For Quick Alerts
ALLOW NOTIFICATIONS  
For Daily Alerts

ಭೂಕಂಪದ ಶಾಪ: ಜಪಾನ್ ದೇಶವೇ ಟಾರ್ಗೆಟ್! ಯಾಕೆ ಹೀಗೆ?

By Manu
|

ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಅತ್ಯುತ್ತಮ ತಂತ್ರಜ್ಞಾನದ ಕಾರುಗಳಿಗೆ ಜಪಾನ್ ಹೆಸರುವಾಸಿಯಾಗಿದೆ. ತಂತ್ರಜ್ಞಾನದಲ್ಲಿ ಮುಂದುವರೆದಿರುವ ಈ ದೇಶಕ್ಕೆ ಸತತವಾಗಿ ಭೂಕಂಪಗಳು ಕಾಡಿವೆ, ಕಾಡುತ್ತಿವೆ.... ಭೂಕಂಪ ವಿಶ್ವದ ಹಲವು ಕಡೆಗಳಲ್ಲಿ ಸಂಭವಿಸುವುದೂ, ಇದರ ಪರಿಣಾಮವಾಗಿ ಭಾರೀ ತ್ಸುನಾಮಿ ಅಲೆಗಳು ಎದ್ದು ಅಪಾರ ಸಾವುನೋವಿಗೆ ಕಾರಣವಾಗುವುದೂ ನಡೆಯುತ್ತಲೇ ಬಂದಿದೆ. ಆದರೆ ಒಟ್ಟಾರೆ ಭೂಕಂಪಗಳನ್ನು ಪರಿಗಣಿಸಿದರೆ ಜಪಾನ್ ಗರಿಷ್ಠ ಪ್ರಮಾಣದ ಭೂಕಂಪಗಳನ್ನು ಇದುವರೆಗೆ ಎದುರಿಸಿದೆ. ಆದರೆ ಜಪಾನೇ ಏಕೆ?

ಈ ಪ್ರಶ್ನೆ ಜನಸಾಮಾನ್ಯರಿಗಿಂತಲೂ ಭೂಗರ್ಭಶಾಸ್ತ್ರಜ್ಞರಿಗೇ ಹೆಚ್ಚು ಕಾಡಿದೆ. ಬನ್ನಿ, ಈ ಬಗ್ಗೆ ನಡೆದ ಸಂಶೋಧನೆಗಳ ಮೂಲಕ ಈ ಪ್ರಶ್ನೆಗೆ ಇದುವರೆಗೆ ತಜ್ಞರು ಯಾವ ಉತ್ತರಗಳನ್ನು ಕಂಡುಹಿಡಿದ್ದಿದ್ದಾರೆ ಎಂಬುದನ್ನು ನೋಡೋಣ....

ಈ ದೇಶದ ಭೂಗೋಳಿಕ ಸ್ಥಾನ

ಈ ದೇಶದ ಭೂಗೋಳಿಕ ಸ್ಥಾನ

ಮಿಲಿಯಾಂತರ ವರ್ಷಗಳ ಹಿಂದೆ ಖಂಡಗಳು ಸರಿದು ಇನ್ನೊಂದು ಭಾಗಕ್ಕೆ ಘರ್ಷಿಸಿದ ಭಾಗ ಉದ್ದಕ್ಕೂ ಒಂದು ಗೆರೆಯನ್ನು ಸೃಷ್ಟಿಸಿದೆ ( Pacific Ring of Fire). ಇದೊಂದು ಲಾಳಾಕಾರದಲ್ಲಿರುವ ರೇಖೆಯಾಗಿದ್ದು ಬಹುತೇಕ ಭಾಗ ಫೆಸಿಫಿಕ್ ಮಹಾಸಾಗರದ ತಳದಲ್ಲಿದೆ. ಆದರೆ ಕೆಲವು ಭಾಗದಲ್ಲಿ ಸಮುದ್ರದಿಂದ ಮೇಲೆ ದ್ವೀಪಗಳಿವೆ. ಈ ಗೆರೆಯ ಉದ್ದಕ್ಕೂ ಆಗಾಗ ಭೂಕಂಪ ಸಂಭವಿಸುತ್ತಿರುತ್ತದೆ. ದುರಾದೃಷ್ಟವಶಾತ್ ಜಪಾನ್ ದ್ವೀಪಗಳೂ ಈ ಗೆರೆಯ ಮೇಲೇ ಇದ್ದು ಸ್ವಾಭಾವಿಕವಾಗಿ ಭೂಕಂಪಗಳು ಹೆಚ್ಚಾಗಿ ಸಂಭವಿಸುತ್ತವೆ.

ಪೆಸಿಫಿಕ್ ರಿಂಗ್ ಆಫ್ ಫೈಯರ್

ಪೆಸಿಫಿಕ್ ರಿಂಗ್ ಆಫ್ ಫೈಯರ್

ಇದೊಂದು ಲಾಳಾಕಾರದ ಕಾಲ್ಪನಿಕ ಗೆರೆಯಾಗಿದ್ದು ಪೆಸಿಫಿಕ್ ಮಹಾಸಾಗರದ ಅಡಿಯಲ್ಲಿ ಹಾದು ಹೋಗಿದೆ. ಈ ವೃತ್ತದ ಮೇಲೆ ಇರುವ ದ್ವೀಪ, ಭೂಭಾಗವೆಲ್ಲಾ ಭೂಕಂಪ ಸಂಭವಿಸುವ ಪ್ರದೇಶಗಳಾಗಿವೆ. ಅಷ್ಟೇ ಅಲ್ಲ, ಸಮುದ್ರತಳದಿಂದ ಎದ್ದ ಅಗ್ನಿಪರ್ವತಗಳ ಶಿಖರದಿಂದ ಭೂಕಂಪದ ಪರಿಣಾಮವಾಗಿ ಬಿಸಿ ಲಾವಾ ಉಗುಳಲೂ ಪ್ರಾರಂಭವಾಗುತ್ತದೆ.

ಈ ಭೂಕಂಪಗಳಿಗೆ ಕಾರಣವೇನು?

ಈ ಭೂಕಂಪಗಳಿಗೆ ಕಾರಣವೇನು?

ಮಿಲಿಯಾಂತರ ವರ್ಷಗಳ ಹಿಂದೆ ಸರಿಯುತ್ತಾ ಒಂದಕ್ಕೊಂದು ಘರ್ಷಿಸಿದ ಈ ಖಂಡಗಳು ಇಂದಿಗೂ ಒಂದಕ್ಕೊಂದು ಉಜ್ಜುತ್ತಿವೆ. ಉಜ್ಜುವ ಈ ಭಾಗಗಳನ್ನು tectonic plates ಅಥವಾ ಗಟ್ಟಿತೆರಳೆಯ ತಟ್ಟೆಗಳು ಎಂದು ಕರೆಯುತ್ತಾರೆ. ಫಿಲಿಪ್ಪೀನ್ಸ್ ದೇಶದ ದಕ್ಷಿಣದಲ್ಲಿ ಈ ಒತ್ತಡ ಹೆಚ್ಚಾಗಿದ್ದು ಒತ್ತಡ ಯಾವಾಗ ಮಿತಿಮೀರಿತೋ, ಆಗ ಎರಡರಲ್ಲೊಂದು ತಟ್ಟೆ ಕೆಳಭಾಗಕ್ಕೆ ಕುಸಿಯುತ್ತದೆ. ಈ ಕುಸಿತ ಭೂಕಂಪಕ್ಕೆ ನೇರವಾಗಿ ಕಾರಣವಾಗಿದೆ.

ಎಲ್ಲಾ ಭೂಕಂಪಗಳಿಂದ ತ್ಸುನಾಮಿ ಉಂಟಾಗುತ್ತದೆಯೇ?

ಎಲ್ಲಾ ಭೂಕಂಪಗಳಿಂದ ತ್ಸುನಾಮಿ ಉಂಟಾಗುತ್ತದೆಯೇ?

ತ್ಸುನಾಮಿಗೆ ಎಲ್ಲಾ ಭೂಕಂಪಗಳು ಕಾರಣವಾಗುವುದಿಲ್ಲ. ಒಂದು ವೇಳೆ ತ್ಸುನಾಮಿ ಸಾಗರಮಟ್ಟದಿಂದ ಕಡಿಮೆ ಆಳದಲ್ಲಿ ರಿಕ್ಟರ್ ಮಾಪಕದ ಏಳರ ಮಾಪನಕ್ಕೂ ಪ್ರಬಲವಾಗಿ ಸಂಭವಿಸಿದ ಭೂಕಂಪದಿಂದ ಮಾತ್ರ ಮೂಡುತ್ತವೆ. ಉಳಿದ ಭೂಕಂಪಗಳ ಮೂಲಕ ಅಲೆಗಳು ಎದ್ದರೂ ಇವು ಪ್ರಾಣಾಪಾಯ, ವಿನಾಶ ಉಂಟುಮಾಡುವಷ್ಟು ದೊಡ್ಡದಾಗಿರುವುದಿಲ್ಲ.

ಇತಿಹಾಸದ ಅತಿ ಪ್ರಬಲ ಭೂಕಂಪ ಯಾವಾಗ ಆಯಿತು?

ಇತಿಹಾಸದ ಅತಿ ಪ್ರಬಲ ಭೂಕಂಪ ಯಾವಾಗ ಆಯಿತು?

ಮೇ 22, 1960ರಂದು ಚಿಲಿಯ ವಾಲ್ಡಿವಿಯಾ ಎಂಬಲ್ಲಿ 9.4-9.6 ರಿಕ್ಟರ್ ಮಾಪಕದ ಭೂಕಂಪ ಇದುವರೆಗೆ ದಾಖಲಾಗಿರುವ ಪ್ರಬಲ ಭೂಕಂಪವಾಗಿದೆ.

ಇತಿಹಾಸದ ಅತಿ ಪ್ರಬಲ ಭೂಕಂಪ ಯಾವಾಗ ಆಯಿತು?

ಇತಿಹಾಸದ ಅತಿ ಪ್ರಬಲ ಭೂಕಂಪ ಯಾವಾಗ ಆಯಿತು?

ಜಪಾನ್‪‌ನಲ್ಲಿ ಅತಿಹೆಚ್ಚು ಭೂಕಂಪಗಳಾದರೂ ಇವು ಸರಿಸುಮಾರು ಏಳರ ಆಸುಪಾಸಿನಲ್ಲಿಯೇ ಇರುತ್ತವೆ. ತೀರಾ ಇತ್ತೀಚೆಗೆ ಅಂದರೆ ನವೆಂಬರ್22, 2016 ರಂದು 7.4ರ ಪ್ರಬಲತೆಯ ಭೂಕಂಪ ಸಂಭವಿಸಿದೆ.

ಭೂಕಂಪ ಇನ್ಯಾವ ದೇಶಗಳಲ್ಲಿ ಹೆಚ್ಚು ಸಂಭವಿಸುತ್ತದೆ?

ಭೂಕಂಪ ಇನ್ಯಾವ ದೇಶಗಳಲ್ಲಿ ಹೆಚ್ಚು ಸಂಭವಿಸುತ್ತದೆ?

ವಿಜ್ಞಾನಿಗಳು ಮತ್ತು ಭೂಗರ್ಭಶಾಸ್ತ್ರಜ್ಞರು ನಡೆಸಿದ ಸಂಶೋಧನೆಗಳ ಪ್ರಕಾರ ಜಪಾನ್ ಈ ಭೂಕಂಪಪೀಡಿತ ರಾಷ್ಟ್ರವಲ್ಲ. ಇದರ ಜೊತೆಗೆ ನ್ಯೂಜಿಲ್ಯಾಂಡ್, ಅಲಾಸ್ಕಾ, ಜಾವಾ, ಸುಮಾತ್ರಾ ದ್ವೀಪಗಳು, ಉತ್ತರ ಮತ್ತು ದಕ್ಷಿಣ ಅಮೇರಿಕಾ ಖಂಡಗಳ ಪಶ್ಚಿಮ ತೀರಗಳನ್ನು ಹಂಚಿಕೊಂಡಿರುವ ದೇಶಗಳು ಭೂಕಂಪಕ್ಕೆ ತುತ್ತಾಗುವ ಸಾಧ್ಯತೆ ಇರುವ ರಾಷ್ಟ್ರಗಳಾಗಿವೆ.

English summary

Why So Many Earthquakes Strike Japan?

Here, in this article, we are about to share some of the reasons as to why Japan is prone to so many earthquakes and other natural calamities. Check out the actual reasons that will make one understand as to why earthquakes are this active in this region.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more