ನಶೆ ಏರಿಸುವ 'ಮದ್ಯ'ದ ಹಿಂದಿರುವ ಕರಾಳ ಮುಖ....

By: manu
Subscribe to Boldsky

"ಒಂದು ಸಲ ಪ್ರಯತ್ನಿಸು, ಚೆನ್ನಾಗಿಲ್ಲ ಎನ್ನಿಸಿದರೆ ಬಿಟ್ಟು ಬಿಡು" ಈ ಜಗತ್ತಿನಲ್ಲಿರುವ ಎಲ್ಲಾ ದೇಶಗಳ ಜನತೆಗೆ ಏಕಸಮಾನವಾಗಿ ಈ ವಾಕ್ಯ ಅನ್ವಯವಾಗುತ್ತದೆ. ಏಕೆಂದರೆ ಶೇ. 99.99ರಷ್ಟು ಜನರು ಇದೇ ವಾಕ್ಯದಿಂದ ಪ್ರಭಾವಿತರಾಗಿ ಮದ್ಯಪಾನದ ವ್ಯಸನದ ಕೂಪಕ್ಕೆ ಧುಮುಕಿದ್ದಾರೆ. ಮದ್ಯಪಾನ ಆರೋಗ್ಯಕ್ಕೆ ಮಾರಕ ಎಂದು ತಯಾರಿಸುವವರಿಂದ ಹಿಡಿದು ಕುಡಿಯುವವರಿಗೆ ಎಲ್ಲರಿಗೂ ಸ್ಪಷ್ಟವಾಗಿ, ಇತರರಿಗಿಂತಲೂ ಕೊಂಚ ಹೆಚ್ಚಾಗಿಯೇ ಗೊತ್ತು.

ಆದರೂ ಇಂದು ಮದ್ಯಪಾನ ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಲ್ಪಟ್ಟು ಈ ಪ್ರತಿಷ್ಠೆ ಆರೋಗ್ಯದ ಕಾಳಜಿಯನ್ನೂ ಮೀರಿ ವಿಜೃಂಭಿಸುತ್ತಿದೆ. ಅದರಲ್ಲೂ ಪ್ರಥಮವಾಗಿ ಮದ್ಯ ಕುಡಿದಾಗ ಮೆದುಳಿಗೆ ಹೋದ ಮದ್ಯವನ್ನು ನಿಗ್ರಹಿಸಲು ಮೆದುಳಿನಲ್ಲಿ ಉತ್ಪತ್ತಿಯಾದ THIQ ಎಂಬ ರಾಸಾಯನಿಕವೇ ಮದ್ಯವ್ಯಸನಿಗಳು ಇದರ ಗುಣಗಾನ ಮಾಡಲು ಕಾರಣ ಎಂದು ಸಂಶೋಧನೆಯೊಂದು ತಿಳಿಸುತ್ತದೆ. ಇದರಿಂದಲೇ ವ್ಯಸನಿಗಳು ಮದ್ಯದಿಂದ ಹೊರಬರಲು ನಿರಾಕರಿಸುತ್ತಾರೆ. ಮದ್ಯ ಹೊಟ್ಟೆಗಿಳಿಯಿತೋ ಲೋಕವನ್ನೇ ಮರೆತುಬಿಡುತ್ತಾರೆ...ಇದರ ಇನ್ನಷ್ಟು ಕರಾಳ ಮುಖ ಮುಂದೆ ಓದಿ....  

ನೇರವಾಗಿ ದೇಹದ ರಕ್ತದ ಮೇಲೆ ದಾಳಿ ಮಾಡುತ್ತದೆ!

ನೇರವಾಗಿ ದೇಹದ ರಕ್ತದ ಮೇಲೆ ದಾಳಿ ಮಾಡುತ್ತದೆ!

ಮದ್ಯದ ಒಂದು ಗುಣವೆಂದರೆ ಇದು ನಮ್ಮ ಜೀರ್ಣಾಂಗಗಳಲ್ಲಿ ಜೀರ್ಣವಾಗದೇ ನೇರವಾಗಿ ಕರುಳುಗಳಿಂದ ರಕ್ತಕ್ಕೆ ಹೀರಲ್ಪಡುತ್ತದೆ. ಸುಲಭವಾಗಿ ಹೇಳಬೇಕೆಂದರೆ ಒಂದು ಇಂಜೆಕ್ಷನ್ ಮೂಲಕ ನರಕ್ಕೆ ಮದ್ಯವನ್ನು ಸೇರಿಸಿದ ಹಾಗೆ. ಇದು ಮೆದುಳಿಗೆ ತಲುಪಿದ ಬಳಿಕ ಮೆದುಳಿನ ಕಾರ್ಯಕ್ಷಮತೆ ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ ಹಾಗೂ ದೇಹದ ಚಟುವಟಿಕೆಯ ಮೇಲಿನ ಹತೋಟಿಯೂ ಕಡಿಮೆಯಾಗುತ್ತದೆ. ಇದನ್ನೇ ಅಮಲು ಎನ್ನುತ್ತಾರೆ.

ನೀವೂ ನಂಬಲೇಬೇಕು, 'ಮದ್ಯ' ದಿಂದಲೂ ಸಾಕಷ್ಟು ಲಾಭಗಳಿವೆ!

ಮದ್ಯದ ಅಮಲಿನಲ್ಲಿ ಸಾವಿನ ಸಂಖ್ಯೆ ಹೆಚ್ಚು!

ಮದ್ಯದ ಅಮಲಿನಲ್ಲಿ ಸಾವಿನ ಸಂಖ್ಯೆ ಹೆಚ್ಚು!

ಇಡಿಯ ವಿಶ್ವದಲ್ಲಿ ಪ್ರತಿ ಹತ್ತು ಸೆಕೆಂಡಿಗೆ ಓರ್ವ ವ್ಯಕ್ತಿ ಮದ್ಯದ ನೇರಪರಿಣಾಮಗಳಿಂದ ಮೃತಪಡುತ್ತಾನೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ. ಅಲ್ಲದೆ ಮದ್ಯದ ಅಮಲಿನಲ್ಲಿ ಕೊಲೆಗೈಯುವ, ಕುಡಿತಕ್ಕೆ ಹಣ ಕೊಡಲಿಲ್ಲವೆಂದು ತಮ್ಮವರನ್ನು ಕೊಲ್ಲುವ, ಸೇಡು ತೀರಿಸಿಕೊಳ್ಳುವ ಸಿಟ್ಟನ್ನು ಮದ್ಯ ಕುಡಿದು ತಾರಕಕ್ಕೇರಿಸಿಕೊಂಡು ಆ ಪ್ರಭಾವದಲ್ಲಿ ಕೊಲೆ ಮಾಡುವ, ಮದ್ಯದ ಅಮಲಿನಲ್ಲಿ ನದಿಗೆ, ನೀರುತುಂಬಿದ ಚರಂಡಿ, ಗುಂಡಿಗಳಿಗೆ ಬಿದ್ದು ಮೃತಪಡುವ, ಇಂತಹ ಹತ್ತು ಹಲವಾರು ಸಂಗತಿಗಳನ್ನು ಕಲೆಹಾಕಿದರೆ ಪರೋಕ್ಷ ಕಾರಣಗಳು ಪ್ರತ್ಯಕ್ಷ ಕಾರಣಕ್ಕಿಂತ ಸಾವಿರಾರು ಪಟ್ಟು ಹೆಚ್ಚಿರುವುದು ಕಂಡುಬರುತ್ತದೆ.

ತಮ್ಮ ನೋವಲ್ಲ, ವಿವೇಕವನ್ನೇ ಕಳೆದುಕೊಳ್ಳುತ್ತಾರೆ!

ತಮ್ಮ ನೋವಲ್ಲ, ವಿವೇಕವನ್ನೇ ಕಳೆದುಕೊಳ್ಳುತ್ತಾರೆ!

ವ್ಯಸನಿಗಳು ಈ ಮದ್ಯಕ್ಕೆ ನೋವನ್ನು ಮರೆಸುವ ಶಕ್ತಿ ಇದೆ ಎಂದು ನಂಬುತ್ತಾರೆ. ಅಮಲಿನಲ್ಲಿದ್ದಾಗ ಮೆದುಳು ಯೋಚಿಸುವ ಕ್ಷಮತೆಯನ್ನು ಕಳೆದು ಕೊಂಡಿರುವುದರಿಂದ ನೋವನ್ನು ಮರೆಸುವುದು ಬಿಡಿ, ಜನರು ತಮ್ಮ ವಿವೇಕವನ್ನೇ ಕಳೆದುಕೊಂಡು ಬಿಡುತ್ತಾರೆ.

ನೀಲಿ ಕಣ್ಣಿನವರಿಗೆ ಬೇಗನೇ ನಶೆ ಏರುವುದಿಲ್ಲವಂತೆ!

ನೀಲಿ ಕಣ್ಣಿನವರಿಗೆ ಬೇಗನೇ ನಶೆ ಏರುವುದಿಲ್ಲವಂತೆ!

ಕೆಲವರು ಕೊಂಚ ಪ್ರಮಾಣದ ಮದ್ಯಕ್ಕೇ ತಮ್ಮ ಹತೋಟಿಯನ್ನು ಕಳೆದುಕೊಂಡರೂ ಕೆಲವರಿಗೆ ಹಂಡೆಯಷ್ಟು ಕುಡಿದರೂ ಅಮಲು ಏರುವುದಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ನೀಲಿ ಕಣ್ಣಿನವರಿಗೆ ಈ ಕ್ಷಮತೆ ಹೆಚ್ಚಿರುವುದು ಕಂಡುಬರುತ್ತದೆ. ನೀಲಿಗಣ್ಣಿಗೂ ಮದ್ಯದ ಅಮಲನ್ನು ತಾಳಿಕೊಳ್ಳುವ ಶಕ್ತಿಗೂ ಯಾವ ರೀತಿಯ ಸಂಬಂಧ ಎಂದು ಇದುವರೆಗೆ ಕಂಡುಹಿಡಿಯಲಾಗಿಲ್ಲ...

ನೊರೆಬರುವ ಬಿಯರ್‌ ಕೂಡ ಡೇಂಜರ್!

ನೊರೆಬರುವ ಬಿಯರ್‌ ಕೂಡ ಡೇಂಜರ್!

ನೊರೆಬರುವ ಬಿಯರ್‌ನಲ್ಲಿ ಸಹಾ ಕಡಿಮೆ ಪ್ರಮಾಣದಲ್ಲಿ ಆಲ್ಕೋಹಾಲ್ ಪ್ರಮಾಣ ಇರುತ್ತದೆ. ಪ್ರಮಾಣ ಕಡಿಮೆಯೆಂದು ರಷ್ಯಾದಲ್ಲಿ ಇದಕ್ಕೆ ತಂಪುಪಾನೀಯದ ಸ್ಥಾನ ನೀಡಲಾಗಿತ್ತು. ನೊರೆಭರಿತ ಬಿಯರ್ ಅನ್ನು ಮಕ್ಕಳಿಂದ ವೃದ್ದರವರೆಗೆ ಎಲ್ಲರೂ ಸವಿಯುತ್ತಿದ್ದರು. ಆದರೆ ಕಡಿಮೆ ಪ್ರಮಾಣದಲ್ಲಿದ್ದರೂ ವಿಷ ವಿಷವೇ, ಈ ಸತ್ಯವನ್ನು ಮನಗಂಡ ರಷ್ಯಾ ಸರ್ಕಾರ 2013ರಿಂದ ಇದನ್ನು ಮದ್ಯವೆಂದೇ ಪರಿಗಣಿಸಲಾಗುತ್ತಿದೆ. ಹಾಗಾಗಿ ಈಗ ಅಲ್ಲಿ ಮಕ್ಕಳಿಗೆ ಬಿಯರ್ ಭಾಗ್ಯವಿಲ್ಲ.

ಒಂದಿಷ್ಟು ಸಲಹೆ

ಒಂದಿಷ್ಟು ಸಲಹೆ

*ಬಿಯರ್, ಅಲ್ಕೋಹಾಲ್, ಮಾದಕ ಪಾನೀಯ, ಧೂಮಪಾನ ಇವೆಲ್ಲಾ ಆರೋಗ್ಯಕ್ಕೆ ಯಾವತ್ತಿದ್ದರೂ ಹಾನಿಕರವೇ. ಇದನ್ನು ತ್ಯಜಿಸುವತ್ತ ಮನಸ್ಸು ಮಾಡಿ.

*ಸಂಭ್ರಮಕ್ಕೂ ದುಃಖಕ್ಕೂ ಬಿಯರ್ ಕುಡಿದು ಸಂಭ್ರಮಿಸುವುದೆಲ್ಲಾ ಹೇಡಿಗಳ ಲಕ್ಷಣ. ಸ್ಥೈರ್ಯವುಳ್ಳವರಿಗೆ ಇವೆಲ್ಲಾ ಅಗತ್ಯವೇ ಇಲ್ಲ. ಸ್ಥೈರ್ಯವನ್ನು ಹೊಂದಲು ಮನಸ್ಸನ್ನು ಬಲಪಡಿಸಿ.

*ನಿಮ್ಮ ವ್ಯಸನ ನಿಮ್ಮ ಮಕ್ಕಳಿಗೂ ಅಂಟಬಹುದು, ಯೋಚಿಸಿ ಸಂಭ್ರಮದಲ್ಲಿ ಬಿಯರ್ ಕುಡಿಸುವ ಸ್ನೇಹಿತರು ಮೂತ್ರಪಿಂಡ ವಿಫಲವಾದಾಗ ಹತ್ತಿರ ಬರುತ್ತಾರೆಯೇ? ಕೊಂಚ ಯೋಚಿಸಿ

ಇಂತಹ ಸಿಂಪಲ್ ಟ್ರಿಕ್ಸ್ ಅನುಸರಿಸಿ-ಕುಡಿತದ ಚಟದಿಂದ ಹೊರಬನ್ನಿ

English summary

Facts About Alcohol That You Don't Know

However, today things have changed and health experts advice quit alcohol completely in order to live a longer and healthier lifestyle. So, what are you waiting for, take a look at these strange facts about drinking alcohol.
Subscribe Newsletter