For Quick Alerts
ALLOW NOTIFICATIONS  
For Daily Alerts

ಜಪಾನೀಯರ ಶಿಸ್ತು, ಪ್ರಾಮಾಣಿಕತೆಗೆ ತಲೆಬಾಗಲೇಬೇಕು!

By Manu
|

ಎಲೆಕ್ಟಾನಿಕ್ಸ್ ಮತ್ತು ಕಾರುಗಳ ವಿಷಯ ಬಂದಾಗ ಇದರೊಂದಿಗೆ ಜಪಾನ್ ಹೆಸರೂ ಅನಿವಾರ್ಯವಾಗಿ ಬಂದೇ ಬರುತ್ತದೆ. ಏಕೆಂದರೆ ತಂತ್ರಜ್ಞಾನದಲ್ಲಿ ಜಪಾನೀಯರು ಸಾಧಿಸಿದ ಸಾಧನೆ ಮತ್ತು ಇದರ ಪರಿಣಾಮವಾಗಿ ಜಪಾನ್ ನಿರ್ಮಿತ ಉತ್ಪನ್ನಗಳ ಉತ್ಕೃಷ್ಟತೆಯನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಜಪಾನೀಯರು ಕೂಡ 'ಗೊಂಬೆ ಹಬ್ಬ' ಆಚರಿಸುತ್ತಾರಂತೆ!

ಆದರೆ ಈ ಸಾಧನೆಯನ್ನು ಸಾಧಿಸುವುದು ಜಪಾನೀಯರಿಗೆ ಅಷ್ಟೊಂದು ಸುಲಭವಲ್ಲ. ಏಕೆಂದರೆ ಹೇಳಿ ಕೇಳಿ ಜಪಾನ್ ಮತ್ತು ಸುತ್ತಮುತ್ತಲ ದ್ವೀಪ ಸಮೂಹವಿರುವುದು ಸಮುದ್ರತಳದಲ್ಲಿ ಸದಾ ಭೂಮಿ ಅಲುಗುವ, ತನ್ಮೂಲಕ ಯಾವುದೇ ಕ್ಷಣದಲ್ಲಿ ಭೂಕಂಪ ಸಂಭವಿಸುವ ಪ್ರದೇಶ. ಭೂಕಂಪದ ಪರಿಣಾಮವಾಗಿ ತ್ಸುನಾಮಿ ಅಲೆಗಳು ಅಪ್ಪಳಿಸುವುದು, ಮನೆ ನಗರಗಳು ಕುಸಿದು ಬೀಳುವುದು, ರಸ್ತೆಗಳು ಬಿರುಕು ಬೀಡುವುದು ಮೊದಲಾದವುಗಳೆಲ್ಲಾ ಅಲ್ಲಿ ಸಾಮಾನ್ಯ. ತಪ್ಪದೇ ಓದಿ, ಜಪಾನ್ ತರುಣಿಯರ ಸೌಂದರ್ಯದ ಗುಟ್ಟು....

ಆದರೆ ಈ ನೈಸರ್ಗಿಕ ಪ್ರಕೋಪಗಳನ್ನೆಲ್ಲಾ ಅವರು ಸ್ವಾಭಾವಿಕ ಎಂಬಂತೆ ಸ್ವೀಕರಿಸಿ ಕೆಲವೇ ದಿನಗಳಲ್ಲಿ ಹಿಂದಿನಂತೆ ಮಾಡಿ ಬಿಡುತ್ತಾರೆ. ಮಹಾಯುದ್ಧದ ಕಾಲದಲ್ಲಿ ಅಣುಬಾಂಬಿಗೆ ತುತ್ತಾದ ಹಿರೋಶಿಮಾ ನಗರ ಮತ್ತೆ ಮೊದಲಿನಂತಾಗಲು ಅವರು ತೆಗೆದುಕೊಂಡಿದ್ದ ಕಾಲವಕಾಶ ಕೇವಲ ಹತ್ತು ವರ್ಷಗಳು. ನಮ್ಮ ಕರ್ನಾಟಕದ ಉತ್ತರ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದಾದ ಅನಾಹುತದ ಪರಿಣಾಮಗಳನ್ನು ನಾವಿನ್ನೂ ರಿಪೇರಿ ಮಾಡುವುದಲ್ಲಿಯೇ ಇದ್ದೇವೆ. ಭೂಕಂಪದ ಶಾಪ: ಜಪಾನ್ ದೇಶವೇ ಟಾರ್ಗೆಟ್! ಯಾಕೆ ಹೀಗೆ?

ಇದಕ್ಕೂ ನೂರುಪಟ್ಟು ಮಿಗಿಲಾದ ಅನಾಹುತಕ್ಕೆ ತುತ್ತಾದರೂ ಜಪಾನೀಯರಿಗೆ ಇದನ್ನು ಎದುರಿಸಲು ಹೇಗೆ ಸಾಧ್ಯವಾಯಿತು? ಈ ಪ್ರಶ್ನೆಗೆ ಅವರ ಜೀವನ ಕ್ರಮವನ್ನು ನೋಡಬೇಕು. ಇವರ ಈ ಅಭ್ಯಾಸಗಳು ಎಲ್ಲರಿಗೂ ಅನುಕರಣೀಯವಾಗಿದ್ದು ಅಸಾಧ್ಯವಾದುದನ್ನು ಸಾಧಿಸಲು ಖಂಡಿತಾ ಪ್ರೇರಣೆ ನೀಡುತ್ತದೆ. ಬನ್ನಿ, ಈ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ....

ಪ್ರಾಥಮಿಕ ಶಿಕ್ಷಣ ಇಲ್ಲಿ ಕಡ್ಡಾಯ, ಪರೀಕ್ಷೆಯೇ ಇಲ್ಲ

ಪ್ರಾಥಮಿಕ ಶಿಕ್ಷಣ ಇಲ್ಲಿ ಕಡ್ಡಾಯ, ಪರೀಕ್ಷೆಯೇ ಇಲ್ಲ

ಜಪಾನ್‌ನಲ್ಲಿ ನಾಲ್ಕನೆಯ ವರ್ಷ ಕಳೆಯುವವರೆಗೂ ಮಕ್ಕಳಿಗೆ ಪರೀಕ್ಷೆಯೇ ಇಲ್ಲ. ಅಲ್ಲದೇ ಜಪಾನ್ ನಲ್ಲಿ ಶಾಲೆಗೆ ಮಕ್ಕಳು ಹೋಗುವುದು ಕಡ್ಡಾಯ ಮತ್ತು ಉಚಿತ. ಈ ನಾಲ್ಕು ವರ್ಷಗಳಲ್ಲಿ ಪುಸ್ತಕದ ಬದನೇಕಾಯಿಯನ್ನು ಕಡಿಮೆ ಮತ್ತು ಹಿರಿಯರಿಗೆ ನೀಡುವ ಗೌರವ, ಸಭ್ಯ ವ್ಯಕ್ತಿಯಾಗಲು ಉತ್ತಮ ನಡವಳಿಕೆಯನ್ನು ಹೊಂದಲು ಮಗುವನ್ನು ಮೊದಲ ಮೂರು ವರ್ಷಗಳಲ್ಲಿ ತಯಾರಿಸಲಾಗುತ್ತದೆ. ಈ ಅವಧಿಯಲ್ಲಿ ಮಾನವಪ್ರೇಮ ಮತ್ತು ವಿಶಾಲ ಹೃದಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.

ಆರೋಗ್ಯವೇ ನಿಜವಾದ ಭಾಗ್ಯ

ಆರೋಗ್ಯವೇ ನಿಜವಾದ ಭಾಗ್ಯ

ರಸ್ತೆಯಲ್ಲಿ ಯಾರಾದರೂ ಮುಖದ ಮೇಲೆ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದರೆ ಈತ ನಗರದ ಮಾಲಿನ್ಯದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿರಬಹುದು ಎಂದು ಅನ್ನಿಸಬಹುದು. ಆದರೆ ವಾಸ್ತವವಾಗಿ ಈ ವ್ಯಕ್ತಿಗೆ ಶೀತವೋ, ನೆಗಡಿಯೋ ಆಗಿದ್ದು ಈ ರೋಗದ ವೈರಾಣುಗಳು ತನ್ನಿಂದ ಇನ್ನೊಬ್ಬರಿಗೆ ಹರಡಬಾರದು ಎಂಬ ಮುನ್ನೆಚ್ಚರಿಕೆಯನ್ನು ಈತ ವಹಿಸಿ ಖುದ್ದಾಗ್ ಮಾಸ್ಕ್ ಧರಿಸಿಯೇ ಅನಿವಾರ್ಯ ಕೆಲಸಕ್ಕಾಗಿ ಹೊರಬರುತ್ತಾನೆ. ಅನಿವಾರ್ಯವಿಲ್ಲದಿದ್ದರೆ ಆತ ಹೊರಬರುವುದೇ ಇಲ್ಲ. ಈ ಪರಿಯನ್ನು ಇಡಿಯ ಜಗತ್ತೇ ಅರಿತು ಕಲಿಯಬೇಕಾಗಿದೆ.

ವಿನಯವಂತಿಕೆ ಇಲ್ಲಿ ಗರಿಷ್ಠ

ವಿನಯವಂತಿಕೆ ಇಲ್ಲಿ ಗರಿಷ್ಠ

ನಮ್ಮಲ್ಲಿ ಯಾರಾದರೂ ದಾರಿ ಕೇಳಿದರೆ ಹೀಗೆ ಹೀಗೆ ಹೋಗಿ ಎಂದು ಬೆರಳು ತೋರಿಸಿ ಆ ಸ್ಥಳದ ಮರವನ್ನೋ ಕಟ್ಟಡವನ್ನೋ ತೋರಿಸುತ್ತೇವೆ. ಸಾಮಾನ್ಯವಾಗಿ ಇಷ್ಟು ಸಾಕಾಗುವುದಿಲ್ಲ. ಅತ್ತ ಹೋದ ಬಳಿಕ ಆ ವ್ಯಕ್ತಿ ಮರವನ್ನು ಗುರುತುಹಿಡಿಯಲು ಸಾಧ್ಯವಾಗದೇ ಇನ್ನೊಬ್ಬರ ಸಹಾಯ ಕೇಳಬೇಕಾಗಿ ಬರಬಹುದು.

ವಿನಯವಂತಿಕೆ ಇಲ್ಲಿ ಗರಿಷ್ಠ

ವಿನಯವಂತಿಕೆ ಇಲ್ಲಿ ಗರಿಷ್ಠ

ಆದರೆ ಜಪಾನ್ ನಲ್ಲಿ ಯಾರದರೊಬ್ಬರಿಗೆ ವಿಳಾಸ ಕೇಳಿದರೆ ಆವರು ಕಾಗದವೊಂದರಲ್ಲಿ ನಕ್ಷೆಯನ್ನು ಬಿಡಿಸಿ ಆ ವ್ಯಕ್ತಿ ಹೋಗಬೇಕಾದ ಸ್ಥಳವನ್ನು ಗುರುತಿಸಿಯೇ ಕಳುಹಿಸುತ್ತಾರೆ. ಅವರಿಗೆ ಈ ನಕ್ಷೆಯೇ ಸಾಕು, ಇನ್ನೊಬ್ಬರ ನೆರವಿಗಾಗಿ ಅಂಗಲಾಚಬೇಕಾದ ಅಗತ್ಯವೇ ಇಲ್ಲ.

ಧಾರ್ಮಿಕತೆಯೂ ಇಲ್ಲಿ ಗರಿಷ್ಠ

ಧಾರ್ಮಿಕತೆಯೂ ಇಲ್ಲಿ ಗರಿಷ್ಠ

ಜಪಾನ್ ತಂತ್ರಜ್ಞಾನದಲ್ಲಿ ಎಷ್ಟು ಮುಂದುವರೆದಿದೆಯೋ, ಅದಕ್ಕಿಂತಲೂ ಹೆಚ್ಚಾಗಿ ಇಲ್ಲಿನ ನಾಗರಿಕರು ತಮ್ಮ ಸಂಸ್ಕೃತಿಗೆ ಅಂಟಿಕೊಂಡಿದ್ದಾರೆ. ಸರಿಸುಮಾರು ಶೇಖಡಾ ನೂರರಷ್ಟು ಜನರು ತಮ್ಮ ಧರ್ಮವನ್ನು ಪೂರ್ಣ ಭಕ್ತಿ ಮತ್ತು ಶ್ರದ್ಧೆಯಿಂದ ಅನುಸರಿಸುವವರಾಗಿದ್ದು ಪ್ರತಿಯೊಬ್ಬರೂ ತುಂಬಿದ ಕೊಡವೇ ಆಗಿರುತ್ತಾರೆ.

ಪರರ ಸೊತ್ತಿಗೆ ಆಸೆ ಇಲ್ಲ

ಪರರ ಸೊತ್ತಿಗೆ ಆಸೆ ಇಲ್ಲ

ಇಲ್ಲಿ ಮಕ್ಕಳಿಗೆ ತಮ್ಮ ಮತ್ತು ಇತರರ ವಸ್ತುಗಳಿಗೆ ಪೂರ್ಣವಾದ ಗೌರವ ನೀಡುವಂತೆ ಕಲಿಸಲಾಗುತ್ತದೆ. ಆ ಪ್ರಕಾರ ಇನ್ನೊಬ್ಬರ ಸ್ವತ್ತನ್ನು ಹೊಂದುವುದು ಪಾಪದ ಕೆಲಸವಾಗಿದ್ದು ಈ ಬಗ್ಗೆ ಯೋಚಿಸುವುದೂ ಇಲ್ಲ. ಹಾಗಾಗಿ ಇಡಿಯ ದೇಶದಲ್ಲಿ ಪಿಕ್ ಪಾಕೆಟ್, ಕಳ್ಳತನ, ದರೋಡೆ ಮೊದಲಾದವುಗಳು ಇಲ್ಲವೇ ಇಲ್ಲ. ಒಂದು ವೇಳೆ ಇತರರಿಗೆ ಪರವಸ್ತುಗಳು ಸಿಕ್ಕರೂ ಇದನ್ನು ಅವರ ಒಡೆಯರಿಗೆ ತಲುಪಿಸಲು ಇಲ್ಲಿ ಪ್ರತ್ಯೇಕ ವ್ಯವಸ್ಥೆ ಇದೆ.

ಬಸ್‌ಗೆ ಟಿಕೆಟ್ ಇಲ್ಲ, ಲೋಲಕ ಮಾತ್ರ ಇದೆ

ಬಸ್‌ಗೆ ಟಿಕೆಟ್ ಇಲ್ಲ, ಲೋಲಕ ಮಾತ್ರ ಇದೆ

ಜಪಾನಿನಲ್ಲಿ ಬಸ್ ಪ್ರಯಾಣ ಉಚಿತವಲ್ಲ, ಇದಕ್ಕೆ ನಿಗದಿತ ಶುಲ್ಕವಿದೆ. ಆದರೆ ಈ ಶುಲ್ಕವನ್ನು ಬಸ್ ಚಾಲಕ ಪಡೆಯುವುದಿಲ್ಲ, ನಿರ್ವಾಹಕನಂತೂ ಇಲ್ಲವೇ ಇಲ್ಲ. ಬದಲಿಗೆ ಬಸ್ ಹತ್ತಿದಾಗ ಎದುರಿಗೇ ಇರುವ ಲೋಲಕದಲ್ಲಿ ನಿಗದಿತ ಶುಲ್ಕವನ್ನು ಹಾಕಿ ಕುಳಿತುಕೊಂಡರೆ ಆಯಿತು....

ಬಸ್‌ಗೆ ಟಿಕೆಟ್ ಇಲ್ಲ, ಲೋಲಕ ಮಾತ್ರ ಇದೆ

ಬಸ್‌ಗೆ ಟಿಕೆಟ್ ಇಲ್ಲ, ಲೋಲಕ ಮಾತ್ರ ಇದೆ

ನೀವು ಕಡಿಮೆ ಹಾಕಿರಬಹುದು ಎಂದು ಯಾರೂ ಅನುಮಾನ ಪಡುವುದಿಲ್ಲ. ಜಪಾನ್ ಈ ಪರಿಯಲ್ಲಿ ಮೋಸ ಮಾಡುವುದನ್ನು ತಮಗೆ ತಾನೇ ಮೋಸ ಮಾಡಿದಂತೆ ಎಂದು ತಿಳಿದುಕೊಳ್ಳುತ್ತಾರೆ.

ಎಸ್ಕಲೇಟರ್ ನಲ್ಲಿಯೂ ಶಿಸ್ತು

ಎಸ್ಕಲೇಟರ್ ನಲ್ಲಿಯೂ ಶಿಸ್ತು

ಸಾಮಾನ್ಯವಾಗಿ ನಾವೆಲ್ಲಾ ಎಸ್ಕಲೇಟರ್ ನಲ್ಲಿ ಮಧ್ಯೆಯೇ ನಿಂತು ಬಿಡುತ್ತೇವೆ. ಹಿಂದಿನಿಂದ ಯಾರು ಬಂದರೂ ನಾವು ಪಕ್ಕಕ್ಕೆ ಜರುಗುವುದಿಲ್ಲ. ಹೇಗಿದ್ದರೂ ಕೆಲವು ಸೆಕೆಂಡುಗಳಲ್ಲಿ ಅತ್ತ ದಾಟಿದ ಬಳಿಕ ಹೊರಹೋಗುತ್ತೇವೆಲ್ಲಾ ಎನ್ನುವುದು ನಮ್ಮ ಲೆಕ್ಕಾಚಾರ. ಆದರೆ ಜಪಾನೀಯರು ಹಾಗಲ್ಲ. ಎಸ್ಕಲೇಟರ್ ಇರಲಿ, ದಾರಿಯೇ ಇರಲಿ ಒಂದು ಬದಿಯಲ್ಲಿಯೇ ನಡೆಯುತ್ತಾರೆ. ಮಧ್ಯದಲ್ಲಿ ಸರ್ವಥಾ ನಿಲ್ಲುವುದಿಲ್ಲ. ಏಕೆಂದರೆ ತಮಗಿಂತಲೂ ಹೆಚ್ಚಿನ ತುರ್ತು ಕೆಲಸವಿರುವವರಿಗೆ ತಾವು ಅಡ್ಡಾವಾಗಿರಬಾರದು ಎನ್ನುವುದು ಜಪಾನೀಯರು ನಂಬಿಕೊಂಡು ಬಂದ ಪರಿಯಾಗಿದೆ.

ಹೈವೇಯಲ್ಲಿಯೂ ಶಿಸ್ತು

ಹೈವೇಯಲ್ಲಿಯೂ ಶಿಸ್ತು

ಸಾಮನ್ಯವಾಗಿ ನಾವೆಲ್ಲಾ ಹೈವೇಯಲ್ಲಿ ಎಲ್ಲಿ ನಮ್ಮ ವೇಗ ಅಳೆಯಲಾಗುತ್ತದೆಯೋ ಅಲ್ಲಿ ಮಾತ್ರ ವೇಗವನ್ನು ಕಡಿಮೆ ಮಾಡಿ ಉಳಿದೆಡೆ ವೇಗ ಹೆಚ್ಚಿಸುತ್ತೇವೆ. ಆದರೆ ಜಪಾನ್‌ನಲ್ಲಿ ಹಾಗಲ್ಲ, ವೇಗವನ್ನು ಅಳೆಯುವ ಮಾಪಕವಿರಲೀ ಇಲ್ಲದಿರಲಿ, ಪ್ರತಿಯೊಂದು ವಾಹನವೂ ತನ್ನ ಮಿತಿಯ ವೇಗದಲ್ಲಿಯೇ ಸಂಚರಿಸುತ್ತದೆ.

English summary

Things Indians Need To Adopt From Japan

There is a lot that we Indians need to learn from the Japanese. From punctuality of even seconds to overcoming massive earthquakes, Japanese have proved that they are the best in managing the country's situation in such a better way. Check out the list of things that Indians need to adopt from Japan...
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more