For Quick Alerts
ALLOW NOTIFICATIONS  
For Daily Alerts

ಈ ದ್ವೀಪಗಳ ಹೆಸರು ಕೇಳಿದರೆಯೇ ಕೈಕಾಲು ನಡುಗುತ್ತದೆ!

ಕೆಲವು ದ್ವೀಪಗಳಂತೂ ಅತಿಹೆಚ್ಚು ಭೂತಪೀಡಿತವಾಗಿದ್ದು ಇಲ್ಲಿ ಭೇಟಿ ನೀಡಿದ ಎಂತಹ ಧೈರ್ಯಸ್ಥನೂ ಬೆವರಿ ಹಿಂದಿರುಗುವಂತಾಗುತ್ತದೆ. ಇದರಲ್ಲಿ ಪ್ರಮುಖವಾದುವುವು ಐಲಾ ಡಿ ಲಾಸ್ ಮ್ಯೂನೆಕಾಸ್ (ಮೆಕ್ಸಿಕೋ), ಸತ್ತವನ ದ್ವೀಪ...

By Super Admin
|

ಕೆಲವು ಪ್ರದೇಶಗಳಿಗೆ ಹೋಗದಿರಲು, ಅದರಲ್ಲೂ ರಾತ್ರಿ ಹೊತ್ತು ಅಪ್ಪಿ ತಪ್ಪಿಯೂ ಹೋಗದಿರಲು ಹಿರಿಯರು ಅಪ್ಪಣೆ ನೀಡುತ್ತಾರೆ. ಇದಕ್ಕೆ ಕಾರಣವನ್ನು ಕೆದಕಿದರೆ ಹಿಂದೆ ನಡೆದ ಯಾವುದೋ ದುರ್ಘಟನೆಯ ಪರಿಣಾಮವಾಗಿ ಅಲ್ಲಿ ಭೂತಗಳು ನೆಲೆಸಿವೆ, ಇವು ಮನುಷ್ಯರಿಗೆ ಹಾನಿಯುಂಟುಮಾಡುತ್ತವೆ ಎಂದು ನಂಬುತ್ತಾರೆ. ಆದ್ದರಿಂದ ಈ ಪ್ರದೇಶಗಳು ಭಯಗ್ರಸ್ತವಾಗಿದ್ದು ನಿರ್ಮಾನುಷವಾಗಿವೆ. ಇದು ಕೇವಲ ಭಾರತದಲ್ಲಿ ಮಾತ್ರವಲ್ಲ. ಇಡಿಯ ವಿಶ್ವದಲ್ಲಿ ಹಲವಾರು ಪ್ರದೇಶಗಳಲ್ಲಿವೆ. ಎಂತಹ ಧೈರ್ಯವಂತನ ಎದೆ ನಡುಗಿಸುವ ಭಯಂಕರ ಸ್ಥಳಗಳು!

ಕೆಲವು ದ್ವೀಪಗಳಂತೂ ಅತಿಹೆಚ್ಚು ಭೂತಪೀಡಿತವಾಗಿದ್ದು ಇಲ್ಲಿ ಭೇಟಿ ನೀಡಿದ ಎಂತಹ ಧೈರ್ಯಸ್ಥನೂ ಬೆವರಿ ಹಿಂದಿರುಗುವಂತಾಗುತ್ತದೆ. ಇದರಲ್ಲಿ ಪ್ರಮುಖವಾದುವುವು ಐಲಾ ಡಿ ಲಾಸ್ ಮ್ಯೂನೆಕಾಸ್ (ಮೆಕ್ಸಿಕೋ), ಸತ್ತವನ ದ್ವೀಪ (ವ್ಯಾಂಕೋವರ್, ಬ್ರಿಟಿಶ್ ಕೊಲಂಬಿಯಾ), ಕಾರೆಗಿಡಾರ್ ದ್ವೀಪ, ನಾರ್ಫಾಕ್ ದ್ವೀಪ ಇತ್ಯಾದಿ. ಬನ್ನಿ ಈ ಪ್ರದೇಶಗಳ ಬಗ್ಗೆ ಕೆಲವು ಮಾಹಿತಿಗಳನ್ನು ಪಡೆಯೋಣ: ಭಾರತ ಮಾತ್ರವಲ್ಲ, ವಿದೇಶಗಳಲ್ಲೂ ದೆವ್ವದ ಕಾಟವಿದೆಯಂತೆ!

ಮೆಕ್ಸಿಕೋದ ಐಲಾ ಡೆ ಲಾಸ್ ಮ್ಯೂನೆಕಾಸ್ (ಗೊಂಬೆಗಳ ದ್ವೀಪ)

ಮೆಕ್ಸಿಕೋದ ಐಲಾ ಡೆ ಲಾಸ್ ಮ್ಯೂನೆಕಾಸ್ (ಗೊಂಬೆಗಳ ದ್ವೀಪ)

ಇಡಿಯ ದ್ವೀಪದಲ್ಲಿ ಮರಗಳ, ಗಿಡಗಳ, ಒಟ್ಟಾರೆ ಎಲ್ಲೆಲ್ಲಿ ತೂಗು ಹಾಕಬಹುದೋ ಅಲ್ಲೆಲ್ಲಾ ಗೊಂಬೆಗಳನ್ನು ತೂಗು ಹಾಕಿರುವ ಈ ದ್ವೀಪ ಪ್ರಾಯಶಃ ವಿಶ್ವದಲ್ಲಿಯೇ ಅತಿ ಹೆಚ್ಚು ಭಯಹುಟ್ಟಿಸುವ ದ್ವೀಪವಾಗಿದೆ. ರಾತ್ರಿ ಹೊತ್ತು ಈ ಗೊಂಬೆಗಳಲ್ಲಿ ಆತ್ಮಸಂಚಾರವಾಗಿ ಜೀವತಳೆಯುತ್ತವೆ, ತಮ್ಮತಮ್ಮಲ್ಲಿ ಮಾತನಾಡಿಕೊಳ್ಳುತ್ತವೆ, ಕಿಲಕಿಲ ನಗುತ್ತವೆ ಎಂದು ಸ್ಥಳೀಯರು ತಿಳಿಸುತ್ತಾರೆ.

Image courtesy

ಸತ್ತವನ ದ್ವೀಪ: (ಡೆಡ್ ಮ್ಯಾನ್ಸ್ ಐಲ್ಯಾಂಡ್)

ಸತ್ತವನ ದ್ವೀಪ: (ಡೆಡ್ ಮ್ಯಾನ್ಸ್ ಐಲ್ಯಾಂಡ್)

ಬ್ರಿಟಿಷ್ ಕೊಲಂಬಿಯಾ, ಕೆನಡಾ ಪ್ರಾಂತಕ್ಕೆ ಸೇರಿದ ವ್ಯಾಂಕೋವರ್ ಬಳಿ ಇರುವ ಈ ಪುಟ್ಟ ದ್ವೀಪವನ್ನು 1888 ಮತ್ತು 1892ರ ನಡುವೆ ಸ್ಮಶಾನದ ರೂಪದಲ್ಲಿ ಬಳಸಲಾಗುತ್ತಿತ್ತು. ಆ ಸಮಯದಲ್ಲಿ ಹಬ್ಬಿದ್ದ ಸಿಡುಬು ಎಂಬ ಸಾಂಕ್ರಾಮಿಕ ರೋಗದಿಂದ ಸತ್ತ ರೋಗಿಗಳನ್ನು ಇಲ್ಲಿ ಹೂಳಲಾಗುತ್ತಿತ್ತು. ಬಳಿಕ ಈ ದ್ವೀಪ ಕೆನಡಾದ ನೌಸೇನೆ ಮತ್ತು ಪೋಲೀಸ್ ಇಲಾಖೆ ತನ್ನ ತೆಕ್ಕೆಗೆ ತೆಗೆದುಕೊಂಡು ಕವಾಯತು ನಡೆಸಲು ಪ್ರಾರಂಭಿಸಿತು ಆದರೆ ಇಲ್ಲಿ ಕವಾಯತು ನಡೆಸುವ ವೇಳೆ ಯೋಧರಿಗೆ ಕಿರಿಚುವ ಮತ್ತು ಮೂಳೆಗಳು ಒಂದಕ್ಕೊಂದು ಹೊಡೆದುಕೊಳ್ಳುವ ಶಬ್ಧ ಕೇಳಲು ತೊಡಗಿತು. ಆ ಬಳಿಕ ಸೇನೆಯನ್ನು ಹಿಂದೆ ಕರೆಸಿಕೊಳ್ಳಲಾಯಿತು. ಇಂದೂ ಇದು ನಿರ್ಜನವಾಗಿದೆ.

Image courtesy

ಓಕಿನಾವಾ ದ್ವೀಪ

ಓಕಿನಾವಾ ದ್ವೀಪ

ಜಪಾನಿನ ಸಾಗರದ ನಡುವೆ ದಕ್ಷಿಣಕ್ಕೆ ಇರುವ ಈ ದ್ವೀಪದಲ್ಲಿ ಎರಡನೇ ಮಹಾಯುದ್ಧದ ಕಡೆಯ ದಿನಗಳಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಯುದ್ಧಭೂಮಿಯ ಸುತ್ತ ಬೇಲಿಯನ್ನು ರಚಿಸಲಾಗಿತ್ತು. ಈ ಬೇಲಿಯಿಂದಾಚೆಯಿಂದ ಮಕ್ಕಳು ತಮ್ಮ ಆಟದ ಸಾಮಾನುಗಳನ್ನು ಕೇಳಿದರು ಅದಕ್ಕೆ ತಮ್ಮ ಆಟದ ಸಾಮಾನುಗಳನ್ನು ಅತ್ತ ಕಡೆ ಎಸೆದೆವು ಎಂದು ಮಕ್ಕಳು ಹೇಳಿದುದನ್ನು ಪರಾಮರ್ಶಿಸಲು ತೆರಳಿದ ಹಿರಿಯರಿಗೆ ಅಲ್ಲಿ ಯಾವುದೇ ಮಕ್ಕಳೂ, ಇವರ ಮಕ್ಕಳು ಎಸೆದಿದ್ದ ಬೊಂಬೆಗಳೂ ಕಾಣಲಿಲ್ಲ.

Image courtesy

ಅಲ್ಕಟ್ರಾಜ್ ದ್ವೀಪ

ಅಲ್ಕಟ್ರಾಜ್ ದ್ವೀಪ

ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿಯಲ್ಲಿ ರುವ ಈ ದ್ವೀಪ ಅಲ್ಲಿನ ಜೈಲಿಗಾಗಿ ಪ್ರಖ್ಯಾತವಾಗಿದೆ. ಏಕೆಂದರೆ ಈ ಜೈಲಿನ ಕಿಟಕಿ ಬಾಗಿಲುಗಳು ಧಡಾರನೆ ತೆರೆದು ಮುಚ್ಚಿಕೊಳ್ಳುತ್ತವೆ. ಆದರೆ ಅಷ್ಟು ಜೋರಾಗಿ ಮುಚ್ಚಿಕೊಳ್ಳಲು ಗಾಳಿ ಬೀಸುವುದಿಲ್ಲ. ಅಲ್ಲದೇ ಈ ಜೈಲಿಗೆ ಭೀಟಿ ನೀಡಿದವರಿಗೆ ಹೊಳೆಯುತ್ತಿರುವ ಕಣ್ಣುಗಳ ವ್ಯಕ್ತಿಯೊಬ್ಬ ಧಿಡೀರನೇ ಎದುರಾಗಿ ಕುತ್ತಿಗೆ ಹಿಸುಕಲು ಯತ್ನಿಸಿದ ಎಂದು ಹೇಳುವುದನ್ನು ಕೇಳಿದಾಗ ಬೆನ್ನುಹುರಿಯಲ್ಲಿ ಚಳಕು ಹುಟ್ಟುತ್ತದೆ.

Image courtesy

ಐಲ್ ಆಫ್ ವೈಟ್

ಐಲ್ ಆಫ್ ವೈಟ್

ಇಂಗ್ಲೆಂಡಿನ ದಕ್ಷಿಣ ತೀರದಿಂದ ಅನತಿ ದೂರದಲ್ಲಿರುವ ಈ ಸ್ಥಳವೂ ಭಯಗ್ರಸ್ತವಾಗಿದೆ. ಈ ಸ್ಥಳದಲ್ಲಿನ ಹೋಟೇಲುಗಳು, ಆಸ್ಪತ್ರೆಗಳು, ಕೋಟೆಗಳು, ದೊಡ್ಡ ದೊಡ್ಡ ಮನೆಗಳು, ಕಛೇರಿಗಳು ಎಲ್ಲೆಲ್ಲೂ ಭೂತಗಳು ತಿರುಗುತ್ತವೆ ಎಂದು ತಿಳಿಸಲಾಗಿದೆ. ದಿನದ ಯಾವುದೇ ಸಮಯದಲ್ಲಿ ಈ ಸ್ಥಳದಲ್ಲಿ ತಿರುಗಾಡುತ್ತಿದ್ದರೆ ಯಾರೋ ನಿಮ್ಮನ್ನು ಗಮನಿಸುತ್ತಿದ್ದಾರೆಂದು ಅನ್ನಿಸುತ್ತದೆ.

Image courtesy

ಕಾರಿಗೆಡಾರ್ ದ್ವೀಪ

ಕಾರಿಗೆಡಾರ್ ದ್ವೀಪ

ಫಿಲಿಪ್ಪೀನ್ಸ್ ದೇಶದ ಮನಿಲಾ ಕೊಲ್ಲಿ ಪ್ರಾರಂಭವಾಗುವಲ್ಲಿ ಒಂದು ಚಿಕ್ಕ ದ್ವೀಪವಿದೆ. ಎರಡನೆಯ ಮಹಾಯುದ್ದದ ಸಮಯದಲ್ಲಿ ಈ ದ್ವೀಪವನ್ನು ಅಮೇರಿಕಾ ವಶಪಡಿಸಿಕೊಂಡು ದ್ವೀಪವಾಸಿಗಳನ್ನು ಬಂದಿಗಳಾಗಿಸಲು ಪ್ರಾರಂಭಿಸಿತು. ಆದರೆ ತಮ್ಮ ನೆಲದಲ್ಲಿ ಪರರ ಸೆರೆಗೆ ಸಿಕ್ಕಲು ಬಯಸದ ರಾಷ್ಟ್ರಪ್ರೇಮಿಗಳು ಬಂದಿಯಾಗುವುದರ ಬದಲು ಸಾವೇ ಮೇಲು ಎಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಒಂದು ಅಂದಾಜಿನ ಪ್ರಕಾರ ಮೂರು ಸಾವಿರದಷ್ಟು ಜನರು ಒಂದು ಸುರಂಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮನಿಲಾ ಸುರಂಗ ಎಂದೇ ಪ್ರಖ್ಯಾತವಾಗಿರುವ ಈ ಸುರಂಗ ಇತಿಹಾಸದಲ್ಲಿ ಅತಿ ಹೆಚ್ಚಿನ ಸಾಮೂಹಿಕ ಆತ್ಮಹತ್ಯೆ ನಡೆದಿರುವ ಸಂಗತಿಯಾಗಿದೆ.

Image courtesy

ನಾರ್ಫಾಕ್ ದ್ವೀಪ

ನಾರ್ಫಾಕ್ ದ್ವೀಪ

ಆಸ್ಟ್ರೇಲಿಯಾದ ಪರಿಧಿಗೆ ಸೇರಿರುವ, ಫೆಸಿಫಿಕ್ ಮಹಾಸಾಗರದಲ್ಲಿರುವ ಈ ದ್ವೀಪ 'ಭೂಮಿಯ ಮೇಲಿನ ನರಕ' ಎಂದೇ ಪ್ರಖ್ಯಾತವಾಗಿದೆ. ಈ ದ್ವೀಪದಲ್ಲಿ ಸೆರೆಸಿಕ್ಕ ವೈರಿತಂಡದ ಸೈನಿಕರಲ್ಲಿ ಹಲವರನ್ನು ಹಿಂಸಿಸಿ ಕೊಲ್ಲಲಾಗಿತ್ತು. ಹೆಚ್ಚಿನವರ ಮೇಲೆ ಲೈಂಗಿಕ ಅಪರಾಧವನ್ನೂ ಎಸಗಲಾಗಿತ್ತು. ಬಳಿಕ ಅವರನ್ನು ವಿವಸ್ತ್ರರನ್ನಾಗಿಸಿ ಸಾಯಲು ಅಲ್ಲೇ ಬಿಡಲಾಗಿತ್ತು. ಬಳಿಕ ಈ ದ್ವೀಪದಲ್ಲಿ ಭೂತಗಳೇ ತಿರುಗಾಡಿಕೊಂಡಿವೆ ಎಂದು ಹೇಳಲಾಗುತ್ತದೆ.

Image courtesy


Read more about: ನಗರ ಜೀವನ urban life
English summary

Would You Visit These Scary Places?

Read on to know about the worlds scariest places on earth. ... weird scary places. Would You Visit These Scary Places? have a look
X
Desktop Bottom Promotion