ್ರೇರಣೆಯನ್ನೂ ನೀಡುತ್ತದೆ. ಬನ್ನಿ, ಈ ಅಜ್ಜಿಯರ ಬಗ್ಗೆ ಕೆಲವು ಮಾಹಿತಿಗಳನ್ನು ಈಗ ನೋಡೋಣ...   

ಇವರ ದಿನ ಬೆಳಗಾಗುವುದು ಹೀಗೆ

ಇವರ ದಿನ ಬೆಳಗಾಗುವುದು ಹೀಗೆ

ಪ್ರತಿದಿನ ಶಾಲೆಯ ಸಮಯಕ್ಕೆ ಸರಿಯಾಗಿ ಆಗಮಿಸುವ ಇವರು ಮೊದಲಿಗೆ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ. ಬಳಿಕ ಮಹಾರಾಷ್ಟ್ರದ ರಾಜ್ಯಭಾಷೆಯಾದ ಮರಾಠಿ ಭಾಷೆಯ ಅಕ್ಷರಗಳನ್ನು ಕಪ್ಪುಹಲಗೆಯ ಮೇಲೆ ಬರೆದು ಜೋರಾಗಿ ಓದಿ ಅಭ್ಯಾಸ ಮಾಡುತ್ತಾರೆ. ಇದರ ಬಳಿಕ ಉಳಿದ ತರಗತಿಗಳಲ್ಲಿ ಗಣಿತದ ಮೂಲಸೂತ್ರಗಳು, ಮಕ್ಕಳ ಗೀತೆಗಳು ಮತ್ತು ಇತರ ಪದಗಳನ್ನೂ ಕಲಿಯುತ್ತಾರೆ.

ಈ ಶಾಲೆ ಶುರುವಾಗಿ ಒಂದು ವರ್ಷವಾಯಿತಷ್ಟೇ (2016)

ಈ ಶಾಲೆ ಶುರುವಾಗಿ ಒಂದು ವರ್ಷವಾಯಿತಷ್ಟೇ (2016)

ಕಳೆದ ವರ್ಷದ ಮಹಿಳಾ ದಿನದಂದು ಈ ಶಾಲೆಯನ್ನು ವಿದ್ಯುಕ್ತವಾಗಿ ಪ್ರಾರಂಭಿಸಲಾಯಿತು. ಈ ಅಜ್ಜಿಯರಿಗೆ ಪಾಠ ಹೇಳಲೆಂದೇ ಪ್ರತಿದಿನ ಎಪ್ಪತ್ತೈದು ಕಿಮೀ ಪಯಣಿಸಿ ಬರುವ ಯೋಗೇಂದ್ರ ಬಂಗಾರ್ ರವರೇ ಈ ಶಾಲೆಯನ್ನೂ ಉದ್ಘಾಟಿಸಿದರು. ಈ ಉಪಕ್ರಮದಿಂದ ಈ ಹಳ್ಳಿಯಲ್ಲಿ ಶೇಖಡಾ ನೂರರಷ್ಟು ಸಾಕ್ಷರತೆ ಸಾಧಿಸಲು ಸಾಧ್ಯ ಎಂದು ಇವರು ನಂಬುತ್ತಾರೆ.

ಈ ಅಜ್ಜಿಯರಲ್ಲಿ ಇಂದು ಆತ್ಮವಿಶ್ವಾಸ ತುಂಬಿ ತುಳುಕುತ್ತಿದೆ

ಈ ಅಜ್ಜಿಯರಲ್ಲಿ ಇಂದು ಆತ್ಮವಿಶ್ವಾಸ ತುಂಬಿ ತುಳುಕುತ್ತಿದೆ

ಮೊದಮೊದಲು ಯಾವುದೇ ಹಿರಿಯ ವಯಸ್ಸಿನವರು ತೋರುವ ಭೀತಿಯನ್ನು ಮತ್ತು ನಮಗೆಲ್ಲಾ ಇದೇಕೆ ಎಂಬ ನಿರ್ಲಿಪ್ತತೆಯನ್ನು ಈ ಅಜ್ಜಿಯರೂ ತೋರಿದ್ದರು. ಆದರೆ ಇವರಿಗೆ ಪ್ರೇರಣೆ ನೀಡಿ ಶಾಲೆಗೆ ಬರುವಂತೆ ಮಾಡಿ ಕೆಲವು ತಿಂಗಳುಗಳು ಕಳೆಯುತ್ತಿದ್ದಂತೆಯೇ ಇವರ ಆತ್ಮವಿಶ್ವಾಸ ಹೆಚ್ಚತೊಡಗಿದೆ. ಇಂದು ಈ ಅಜ್ಜಿಯರು ತಾವು ಯಾರಿಗೇನು ಕಡಿಮೆ ಎಂಬಂತೆ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದ್ದಾರೆ. ಒಂದೇ ವರ್ಷದಲ್ಲಿ ಇವರು ಕಡತಗಳನ್ನು ಓದಿ ಅರ್ಥೈಸಿಕೊಳ್ಳುವ ಮಟ್ಟಕ್ಕೆ ಕಲಿತಿದ್ದು ಈಗ ಇವರ ಹೆಬ್ಬೆಟ್ಟು ಸಹಿ ಇತಿಹಾಸವಾಗಿದೆ.

ಈ ಶಾಲೆಯ ಹಿರಿಯ ವಿದ್ಯಾರ್ಥಿನಿಗೆ ಕೇವಲ 87 ವರ್ಷ ವಯಸ್ಸು

ಈ ಶಾಲೆಯ ಹಿರಿಯ ವಿದ್ಯಾರ್ಥಿನಿಗೆ ಕೇವಲ 87 ವರ್ಷ ವಯಸ್ಸು

ಈ ಶಾಲೆಗೆ ಇಂದಿಗೂ ಬರುತ್ತಿರುವ ಅತಿ ಹಿರಿಯ ಅಜ್ಜಿಯಾದ ರಮಾಬಾಯಿಯವರ ವಯಸ್ಸು ಕೇವಲ 87. ಇವರಿಗೆ ಕಿವಿ ಕೇಳುವುದು ಕಡಿಮೆಯಾಗಿದೆ. ಆದರೂ ಕಲಿಯುವ ಹುಮ್ಮಸ್ಸು ಕಡಿಮೆಯಾಗಿಲ್ಲ. ಅಲ್ಲದೇ ಕಲಿಯಲು ಇವರು ಚಿಕ್ಕ ಮಕ್ಕಳಂತೆಯೇ ಉತ್ಸಾಹವನ್ನೂ ತೋರುತ್ತಾರೆ. ಶಾಲೆಗೆ ಬರತೊಡಗಿದ ಬಳಿಕ ತಮ್ಮ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ಇವರು ತಿಳಿಸುತ್ತಾರೆ.

ಅಜ್ಜಿಯರಿಗೆ ಪಾಠ ಹೇಳುವ ಹೊರತಾಗಿ ಈ ಶಾಲೆ ಹೆಚ್ಚಿನದನ್ನೇ ಸಾಧಿಸಿದೆ

ಅಜ್ಜಿಯರಿಗೆ ಪಾಠ ಹೇಳುವ ಹೊರತಾಗಿ ಈ ಶಾಲೆ ಹೆಚ್ಚಿನದನ್ನೇ ಸಾಧಿಸಿದೆ

ಯೋಗೇಂದ್ರ ಬಂಗಾರ್ ರವರ ಹೇಳಿಕೆಯ ಪ್ರಕಾರ ಅಜ್ಜಿಯರಿಗೆ ಶಿಕ್ಷಣ ನೀಡುವುದು ಮಾತ್ರ ಈ ಶಾಲೆಯ ಉದ್ದೇಶವಲ್ಲ. ಬದಲಿಗೆ ಇದೊಂದು ಪ್ರೇರಣೆ ಮಾತ್ರವಾಗಿದ್ದು ಇದರ ಮೂಲಕ ಇಡಿಯ ಊರನ್ನೇ ಸಾಕ್ಷರವಾಗಿಸುವುದು, ಈ ಮೂಲಕ ಅರಿವು ಮೂಡಿಸಿ ಬಯಲು ಶೌಚಾಲಯ ವ್ಯವಸ್ಥೆಗೆ ಮುಕ್ತಾಯ ಹಾಡುವುದು ಹಾಗೂ ಪ್ರತಿ ಮನೆಯಲ್ಲಿಯೂ ತಮ್ಮದೇ ಆದ ಶೌಚಾಲಯ ಹೊಂದುವಂತೆ ಮಾಡುವುದು ಇದರ ಇತರ ಉದ್ದೇಶಗಳಾಗಿವೆ. ನಿಸರ್ಗದತ್ತ ಒಲವು ಮೂಡಿಸಲು ಶಾಲೆಯ ವಠಾರದಲ್ಲಿ ಗಿಡಮರಗಳನ್ನು ನೆಡಲಾಗಿದ್ದು ಇದಕ್ಕೆ ನೀರುಣಿಸಲು ಈ ಅಜ್ಜಿಯರು ಮುಂದಾಗುತ್ತಾರೆ.

ಅಜ್ಜಿಯರಿಗೆ ಪಾಠ ಹೇಳುವ ಹೊರತಾಗಿ ಈ ಶಾಲೆ ಹೆಚ್ಚಿನದನ್ನೇ ಸಾಧಿಸಿದೆ

ಅಜ್ಜಿಯರಿಗೆ ಪಾಠ ಹೇಳುವ ಹೊರತಾಗಿ ಈ ಶಾಲೆ ಹೆಚ್ಚಿನದನ್ನೇ ಸಾಧಿಸಿದೆ

ನಿಮ್ಮ ಊರು ಅಥವಾ ಗ್ರಾಮದಲ್ಲಿಯೂ ಶಿಕ್ಷಣವಂಚಿತ ಹಿರಿಯರಿದ್ದು ಇವರೂ ಸಾಕ್ಷರರಾಗಲು ಬಯಸುತ್ತಿದ್ದರೆ ಇವರಿಗೆ ನೆರವಾಗಲು ಏಕೆ ಮುಂದಾಗಬಾರದು? ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ.

ಚಿತ್ರ ಕೃಪೆ- Press Trust Of India (PTI)

 
English summary

Grannies Of This Town Love Going To School

Check out the interesting story behind this school of elders, which make us realise that there is no age limit or it is never too late to learn anything. Have a glimpse of these grannies who make us realise that nothing can stop a person from learning and there is no reason for doing so. Check out more on this below.
Please Wait while comments are loading...
Subscribe Newsletter