For Quick Alerts
ALLOW NOTIFICATIONS  
For Daily Alerts

ಭಾರತದ ದುಬಾರಿ ನಗರಗಳು, ಶ್ರೀಮಂತರಿಗೆ ಮಾತ್ರ ಮೀಸಲು!

By Super
|

ಗ್ರಾಮರಾಜ್ಯದ ಕನಸು ಗಾಂಧೀಜಿಯವರೊಂದಿಗೇ ಕೊನೆಗೊಂಡಿದೆ. ನೆಹರೂರವರ industrialize or perish ಎಂಬ ಘೋಷಣೆಯ ಕಾರಣ ಕೈಗಾರಿಕೆಗಳೆಲ್ಲಾ ನಗರಗಳಲ್ಲಿಯೇ ಮುಂದುವರೆದು ನಗರಗಳು ಅತಿ ಹೆಚ್ಚಿನ ಅಭಿವೃದ್ಧಿ ಪಡೆದು ಗ್ರಾಮಗಳೆಲ್ಲಾ ಖಾಲಿಯಾಗಿವೆ. ಯಾವಾಗ ಗ್ರಾಮದ ಜನರೆಲ್ಲಾ ನಗರವನ್ನು ತುಂಬಲು ಪ್ರಾರಂಭಿಸಿದರೋ ಆಗಲೇ ನಗರಗಳಲ್ಲಿ ಖರ್ಚುವೆಚ್ಚಗಳೂ ಹೆಚ್ಚತೊಡಗಿದವು. ಅತಿ ನಿಬಿಡತೆಯಿಂದ ಹೆಚ್ಚಿನ ಹಣ ಓಡಾಡುತ್ತಾ ಶ್ರೀಮಂತರಾಗಿದ್ದವರು ಅತಿ ಶ್ರೀಮಂತರಾಗಿ, ಮಧ್ಯಮವರ್ಗದ ಜನತೆಯ ಬಳಿಯೂ ಸಾಕಷ್ಟು ಹಣ ಸಂಗ್ರಹವಾಗತೊಡಗಿತು. ಇವರನ್ನು ನೋಡಿ ಇನ್ನಷ್ಟು ಜನರು ನಗರಗಳತ್ತ ಧಾವಿಸುತ್ತಲೇ ಇದ್ದಾರೆ. ವಿಶ್ವದಲ್ಲಿಯೇ ದುಬಾರಿಯಾದ 5 ನಗರಗಳು

ಶ್ರೀಮಂತರು ಅತಿ ಶ್ರೀಮಂತರಾಗಿ, ಅತಿ ಶ್ರೀಮಂತರು ಕೋಟ್ಯಧಿಪತಿಗಳಾಗುತ್ತಿದ್ದಾರೆ. ಪರಿಣಾಮವಾಗಿ ಕೇವಲ ವಿದೇಶೀ ಚಲನಚಿತ್ರಗಳಲ್ಲಿ ಕಾಣುತ್ತಿದ್ದ ಐಶಾರಾಮಿ ಕಾರುಗಳು ಮತ್ತು ವಿಲಾಸಿ ವಸ್ತುಗಳೂ ಭಾರತಕ್ಕೆ ಲಗ್ಗೆಯಿಟ್ಟಿವೆ. ಇವರನ್ನು ಆಕರ್ಷಿಸಲು ನಗರಗಳು ಹತ್ತು ಹಲವು ಸೌಲಭ್ಯಗಳನ್ನು ಒದಗಿಸುತ್ತವೆ.

ಆದರೆ ಸಾಮಾನ್ಯ ಜನರಿಗಾಗಿ ಈ ದುಬಾರಿ ನಗರಗಳು ಹೆಚ್ಚಿನ ಸೌಲಭ್ಯವನ್ನೇನೂ ನೀಡುವುದಿಲ್ಲ. ಇರುವ ಸೌಲಭ್ಯಗಳೂ ಅತಿ ದುಬಾರಿಯಾಗಿದ್ದು ಇವನ್ನು ಹೊಂದಲು ಕೇವಲ ಶ್ರೀಮಂತವರ್ಗಕ್ಕೆ ಮಾತ್ರ ಸಾಧ್ಯ. ಅಂದರೆ ಒಂದು ಸುಖಮಯ ಜೀವನ ನಡೆಸಲು ದುಬಾರಿ ಎನಿಸುವ ಕೆಲವು ನಗರಗಳನ್ನು ಕೆಳಗಿನ ಸ್ಲೈಡ್‌ ಶೋ ಮೂಲಕ ನೀಡಲಾಗಿದೆ. ಈ ನಗರಗಳು ಅಂತಾರಾಷ್ಟ್ರೀಯ ಗುಣಮಟ್ಟದ ಜೀವನವನ್ನು ನಡೆಸಲು ಉತ್ತಮ ಎಂದು ಪರಿಗಣಿಸಲ್ಪಡುತ್ತವೆ.

ನವದೆಹಲಿ

ನವದೆಹಲಿ

ಭಾರತದ ಅತಿ ಹಚ್ಚಿನ ಕೋಟ್ಯಾಧಿಪತಿಗಳಿರುವ ಈ ನಗರ ಅತಿ ಹೆಚ್ಚಿನ ಲಕ್ಸುರಿ ಕಾರುಗಳ ತವರೂ ಹೌದು. ಈ ವ್ಯಕ್ತಿಗಳು ಹೊಂದಿರುವ ಮೊಬೈಲು ಫೋನುಗಳೂ ಅತ್ಯಂತ ದುಬಾರಿಯಾಗಿದೆ.

ನವದೆಹಲಿ

ನವದೆಹಲಿ

ಈ ನಗರ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು ಕಟ್ಟಡ ನಿರ್ಮಾಣ, ಟೆಲಿಕಾಂ, ರಾಜಕೀಯ, ರಿಯಲ್ ಎಸ್ಟೇಟ್ ಮತ್ತು ಆರೋಗ್ಯ ವಿಭಾಗಗಳು ದೇಶದಲ್ಲಿಯೇ ಅತಿಹೆಚ್ಚಿನ ವಹಿವಾಟು ನಡೆಸುತ್ತಿವೆ. ಅಲ್ಲದೇ ಈ ನಗರದಲ್ಲಿ ಅತಿ ಹೆಚ್ಚಿನ ಚಿಲ್ಲರೆ ಮಳಿಗೆಗಳೂ ದಾಖಲೆ ಸಂಖ್ಯೆಯಲ್ಲಿವೆ.

ಮುಂಬೈ

ಮುಂಬೈ

ಭಾರತದ ವಾಣಿಜ್ಯ ನಗರಿ ಎಂದೇ ಪ್ರಖ್ಯಾತವಾದ ಮುಂಬೈ ಮೂರು ಕಡೆಯಿಂದ ಸಮುದ್ರದಿಂದ ಸುತ್ತುವರೆದಿರುವ ಕಾರಣ ಅತಿ ಹೆಚ್ಚಿನ ಜನಸಾಂದ್ರತೆ ಹೊಂದಿರುವ ನಗರವಾಗಿದೆ. ಇದು ಭಾರತದ ಎರಡನೆಯ ಅತಿ ದುಬಾರಿ ನಗರವಾಗಿದ್ದು ಒಟ್ಟು ದೇಶೀಯ ಉತ್ಪನ್ನ (Gross domestic product) ಅತಿ ಹೆಚ್ಚಿನದ್ದಾಗಿದೆ. ಇಲ್ಲಿ ರಿಯಲ್ ಎಸ್ಟೇಟ್ ಹಾಗೂ ರಫ್ತು ವಹಿವಾಟು ಅತಿ ಹೆಚ್ಚನ ಪ್ರಮಾಣದಲ್ಲಿದೆ.

ಮುಂಬೈ

ಮುಂಬೈ

ಅಲ್ಲದೆ ವಾಣಿಜ್ಯ ವಹಿವಾಟು ಮತ್ತು ಇತರ ವ್ಯಾಪಾರಕ್ಕೆ ಮುಂಬೈಗಿಂತ ಉತ್ತಮ ನಗರ ಇನ್ನೊಂದಿಲ್ಲ. ಸಿನೇಮಾ ಹಾಗೂ ವೃತ್ತಿಶಿಕ್ಷಣಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ಇರುವ ಕಾರಣ ಇಲ್ಲಿ ಆಗಮಿಸುವ ಅಪಾರ ಪ್ರತಿಭೆಯ ಕಾರಣ ಮುಂಬೈ ಅವಕಾಶದ ಸ್ವರ್ಗ ಎಂದೇ ಪ್ರಸಿದ್ಧವಾಗಿದೆ.

ಬೆಂಗಳೂರು

ಬೆಂಗಳೂರು

ಎಪ್ಪತ್ತರ ದಶಕದಲ್ಲಿ ಪಿಂಚಣಿದಾರರ ಸ್ವರ್ಗ ಎನ್ನಿಸಿಕೊಂಡಿದ್ದ ಉದ್ಯಾನ ನಗರಿ ಬೆಂಗಳೂರು ಈಗ ಭಾರತದ ಮೂರನೆಯ ಅತಿ ದುಬಾರಿ ನಗರವಾಗಿ ಮಾರ್ಪಟ್ಟಿದೆ. ಇದಕ್ಕೆ ಮುಖ್ಯ ಕಾರಣ ಐಟಿ ಕಂಪನಿಗಳ ಕಾರಣ ಈ ನಗರ ಪಡೆದ ಅಗಾಧ ಬೆಳವಣಿಗೆ. ಇಂದು ಲಭ್ಯವಿರುವ ಸೌಲಭ್ಯ, ತಂತ್ರಜ್ಞಾನ ಮತ್ತು ಸಾರಿಗೆ ವ್ಯವಸ್ಥೆ ಹೂಡಿಕೆದಾರರನ್ನು ಸೆಳೆಯಲು ಸಮರ್ಥವಾಗಿದೆ. ಅಲ್ಲದೇ ಇಲ್ಲಿಗೆ ಬಂದ ಉತ್ತರ ಭಾರತೀಯರು ಇಲ್ಲಿನ ಹವಾಗುಣವನ್ನು ಮೆಚ್ಚಿ ಇಲ್ಲಿಯೇ ನೆಲೆಸಲು ಒಲವು ತೋರುವ ಕಾರಣ ಇಲ್ಲಿನ ಎಲ್ಲಾ ಬೆಲೆಗಳು ಗಗನಕ್ಕೇರಿದ್ದು ಇದೇ ರೀತಿ ಮುಂದುವರೆದರೆ ಕೆಲವೇ ವರ್ಷಗಳಲ್ಲಿ ಮೊದಲನೆಯ ಸ್ಥಾನ ಪಡೆಯುವ ಎಲ್ಲಾ ಸೂಚನೆಗಳನ್ನು ತೋರುತ್ತಿದೆ.

ಚೆನ್ನೈ

ಚೆನ್ನೈ

ತಮಿಳುನಾಡಿನ ರಾಜಧಾನಿ ಚೆನ್ನೈ (ಹಿಂದಿನ ಮದರಾಸು) ಭಾರತದ ನಾಲ್ಕನೆಯ ದುಬಾರಿ ನಗರವಾಗಿದೆ. ಈ ನಗರದಲ್ಲಿ ಐಟಿ, ವಾಹನ, ಕಂಪ್ಯೂಟರ್ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಅತಿ ಹೆಚ್ಚಿನ ಸೌಲಭ್ಯ ಮತ್ತು ಪೂರಕ ನೀತಿಗಳನ್ನು ಹೊಂದಿದೆ.

ಚೆನ್ನೈ

ಚೆನ್ನೈ

ವಿಶ್ವದ ಅತ್ಯುತ್ತಮ ಇಪ್ಪತ್ತನಾಲ್ಕು ಸಂಸ್ಥೆಗಳು ಒಂದು ಬಿಲಿಯನ್ ಡಾಲರುಗಳಿಗೂ ಮಿಗಿಲಾದ ಹೂಡಿಕೆಯನ್ನು ಮಾಡಿರುವುದೇ ಈ ನಗರದ ಬೆಳವಣಿಗೆಗೆ ಸಾಕ್ಷಿಯಾಗಿದೆ. ಚೆನ್ನೈ ನಗರದ ಬೆಳವಣಿಗೆಗೆ ಇಲ್ಲಿನ ಕೈಗಾರಿಕೆಗಳೂ ಪ್ರಮುಖವಾಗಿವೆ.

ಹೈದರಾಬಾದ್

ಹೈದರಾಬಾದ್

ಪ್ರಸ್ತುತ ಐದನೆಯ ಸ್ಥಾನದಲ್ಲಿರುವ ಹೈದರಾಬಾದ್ ಮುತ್ತುಗಳ ನಗರವೆಂದೇ ಪ್ರಖ್ಯಾತವಾಗಿತ್ತು. ಆದರೆ ಇಂದು ಇದು ಐಟಿ ಸಂಸ್ಥೆಗಳ ಬೀಡಾಗಿದ್ದು ಇದಕ್ಕೆ ಚಂದ್ರಬಾಬು ನಾಯ್ಡುರವರ ಯೋಗದಾನ ಪ್ರಮುಖವೆಂದೇ ಹೇಳಬಹುದು.

ಹೈದರಾಬಾದ್

ಹೈದರಾಬಾದ್

ಇದರ ಹೊರತಾಗಿ ವಿಶ್ವದ ಪ್ರಮುಖ ಔಷಧ ಸಾಮಾಗ್ರಿ (pharmaceuticals), ಬಯೋಟೆಕ್ನಾಲಜಿ ಕೈಗಾರಿಕೆಗಳಿಗೂ ಉತ್ತಮ ಸೌಲಭ್ಯ ಹಾಗೂ ಪೂರಕ ನೀತಿಗಳಿದ್ದು ಹೂಡಿಕೆದಾರರಿಗೆ ಅನುಕೂಲಕರವಾಗಿವೆ. ಅಲ್ಲದೇ ಹೈದರಾಬಾದ್ ವಿಮಾನನಿಲ್ದಾಣ ಭಾರತದ ಅತ್ಯುತ್ತಮ ವಿಮಾನ ನಿಲ್ದಾಣಗಳಲ್ಲಿ ಒಂದು ಎಂದು ಪರಿಗಣಿಸಲ್ಪಡುತ್ತದೆ.

ಪುಣೆ

ಪುಣೆ

ಮುಂಬೈಗೆ ಸಮೀಪವಿರುವ ಪುಣೆಯೂ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಮುಂಬೈ ದುಬಾರಿ ಎಂಬ ಕಾರಣಕ್ಕೆ ಆಯ್ಕೆಯ ಮುಂದಿನ ಪಟ್ಟಣವಾಗಿದ್ದ ಪುಣೆ ಇದೇ ಕಾರಣಕ್ಕೆ ಅಪಾರ ಪ್ರಗತಿಯನ್ನು ಪಡೆದಿದೆ.

ಪುಣೆ

ಪುಣೆ

ಪರಿಣಾಮವಾಗಿ ಇಂದು ಇಲ್ಲಿನ ಬೆಲೆಗಳು ಮುಂಬೈಯಷ್ಟೇ ದುಬಾರಿಯಾಗಿವೆ. ರಿಯಲ್ ಎಸ್ಟೇಟ್ ಹಾಗೂ ಕೈಗಾರಿಕೆಗಳು, ಶಿಕ್ಷಣ ಕ್ಷೇತ್ರಗಳು ಪುಣೆಯನ್ನು ಒಂದು ದುಬಾರಿ ನಗರವಾಗಿಸಿದೆ.

English summary

Top Most Expensive Cities to Live in India

ndian economy is on the increase at a quick pace. This growth has attracted potential investors who have risen to middle class and upper classes amassing large volumes of financial wealth. India is home to very powerful individuals who posses lucrative vehicles and live an expensive lifestyle. In major cities hotels and building apartments have been built to facilitate the lifestyle of these individuals
X
Desktop Bottom Promotion