Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮನೆಯ 'ಪ್ರಧಾನ ಬಾಗಿಲ' ವಾಸ್ತು ಟಿಪ್ಸ್- ಅದೃಷ್ಟವೇ ಬದಲಾಗಬಹುದು!
ಮನೆಯ ಪ್ರಮುಖ ಅಂಗವೆಂದರೆ ಮನೆಯ ಪ್ರಧಾನ ಬಾಗಿಲು. ಈ ಬಾಗಿಲು ಯಾವ ದಿಕ್ಕಿನಲ್ಲಿದೆ ಎಂಬುದು ವಾಸ್ತುವಿನ ಪ್ರಮುಖ ಅಂಶವಾಗಿದ್ದು ಮನೆಯ ಸುಖ, ನೆಮ್ಮದಿ, ಸಂತೃಪ್ತಿಗಳೆಲ್ಲವೂ ಇದನ್ನು ಅವಲಂಬಿಸಿದೆ. ಧನ ಸಂಪತ್ತು ಸದಾ ತುಂಬಿರಬೇಕೆಂದ್ರೆ, ಈ ಸಿಂಪಲ್ ಟಿಪ್ಸ್ ಅನುಸರಿಸಿ
ಅಲ್ಲದೆ ಬರೆಯ ಬರೆಯ ಬಾಗಿಲನ್ನು ಮಾತ್ರ ವಾಸ್ತುವಿನ ಪ್ರಕಾರದ ದಿಕ್ಕಿನಲ್ಲಿಟ್ಟರೆ ಸಾಲದು, ಬದಲಿಗೆ ಕೆಲವು ವಸ್ತುಗಳನ್ನು ಈ ಬಾಗಿಲ ಬಳಿ ಇಡುವ ಮೂಲಕವೂ ಮನೆಯಲ್ಲಿ ನೆಮ್ಮದಿ ನೆಲೆಸಲು, ಅದೃಷ್ಟ ಹುಡುಕಿಕೊಂಡು ಬರಲು ನೆರವಾಗುತ್ತದೆ..... ಮುಂದೆ ಓದಿ...

ಗಾಜಿನ ಪಾತ್ರೆ
ಒಂದು ದೊಡ್ಡ ಗಾಜಿನ ಜಾಡಿ ಅಥವಾ ಗಾಜಿನ ಲೋಟದಲ್ಲಿ ನೀರು ತುಂಬಿ ಇದರಲ್ಲಿ ನಿತ್ಯವೂ ತಾಜಾ ಹೂವುಗಳನ್ನಿರಿಸಿ. ಇದು ಮನೆಯ ಸಮೃದ್ಧಿಗೆ ಅಗತ್ಯವಾಗಿದೆ. ಪ್ರತಿದಿನ ಹಳೆಯ ಹೂವುಗಳನ್ನು ನಿವಾರಿಸಿ ತಾಜಾ ಹೂವುಗಳನ್ನು ಇರಿಸಿ.

ಮಾಲೆ
ಅರಳಿ, ಮಾವು ಅಥವಾ ಅಶೋಕ ವೃಕ್ಷದ ಎಲೆಗಳನ್ನು ಒಂದು ಗಟ್ಟಿಯಾದ ದಾರಕ್ಕೆ ಕಲಾತ್ಮಕವಾಗಿ ಪೋಣಿಸಿ ಮಾಲೆ ತಯಾರಿಸಿ. ಈ ಮಾಲೆಯನ್ನು ಪ್ರಧಾನ ಭಾಗಿಲಿನ ಮೇಲೆ, ಮನೆಯ ಹೊರಭಾಗದಲ್ಲಿ ನೇತು ಹಾಕಿ.

ಮಾಲೆ
ಇದರಿಂದ ಮನೆಯೊಳಗೆ ಪ್ರವೇಶ ಪಡೆಯಲೆತ್ನಿಸುವ ಋಣಾತ್ಮಕ ಶಕ್ತಿಯನ್ನು ತಡೆಯಲು ಸಾಧ್ಯ. ಈ ಎಲೆಗಳು ಒಣಗಿದ ಬಳಿಕ ಮತ್ತೊಮ್ಮೆ ತಾಜಾ ಎಲೆಗಳಿಂದ ಮಾಲೆಯನ್ನು ಬದಲಿಸಿ.

ಲಕ್ಷ್ಮಿ ದೇವರ ಪಟ
ಮನೆಯಲ್ಲಿ ಸಂಪತ್ತು ಸದಾ ತುಂಬಿರಲು ಲಕ್ಷ್ಮಿದೇವರ ಪಟ ಅಥವಾ ಮುದ್ರಿತ ಗೋಡೆಯ ಟೈಲ್ಸ್ ಅನ್ನು ಮನೆಯ ಪ್ರಧಾನ ಬಾಗಿಲಿಗೆ ಎದುರಾಗಿ, ಅಂದರೆ ಮನೆಯ ಒಳಗೆ ಅಡಿಯಿಡುತ್ತಿದ್ದಂತೆಯೇ ಕಾಣುವಂತೆ ಇರಿಸಿ. ಆದರೆ ಇದಕ್ಕೆ ಎದುರಾಗಿ ಪಾದರಕ್ಷೆಗಳು ಅಥವಾ ಪಾದರಕ್ಷೆಗಳ ಕಪಾಟು ಇರಿಸಕೂಡದು.

ಲಕ್ಷ್ಮಿಯ ಪಾದಗಳು
ಒಂದು ಜೊತೆ ಲಕ್ಷ್ಮೀಪಾದಗಳನ್ನು ಮನೆಯ ಪ್ರಧಾನ ಬಾಗಿಲಿನ ಬಳಿ ಇರಿಸಿ. ಇವುಗಳು ಮನೆಯೊಳಕ್ಕೆ ಹೋಗುವ ದಿಕ್ಕಿನಲ್ಲಿರಬೇಕು. ಇದರಿಂದ ಮನೆಯಲ್ಲಿ ಸಮೃದ್ಧಿ ಆಗಮಿಸುತ್ತದೆ.

ಶುಭ-ಲಾಭ ಪಟ
ಮನೆಯ ಪ್ರಧಾನ ಬಾಗಿಲಿನ ಮೇಲೆ ಶುಭ ಲಾಭ ಎಂದು ಬರೆಸಿ ಅಥವಾ ಹೀಗೆ ಬರೆದ ಪಟವನ್ನು ಬಾಗಿಲ ಮೇಲೆ ಅಳವಡಿಸಿ. ಇದರಿಂದ ಮನೆಯಲ್ಲಿ ಅನಾರೋಗ್ಯ ನುಸುಳಲು ಅಸಾಧ್ಯವಾಗುತ್ತದೆ.

ಸ್ವಸ್ತಿಕ್ ಚಿಹ್ನೆ
ಮನೆಯ ಪ್ರಧಾನ ಬಾಗಿಲಿನ ಎದುರು ಸ್ವಸ್ತಿಕ್ ಚಿಹ್ನೆಯೊಂದನ್ನು ಬಿಡಿಸಿ. ಇದರಿಂದ ಮನೆಯಲ್ಲಿ ಅದೃಷ್ಟ ಮತ್ತು ಸಮೃದ್ಧಿ ನೆಲೆಸುತ್ತದೆ. ಈಗ ಮನೆಯ ಪ್ರಧಾನ ಬಾಗಿಲನ್ನು ನಿರ್ಮಿಸುವ ಮೊದಲು ಗಮನಿಸಬೇಕಾದ ವಿಷಯಗಳನ್ನು ನೋಡೋಣ:

ದೊಡ್ಡ ಗಾತ್ರ
ನಿಮ್ಮ ಮನೆಯ ಪ್ರಧಾನ ಬಾಗಿಲು ನಿಮ್ಮ ಮನೆಯ ಎಲ್ಲಾ ಬಾಗಿಲುಗಳಿಗಿಂತ ದೊಡ್ಡದಾಗಿರಬೇಕು. ಬೇರೆಲ್ಲಾ ಬಾಗಿಲುಗಳು ಕೊಂಚವಾದರೂ ಇದಕ್ಕಿಂತ ಚಿಕ್ಕದಾಗಿರುವಂತೆ ನೋಡಿಕೊಳ್ಳಿ.

ಎರಡು ಬಾಗಿಲ ದ್ವಾರ
ಪ್ರಧಾನ ಬಾಗಿಲು ಎರಡು ಹಲಗೆಗಳನ್ನು ಹೊಂದಿರಬೇಕು. ಇದು ಮನೆಯ ಒಳಭಾಗಕ್ಕೆ ತೆರೆಯುವಂತೆ, ಹಿಡಿಕೆ ಇರುವ ಭಾಗ ಮೇಲಿನಿಂದ ನೋಡಿದರೆ ಪ್ರದಕ್ಷಿಣವಾಗಿ ತೆರೆಯುವಂತಿರಬೇಕು. ಈ ಬಾಗಿಲು ಮನೆಗೆ ಶುಭ ತರುತ್ತದೆ.

ಗುಣಮಟ್ಟ
ಮನೆಯ ಇತರ ಬಾಗಿಲುಗಳನ್ನು ಯಾವುದೇ ಮರ ಅಥವಾ ಇತರ ವಸ್ತುಗಳನ್ನು ಬಳಸಿ ತಯಾರಿಸಿದರೂ ಪ್ರಧಾನ ಬಾಗಿಲಿಗೆ ಮಾತ್ರ ಅತ್ಯುತ್ತಮವದ ಕಚ್ಚಾವಸ್ತುಗಳನ್ನೇ ಉಪಯೋಗಿಸಬೇಕು. ಕಡಿಮೆ ಗುಣಮಟ್ಟದ ಮರ ಮನೆಯ ವಾಸ್ತುವಿಗೆ ಸರಿಯಾಗಲಾರದು.

ಶಬ್ದರಹಿತವಾಗಿರಬೇಕು
ಬಾಗಿಲಿಗೆ ಬಳಸುವ ಬಿಜಾಗರೆಗಳು ಅತ್ಯುತ್ತಮ ಗುಣಮಟ್ಟದ್ದಾಗಿದ್ದು ಬಾಗಿಲನ್ನು ತೆರೆದಾಗ ಸದ್ದು ಮಾಡಕೂಡದು.

ಶಬ್ದರಹಿತವಾಗಿರಬೇಕು
ಒಂದು ವೇಳೆ ಚಿಕ್ಕ ಸದ್ದು ಉಂಟಾದರೂ ಹರಳೆಣ್ಣೆ ಅಥವಾ ಬೇರಾವುದಾದರೂ ಜಾರುಕ ಬಳಸಿ ಸದ್ದು ಅಡಗಿಸಿ. ಈ ಸದ್ದು ಮನೆಯಲ್ಲಿ ಋಣಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ.

ಬಾಗಿಲುಗಳ ಸಂಖ್ಯೆ
ನಿಮ್ಮ ಮನೆಯ ಒಟ್ಟು ಬಾಗಿಲುಗಳ ಸಂಖ್ಯೆ ಸಮಸಂಖ್ಯೆಯಲ್ಲಿರಬೇಕು. (2,4,6 ಇತ್ಯಾದಿ) ಅಲ್ಲದೇ ಎರಡಂಕೆಯ ಸಂಖ್ಯೆಯಾದರೆ ಇದರ ಎರಡನೆಯ ಅಂಕೆ ಸೊನ್ನೆಯಾಗಬಾರದು (10,20 ಇತ್ಯಾದಿ)



Click it and Unblock the Notifications
