For Quick Alerts
ALLOW NOTIFICATIONS  
For Daily Alerts

ಜಪಾನೀಯರು ಕೂಡ 'ಗೊಂಬೆ ಹಬ್ಬ' ಆಚರಿಸುತ್ತಾರಂತೆ!

ಕರ್ನಾಟಕದ ಕೆಲವೊಂದು ಭಾಗದಲ್ಲಿ ಗೌರಿಗಣೇಶ ಹಬ್ಬಕ್ಕೆ ಗೊಂಬೆಗಳನ್ನು ಇಡುವಂತೆ ಜಪಾನ್‌ನಲ್ಲೂ ಗೊಂಬೆಗಳ ಹಬ್ಬವನ್ನು ಆಚರಿಸಲಾಗುತ್ತದೆ. ಅಲ್ಲದೆ ಈ ಹಬ್ಬವನ್ನು ಹಿನಾ ಮಟ್ಸುರಿ’ ಎಂದು ಕರೆಯಲಾಗುತ್ತದೆ.

By Manu
|

ಭಾರತದಲ್ಲಿ ವರ್ಷವಿಡೀ ಒಂದಲ್ಲ ಒಂದು ರೀತಿಯ ಹಬ್ಬವನ್ನು ಆಚರಿಸುತ್ತಾ ಇರುತ್ತೇವೆ. ಅದೇ ರೀತಿ ಜಪಾನ್ ನಲ್ಲೂ ಒಂದಲ್ಲ ಒಂದು ರೀತಿಯ ಹಬ್ಬವನ್ನು ಆಚರಿಸುತ್ತಾರೆ. ಕೆಲವೊಂದು ಹಬ್ಬಗಳು ತುಂಬಾ ವಿಚಿತ್ರವೆನಿಸಿದರೆ ಮತ್ತೆ ಕೆಲವು ಅದ್ಭುತವಾಗಿರುವಂತದ್ದಾಗಿದೆ. ಅಂತಹ ಒಂದು ಹಬ್ಬಗಳಲ್ಲಿ ಗೊಂಬೆ ಹಬ್ಬವು ಒಂದಾಗಿದೆ.

Japanese Celebrate Doll Festival

ಕರ್ನಾಟಕದ ಕೆಲವೊಂದು ಭಾಗದಲ್ಲಿ ಗೌರಿಗಣೇಶ ಹಬ್ಬಕ್ಕೆ ಗೊಂಬೆಗಳನ್ನು ಇಡುವಂತೆ ಜಪಾನ್‌ನಲ್ಲೂ ಗೊಂಬೆಗಳ ಹಬ್ಬವನ್ನು ಆಚರಿಸಲಾಗುತ್ತದೆ. ಜಪಾನ್‌ನಲ್ಲಿ ಪ್ರತೀ ವರ್ಷವೂ ಗೊಂಬೆ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಹಿನಾ ಮಟ್ಸುರಿ' ಎಂದು ಕರೆಯಲಾಗುತ್ತದೆ.

ಪ್ರತೀ ವರ್ಷ ಮಾರ್ಚ್ 3ರಂದು ಗೊಂಬೆ ಹಬ್ಬವನ್ನು ಆಚರಿಸುವ ಜಪಾನೀಯರು ಈ ಹಬ್ಬವನ್ನು ವಿಶೇಷವಾಗಿ ಹೆಣ್ಣು ಮಕ್ಕಳು ಇರುವ ಕುಟುಂಬಗಳಲ್ಲಿ ಆಚರಿಸುತ್ತಾರೆ. ಕುಟುಂಬದಲ್ಲಿರುವ ಹೆಣ್ಣು ಮಕ್ಕಳ ಆರೋಗ್ಯ ಹಾಗೂ ಸಮೃದ್ಧಿಗಾಗಿ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ. ಗೊಂಬೆ ಹಬ್ಬದ ಬಗ್ಗೆ ಇರುವ ಮತ್ತಷ್ಟು ಕುತೂಹಲಕಾರಿ ಸಂಗತಿಗಳನ್ನು ಈ ಲೇಖನವನ್ನು ಓದುತ್ತಾ ತಿಳಿಯಿರಿ.

ಹಬ್ಬದ ಮೂಲ
ಹಬ್ಬವನ್ನು ಆಚರಿಸುವಂತಹ ಸಂಪ್ರದಾಯವು ಇಡೋ ಕಾಲ ಅಂದರೆ 1603ರಿಂದ 1868ರ ಮಧ್ಯೆ ಆರಂಭವಾಯಿತು. ಪ್ರತೀ ವರ್ಷ ಮಾರ್ಚ್ 3ರಂದು ಗೊಂಬೆಗಳನ್ನು ಪ್ರದರ್ಶನಕ್ಕೆ ಇಟ್ಟು ಹಬ್ಬ ಆಚರಣೆ ನಡೆಯುತ್ತದೆ.

ಈ ದಿನ ವಿಶೇಷ ಗೊಂಬೆ
ಈ ದಿನದಂದು ಇಶಿಮಟ್ಸು ಎನ್ನುವ ಗೊಂಬೆಯನ್ನು ಮಕ್ಕಳಿಗಾಗಿಯೇ ತಯಾರಿಸಲಾಗುತ್ತದೆ. ಇದನ್ನು ಹೊರತುಪಡಿಸಿ, ಇತರ ಹಲವಾರು ರೀತಿಯ ಗೊಂಬೆಗಳನ್ನು ಈ ಸಂದರ್ಭದಲ್ಲಿ ಮಾಡಲಾಗುತ್ತದೆ.

ಸಂಪೂರ್ಣ ದೇಶದ ಹಬ್ಬ
ಜಪಾನ್ ನ ಪ್ರತಿಯೊಂದು ಕುಟುಂಬ ಕೂಡ ಈ ಹಬ್ಬವನ್ನು ಆಚರಣೆ ಮಾಡುತ್ತದೆ. ಹಬ್ಬ ಆಚರಣೆಗೆ ಮೊದಲು ಗೊಂಬೆಗಳಿಗೆ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಿ ವಿವಿಧ ರೀತಿಯ ಅಲಂಕಾರ ಮಾಡಲಾಗುತ್ತದೆ.

ಗೊಂಬೆಗಳ ತಯಾರಿ
ಜಪಾನ್ ನ ವಿವಿಧ ನಗರಗಳಲ್ಲಿ ಗೊಂಬೆಗಳನ್ನು ತಯಾರಿಸಿ ಮಾರಾಟ ಮಾಡುವುದು ಹಲವಾರು ಕುಟುಂಬಗಳ ವೃತ್ತಿಯಾಗಿದೆ. ಗೊಂಬೆಗಳನ್ನು ಮರ, ಕಾಗದ ಮತ್ತು ಬಟ್ಟೆಯಿಂದ ತಯಾರಿಸಲಾಗುತ್ತದೆ.

English summary

Ever Wondered Why Japanese Celebrate Doll Festival?

There are many festivals that are followed in Japan. Some are really weird and some are simply wow! One such is the doll festival and it is celebrated every year in Japan. But why do people celebrate this festival? Is there any specific reason for this doll festival? Let's find out all about this unique doll festival.
Story first published: Tuesday, November 15, 2016, 18:58 [IST]
X
Desktop Bottom Promotion